ಸ್ಮಾರ್ಟ್ ಫೋನ್
ಸ್ಮಾರ್ಟ್ ಫೋನ್ ೧೯೯೯ ರಲ್ಲಿ ಜಪಾನಿನ ಕಂಪನಿ ಎನ್.ಟಿ.ಟಿ ಡೊಕೊಮೋ ಅವರು ಮೊದಲ ಬಾರಿಗೆ ಬಿಡುಗಡೆ ಮಾಡಿದರು. ಸ್ಮಾರ್ಟ್ ಫೋನ್ ಮೊಬೈಲ್ ಬಳಕೆಗೆ ಉಪಯುಕ್ತವಾಗಿದೆ. ಹಾಗು ಇತರ ಲಕ್ಷಣಗಳು ಹೊಂದಿದೆ ಸಾಮಾನ್ಯವಾಗಿ ಒಂದು ಕ್ಯಾಲೆಂಡರ್, ಮೀಡಿಯಾ ಪ್ಲೇಯರ್, ಜಿಪಿಎಸ್ ಸಂಚರಣೆ ಘಟಕ, ಡಿಜಿಟಲ್ ಕ್ಯಾಮೆರಾ ಮತ್ತು ಡಿಜಿಟಲ್ ವೀಡಿಯೊ ಕ್ಯಾಮರಾ ನೇಮಕಾತಿಗಳನ್ನು ಮಾಡುವ ಒಂದು ವೈಯಕ್ತಿಕ ಡಿಜಿಟಲ್ ಸಹಾಯಕ ಪಿಡಿಎ ಸೇರಿವೆ. ಸ್ಮಾರ್ಟ್ ಫೋನ್ ಇಂಟರ್ನೆಟ್ ಪ್ರವೇಶಿಸಲು ತುಂಬ ಸುಲಭ ಮತ್ತು ಅಪ್ಲಿಕೇಶನ್ಗಳು ಹೊಂದಿದೆ.ಮತ್ತು ಪ್ರಪಂಚಾದ್ಯಂತ ಇಂದು ಇರುವ ಕೋಟ್ಯಾನುಕೋಟಿ ಮೊಬೈಲ್ ಗಳನ್ನು ಮುಖ್ಯವಾಗಿ ಎರಡು ವಿದಗಳನ್ನಾಗಿ ವಿಂಗಡಿಸಬಹುದು. ಒಂದು ಸಾದಾರಣ ಫೋನುಗಳು. ಮತ್ತೊಂದು ಸ್ಮಾರ್ಟ್ ಫೋನುಗಳು. ಸಾದಾರಣ ಮೊಬೈಲ್ ಗಳ ಬಗ್ಗೆ ಎಲ್ಲರಿಗೂ ಗೊತ್ತಿವೆ. ಆದರೆ ಹೆಚ್ಚು ಹೆಚ್ಚು ಜನಪ್ರಿಯವಾಗುತ್ತಿರುವ ಸ್ಮಾರ್ಟ್ ಫೋನ್ ಗಳ ಬಗ್ಗೆ ಹೆಚ್ಚಿನ ಜನಸಾಮಾನ್ಯರಿಗೆ ಹೆಚ್ಚು ಮಾಹಿತಿಯಿಲ್ಲವೆಂಬುದು ನನ್ನ ಅನುಭವ. ಸ್ಮಾರ್ಟ್ ಫೋನ್ ಗಳು ಸಾದಾರಣ ಫೋನ್ ಗಳಿಗಿಂತ ಹೇಗೆ ಭಿನ್ನವೆಂದರೆ ಅವು ಚಿಕ್ಕ ಕಂಪ್ಯೂಟರ್ ಗಳಂತೆಯೇ ಕಾರ್ಯನಿರ್ವಹಿಸುತ್ತವೆ. ಕಂಪ್ಯೂಟರ್ ಗಳಲ್ಲಿ ಇಂತಿಷ್ಟು ಶಕ್ತಿಯ ಪ್ರೊಸೆಸರ್, ಇಂತಿಷ್ಟು ಸ್ಮರಣಶಕ್ತಿಯ ರಾಂ ಇರುವಂತೆ ಈ ಸ್ಮಾರ್ಟ್ ಫೋನ್ ಗಳಲ್ಲೂ ಇರುತ್ತವೆ. ಹೇಗೆ ಕಂಪ್ಯೂಟರ್ ಗಳಲ್ಲಿ ವಿಂಡೋಸ್ ಹೆಚ್ಚಿನ ಜನ ಉಪಯೋಗಿಸುವುದು,ಲಿನೆಕ್ಸ್ ಎಂಬೆಲ್ಲಾ ಕಾರ್ಯತಂತ್ರ ವ್ಯವಸ್ಥೆ ಇರುವಂತೆ ಸ್ಮಾರ್ಟ್ ಫೋನ್ ಗಳಲ್ಲೂ ಒಂದು ಕಾರ್ಯತಂತ್ರವ್ಯವಸ್ಥೆಯಿರುತ್ತದೆ.[೧]
