ವಿಷಯಕ್ಕೆ ಹೋಗು

ಆಂಡ್ರೆ ಅಗಾಸ್ಸಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಂಡ್ರೆ ಅಗಾಸ್ಸಿ
ಅಡ್ಡಹೆಸರುThe Punisher[]
ದೇಶUnited States
ವಾಸಸ್ಥಾನLas Vegas, Nevada, USA
ಎತ್ತರ1.80 m (5 ft 11 in)
ಆಟದಲ್ಲಿ ಪರಣಿತಿ ಪಡೆದದ್ದು1986
ನಿವೃತ್ತಿSeptember 3, 2006
ಆಟRight-handed; two-handed backhand
ವೃತ್ತಿಯ ಬಹುಮಾದನದ ಹಣUS$31,152,975
ಸಿಂಗಲ್ಸ್
ವೃತ್ತಿಯ ದಾಖಲೆ870–274 (76.05%)
ವೃತ್ತಿಯ ಶೀರ್ಷಿಕೆಗಳು68 including 60 listed by the ATP
ಅತ್ಯುನ್ನತ ಶ್ರೇಣಿNo. 1 (April 10, 1995)
ಗ್ರಾಂಡ್ ಸ್ಲಾಮ್ ಪಲಿತಾಂಶಗಳು
ಆಸ್ಟ್ರೇಲಿಯನ್ ಓಪನ್W (1995, 2000, 2001, 2003)
ಫ್ರೆಂಚ್ ಓಪನ್W (1999)
ವಿಂಬಲ್ಡನ್W (1992)
ಯು.ಇಸ್. ಓಪನ್ (ಟೆನಿಸ್)W (1994, 1999)
ಇತರ ಪಂದ್ಯಾವಳಿಗಳು
ಟೂರ್ ಫ಼ೈನಲ್‌ಗಳುW (1990)
ಒಲಂಪಿಕ್ ಆಟಗಳುW (1996)
ಡಬಲ್ಸ್
ವೃತ್ತಿಯ ದಾಖಲೆ40–42
ವೃತ್ತಿಯ ಶೀರ್ಷಿಕೆಗಳು1
ಅತ್ಯುನ್ನತ ಶ್ರೇಣಿNo. 123 (August 17, 1992)
ಗ್ರಾಂಡ್ ಸ್ಲಾಮ್ ಪಲಿತಾಂಶಗಳು
ಕಿರಿಯರ ಫ್ರೆಂಚ್ ಓಪನ್QF (1992)
ಯು.ಇಸ್. ಓಪನ್ (ಟೆನಿಸ್)1R (1987)
ಒಲಂಪಿಕ್ ಪದಕ ಪಟ್ಟಿ
Representing  ಅಮೇರಿಕ ಸಂಯುಕ್ತ ಸಂಸ್ಥಾನ
Men's tennis
Gold medal – first place 1996 Atlanta Singles

1970, ಏಪ್ರಿಲ್ 29, ರಂದು ಜನಿಸಿದ ; ಆಂಡ್ರೆ ಕಿರ್ಕ್ ಅಗಾಸ್ಸಿ pronounced /ˈɑːndreɪ ˈæɡəsi/ಅಮೇರಿಕಾದ ಒಬ್ಬ ನಿವೃತ್ತಿ ಹೊಂದಿದ ಹಾಗೂ ಹಿಂದಿನ ವಿಶ್ವದಲ್ಲೇ ಒಂದನೇ ಶ್ರೇಯಾಂಕದ ವೃತ್ತಿಪರ ಟೆನ್ನಿಸ್ ಆಟಗಾರ. ಸಾಮಾನ್ಯವಾಗಿ ವಿಮರ್ಶಕರು ಹಾಗೂ ಸಹ ಆಟಗಾರರಿಂದ ಸರ್ವಕಾಲೀನ ಅತ್ಯಂತ ಮಹಾನ್ ಟೆನ್ನಿಸ್ ಆಟಗಾರರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿರುವ,[][][] ಅಗಾಸ್ಸಿ ಪಂದ್ಯದ ಇತಿಹಾಸದಲ್ಲೇ ಅತ್ಯದ್ಭುತ ಸರ್ವೀಸ್ ಹಿಂದಿರುಗಿವವನು ಎಂದು ಕರೆಯಲ್ಪಟ್ಟಿದ್ದಾರೆ.[][][][] ಸಿಂಗಲ್ಸ್ ಟೆನ್ನಿಸ್ ನಲ್ಲಿ, ಅಗಾಸ್ಸಿ ಇತಿಹಾಸದಲ್ಲೇ ಕೆರಿಯರ್ ಗೋಲ್ಡನ್ ಸ್ಲ್ಯಾಮ್ ಸಾಧಿಸಿದ ಏಕೈಕ ಪುರುಷ ಆಟಗಾರ, ಮತ್ತು ರಾಡ್ ಲೆವರ್, ಡಾನ್ ಬಡ್ಜ್, ಫ್ರೆಡ್ ಪೆರ್ರಿ, ರಾಯ್ ಎಮರ್ ಸನ್, ಹಾಗೂ ರೋಜರ್ ಫೆಡರರ್ ಜೊತೆ ಕೆರಿಯರ್ ಗ್ರಾಂಡ್ ಸ್ಲ್ಯಾಮ್ ಸಾಧಿಸಿದ ಆರು ಜನರಲ್ಲಿ ಒಬ್ಬರು - ಓಪನ್ ಎರಾ ಪ್ರಾರಂಭವಾದಾಗಿನಿಂದ ಮೂರು ಜನರಲ್ಲಿ (ಲೆವರ್ ಮತ್ತು ಫೆಡರರ್ ಜೊತೆ) ಒಬ್ಬರು.