ವಿಷಯಕ್ಕೆ ಹೋಗು

ನರಮಂಡಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಾನವ ನರಮಂಡಲ

ನರಮಂಡಲವು ಐಚ್ಛಿಕ ಮತ್ತು ಅನೈಚ್ಛಿಕ ಕ್ರಿಯೆಗಳನ್ನು ಸಂಘಟಿಸುವ ಮತ್ತು ಶರೀರದ ವಿವಿಧ ಭಾಗಗಳ ನಡುವೆ ಸಂಕೇತಗಳನ್ನು ರವಾನಿಸುವ ಒಂದು ಪ್ರಾಣಿಯ ಶರೀರದ ಭಾಗ. ನರ ಅಂಗಾಂಶವು ಮೊದಲು ಹುಳುಗಳಂತಹ ಜೀವಿಗಳಲ್ಲಿ ಸುಮಾರು ೫೫೦ ರಿಂದ ೬೦೦ ಮಿಲಿಯ ವರ್ಷಗಳ ಹಿಂದೆ ಹುಟ್ಟಿಕೊಂಡಿತು. ಬಹುತೇಕ ಪ್ರಾಣಿ ಜಾತಿಗಳಲ್ಲಿ ಅದು ಎರಡು ಮುಖ್ಯ ಭಾಗಗಳನ್ನು ಹೊಂದಿರುತ್ತದೆ, ಕೇಂದ್ರ ನರಮಂಡಲ ಮತ್ತು ಬಾಹ್ಯ ನರಮಂಡಲ.