ವಿಷಯಕ್ಕೆ ಹೋಗು

ಅನಲಾಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಯಾವುದೆ ಮಾಹಿತಿಯನ್ನು ಅಥವಾ ಸಂಜ್ಞೆಯನ್ನು ಅದರ ಮೂಲ ರೂಪದಲ್ಲಿ ನಿರೂಪಿಸಿದರೆ ಅದನ್ನು ಅನಲಾಗ್ ನಿರೂಪಣೆ ಎನ್ನಲಾಗುವುದು. ಇದು ಡಿಜಿಟಲ್ ನಿರೂಪಣೆಗೆ ಭಿನ್ನಸ್ವಭಾವದ್ದಾಗಿದೆ. ಉದಾಹರಣೆ: ನಾವು ದೂರವಾಣಿಯಲ್ಲಿ ಮಾತನಾಡಿದಾಗ (ನಮ್ಮ ಮಾತಿನ)ಶಬ್ದದ ಅಲೆಗಳನ್ನು ಮೈಕ್ರೊಫೊನ್ ಎಂಬ ಉಪಕರಣ ವಿದ್ಯುತ್ತಿನ ಏರಿಳಿತಗಳನ್ನಾಗಿ (ಸಂಜ್ಞೆಯಾಗಿ) ಪರಿವರ್ತಿಸುತ್ತದೆ. ಆ ಸಂಜ್ಞೆಯ ಅನಲಾಗ್ ನಿರೂಪಣೆ ಕೆಳಕಂಡ ಚಿತ್ರದಲ್ಲಿ ಗಮನಿಸಿ. ಇನ್ನೊಂದು ರೀತಿಯಲ್ಲಿ ಹೇಳಬೇಕೆಂದರೆ, ಅನಲಾಗ್ ನಿರೂಪಣೆಯಲ್ಲಿ, ಸಂಜ್ಞೆಯು ಪ್ರತಿ ಕ್ಷಣದಲ್ಲಿ ಹೇಗಿರುತ್ತದೆ ಎಂದು ತಿಳಿದು ಬರುತ್ತದೆ.