[] ಅವರು ಹದಿನಾರು ಗ್ಯ್ರಾಂಡ್ ಸ್ಲ್ಯಾಮ್ ಪಂದ್ಯಗಳಲ್ಲಿ ಅಂತಿಮ ಹಂತ ತಲುಪಿ, ಎಂಟು ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಪಂದ್ಯಗಳನ್ನು ಗೆದ್ದರು, ಇದರಿಂದ ಅವರು ಪುರುಷ ಆಟಗಾರರ ಗ್ರ್ಯಾಂಡ್ ಸ್ಲ್ಯಾಮ್ ಸಿಂಗಲ್ಸ್ ಸ್ಪರ್ಧೆಗಳಲ್ಲಿ ಗೆದ್ದ ಜಂಟಿ ಐದನೆಯ ಆಟಗಾರನಾಗುವಂತೆ ಮಾಡಿದೆ, ಹಾಗೂ ಜೊತೆಗೆ ಸಿಂಗಲ್ಸ್ ನಲ್ಲಿ ಒಲಂಪಿಕ್ ಬಂಗಾರದ ಪದಕವನ್ನೂ ಪಡೆದಿದ್ದಾರೆ. ಅವರು ಗ್ರ್ಯಾಂಡ್ ಸ್ಲ್ಯಾಮ್ ಮತ್ತು ಒಲಂಪಿಕ್ ಸಿಂಗಲ್ಸ್ ಪಂದ್ಯಗಳನ್ನಲ್ಲದೆ, ಅವರು 2004-2010 ರ ವರೆಗೆ ಒಂದು ದಾಖಲೆಯಾಗಿರುವ ಹದಿನೇಳು ATP ಮಾಸ್ಟರ್ಸ್ ಸರಣಿ ಪಂದ್ಯಗಳನ್ನೂ ಗೆದ್ದಿದ್ದಾರೆ. ಅವರು 1990ATP ವಿಶ್ವ ಪ್ರವಾಸ ಸರಣಿ ಸ್ಪರ್ಧೆಗಳಲ್ಲಿ ಜಯಶಾಲಿಯಾದರು ಮತ್ತು 1990 ಹಾಗೂ 1992 ರಲ್ಲಿ ಗೆದ್ದ ಡೇವಿಸ್ ಕಪ್ ತಂಡದ ಸದಸ್ಯರಾಗಿದ್ದರು.[] ನರದ ಜೊತೆ ಅಡ್ಡಿ ಬರುವಂತಹ ಹಿಮ್ಮಡಿ ಎಲುಬು ಮತ್ತು (ಬೆನ್ನೆಲುಬಿನ ಸ್ಥಳಾಂತರ) ಸ್ಪಾಂಡಿಲೊಲಿಸ್ಥೆಸಿಸ್ ಎಂಬ ಅವರ ಬೆನ್ನಿನಲ್ಲಿ ಊರಿದ ಎರಡು ಡಿಸ್ಕ್ ಗಳಿಂದ ಉಂಟಾದ ನರಬೇನೆಯಿಂದ ನರಳಿದ ನಂತರ, ಅಗಾಸ್ಸಿ ಸೆಪ್ಟೆಂಬರ್ 3, 2006 ರಂದು ಯುಎಸ್ ಓಪನ್ ನ ಮೂರನೆ ಸುತ್ತಿನಲ್ಲಿ ಸೋತ ನಂತರ ವೃತ್ತಿಪರ ಟೆನ್ನಿಸ್ ನಿಂದ ನಿವೃತ್ತಿ ಹೊಂದಿದರು. ದಕ್ಷಿಣ ನೆವಡಾದಲ್ಲಿ ತೊಂದರೆಗೊಳಗಾದ ಮಕ್ಕಳಿಗೆ 60 ಮಿಲಿಯನ್ ಡಾಲರುಗಳ ಹಣವನ್ನು ಸಂಗ್ರಹಿಸಿದ ಅವರು[೧೦], ಆಂಡ್ರೆ ಅಗಾಸ್ಸಿ ಚಾರಿಟಬಲ್ ಪ್ರತಿಷ್ಠಾನದ ಸಂಸ್ಥಾಪಕರಾಗಿದ್ದಾರೆ[೧೧]. 2001 ರಲ್ಲಿ, ಪ್ರತಿಷ್ಠಾನವು ಕಷ್ಟದಲ್ಲಿರುವ ಮಕ್ಕಳಿಗೆ ಒಂದು K-12 ಸಾರ್ವಜನಿಕ ಅಭಿಕಾರದ ಶಾಲೆಯನ್ನು, ಲಾಸ್ ವೇಗಾಸ್ ನಲ್ಲಿ ಆಂಡ್ರೆ ಅಗಾಸ್ಸಿ ಕಾಲೆಜು ಪೂರ್ವಭಾವಿ ಪ್ರೌಢಶಾಲೆಯನ್ನು ತೆರೆದಿದೆ.[೧೨] "ಬಹುಶಃ ಪಂದ್ಯಗಳ ಇತಿಹಾಸದಲ್ಲೇ ಅತ್ಯದ್ಭುತ ವಿಶ್ವವ್ಯಾಪಿ ನಕ್ಷತ್ರವೆಂದು" [] ಅವರ ನಿವೃತ್ತಿ ಸಮಯದಲ್ಲಿ BBC ಯಿಂದ ವರ್ಣಿಸಲ್ಪಟ್ಟಿರುವ, ಅವರ ಸಂಪ್ರದಾಯ ಬದ್ಧವಲ್ಲದ ಉಡುಪು ಹಾಗೂ ಮನೋವರ್ತನೆಯ ಸಹಿತ, ಅಗಾಸ್ಸಿಯ ಸಾಧನೆಗಳು, ಪಂದ್ಯದ ಚರಿತ್ರೆಯಲ್ಲಿ ಅತ್ಯಂತ ಶ್ರೇಷ್ಠ ವರ್ಚಸ್ಸುಳ್ಳ ಆಟಗಾರನೆಂದು ಉದಾಹರಿಸಿರುವುದನ್ನು ಕಾಣುತ್ತೇವೆ, ಮತ್ತು 1990 ರ ಅವಧಿಯಲ್ಲಿ ಟೆನ್ನಿಸ್ ನ ಜನಪ್ರಿಯತೆಯನ್ನು ಪುರುಜ್ಜೀವಿತಗೊಳಿಸಿದ ಸಹಾಯಕ್ಕಾಗಿ ಶ್ಲಾಘಿಸುತ್ತವೆ.[][][೧೩] ಅವರು ನಿವೃತ್ತಿ ಹೊಂದಿದ ವೃತ್ತಿಪರ ಟೆನ್ನಿಸ್ ನ ಸಹ ಆಟಗಾರ್ತಿ ಸ್ಟೆಫಿ ಗ್ರಾಫ್ ರನ್ನು ಮದುವೆಯಾಗಿದ್ದಾರೆ.

1970-1985: ಪ್ರಾರಂಭಿಕ ಜೀವನ

[ಬದಲಾಯಿಸಿ]

ಇಮ್ಯಾನುಎಲ್ "ಮೈಕ್" ಅಘಾಸ್ಸಿಯಾನ್ ಮತ್ತು ಎಲಿಜಬೆತ್ "ಬೆಟ್ಟಿ" ಅಗಾಸ್ಸಿ (ನೀ ಡುಡ್ಲೆ) ಗೆ, ನೆವಡಾ ದ ಲಾಸ್ ವೆಗಾಸ್ ನಲ್ಲಿ ಅಗಾಸ್ಸಿಯು ಹುಟ್ಟಿದರು.[೧೪] ಅವರ ತಂದೆ ಅರ್ಮೇನಿಯನ್ ಮತ್ತು ಅಸ್ಸಿರಿಯನ್ಇರಾನಿಯ ಜನಾಂಗೀಯರು[೧೫][೧೬][೧೭][೧೮], ಇವರು ಸಂಯುಕ್ತ ಸಂಸ್ಥಾನಕ್ಕೆ ವಲಸೆ ಬರುವ ಮುಂಚೆ 1948 ಹಾಗೂ 1952ಒಲಂಪಿಕ್ ಕ್ರೀಡೆಗಳಲ್ಲಿ ಕುಸ್ತಿಯಲ್ಲಿ ಇರಾನ್ ನನ್ನು ಪ್ರತಿನಿಧಿಸಿದ್ದರು.