ಆಪರೇಟಿಂಗ್ ಸಿಸ್ಟಂ
[ಬದಲಾಯಿಸಿ]ಈ ಸ್ಮಾರ್ಟ್ ಫೋನ್ ಗಳಲ್ಲಿ ಅಳವಡಿಸಲಾಗಿರುವ ಆಪರೇಟಿಂಗ್ ಸಿಸ್ಟಂ ಆದಾರದ ಮೇಲೆ ಅವುಗಳನ್ನು ಪುನಃ ವಿಂಗಡಿಸಬಹುದು. ಆಪಲ್ ಐಫೋನ್ ಗಳು ಆಪಲ್ ನವರದ್ದೇ ಆಪರೇಟಿಂಗ್ ಸಿಸ್ಟಂ ಹೊಂದಿದ್ದರೆ ನೋಕಿಯಾ ಸ್ಮಾರ್ಟ್ ಫೋನ್, ಬ್ಲಾಕ್ ಬೆರಿ ಫೋನ್ ಗಳು ತಮ್ಮದೇ ಆಪರೇಟಿಂಗ್ ಸಿಸ್ಟಂ ಸಿಂಬಯಾನ್ ಬ್ಲಾಕ್ ಬೆರಿ ಹೊಂದಿವೆ. ಮೈಕ್ರೋಸಾಫ್ಟ್ ನವರದ್ದೇ ವಿಂಡೋಸ್ ಮೊಬೈಲ್ ಎಂಬ ಆಪರೇಟಿಂಗ್ ಸಿಸ್ಟಂ ಇದೆ. ಪ್ರಪಂಚದ ಒಟ್ಟು ಮೊಬೈಲ್ ಮಾರುಕಟ್ಟೆಯಲ್ಲಿ ನೋಕಿಯಾ ರಾಜನಾದರೂ ಸ್ಮಾರ್ಟ್ ಫೋನ್ ವಿಷಯದಲ್ಲಿ ಸ್ವಲ್ಪ ಹಿಂದೆನೇ.
ಆಂಡ್ರಾಯ್ಡ್
[ಬದಲಾಯಿಸಿ]ಆಂಡ್ರಾಯ್ಡ್ (ಆಪರೇಟಿಂಗ್ ಸಿಸ್ಟಂ). ಒಂದು ಮೊಬೈಲ್ ಆಪರೇಟಿಂಗ್ ಸಿಸ್ಟಂ ಆಗಿದ್ದು ಲಿನಕ್ಸ್ ಕರ್ನೆಲ್ ಮೇಲೆ ಕೆಲಸ ಮಾಡುತ್ತದೆ. ಇದನ್ನು ಮೊದಲು ಆಂಡ್ರಾಯ್ಡ್ ಇನ್ಕ್. ಎಂಬ ಕಂಪೆನಿ ಅಭಿವೃದ್ದಿ ಪಡಿಸಿದ್ದು, ನಂತರ ಈ ಕಂಪೆನಿಯನ್ನು ಗೂಗಲ್ ಕೊಂಡುಕೊಂಡಿತು, ಮತ್ತು ಇತ್ತೀಚೆಗೆ ಇದನ್ನು ಓಪನ್ ಹ್ಯಾಂಡ್ಸೆಟ್ ಅಲೈಯನ್ಸ್ ಖರೀದಿ ಮಾಡಿದೆ.ಇದು ತಂತ್ರಾಂಶ ತಂತ್ರಜ್ಞರಿಗೆ ನಿರ್ವಹಿಸಲ್ಪಟ್ಟ ಸಂಕೇತ ನಿರ್ವಹಿಸಲ್ಪಟ್ಟ ಸಂಕೇತಗಳನ್ನು. ಜಾ ವಾ ಭಾಷೆ ಯಲ್ಲಿ ಬರೆಯಲು ಅನುವು ಮಾಡಿಕೊಡುವುದಲ್ಲದೆ, ಗೂಗಲ್ ಅಭಿವೃದ್ದಿಪಡಿಸಿರುವ ಜಾವ ಲೈಬ್ರರಿಗಳಿಂದ ಮೊಬೈಲ್ ಸಾಧನವನ್ನು ನಿಯಂತ್ರಿಸಲು ಸಾಧ್ಯವಾಗಿಸುತ್ತದೆ
