ವಿಷಯಕ್ಕೆ ಹೋಗು

ಲಿಯನಾರ್ಡೊ ಡ ವಿಂಚಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
೧೫೧೨-೧೫೧೫ ಅವಧಿಯಲ್ಲಿ ಲಿಯನಾರ್ಡೊ ಡ ವಿಂಚಿ ರಚಿಸಿದ ಸ್ವಚಿತ್ರ

ವ್ಯಕ್ತಿತ್ವ

ಲಿಯನಾರ್ಡೊ ಡ ವಿಂಚಿ (ಎಪ್ರಿಲ್ ೧೫ ೧೪೫೨-ಮೇ ೨ ೧೫೧೯) ಇಟ್ಯಾಲಿಯನ್ ನವೋದಯ ವಾಸ್ತುಶಿಲ್ಪಿ, ಸಂಗೀತಗಾರ, ಶರೀರ ರಚನಾ ಶಾಸ್ತ್ರಜ್ಞ, ಸಂಶೋಧಕ, ಶಿಲ್ಪಿ, ರೇಖಾಗಣಿತ ಶಾಸ್ತ್ರಜ್ಞ, ಯಂತ್ರಶಿಲ್ಪಿ ಮತ್ತು ವರ್ಣಚಿತ್ರಗಾರ. ಇವರನ್ನು ಆದರ್ಶ "ನವೋದಯ ಮನುಷ್ಯ" ಮತ್ತು ಹಲವಾರು ವಿಷಗಳಲ್ಲಿ ಇವರು ತೋರಿರುವ ಅಮಿತ ಕುತೂಹಲ, ಆಸಕ್ತಿ ಮತ್ತು ಸೃಜನಶೀಲತೆಯಿಂದಾಗಿ ಸಾರ್ವತ್ರಿಕವಾಗಿ ಮೇಧಾವಿ ಎಂದು ಪರಿಗಣಿಸಲಾಗಿದೆ. ಇವರನ್ನು ಈ ಜಗತ್ತು ಕಂಡ ಅತಿ ಶ್ರೇಷ್ಠ ವರ್ಣಚಿತ್ರಗಾರ ಎಂದು ಕೂಡ ಸಾಮಾನ್ಯವಾಗಿ ಪರಿಗಣಿಸಲಾಗುತ್ತದೆ. ಇವರು ವಿಶ್ವವಿಖ್ಯಾತ ಮೋನಾಲಿಸಾ ಮತ್ತು ಲಾಸ್ಟ್ ಸಪ್ಪರ್ ವರ್ಣಚಿತ್ರಗಳು ರಚಿಸಿದಲ್ಲದೆ ಹೆಲಿಕಾಪ್ಟರ್, ಯುದ್ದ ಟ್ಯಾಂಕ್‌, ಸೌರಶಕ್ತಿ ಬಳಕೆ ಇತ್ಯಾದಿ ಈ ಕಾಲದ ಸಂಶೋಧನೆಗಳ ಕುರಿತು ಶತಮಾನಗಳ ಹಿಂದೆಯೇ ವಿನ್ಯಾಸಗಳನ್ನು ರಚಿಸಿದ್ದರು. ಇವರ ವೈಯಕ್ತಿಕ ಪುಸ್ತಕಗಳಲ್ಲಿ, ಶರೀರ ರಚನಾ ಶಾಸ್ತ್ರ, ಖಗೋಳಶಾಸ್ತ್ರ , ವಿಜ್ಞಾನ ಮತ್ತು ತಂತ್ರಜ್ಞಾನ ವಿಷಯಗಳ ಕುರಿತು ಅನೇಕ ವಿಚಾರಗಳು, ಟಿಪ್ಪಣಿಗಳು ಮತ್ತು ಚಿತ್ರಗಳಿವೆ.