[೧೯] ಆಂಡ್ರೆ ಅಗಾಸ್ಸಿ ಯವರ ತಾಯಿ, ಬೆಟ್ಟಿ, ಸ್ತನ ಕ್ಯಾನ್ಸರ್ ನಿಂದ ಬದುಕುಳಿದವರು. ಮೈಕ್ ಅಗಾಸ್ಸಿ ತನ್ನ ಗದರಿಸುವ ಸ್ವಭಾವಕ್ಕೆ ಹೆಸರುವಾಸಿಯಾಗಿದ್ದರು, ಪಂದ್ಯಗಳಿಗೆ ಅಧಿಕಾರಯುತವಾಗಿ ಒಂದು ಸುತ್ತಿಗೆಯನ್ನು ತೆಗೆದುಕೊಂಡು ಹೋಗಿ ಅಂಡ್ರೆ ಯಾವಾಗಲಾದರೂ ಒಂದು ಅಂಕ ಸೋತರೂ ಬೇಸರದಿಂದ ಬೇಲಿಗಳ ಮೇಲೆ ಹೊಡೆಯುತ್ತಿದ್ದರು. ಅವರು ಕೆಲವು ವೇಳೆ ಅಧಿಕಾರಿಗಳತ್ತ ಕಿರುಚುತ್ತಿದ್ದರು ಹಾಗೂ ಒಂದಕ್ಕಿಂತ ಹೆಚ್ಚು ಬಾರಿ ಹೊರಹಾಕಲ್ಪಟ್ಟಿದ್ದರು. 13 ನೇ ವಯಸ್ಸಿನಲ್ಲಿ, ಆಂಡ್ರೆ ಫ್ಲಾರಿಡಾದಲ್ಲಿನ ನಿಕ್ ಬೊಲ್ಲೆಟ್ಟಿರಿ ನ ಟೆನ್ನಿಸ್ ಶಾಲೆಗೆ ಕಳುಹಿಸಲ್ಪಟ್ಟರು.[೧೯] ಅವರು ಅಲ್ಲಿ ಕೇವಲ ಮೂರು ತಿಂಗಳು ಮಾತ್ರ ಇರಬಹುದಾಗಿತ್ತು ಏಕೆಂದರೆ ಅವರ ತಂದೆ ಅಷ್ಟು ಮಾತ್ರ ಹಣ ವ್ಯಯ ಮಾಡಬಲ್ಲವರಾಗಿದ್ದರು. ಆದಾಗ್ಯೂ, ಅಗಾಸ್ಸಿಯ ಆಟವನ್ನು ಹತ್ತು ನಿಮಿಷ ವೀಕ್ಷಿಸಿದ ನಂತರ, ಬೊಲ್ಲೆಟ್ಟೆರಿ ಮೈಕ್ ರನ್ನು ಕರೆದು ಹೇಳಿದರು: "ನಿಮ್ಮ ಚೆಕ್ ವಾಪಸ್ಸು ತೆಗೆದುಕೊಳ್ಳಿ. ಅವರು ಇಲ್ಲಿ ಉಚಿತವಾಗಿರುತ್ತಾರೆ," ತಾನು ನೋಡಿದ ಯಾರೊಬ್ಬರಿಗಿಂತಲೂ ಹೆಚ್ಚು ಸ್ವಾಭಾವಿಕ ಪ್ರತಿಭೆಯನ್ನು ಅಗಾಸ್ಸಿ ಹೊಂದಿದ್ದಾರೆಂದು ತಿಳಿಸಿದರು.[೨೦]

ಅಂತರಾಷ್ಟ್ರೀಯ ಟೆನ್ನಿಸ್ ವೃತ್ತಿಯ ಜೀವನ ಚರಿತ್ರೆ

[ಬದಲಾಯಿಸಿ]

ಅವರು ತಮ್ಮ 16 ನೇ ವಯಸ್ಸಿನಲ್ಲಿ ವೃತ್ತಿಪರ ಆಟಗಾರರಾದರು ಹಾಗೂ ಅವರ ಮೊದಲ ಕ್ರೀಡಾಸ್ಪರ್ಧೆ ಕ್ಯಾಲಿಫೋರ್ನಿಯಾದ ಲಾ ಕ್ವಿಂಟಾ ದಲ್ಲಿತ್ತು. ಅವರು ಜಾನ್ ಆಸ್ಟಿನ್ ವಿರುದ್ಧ 6-4, 6-2 ಇಂದ ತಮ್ಮ ಮೊದಲ ಪಂದ್ಯವನ್ನು ಗೆದ್ದರು, ಆದರೆ ನಂತರ ತಮ್ಮ ಎರಡನೆ ಪಂದ್ಯವನ್ನು ಮಾಟ್ಸ್ ವಿಲಾಂಡರ್ ಗೆ 6-1, 6-1 ರಿಂದ ಸೋತರು. ವರ್ಷಾಂತ್ಯದಲ್ಲಿ ಅಗಾಸ್ಸಿ ವಿಶ್ವದ 91 ನೇ ಶ್ರೇಯಾಂಕವನ್ನು ಪಡೆದಿದ್ದರು.[೨೧] ಇಟಪಾರಿಕಾ ದಲ್ಲಿ ಸುಲ್ ಅಮೇರಿಕನ್ ಓಪನ್ ಅನ್ನು 1987 ರಲ್ಲಿ ಅಗಾಸ್ಸಿ ತಮ್ಮ ಮೊದಲನೆಯ ಅತ್ಯುನ್ನತ ಮಟ್ಟದ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದರು.[೧೯] ವರ್ಷವನ್ನು ವಿಶ್ವದ 25 ನೇ ಶ್ರೇಯಾಂಕದಿಂದ ಕೊನೆಗೊಳಿಸಿದರು.[೧೯] ಅವರು ಆರು ಹೆಚ್ಚುವರಿ ಕ್ರೀಡಾ ಸ್ಪರ್ಧೆಗಳಲ್ಲಿ 1988 ರಲ್ಲಿ ಜಯಗಳಿಸಿದರು (ಮೆಂಫಿಸ್, ಯು.ಎಸ್ ಪುರುಷರ ಕ್ಲೇ ಕೋರ್ಟ್ ಪಂದ್ಯಗಳು, ಫಾರೆಸ್ಟ್ ಹಿಲ್ಸ್ WCT, ಸ್ಟುಟ್ ಗಾರ್ಟ್ ಔಟ್ ಡೋರ್, ವೋಲ್ವೊ ಅಂತರಾಷ್ಟ್ರೀಯ ಮತ್ತು ಲಿವಿಂಗ್ ಸ್ಟೋನ್ ಓಪನ್),[೧೯] ಮತ್ತು ಆ ವರುಷದ ಡಿಸಡಂಬರ್ ವೇಳೆಗೆ, ಕೇವಲ 43 ಪಂದ್ಯಗಳನ್ನು ಆಡಿದ ನಂತರ ಅವರು 2 ಮಿಲಿಯನ್ ಯುಎಸ್ ಡಾಲರುಗಳ ಜೀವನ ವೃತ್ತಿಯ ಬಹುಮಾನದ ಹಣವನ್ನು ಮೀರಿದರು - ಇತಿಹಾಸದಲ್ಲಿ ಆ ಹಂತವನ್ನು ತಲುಪಿದ ಯಾರೊಬ್ಬರಿಗಿಂತಲೂ ಅದು ಅತ್ಯಂತ ವೇಗವಾಗಿತ್ತು.