ವಿಷಯಕ್ಕೆ ಹೋಗು

ಷರಬತ್ತು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬೇಲದ ಷರಬತ್ತು

ಷರಬತ್ತು (ಪಾನಕ) ಹಣ್ಣುಗಳು ಅಥವಾ ಹೂವಿನ ಎಸಳುಗಳಿಂದ ತಯಾರಿಸಲಾದ ಪಶ್ಚಿಮ ಏಷ್ಯಾ, ಭಾರತೀಯ ಉಪಖಂಡ ಹಾಗೂ ಇಂಡೊನೇಷ್ಯಾದ ಒಂದು ಜನಪ್ರಿಯ ಪಾನೀಯವಾಗಿದೆ.[] ಇದು ಸಿಹಿಯಾದ ಪಾನೀಯವಾಗಿದ್ದು, ಇದನ್ನು ಸಾಮಾನ್ಯವಾಗಿ ತಂಪಾಗಿಸಿ ನೀಡಲಾಗುತ್ತದೆ. ಇದನ್ನು ಸಾಂದ್ರೀಕೃತ ರೂಪದಲ್ಲಿ ನೀಡಿ ಚಮಚದಿಂದ ತಿನ್ನಬಹುದು ಅಥವಾ ನೀರಿನಿಂದ ತನೂಕರಿಸಿ ಪಾನೀಯವನ್ನು ಸೃಷ್ಟಿಸಬಹುದು.

ಜನಪ್ರಿಯ ಷರಬತ್ತುಗಳನ್ನು ಮುಂದೆ ಹೇಳಲಾದ ಪದಾರ್ಥಗಳಲ್ಲಿ ಒಂದರಿಂದ ತಯಾರಿಸಲಾಗುತ್ತದೆ: ಕಾಮಕಸ್ತೂರಿ ಬೀಜಗಳು, ಗುಲಾಬಿ ಜಲ, ತಾಜಾ ಗುಲಾಬಿ ಎಸಳುಗಳು, ಶ್ರೀಗಂಧ, ಬೆಳವಲ, ದಾಸವಾಳ, ನಿಂಬೆಹಣ್ಣು, ಕಿತ್ತಳೆ, ಮಾವು, ಅನಾನಸ್, ಫುಲ್ಶಾ ಹಾಗೂ ಚೀಯಾ ಬೀಜಗಳು.

ಷರಬತ್ತನ್ನು ಜನಪ್ರಿಯವಾಗಿ ಮುಸ್ಲಿಮರು ರಂಜಾನ್ ತಿಂಗಳ ಅವಧಿಯಲ್ಲಿ ತಮ್ಮ ದಿನದ ಉಪವಾಸವನ್ನು ಮುರಿಯುವಾಗ ಸೇವಿಸುತ್ತಾರೆ.[]

ಉಲ್ಲೇಖಗಳು

[ಬದಲಾಯಿಸಿ]
  1. Molavi, Afshin (2002). Persian Pilgrimages. W. W. Norton & Company. p. 113. ISBN 0-393-05119-6. {{cite book}}: Cite has empty unknown parameter: |coauthors= (help)
  2. "The World's First Soft Drink". Muslim Heritage. Archived from the original on 2016-12-24.