ಅಪೊಲೊ
Apollo | |
---|---|
God of music, poetry, art, oracles, archery, plague, medicine, sun, light and knowledge | |
ನೆಲೆ | Mount Olympus |
ಲಾಂಛನ | Lyre, laurel wreath, python, raven, bow and arrows |
ಒಡಹುಟ್ಟಿದವರು | Artemis |
ಮಕ್ಕಳು | Asclepius, Troilus, Aristaeus, Orpheus |
Roman equivalent | Apollo |
ತಂದೆತಾಯಿಯರು | Zeus and Leto |
ಅಪೊಲೊ ಗ್ರೀಕರ ಪುರಾಣೇತಿಹಾಸದಲ್ಲಿ ಕಂಡುಬರುವ ದೇವತಾವ್ಯಕ್ತಿ. ತಂದೆ ಜೂಪಿಟರ್ (ಜûೂಸ್), ತಾಯಿ ಲೆಟೊ[೧]. ಜೂಪಿಟರ್ ನ ಧರ್ಮಪತ್ನಿ ಹೀರಾ ಲೆಟೊಳನ್ನು ಅನೇಕ ರೀತಿಯ ಕಷ್ಟಗಳಿಗೀಡುಮಾಡಿದಳು[೨]. ಲೆಟೊ ಸಮುದ್ರದಲ್ಲಿ ತೇಲಿಬಂದು ಡೆಲಾಸ್ ದ್ವೀಪದಲ್ಲಿ ಅಪೊಲೊವಿಗೆ ಜನ್ಮವಿತ್ತಳು. ಓಲಿಫಸ್‍ನಿಂದ ಗಡಿಪಾರಾಗಿ, ದೊರೆ ಅಡ್‍ಮಿಟಸ್‍ನ ಕುರಿಗಳನ್ನು ಕಾಯುತ್ತಿದ್ದ[೩] ಅಪೊಲೊವಿಗೆ ಪ್ರಪಂಚದಾದ್ಯಂತ ಬೆಳಕನ್ನು ಬೀರುವ ಕೆಲಸವನ್ನು ಅವನ ತಂದೆ ವಹಿಸುವವರೆಗೂ ಆತ ಭೂಮಿಯಲ್ಲೆಲ್ಲ ಅಡ್ಡಾಡಿದ. ಇದರಿಂದಾಗಿ ಸೂರ್ಯನ ರಥವನ್ನು ಈತ ನಡೆಸಿ ಶಾಶ್ವತ ಯೌವನವನ್ನು ಗಳಿಸಿದ. ಅಪೊಲೊ ಗ್ರೀಕರ ಪುರಾಣಗಳಲ್ಲಿ ಯುದ್ಧ, ಭವಿಷ್ಯ, ಸಂಗೀತ, ಕಲೆ, ಔಷಧ ಮತ್ತು ಕಾವ್ಯದ ಅಧಿದೇವತೆಯಾಗಿ ಮರೆದಿದ್ದಾನೆ. ಇದಲ್ಲದೆ ನ್ಯಾಯ, ಪವಿತ್ರತೆ ಮುಂತಾದ ನೈತಿಕಗುಣಗಳ ಪ್ರತೀಕವಾಗಿ ವ್ಯಾಪಿಸಿದ್ದಾನೆ.
ಗ್ರೀಸ್ ಮತ್ತು ಅಯೋನಿಯ ಸಮೀಪದ ದ್ವೀಪಗಳಲ್ಲಿನ ಗ್ರಿಕ್ ಜನಾಂಗ ಬಂದು ನೆಲೆಸಿದ ತಾಣಗಳಲ್ಲೆಲ್ಲ ಅಪೊಲೊಮಂದಿರಗಳು ಸ್ಥಾಪಿತವಾದುವು[೪]. ಅನಂತರದಲ್ಲಿ ರೋಮನ್ನರೂ ಅಪೊಲೊಮಂದಿರಗಳನ್ನು ಕಟ್ಟಿದರು. ಅತ್ಯಂತ ದೊಡ್ಡದಾದ ಅಂಥದೊಂದು ಮಂದಿರ ಡೆಲ್ಫಿನಗರದಲ್ಲಿ ಸ್ಥಾಪನೆಯಾಯಿತು. ಇದು ಬಹಳ ಪ್ರಸಿದ್ಧವಾಗಿತ್ತು. ತಮ್ಮ ಸಾಮಾಜಿಕ ಹಾಗೂ ರಾಜಕೀಯ ಸಮಸ್ಯೆಗಳ ಬಗ್ಗೆ ಭವಿಷ್ಯವಾಣಿಯನ್ನು ನುಡಿದು, ಪರಿಹಾರಗಳನ್ನು ಆಪೊಲೊ ಸೂಚಿಸುತ್ತಾನೆಂದು ಗ್ರೀಕರು ನಂಬಿದ್ದರು. ಡೆಲ್ಫಿನಗರದಲ್ಲಿ ಅಪೋಲೊವಿನ ಗೌರವಾರ್ಥ ನಡೆಸಲಾಗುತ್ತಿದ್ದ ಪಂದ್ಯಗಳು ಅಂದಿನ ಒಲಿಂಪಿಕ್ ಪಂದ್ಯಗಳಷ್ಟೇ ಪ್ರಸಿದ್ಧವಾಗಿದ್ದುವು.
ಗ್ರೀಕರು ತಾವು ಹೋದೆಡೆಯಲ್ಲೆಲ್ಲ ತಮ್ಮ ಆರಾಧ್ಯದೇವ ಅಪೊಲೊವಿನ ಸುಂದರಮೂರ್ತಿಗಳನ್ನು ನಿರ್ಮಿಸಿ ಸ್ಥಾಪಿಸಿದರು. ಭಾರತದ ಗಾಂಧಾರಪ್ರದೇಶವನ್ನು ಪ್ರವೇಶಿಸಿದಾಗ ಅಲ್ಲಿಯೂ ಅವರು ಅಪೊಲೊವಿನ ಮೂರ್ತಿಗಳನ್ನು ನಿಲ್ಲಿಸಿದರು. ಅವೆಲ್ಲ ಇಂದು ನಾಶಗೊಂಡಿವೆ. ಸೂರ್ಯನ ಕಿರಣದಂತಿರುವ ಬಾಣವೊಂದನ್ನು ಕೈಯಲ್ಲಿ ಹಿಡಿದಿರುವ ಒಬ್ಬ ಸುಂದರ ಯುವಕನಂತೆ ಈತನ ಶಿಲಾ ಮೂರ್ತಿಯನ್ನು ಭವ್ಯಭವನಗಳ ಮೇಲೆ ಚಿತ್ರಿಸಲಾಗಿದೆ. ಇಂದು ಜಗತ್ತಿನಲ್ಲೇ ಅತ್ಯಂತ ಸುಂದರವಾದ ಅಪೊಲೊ ಮೂರ್ತಿಗಳು ರೋಮ್ ಮತ್ತು ವ್ಯಾಟಿಕನ್ ನಗರಳಲ್ಲಿ ಉಳಿದಿವೆ. ಹೋಮರನ ಈಲಿಯಡ್‍ನಲ್ಲೂ ಇವನ ಬಗ್ಗೆ ಉಲ್ಲೇಖವಿದೆ.
ಉಲ್ಲೇಖನಗಳು
[ಬದಲಾಯಿಸಿ]- ↑ http://greekgodsandgoddesses.net/gods/apollo/
- ↑ http://www.greekmythology.com/Olympians/Apollo/apollo.html
- ↑ http://greekgodsandgoddesses.net/gods/apollo/
- ↑ http://www.crystalinks.com/apollo.html