[ಸೂಕ್ತ ಉಲ್ಲೇಖನ ಬೇಕು] ಅತ್ಯುನ್ನತ ಶ್ರೇಯಾಂಕದ ಮ್ಯಾಟ್ಸ್ ವಿಲಾಂಡರ್ ಹಾಗೂ ಎರಡನೆ ಶ್ರೇಯಾಂಕದ ಇವಾನ್ ಲೆಂಡ್ಲ್ ಯವರ ಹಿಂದೆ 3 ನೇ ವಿಶ್ವ ಶ್ರೇಯಾಂಕವನ್ನು ವರ್ಷಾಂತ್ಯದಲ್ಲಿ ಪಡೆದರು. ವೃತ್ತಿಪರ ಟೆನ್ನಿಸ್ ಆಟಗಾರರ ಸಂಸ್ಥೆ ಹಾಗೂ ಟೆನ್ನಿಸ್ ಸಂಚಿಕೆಗಳೆರಡೂ 1988 ನೇ ವರುಷದ ಅತ್ಯಂತ ಸುಧಾರಿಸಿದ ಆಟಗಾರನೆಂದು ಅಗಾಸ್ಸಿಯನ್ನು ಹೆಸರಿಸಿದರು.[೧೯] ತಮ್ಮ ವೃತ್ತಿ ಜೀವನದ ಮೊದಲ ಎಂಟು ವರ್ಷಗಳ ವರೆಗೆ ಆಸ್ಟ್ರೇಲಿಯನ್ ಓಪನ್ (ಇದೇ ಮುಂದೆ ಅವರ ಅತ್ಯಂತ ಶ್ರೇಷ್ಠ ಗ್ರ್ಯಾಂಡ್ ಸ್ಲ್ಯಾಂಮ್ ಆಗಿ ಪರಿಣಮಿಸಿತು) ಆಡಬಾರದೆಂದೂ ಅಲ್ಲದೆ, ಅಗಾಸ್ಸಿ 1988 ರಿಂದ 1990 ರ ಪೂರ್ತಿ ವಿಂಬಲ್ಡನ್ ನಲ್ಲಿ ಆಡ ಬಾರದೆಂದು ನಿರ್ಧರಿಸಿದರು ಮತ್ತು ಅಲ್ಲಿಯ ಆಟಗಳ ಪಾರಂಪರಿಕತೆಯ ಕಾರಣ, ವಿಶೇಷವಾಗಿ ಅದರ "ಮುಖ್ಯ ಬಿಳಿ" ಉಡುಪಿನ ನಿಯಮಕ್ಕೆ ಆಟಗಾರರು ಆಡುವಾಗ ಅನುಸರಿಸ ಬೇಕಾಗಿರುವುದರಿಂದ ತಾವು ಅಲ್ಲಿ ಆಡಲು ಬಯಸುವುದಿಲ್ಲವೆಂದು ಸಾರ್ವಜನಿಕವಾಗಿ ಘೋಷಿಸಿದ್ದರು. ಸ್ಪರ್ಧೆಗಳಲ್ಲಿನ ಶ್ರೇಷ್ಠ ಪ್ರದರ್ಶನಗಳ ಕಾರಣ ಅಗಾಸ್ಸಿ ಬೇಗನೆ ಭವಿಷ್ಯದ ಗ್ರ್ಯಾಂಡ್ ಸ್ಲ್ಯಾಮ್ ವೀರಾಗ್ರಣಿ ಎಂದು ಎಣಿಸಲ್ಪಟ್ಟರು. ಇನ್ನೂ ಹದಿವಯಸ್ಸಿನವನಾಗಿದ್ದರೂ, ಅವರು ಫ್ರೆಂಚ್ ಓಪನ್ ಮತ್ತು ಯುಎಸ್ ಓಪನ್ ಗಳಲ್ಲಿ 1988 ರಲ್ಲಿ ಉಪಾಂತ್ಯ ಪಂದ್ಯವನ್ನು ತಲುಪಿದರು, ಹಾಗೂ 1989 ರಲ್ಲಿ ಯುಎಸ್ ಓಪನ್ ಉಪಾಂತ್ಯ ಪಂದ್ಯವನ್ನು ಗೆದ್ದರು. ಆದಾಗ್ಯೂ, 1990 ನ್ನು ಅನೇಕ ಹತ್ತಿರದ ಸೋಲಿನಿಂದ ಪ್ರಾರಂಭಿಸಿದರು. ಅವರು ತಮ್ಮ ಮೊದಲ ಗ್ರ್ಯಾಂಡ್ ಸ್ಲ್ಯಾಂಮ್ ಅಂತಿಮ ಹಂತವನ್ನು 1990 ರ ಫ್ರೆಂಚ್ ಓಪನ್ ನಲ್ಲಿ ತಲುಪಿದರು, ಅಲ್ಲಿ ಅವರು ಆಂಡ್ರೆಸ್ ಗೊಮೆಜ್ ಗೆ ನಾಲ್ಕು ಸೆಟ್ ಗಳಲ್ಲಿ ಸೋಲುವ ಮುನ್ನ ಎಲ್ಲರೂ ಅವರೇ ಗೆಲ್ಲುತ್ತಾರೆಂದು ತಿಳಿದಿದ್ದರು. ಉಪಾಂತ್ಯದಲ್ಲಿ ಹಾಲಿ ವಿಜೇತ ಬೋರಿಸ್ ಬೆಕರ್ ನನ್ನು ಸೋಲಿಸಿ, ಅವರು ಯುಎಸ್ ಓಪನ್ ನಲ್ಲಿ ಆ ವರ್ಷದ ತಮ್ಮ ಎರಡನೆಯ ಗ್ರ್ಯಾಂಡ್ ಸ್ಲ್ಯಾಂಮ್ ಅಂತಿಮ ಹಂತ ತಲುಪಿದರು. ಅವರ ನಿರ್ಣಾಯಕ ಹಂತದ ಎದುರಾಳಿ ಪೀಟ್ ಸಾಂಪ್ರಾಸ್; ಒಂದು ವರ್ಷ ಮೊದಲು ಅಗಾಸ್ಸಿ ಸಾಂಪ್ರಾಸ್ ರನ್ನು 6-2, 6-1 ರಿಂದ ಸೋಲಿಸಿದ್ದರು, ಅದಾದ ನಂತರ ಅವರು ಎಂದಿಗೂ ಅದನ್ನು ವೃತ್ತಿಪರವಾಗಿ ಆಡುವುದಿಲ್ಲವೆಂಬುದರ ಕಾರಣ ಸಾಂಪ್ರಾಸ್ ಬಗ್ಗೆ ತನಗೆ ಖೇದವಾಗುತ್ತಿದೆಯೆಂದು ತನ್ನ ತರಬೇತುದಾರರಿಗೆ ತಿಳಿಸಿದ್ದರು. ಅಗಾಸ್ಸಿ ಯುಎಸ್ ಓಪನ್ ಅಂತಿಮ ಪಂದ್ಯವನ್ನು ಸಾಂಪ್ರಾಸ್ ಗೆ 6-4, 6-3, 6-2 ರಿಂದ ಸೋತರು. ಈ ಇಬ್ಬರೂ ಅಮೇರಿಕಾದ ಆಟಗಾರರ ನಡುವಿನ ಪೈಪೋಟಿಯು ಆ ದಶಕದ ಉಳಿದ ದಿನಗಳಲ್ಲಿ ಟೆನ್ನಿಸ್ ನಲ್ಲಿ ಪ್ರಧಾನ ಪ್ರತಿಸ್ಪರ್ಧೆಯಾಯಿತು. 