ಬ್ಲಾಕ್ ಬೆರಿ
[ಬದಲಾಯಿಸಿ]೧೯೯೯ ರಲ್ಲಿ ಬ್ಲಾಕ್ ಬೆರಿಯನ್ನು ಅನಾವರಣಗೊಳಿಸಲಾಯಿತು.ಸ್ಮಾರ್ಟ್ ಫೋನ್ ಗಳ ಕ್ಷೇತ್ರದಲ್ಲಿ ತನ್ನದೇ ಆದ ಪ್ರಭುತ್ವ ಹೊಂದಿರುವ ಬ್ಲಾಕ್ ಬೆರಿ.ಅದು ಕೂದ ಆಂಡ್ರಾಯ್ಡ್ ತರ ಒಂದು ಆಪರೇಟಿಂಗ್ ಸಿಸ್ಟಂ.
ಆಪಲ್ ಐಫೋನ್(ಐಒಎಸ್)
[ಬದಲಾಯಿಸಿ]ಆಪಲ್ ಐಫೋನ್(ಐಒಎಸ್) ಮೊಬೈಲ್ ಆಪರೇಟಿಂಗ್ ಸಿಸ್ಟಂ ಅದನ್ನು ಆಪಲ್ ಇಂಕ್ ಅಭಿವೃದ್ಧಿಪಡಿಸಿದೆ. ಆಪಲ್ ಐಫೋನ್ ಗಳ್ಳಿ ಅದರದೆಯ್ಯಾದ ಅಪ್ಲಿಕೇಶನ್ ಗಳು ದೊರೆಯುತ್ತದೆ.ಮೊದಲ ಐಫೋನ್ ಜನವರಿ ೨೦೦೭ ರಲ್ಲಿ ಅನಾವರಣಗೊಳಿಸಲಾಯಿತು.
ವಿಂಡೋಸ್
[ಬದಲಾಯಿಸಿ]ವಿಂಡೋಸ್ ಮೊಬೈಲ್ ಎಂಬ ಆಪರೇಟಿಂಗ್ ಸಿಸ್ಟಂನನ್ನು ಮೈಕ್ರೋಸಾಫ್ಟ್ ಅಭಿವೃದ್ಧಿ ಪದಿಸಿಡೆ.ವಿಂಡೋಸ್ ನಲ್ಲಿ ವಿಂಡೋಸ್೭,ವಿಂಡೋಸ್೮,ಹಾಗು ಹೊಸದಾಗಿ ವಿಂಡೋಸ್೧೦ ಎಂಬ ಆಪರೇಟಿಂಗ್ ಸಿಸ್ಟಂನನ್ನು ಬಿಡುಗದೆ ಮಾಡಿದಾರೆ.[೨]
ಇ-ಮೇಲ್
[ಬದಲಾಯಿಸಿ]ನಾವು ಇದರಲ್ಲಿ ಮೇಲ್ ವ್ಯವಸ್ಥೆಯ ಪ್ರಯೊಜನ ಪಡೆಯಬಹುದು.ಅಂದರೆ ಕಂಪ್ಯೂಟರ್ ಗಳಲ್ಲಿ ಎಂ.ಎಸ್. ಆಫಿಸ್ ಔಟ್ಲುಕ್ ಇರುವಂತೆ ಸ್ಮಾರ್ಟ್ ಫೋನ್ ಗಳಲ್ಲೂ ಮೇಲ್ ಕಳಿಸಲು ಹಾಗೂ ಸ್ವೀಕರಿಸಲು ವ್ಯವಸ್ತೆಯಿದೆ. ಒಮ್ಮೆ ಕಾನ್ಫಿಗರ್ ಮಾಡಿದರೆ ಸಾಕು. ನಿಮ್ಮ ಮೇಲ್ ಗಳು ನಿಮ್ಮ ಮೇಲ್ ಅಕೌಂಟ್ ನಿಂದ ಜಿ ಮೈಲ್ ಯಾಹೂ ಇತ್ಯಾದಿ ಮೊಬೈಲ್ ಗೇ ಆ ಕ್ಷಣದಲ್ಲಿ ಬಂದು ಬೀಳುತ್ತವೆ ಎಸ್.ಎಂ.