ಜೀವನ

ಲಿಯೊನಾರ್ಡೊ ಡವಿಂಚಿ ಜನನ ಇಟಲಿದೇಶದ ವಿಂಚಿ ನಗರದಲ್ಲಿ.ತಂದೆ ವಕೀಲ.ತಾಯಿ ಕ್ಯಾಟರಿನ್ಸ್.೧೪೬೯ರಲ್ಲಿ ಫ್ಲಾರೆನ್ಸ್‌ಗೆ ಹೋಗಿ ತನ್ನ ಚಿಕ್ಕಪ್ಪನ ಆಶ್ರಯದಲ್ಲಿದ್ದರು.ಆಂಡ್ರಿ ಡೆಲ್ ವೆರಾಶಿಯೊ ಎಂಬ ಶಿಲ್ಪಿಯ ಬಳಿ ಕಲೆ ಕುರಿತು ಅಭ್ಯಾಸ ಮಾಡಿ,ನಂತರ ಮಿಲಿಟರಿ ಇಂಜಿನಿಯರಾಗಿ ನೇಮಕಗೊಂಡರು.ಬಿಡುವಿನ ವೇಳೆಯಲ್ಲಿ ವಿಜ್ಞಾನ ಸಂಶೋಧಕನಾಗಿ ನೂರಾರು ಉಪಕರಣಗಳನ್ನು ರೂಪಿಸಿದರು.ರಸ್ತೆ,ಕಾಲುವೆ,ಲಾಯ,ಚರ್ಚು ಮುಂತಾದುವುಗಳ ವಿನ್ಯಾಸ ರೂಪಿಸಿದ್ದಲ್ಲದೆ,ಒಂದು ಜಲಗಡಿಯಾರವನ್ನೂ ರಚಿಸಿದ್ದರು.ಇಂದು ಬಳಸುವ ಬಾಲ್‌ಬೇರಿಂಗ್‌ಗಳ ತಿಳಿವಳಿಕೆ ಅವರಿಗಿತ್ತು.

ವರ್ಣಚಿತ್ರಗಳು

ಇವರ ವರ್ಣಚಿತ್ರ ಮೊನಾಲಿಸಾಳ ನಗು ಜಗತ್ತಿನಾದ್ಯಂತ ಚಿರಪರಿಚಿತ.ಫ್ಲಾರೆನ್ಸ್ ನಗರದಲ್ಲಿ ತನ್ನ ಸ್ಟುಡಿಯೋದಲ್ಲಿ ಮೊನಾಲಿಸಾಳನ್ನು ಸುಮಾರು ೩ ವರ್ಷ ಕಾಲ ಕೂರಿಸಿ ರಚಿಸಿದ ಈ ಚಿತ್ರ ಇನ್ನೊಂದಿಲ್ಲ ಎನ್ನುವಷ್ಟು ಪ್ರಶಂಸೆಗೆ ಪಾತ್ರವಾಗಿದೆ.ಕಡೆಯ ಭೋಜನ ಅಥವಾ ಲಾಸ್ಟ್ ಸಪ್ಪರ್ (ಯೇಸುವಿನ ಜೀವನ ಕುರಿತದ್ದು)ವರ್ಣಚಿತ್ರವನ್ನು ೧೪೯೭ರಲ್ಲಿ ಬರೆದು ಪೂರೈಸಿದರು.ಇದನ್ನು ಬರೆಯಲು ಸುಮಾರು ೨ ವರ್ಷಗಳು ಬೇಕಾದವು.ಡವಿಂಚಿ ಇವಲ್ಲದೆ 'ಮಗುವಿನೊಂದಿಗೆ ಕನ್ಯೆ' ಮತ್ತು 'ಸಂತ ಆನ್'ರ ವರ್ಣಚಿತ್ರಗಳನ್ನೂ ಬರೆದಿದ್ದಾರೆ.



ಟೆಂಪ್ಲೇಟು:Link FA ಟೆಂಪ್ಲೇಟು:Link FA ಟೆಂಪ್ಲೇಟು:Link FA ಟೆಂಪ್ಲೇಟು:Link FA ಟೆಂಪ್ಲೇಟು:Link FA ಟೆಂಪ್ಲೇಟು:Link FA ಟೆಂಪ್ಲೇಟು:Link FA ಟೆಂಪ್ಲೇಟು:Link FA ಟೆಂಪ್ಲೇಟು:Link FA ಟೆಂಪ್ಲೇಟು:Link FA ಟೆಂಪ್ಲೇಟು:Link FA