1990 ರಲ್ಲೂ ಸಹ, ಅಗಾಸ್ಸಿ 8 ವರ್ಷಗಳಲ್ಲಿ ಸಂಯುಕ್ತ ಸಂಸ್ಥಾನವು ತನ್ನ ಮೊದಲನೆಯ ಡೇವಿಸ್ ಕಪ್ ಗೆಲ್ಲಲು ಸಹಾಯ ಮಾಡಿದರು ಹಾಗೂ ಅಂತಿಮ ಪಂದ್ಯದಲ್ಲಿ ಪ್ರಬಲ ವಿಂಬಲ್ಡನ್ ಹಾಲಿ ವಿಜೇತ ಸ್ಟೇಫಾನ್ ಎಡ್ಬರ್ಗ್ ಅನ್ನು ಸೋಲಿಸಿ ತಮ್ಮ ಏಕೈಕ ಟೆನ್ನಿಸ್ ಮಾಸ್ಟರ್ಸ್ ಕಪ್ ಗೆದ್ದರು. 1991 ರಲ್ಲಿ, ಅಗಾಸ್ಸಿ ತಮ್ಮ ಅನುಕ್ರಮವಾದ ಎರಡನೆ ಫ್ರೆಂಚ್ ಓಪನ್ ಅಂತಿಮ ಘಟ್ಟವನ್ನು ತಲುಪಿದರು, ಅಲ್ಲಿ ಅವರು ಬೊಲ್ಲೆಟ್ಟಿರಿ ಶಾಲೆಯ ಸಹ ವಿದ್ಯಾರ್ಥಿ ಜಿಮ್ ಕೊರಿಯರ್ ಅನ್ನು ಎದುರಿಸಿದರು. ಕೊರಿಯರ್ ಐದು ಸೆಟ್ ಗಳ ಅಂತಿಮ ಪಂದ್ಯದಲ್ಲಿ ಜಯಶಾಲಿಯಾಗಿ ಹೊರಬಂದರು. ತಾವು ಧರಿಸುವಂತಹ ಉಡುಪುಗಳ ಬಗ್ಗೆ ಮಾಧ್ಯಮಗಳಲ್ಲಿ ವಾರಗಟ್ಟಲೆ ಉಹಾಪೋಹಗಳಿಗೆ ಎಡೆಮಾಡಿಕೊಡುತ್ತಾ, ಅಗಾಸ್ಸಿ 1991 ರ ವಿಂಬಲ್ಡನ್ ನಲ್ಲಿ ಆಡಲು ನಿರ್ಧರಿಸಿದರು. ಅವರು ಆನಂತರ ಸಂಪೂರ್ಣ ಬಿಳಿ ಉಡುಪಿನಲ್ಲಿ ಮೊದಲನೆ ಸುತ್ತಿನ ಆಟಕ್ಕೆ ಪ್ರವೇಶಿಸಿದರು. ಅವರು ಐದು ಸೆಟ್ ಗಳಲ್ಲಿ ಡೇವಿಡ್ ವೀಟನ್ ಗೆ ಸೋತರು, ಆ ಸಂದರ್ಭದಲ್ಲಿ ಕ್ವಾರ್ಟರ್ ಫೈನಲ್ ಹಂತವನ್ನು ತಲಿಪಿದ್ದರು. ತಾವು ಮೊದಲು ಯಶಸ್ಸು ಗಳಿಸಿದ್ದ ಫ್ರೆಂಚ್ ಓಪನ್ ಅಥವಾ ಯುಎಸ್ ಓಪನ್ ನಲ್ಲಿ ಅಲ್ಲದೆ, ಅಗಾಸ್ಸಿ ಅವರ ಮೊದಲ ಗ್ರ್ಯಾಂಡ್ ಸ್ಲ್ಯಾಂಮ್ ಜಯವು ವಿಂಬಲ್ಡನ್ ನಲ್ಲಿ ಬಂದಿತು. 1992 ರಲ್ಲಿ, ಅವರು ಐದು ಸೆಟ್ ಗಳ ಅಂತಿಮ ಪಂದ್ಯದಲ್ಲಿ ಗೊರಾನ್ ಇವಾನ್ಸಿವಿಚ್ ಅವರನ್ನು ಸೋಲಿಸಿದರು.[೧೯] ಅಂತಿಮ ಹಂತ ತಲುಪುವ ಹಾದಿಯಲ್ಲಿ, ಅಗಾಸ್ಸಿ ಹಿಂದಿನ ಇಬ್ಬರು ವಿಂಬಲ್ಡನ್ ವಿಜೇತರಾದ ಬೊರಿಸ್ ಬೆಕರ್ ಮತ್ತು ಜಾನ್ ಮೆಕೆನ್ರೊ ಅವರ ಮೇಲೆ ಜಯಗಳಿಸಿದ್ದರು. ಹತ್ತು ವರ್ಷಗಳ ನಂತರ ಲಿಯಟಾನ್ ಹೆವಿಟ್ ತನಕ ವಿಂಬಲ್ಡನ್ ನಲ್ಲಿ ಬೇರೆ ಯಾವುದೇ ಬೇಸ್ ಲೈನ್ ಆಟಗಾರ ಜಯಶಾಲಿಯಾಗಲಿಲ್ಲ. 1992 ರಲ್ಲಿ ಅಗಾಸ್ಸಿ ಯನ್ನು BBC ಓವರ್ ಸೀಸ್ ವರ್ಷದ ಕ್ರೀಡಾ ವ್ಯಕ್ತಿಯೆಂದು ಹೆಸರಿಸಲಾಯಿತು. 1992 ರಲ್ಲಿ ಅಗಾಸ್ಸಿ ಮತ್ತೊಮ್ಮೆ ಸಂಯುಕ್ತ ಸಂಸ್ಥಾನದ ಡೇವಿಸ್ ಕಪ್ ಗೆದ್ದ ತಂಡದಲ್ಲಿ ಆಡಿದರು. ಮೂರು ವರ್ಷಗಳಲ್ಲಿ ಅದು ಅವರ ಎರಡನೇ ಡೇವಿಸ್ ಕಪ್ ಬಿರುದಾಗಿತ್ತು. ಪೀಟರ್ ಕೊರ್ಡಾ ರವರ ಜೊತಗೂಡಿ, ಸಿನ್ ಸಿನಾಟಿ ಮಾಸ್ಟರ್ಸ್ ನಲ್ಲಿ ತಮ್ಮ ವೃತ್ತಿ ಜೀವನದ ಏಕೈಕ ಡಬಲ್ಸ್ ಪ್ರಶಸ್ತಿಯನ್ನು 1993 ರಲ್ಲಿ ಗೆದ್ದರು. ಅಗಾಸ್ಸಿ ಆ ವರ್ಷದ ಪ್ರಾರಂಭದ ಹೆಚ್ಚು ಕಾಲವನ್ನು ಗಾಯಗಳ ತೊಂದರೆಯಿಂದ ಕಳೆದುಕೊಂಡರು. ತಮ್ಮ ವಿಂಬಲ್ಡನ್ ಪ್ರಶಸ್ತಿಯನ್ನು ಉಳಿಸಿಕೊಳ್ಳುವುದಕ್ಕಾಗಿ ಕ್ವಾರ್ಟರ್ ಫೈನಲ್ ಹಂತವನ್ನು ತಲುಪಿದರಾದರೂ, ಅವರು ಕೊನೆಗೆ ಆ ವರ್ಷದ ಪ್ರಶಸ್ತಿ ವಿಜೇತ ಮತ್ತು ವಿಶ್ವದ ಮೊದಲನೇ ಶ್ರೇಯಾಂಕದ ಆಟಗಾರ ಪೀಟ್ ಸಾಂಪ್ರಾಸ್ ಅವರಿಗೆ ಐದು ಸೆಟ್ ಗಳಲ್ಲಿ ಸೋತರು. ಅಗಾಸ್ಸಿ ಯುಎಸ್ ಓಪನ್ ನಲ್ಲಿ ಥಾಮಸ್ ಇನ್ ಕ್ವಿಸ್ಟ್ ಗೆ ಮೊದಲನೆಯ ಸುತ್ತಿನಲ್ಲೇ ಸೋತರು ಮತ್ತು ಆ ವರ್ಷದ ನಂತರದಲ್ಲಿ ಮಣಿಕಟ್ಟಿನ ಶಸ್ತ್ರ ಚಿಕಿತ್ಸೆ ಮಾಡಿಸಬೇಕಾಯಿತು.