ಎಸ್ ತರ ಸಣ್ಣ ಶಬ್ದದೊಂದಿಗೆ. ನಿಮ್ಮ ಜಿ ಮೈಲ್ ಯಾಹೂ ಅಕೌಂಟ್ ನ ಸೆಟ್ಟಿಂಗ್ ನಲ್ಲಿ ಪಿಓಪಿ ಎನಾಬಲ್ ಮಾಡಿ ಸೇವ್ ಮಾಡಿರಬೇಕು. ಮೇಲ್ ಗಳನ್ನು ನೋಡಲು ಕಂಪ್ಯೂಟರ್ ಮೊರೆ ಹೋಗುವ ಅವಶ್ಯಕತೆಯಿಲ್ಲ. ಮೊಬೈಲ್ ಉಪಯೋಗಿಸಿ ನೀವು ತೆಗೆದ ಫೋಟೋಗಳನ್ನೂ ಕ್ಷಣಾರ್ದದಲ್ಲಿ ಮೇಲ್ ಮಾಡಬಹುದು. ಆಂಡ್ರೋಯ್ಡ್ ಫೋನ್ ಗಳಲ್ಲಿ ಜಿ ಮೈಲ್ ಎಂಬ ಅಪ್ಪ್ಲಿಕೆಶನ್ನೇ ಇದೆ.
ಜಿಪಿಎಸ್
[ಬದಲಾಯಿಸಿ]ಹಾಗು ಇದರಲ್ಲಿ ಜಿಪಿಎಸ್ ಮತ್ತು ಗೂಗಲ್ ಮ್ಯಾಪ್ ಸೇವೆಗಳನ್ನು ಪಡೆಯಬಹುದು.ಜೇಬಿನಿಂದ ಸ್ಮಾರ್ಟ್ ಫೋನ್ ತೆಗೆದು ಜಿ.ಪಿ.ಎಸ್ ಆನ್ ಮಾಡಿ ಗೂಗಲ್ ಮ್ಯಾಪ್ ಅಪ್ಲಿಕೇಶನನ್ನ ಬೆರಳಿಂದ ಮುಟ್ತೀರಿ. ಈಗ ಮೊಬೈಲ್ ನ ಪರದೆಯಮೇಲೆ ಟವರ್ ಆದಾರದಮೇಲೆ ನೀವಿರುವ ಜಾಗ ತಿಳಿದುಕೊಂಡು ನೀವಿರುವ ಜಾಗದ ಮ್ಯಾಪ್ ಮೂಡಲಾರಂಬಿಸುತ್ತದೆ. ಮನೆಮುಂದೆ ನಿಂತಿದ್ದಾರೆ, ರಸ್ತೆ ಕಾಣಲಾರಂಬಿಸುತ್ತದೆ. ಈಗ ಪರದೆಯಮೇಲೆ ಬಾಣದ ತುದಿಯ ಆಕಾರದ ಸಣ್ಣ ನೀಲಿ ಬಣ್ಣದ ಗುರುತು ಮೂಡುತ್ತದೆ. ಅದೇ ನಿಮ್ಮ ಸ್ಮಾರ್ಟ್ ಫೋನ್ ಗುರುತು ಫೋನ್ ಹಿಡಿದುಕೊಂಡು ನೀವು ಗೇಟಿನತ್ತ ನಡೆಯುತ್ತಿದ್ದಂತೆ ಆ ಬಾಣದ ಗುರುತೂ ಸ್ಕ್ರೀನ್ ಮೇಲಿನ ಮ್ಯಾಪಿನಲ್ಲಿ ಚಲಿಸಲಾರಂಭಿಸುತ್ತದೆ ಬೈಕೋ ಕಾರೋ ಹತ್ತಿ ವೇಗವಾಗಿ ಹೋಗುತ್ತಿದ್ದರೆ ಪರದೆಯಲ್ಲಿ ಕಾಣುವ ರಸ್ತೆಯ ಮ್ಯಾಪಿನಲ್ಲಿ ಆ ಗುರುತೂ ಅಷ್ಟೇ ವೇಗವಾಗಿ ಚಲಿಸುತ್ತಿರುತ್ತದೆ ಇದೇ ಜಿ.ಪಿ.ಎಸ್ ವ್ಯವಸ್ಥೆ. ಜಿ.ಪಿ.ಎಸ್ ಎಂದರೆ ನಾವು ಜಿ.ಪಿ.