ಹೊಸ ತರಬೇತುದಾರ ಬ್ರಾಡ್ ಗಿಲ್ಬರ್ಟ್ ರನ್ನು ತೆಗೆದುಕೊಂಡ ಮೇಲೆ, ಅಗಾಸ್ಸಿ ಹೆಚ್ಚು ಕುಶಲತೆಯಿಂದ ಯೋಜಿಸಿದ, ಸ್ಥಿರ ಮಾರ್ಗವನ್ನು ಅನುಸರಿಸಲು ಪ್ರಾರಂಭಿಸಿದರು, ಇದು ಅವರ ಪುನರುಜ್ಜೀವನವನ್ನು ಉತ್ತೇಜಿಸಿತು. ಅಗಾಸ್ಸಿ 1994 ರನ್ನು ನಿಧಾನವಾಗಿ ಪ್ರಾರಂಭಿಸಿ, ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್ ನಲ್ಲಿ ಮೊದಲ ವಾರದಲ್ಲಿ ಸೋತರು. ಆದರೂ, ಅಗಾಸ್ಸಿ ಹಾರ್ಡ್ ಕೋರ್ಟ್ ಆವೃತ್ತಿಯ ಅವಧಿಯಲ್ಲಿ, ಕೆನೆಡಿಯನ್ ಓಪನ್ ನಲ್ಲಿ ಜಯಶಾಲಿಯಾದರು. ಸ್ವದೇಶದವರೇ ಆದ ಮೈಖೆಲ್ ಚಾಂಗ್ ವಿರುದ್ಧ 5-ಸೆಟ್ ಗಳ ನಾಲ್ಕನೇ ಸುತ್ತಿನ ಯಶಸ್ಸಿನ ಜೊತೆ 1994 ರ ಯುಎಸ್ ಓಪನ್ ನಲ್ಲಿ ಅವರು ಹಿಂದಿರುಗಿದರು ಮತ್ತು ನಂತರ ಅಂತಿಮ ಪಂದ್ಯದಲ್ಲಿ ಮೈಖೆಲ್ ಸ್ಟಿಚ್ ರವರನ್ನು ಸೋಲಿಸಿ, ಶ್ರೇಯಾಂಕವಿಲ್ಲದ ಆಟಗಾರನಾಗಿ ಯುಎಸ್ ಓಪನ್ ಗೆದ್ದ ಮೊದಲನೇ ಆಟಗಾರರಾದರು.[೧೯] 1995 ರಲ್ಲಿ, ಅಗಾಸ್ಸಿ ತಮ್ಮ ತಲೆಯಲ್ಲಿ ಇದ್ದ ಸ್ವಲ್ಪ ಕೂದಲನ್ನು ತೆಗೆದು, ತಮ್ಮ ಹಳೆಯ "ಆಕಾರವೇ ಸರ್ವಸ್ವ" ಎಂಬ ವೇಷವನ್ನು ಬದಲಾಯಿಸಿದರು. ಅವರು 1995 ರ ಆಸ್ಟ್ರೇಲಿಯನ್ ಓಪನ್ (ಸ್ಪರ್ಧೆಯಲ್ಲಿ ಅವರು ಮೊದಲ ಬಾರಿ ಕಾಣಿಸಿಕೊಂಡರು) ನಲ್ಲಿ ಸ್ಪರ್ಧಿಸಿ, ನಾಲ್ಕು ಸೆಟ್ ಗಳ ಅಂತಿಮ ಪಂದ್ಯದಲ್ಲಿ ಸಾಂಪ್ರಾಸ್ ಅವರನ್ನು ಸೋಲಿಸಿ ಪ್ರಶಸ್ತಿ ಗೆದ್ದು ಕೊಂಡರು.[೧೯] ಅಗಾಸ್ಸಿ ಮತ್ತು ಸಾಂಪ್ರಾಸ್ 1995 ರಲ್ಲಿ ಐದು ಅಂತಿಮ ಪಂದ್ಯಗಳಲ್ಲಿ ಸಂಧಿಸಿದರು, ಎಲ್ಲವೂ ಹಾರ್ಡ್ ಕೋರ್ಟ್ ಗಳ ಮೇಲೆ, ಅದರಲ್ಲಿ ಅಗಾಸ್ಸಿ ಮೂರರಲ್ಲಿ ಗೆದ್ದರು. ಅಗಾಸ್ಸಿ 1995 ರಲ್ಲಿ ಮೂರು ಮಾಸ್ಟರ್ಸ್ ಸರಣಿ ಸ್ಪರ್ಧೆಗಳೂ ಸೇರಿದಂತೆ (ಸಿನ್ ಸಿನಾಟಿ, ಕೀ ಬಿಸ್ಕಯ್ನೆ, ಮತ್ತು ಕೆನೆಡಿಯನ್ ಓಪನ್) ಒಟ್ಟು ಏಳು ಪ್ರಶಸ್ತಗಳನ್ನು ಗೆದ್ದರು.[೧೯] ಬೇಸಿಗೆಯ ಹಾರ್ಡ್ ಕೋರ್ಟ್ ಪಂದ್ಯಾಟಗಳ ಅವದಿಯಲ್ಲಿ ತಮ್ಮ ವೃತ್ತಿ ಜೀವನದ ಅತ್ಯಂತ ಶ್ರೇಷ್ಠ 26-ಪಂದ್ಯಗಳಲ್ಲಿ ಒಂದೇ ಸಮನೆ ವಿಜಯ ಸಾಧಿಸಿದ್ದರು, ಅದು ಅವರು ಸಾಂಪ್ರಾಸ್ ಅವರಿಗೆ ಯುಎಸ್ ಓಪನ್ ಅಂತಿಮ ಪಂದ್ಯದಲ್ಲಿ ಸೋಲುವುದರೊಂದಿಗೆ ಕೊನೆಗೊಂಡಿತು. ಏಪ್ರಿಲ್ 1995 ರಲ್ಲಿ ಮೊದಲ ಬಾರಿಗೆ ಅಗಾಸ್ಸಿ ವಿಶ್ವದ ಒಂದನೇ ಶ್ರೇಯಾಂಕವನ್ನು ತಲುಪಿದರು. ಅವರು ಆ ಶ್ರೇಯಾಂಕವನ್ನು ಒಟ್ಟು 30 ವಾರಗಳ ತನಕ, ನವೆಂಬರ್ ವರೆಗೆ ಹೊಂದಿದ್ದರು. ಸೋಲು/ಗೆಲುವಿನ ದಾಖಲೆಯಲ್ಲಿ, 1995 ಅಗಾಸ್ಸಿ ಯವರ ಅತ್ಯಂತ ಶ್ರೇಷ್ಠ ವರ್ಷ. ಅವರು 75 ಪಂದ್ಯಗಳಲ್ಲಿ ಜಯಗಳಿಸಿ, 9 ರಲ್ಲಿ ಮಾತ್ರ ಸೋತರು. ಅಗಾಸ್ಸಿ ಮತ್ತೊಮ್ಮೆ ಸಂಯುಕ್ತ ಸಂಸ್ಥಾನದ ಡೇವಿಸ್ ಕಪ್ ಗೆಲ್ಲುವ ತಂಡದ ಪ್ರಮುಖ ಆಟಗಾರರಾಗಿದ್ದರು - ಇದು ಅಗಾಸ್ಸಿ ಯವರ ವೃತ್ತಿ ಜೀವನದ ಮೂರನೆಯ ಹಾಗೂ ಅಂತಿಮ ಡೇವಿಸ್ ಕಪ್ ಪ್ರಶಸ್ತಿಯಾಗಿತ್ತು. ಅವರು ಯಾವುದೇ ಗ್ರ್ಯಾಂಡ್ ಸ್ಲ್ಯಾಂಮ್ ಅಂತಿಮ ಹಂತವನ್ನು ತಲುಪುವಲ್ಲಿ ವಿಫಲರಾದ ಕಾರಣ, ಅಗಾಸ್ಸಿಗೆ 1996 ಕಡಿಮೆ ಯಶಸ್ಸಿನ ವರ್ಷವಾಗಿತ್ತು. ಅವರು ಅನುಕ್ರಮವಾಗಿ ಫ್ರೆಂಚ್ ಓಪನ್ ಮತ್ತು ವಿಂಬಲ್ಡನ್ ನಲ್ಲಿ ತಮ್ಮ ಸ್ವದೇಶದವರೇ ಆದ ಕ್ರಿಸ್ ವುಡ್ ರಫ್ ಮತ್ತು ಡೊಘ್ ಫ್ಲಾಖ್ ಅವರ ಕೈಯಲ್ಲಿ ಎರಡು ಆರಂಭಿಕ ಸುತ್ತಿನ ಪಂದ್ಯಗಳಲ್ಲಿ ಅಪಜಯ ಅನುಭವಿಸಿದರು, ಮತ್ತು ಚಾಂಗ್ ಅವರಿಗೆ ನೇರ ಸೆಟ್ ಗಳಲ್ಲಿ ಆಸ್ಟ್ರೇಲಿಯನ್ ಮತ್ತು ಯುಎಸ್ ಓಪನ್ ನ ಉಪಾಂತ್ಯ ಪಂದ್ಯಗಳಲ್ಲಿ ಸೋತರು. ಆ ವೇಳೆಯಲ್ಲಿ, ಅಗಾಸ್ಸಿ ಜೋರಾದ ಗಾಳಿಯ ಪರಿಸ್ಥಿತಿಗಳಿಂದಾಗಿ ಸೋಲುಂಟಾಯಿತೆಂದು ದೂರಿದರು, ಆದರೆ ನಂತರ ತಮ್ಮ ಜೀವನ ಚರಿತ್ರೆಯಲ್ಲಿ ಈ ಪಂದ್ಯವನ್ನು ಬೇಕೆಂತಲೇ ಸೋತಿದ್ದಾಗಿ (ಉದ್ದೇಶಪೂರ್ವಕವಾದ ಸೋಲು) ಒಪ್ಪಿಕೊಂಡರು, ಎಕೆಂದರೆ ತಾವು ಅಂತಿಮ ಪಂದ್ಯದಲ್ಲಿ ಬೋರಿಸ್ ಬೆಕರ್ ಅವರನ್ನು ಸಂಧಿಸ ಬೇಕಾಗುತ್ತಿತ್ತು ಹಾಗೂ ಅವರನ್ನು ಕಂಡರೆ ಇವರಿಗಾಗುತ್ತಿರಲಿಲ್ಲವೆಂದು ಹೇಳಿದ್ದಾರೆ. 6-2, 6-3, 6-1 ಸೆಟ್ಟ್ ಗಳಿಂದ ನಿರ್ಣಾಯಕ ಪಂದ್ಯದಲ್ಲಿ ಸ್ಪೇನಿನ ಸರ್ಗೆ ಬ್ರುಗ್ವೇರ ರನ್ನು ಸೋಲಿಸಿ, ಅಟ್ಲಾಂಟಾಒಲಂಪಿಕ್ ಕ್ರೀಡೆಗಳಲ್ಲಿ ಪುರುಷರ ಸಿಂಗಲ್ಸ್ ಸುವರ್ಣ ಪದಕವನ್ನು ಗೆದ್ದದ್ದು ಅಗಾಸ್ಸಿಯ ಉನ್ನತ ಸಾಧನೆಯಾಗಿತ್ತು.[೧೯] ಅಗಾಸ್ಸಿ ಸಿನ್ ಸಿನಾಟಿ ಮತ್ತು ಕೀ ಬಿಸ್ಕಯ್ನೆ ನಲ್ಲಿಯು ಸಹ ತಮ್ಮ ಸಿಂಗಲ್ಸ್ ಪ್ರಶಸ್ತಿಗಳನ್ನು ಯಶಸ್ವಿಯಾಗಿ ರಕ್ಷಿಸಿಕೊಂಡರು. ಅಗಾಸ್ಸಿ ಯವರ ವೃತ್ತಿಜೀವನದಲ್ಲಿ 1997 ಕೆಳ ಮಟ್ಟವಾಗಿತ್ತು. ಅವರ ಮಣಿಕಟ್ಟಿನ ತೊಂದರೆ ಪುನಃ ಕಾಣಿಸಿಕೊಂಡಿತು ಹಾಗೂ ಆ ವರ್ಷದಲ್ಲಿ ಅವರು ಕೇವಲ 24 ಪಂದ್ಯಗಳಲ್ಲಿ ಮಾತ್ರ ಆಡಿದರು. ತಾವು ಸ್ನೆಹಿತನ ಒತ್ತಾಯದ ಮೇರೆಗೆ ಎಂದು ಆಪಾದಿಸುತ್ತಾ, ಆ ಸಮಯದಲ್ಲಿ ಕ್ರಿಸ್ಟಲ್ ಮೆಥಂಫೆಟಮೈನ್ ಅನ್ನು ಉಪಯೋಗಿಸಲು ಪ್ರಾರಂಭಿಸಿದೆನೆಂದು ಒಪ್ಪಿಕೊಂಡರು.[೨೨] ATP ಉದ್ದೀಪನದ ಪರೀಕ್ಷೆಯಲ್ಲಿ ಅವರು ಸೋತರು, ಆದರೆ ಅದೇ ಸ್ನೇಹಿತನು ತಮ್ಮ ಪಾನೀಯವನ್ನು ಬೆರಕೆ ಮಾಡಿದ್ದಾನೆಂದು ದೂರುತ್ತಾ ಅವರು ಒಂದು ಪತ್ರವನ್ನು ಬರೆದರು. ATP ಯು ಎಚ್ಚರಿಕೆ ಕೊಟ್ಟು ಸೋತ ಔಷಧದ ಪರೀಕ್ಷೆಯನ್ನು ಕೈಬಿಟ್ಟಿತು. ಮಾದಕ ಔಷಧದ ಉಪಯೋಗವನ್ನು ಒಪ್ಪಿಕೊಳ್ಳುತ್ತಾ ತಮ್ಮ ಪತ್ರವು ಸುಳ್ಳೆಂದು ತಿಳಿಸಿದರು.[೨೩] ಅವರು ಕೂಡಲೆ ಮಾದಕ ವಸ್ತುಗಳ ಉಪಯೋಗವನ್ನು ತ್ಯಜಿಸಿದರು. ಅವರು ಯಾವುದೇ ಉನ್ನತ-ಮಟ್ಟದ ಪ್ರಶಸ್ತಿಗಳನ್ನು ಗೆಲ್ಲಲಿಲ್ಲ ಹಾಗೂ ನವೆಂಬರ್ 10, 1997 ರಂದು ಅವರ ವಿಶ್ವ ಶ್ರೇಯಾಂಕವು 141 ನೇ ಸ್ಥಾನಕ್ಕೆ ಇಳಿಯಿತು.[೧೯]

ಸರ್ವ್ ಮಾಡುತ್ತಿರುವ ಅಗಾಸ್ಸಿ