ಎಸ್ ಇರುವ ಉಪಕರಣ ಹಿಡಿದವರು ಪ್ರಪಂಚದ ಎಲ್ಲೇ ಇದ್ದರೂ ನಾವಿರುವ ಖಚಿತ ಸ್ಥಳವನ್ನು ನಮ್ಮ ಉಪಕರಣದಲ್ಲಿ ತೋರಿಸುವ ವ್ಯವಸ್ಥೆ. ಹೆಚ್ಚಿನ ಸ್ಮಾರ್ಟ್ ಫೋನ್ ಗಳಲ್ಲಿ ಜಿ.ಪಿ.ಎಸ್ ರಿಸೀವರ್ ಇರುತ್ತವೆ. ನಗರದೊಳಗಾಗಲಿ ಕಾಡಿನಲ್ಲಾಗಲಿ ನಾವು ಕಳೆದುಹೋಗುವ ಸಂಭವ ಕಡಿಮೆ. ಇನ್ನೂ ಆಶ್ಚರ್ಯವೆಂದರೆ ಜಿ.ಪಿ.ಎಸ್ ವ್ಯವಸ್ಥೆಗೆ ಮೊಬೈಲ್ ನೆಟ್ ವರ್ಕ್ ಸಿಗ್ನಲ್ ಅಗತ್ಯತೆ ಇಲ್ಲದೇ ಇರುವುದು ಆದರೆ ಗೂಗ್ಲ್ ಮ್ಯಾಪ್ ತೆರೆದುಕೊಳ್ಳಲು ನೆಟ್ ವರ್ಕ್ ಬೇಕು. ಆದರೆ ಒಮ್ಮೆ ನೆಟ್ ವರ್ಕ್ ಇದ್ದಾಗ ನಮ್ಮ ಸುತ್ತಮುತ್ತಲಿನ ಒಂದಿಷ್ಟು ಜಾಗದ ಮ್ಯಾಪ್ ಫೋನ್ ನ ಕೆಷೆಯಲ್ಲಿ ಸಂಗ್ರಹವಾಗಿರುತ್ತದೆ. ಕೂಡಲೇ ನೆಟ್ ವರ್ಕ್ ಸಿಗ್ನಲ್ ಇಲ್ಲದ ಜಾಗಕ್ಕೆ ನಾವು ಹೋದರೂ ಜಾಗದ ಮ್ಯಾಪ್ ಸ್ಕ್ರೀನ್ ನಲ್ಲಿ ಇದ್ದೇ ಇರುತ್ತದೆ ನಡುರಾತ್ರಿಯಲ್ಲಾಗಲಿ ಚಾರಣ ಮಾಡುತ್ತಾ ಕಾಡೊಳಗೆ ದಾರಿ ತಪ್ಪಿದ್ದರೆ ಜಿ.ಪಿ.ಎಸ್ ಇರುವ ಸ್ಮಾರ್ಟ್ ಫೋನ್ ಇದ್ದರೆ ಅಲೆದಾಟ ತಪ್ಪುತ್ತದೆ. ಸರಿದಾರಿಗೆ ಸುಲಭವಾಗಿ ಬರಬಹುದು. ಈ ಜಿ.ಪಿ.ಎಸ್ ಗೆ ಸಂಬಂದಿಸಿದಂತೆ ಆಂಡ್ರೋಯ್ಡ್ ಸ್ಮಾರ್ಟ್ ಫೋನ್ ಗಳಿಗಾಗಿ ಮೈ ಟ್ರಾಕ್, ಜಿ.ಪಿ.ಎಸ್ ಎಸ್ಸೇನ್ಶಿಯಲ್ ನಂತಹ ಅನೇಕ ಅಪ್ಲಿಕೇಶನ್ ಗಳಿವೆ. ಅವುಗಳನ್ನು ಆನ್ ಮಾಡಿ ಫೋನನ್ನು ಜೇಬಿನಲ್ಲಿಟ್ಟುಕೊಂಡು ಜಮೀನಿಗೆ ಒಂದು ಸುತ್ತು ಬಂದರೆ ಜಮೀನಿನ ಮ್ಯಾಪ್ ರೆಡಿ ಸ್ಮಾರ್ಟ್ ಫೋನ್ ಗಳಿದ್ದರೆ ನಗರಗಳಲ್ಲಿ ನೇವಿಗೇಶನ್ ಗೇ ಅನೇಕ ಅಪ್ಲಿಕೇಶನ್ ಗಳಿವೆ. ರಾತ್ರಿ ಕೊಲ್ಲೂರಿನಿಂದ ಶೃಂಗೇರಿಕಡೆ ಹೊರಟು ಮದ್ಯದಲ್ಲೆಲ್ಲಾದರೂ ಅಪರಾತ್ರಿಯಲ್ಲಿ ಸಾಗುತ್ತಿರುವ ದಾರಿ ಸರಿಯೇ ತಪ್ಪೇ ಎಂದು ಅನುಮಾನ ಬಂದರೆ ಈ ನೇವಿಗೇಶನ್ ಅಪ್ಲಿಕೇಶನ್ ಉಪಯೋಗಿಸಿ ದಾರಿ ಸರಿಯಾದದ್ದಾಗಿದೆಯೇ ಹಾಗೂ ಶೃಂಗೇರಿ ಎಷ್ಟು ದೂರದಲ್ಲಿದೆ ಹಾಗು ಎಷ್ಟು ಸಮಯದ ದಾರಿ ಎಂಬುದನ್ನು ಕಂಡುಕೊಳ್ಳಬಹುದು ನಿಜಕ್ಕೂ ಈ ಜಿ.ಪಿ.ಎಸ್ ವ್ಯವಸ್ಥೆ ಅತ್ಯದ್ಭುತ.[೩]
೩ಜಿ
[ಬದಲಾಯಿಸಿ]ಸ್ಮಾರ್ಟ್ ಫೋನ್ ನಲ್ಲಿ ನವು ೧೯೯೯ ರಲ್ಲಿ ೨ಜಿ ವೆಗವನು ಕಾಣಬಹುದಾಗಿತ್ತು.ಅದರೆ ಈಗ ನಾವು ೩ಜಿ ವೆಗವನು ಕಾಣಬಹುದಾಗಿದೆ.೩ಜಿ ಬಳಕೆ ತುಂಬ ವೆಗವಾದುದರಿಂದ ಜನರಿಗೆ ತುಂಬ ಉಪಯೋಗವಾಗಿದೆ. ೩ಜಿ ಇಂದ ಜನರಿಗೆ ತುಂಬ ಉಪಯೋಗವಾಗಿದೆ.೩ಜಿ ಇಂದ ನಾವು ಎನು ಬೇಕಾದರು ಕೆಲವೆ ಸಮಯದಲ್ಲಿ ಹುದುಕಬವುದು.೩ಜಿ ಜಾಲಗಳು ೨ಜಿಗಿಂತ ತುಂಬ ಹೆಚ್ಚಿನ ಭದ್ರತೆ ನೀಡುತ್ತಡುತದೆ.೩ಜಿ ಇಂದ ನಾವು ಯಾವಗ ಬೇಕಾದರು ಮಾಹಿತಿಯನು ಹುಡುಕಬಹುದು.
೪ಜಿ
[ಬದಲಾಯಿಸಿ]ಇದು ೩ಜಿ ನಂತರ ಬಂದಿದು.೪ಜಿ ತುಂಬ ವೇಗವಾಗಿದೆ.ಇದರಲ್ಲಿ ನಾವು ತುಂಬ ವೇಗವಾಗಿ ಮಾಹಿತಿಯನ್ನು ಹುಡುಕಬಹುಡು.ಇದರಿಂದ ಜನರಿಗೆ ತುಂಬ ಉಪಯೋಗವಾಗಿದೆ.ಇದರ ಬೇಲೆ ಕೂಡ ತುಂಬ ಕಡಿಮೆ.ಇದರ ಸೇವೆಗಳನ್ನು ಎಲ್ಲರೊ ಪಡೆಯಬವುದು.
ಉಲ್ಲೇಖಗಳು
[ಬದಲಾಯಿಸಿ]- ↑ https://en.wikipedia.org/wiki/Smartphone
- ↑ http://www.eweek.com/c/a/Mobile-and-Wireless/Microsoft-Explains-Windows-Phone-7-Lack-of-Compatibility-588900
- ↑ http://whatis.techtarget.com/definition/Google-Maps