1998 ರಲ್ಲಿ, ಅಗಾಸ್ಸಿ ಕಠಿಣ ನಿಯಮಕ್ಕೊಳಪಟ್ಟ ಕಾರ್ಯಕ್ರಮಗಳನ್ನು ಪ್ರಾರಂಭಿಸಿದರು ಹಾಗೂ ಛಾಲೆಂಜರ್ ಸೀರೀಸ್ ಸ್ಪರ್ಧೆಗಳಲ್ಲಿ (ವಿಶ್ವದ 50 ನೇ ಶ್ರೇಯಾಂಕದ ಹೊರಗಿರುವ ವೃತ್ತಿಪರ ಆಟಗಾರರಿಗಿರುವ ಒಂದು ಆವೃತ್ತಿ) ಆಡುವುದರ ಮೂಲಕ ತಮ್ಮ ಶ್ರೇಯಾಂಕಗಳನ್ನು ಹಿಂದಿರುಗಿ ಪಡೆಯಲು ಸಾಧನೆ ಮಾಡಿದರು. ಅವರು ಈ ಅವಧಿಯಲ್ಲಿ, ಅತ್ಯಂತ ಪ್ರಮುಖವಾಗಿ ತಮ್ಮ ಪ್ರತಿಸ್ಪರ್ಧಿ ಪೀಟ್ ಸಾಂಪ್ರಾಸ್ ಹಾಗೂ ಆಸ್ಟ್ರೇಲಿಯಾದ ಜನಪ್ರಿಯ ಪ್ಯಾಟ್ರಿಕ್ ರ್ಯಾಫ್ಟರ್ ವಿರುದ್ಧ ಕೆಲವು ಅತ್ಯದ್ಭುತ ಪಂದ್ಯಗಳನ್ನು ಆಡಿದರು. 1998 ರಲ್ಲಿ, ಅಗಾಸ್ಸಿ ಐದು ಪಂದ್ಯ ಪ್ರಶಸ್ತಿಗಳನ್ನು ಗೆದ್ದರು ಹಾಗೂ ವರ್ಷದ ಪ್ರಾರಂಭದಲ್ಲಿದ್ದ ವಿಶ್ವ ಶ್ರೇಯಾಂಕದ 122 ರಿಂದ ವರ್ಷಾಂತ್ಯಕ್ಕೆ ವಿಶ್ವ ಶ್ರೇಯಾಂಕದ 6 ನೇ ಸ್ಥಾನಕ್ಕೆ ಹಾರಿದರು, ಇದು ಏಕೈಕ ಕ್ಯಾಲೆಂಡರ್ ವರ್ಷದ ಅವಧಿಯಲ್ಲಿ ಯಾವುದೇ ಒಬ್ಬ ಆಟಗಾರನಿಂದ ಅತ್ಯುನ್ನತ 10 ನೇ ಹಂತದೊಳಗೆ ತಲುಪಿದ ಅತ್ಯಂತ ಎತ್ತರದ ಜಿಗಿತವಾಗಿತ್ತು.[೨೪] ಆ ವರ್ಷದ ವಿಂಬಲ್ಡನ್ ನಲ್ಲಿ, ATP ಆಟಗಾರ ಟಾಮಿ ಹಾಸ್ ಅವರಿಗೆ ಎರಡನೆ ಸುತ್ತಿನ ಪಂದ್ಯದಲ್ಲಿ ಬಹು ಬೇಗನೆ ಸೋತರು. ಅವರು ಹತ್ತು ಅಂತಿಮ ಪಂದ್ಯಗಳಲ್ಲಿ ಐದು ಪ್ರಶಸ್ತಿಗಳನ್ನು ಗಳಿಸಿದರು ಹಾಗೂ ಕೀ ಬಿಸ್ಕಯ್ನೆ ನಲ್ಲಿ ಆ ಸ್ಪರ್ಧೆಯ ಗೆಲುವಿನ ಪರಿಣಾಮವಾಗಿ ಒಂದನೇ ವಿಶ್ವ ಶ್ರೇಯಾಂಕವನ್ನು ಗಳಿಸಿದ ಮಾರ್ಸೆಲೊ ರೈಯಾಸ್ ಗೆ ಸೋತ ಕಾರಣ ಮಾಸ್ಟರ್ಸ್ ಸೀರೀಸ್ ಸ್ಪರ್ಧೆಯಲ್ಲಿ ಅಗಾಸ್ಸಿ ರನ್ನರ್-ಅಪ್ ಆದರು. ಐದು ಸೆಟ್ ಗಳ ಫ್ರೆಂಚ್ ಓಪನ್ ಅಂತಿಮ ಪಂದ್ಯದಲ್ಲಿ ಆಂಡ್ರೆಯ್ ಮೆಡ್ವೆಡೆವ್ ಅವರ ವಿರುದ್ಧ, ತಾವು ಮೊದಲೆರಡು ಸೆಟ್ ಗಳನ್ನು ಸೋತಿದ್ದರೂ ಮುಂದಿನ ಮೂರು ಸೆಟ್ ಗಳನ್ನು ಗೆದ್ದು ಅವರನ್ನು ಸೋಲಿಸಿ 1999 ರಲ್ಲಿ ಅಗಾಸ್ಸಿ ಇತಿಹಾಸದ ಪುಸ್ತಕದಲ್ಲಿ ಪ್ರವೇಶಿಸಿದರು, ಇದರಿಂದ ಆ ಸಮಯದ, ತಮ್ಮ ವೃತ್ತಿ ಜೀವನದ ಅವಧಿಯಲ್ಲಿ ಎಲ್ಲಾ ನಾಲ್ಕು ಗ್ರ್ಯಾಂಡ್ ಸ್ಲ್ಯಾಂಮ್ ಸಿಂಗಲ್ಸ್ ಪ್ರಶಸ್ತಿಗಳಲ್ಲಿ ಜಯಗಳಿಸಿದ ಕೇವಲ ಐದನೇ ಪುರುಷ ಆಟಗಾರರಾದರು (ರಾಡ್ ಲೇವರ್, ಫ್ರೆಡ್ ಪೆರ್ರಿ, ರಾಯ್ ಎಮರ್ಸ್ನ್ ಮತ್ತು ಡಾನ್ ಬಡ್ಜ್ - ಇವರೆಲ್ಲರ ಜೊತೆ ಈಗ ಆರನೆಯವರಾಗಿ ರೋಜರ್ ಫೆಡರರ್ ಸೇರಿದ್ದಾರೆ). ಈ ವಿಜಯವು ಎಲ್ಲಾ ನಾಲ್ಕು ಗ್ರ್ಯಾಂಡ್ ಸ್ಲ್ಯಾಂಮ್ ಪ್ರಶಸ್ತಿಗಳನ್ನು ಮೂರು ಬೇರೆ ಬೇರೆ ಮೇಲ್ಮೈಗಳ ಮೇಲೆ (ಕ್ಲೇ, ಗ್ರಾಸ್ ಹಾಗೂ ಹಾರ್ಡ್ ಕೋರ್ಟ್) ಇತಿಹಾಸದಲ್ಲಿ ಗೆದ್ದಿರುವಂತಹ ಪುರುಷ ಆಟಗಾರರಲ್ಲಿ ಮೊದಲಿಗರಾದರು (ಕೇವಲ ಇಬ್ಬರಲ್ಲಿ, ಎರಡನೆಯವರು ರೋಜರ್ ಫೆಡರರ್) ಇದು ಅವರ ಹೊಂದಿಕೊಳ್ಳುವಿಕೆಗೆ ಒಂದು ಮಾದರಿಯಾಗಿದೆ, ಏಕೆಂದರೆ ಉಳಿದ ನಾಲ್ಕು ಪುರುಷರು ತಮ್ಮ ಗ್ರ್ಯಾಂಡ್ ಸ್ಲ್ಯಾಂಮ್ ಪ್ರಶಸ್ತಿಗಳನ್ನು ಕ್ಲೇ ಹಾಗೂ ಗ್ರಾಸ್ ಕೋರ್ಟ್ ಗಳ ಮೇಲೆ ಗೆದ್ದಿದ್ದರು. ಅಗಾಸ್ಸಿ ಎಲ್ಲಾ ನಾಲ್ಕು ಗ್ರ್ಯಾಂಡ್ ಸ್ಲ್ಯಾಂಮ್ ಸ್ಪರ್ಧೆಗಳು ಹಾಗೂ ಒಂದು ಒಲಂಪಿಕ್ ಸುವರ್ಣ ಪದಕದ ಸಹಿತ, ವೃತ್ತಿ ಜೀವನದ ಗೋಲ್ಡನ್ ಸ್ಲ್ಯಾಂಮ್ ಗೆದ್ದಿರುವ ಮೊದಲನೆಯ ಪುರುಷ ಆಟಗಾರರು ಸಹ ಆದರು. ಅಗಾಸ್ಸಿ ವಿಂಬಲ್ಡನ್ ಅಂತಿಮ ಪಂದ್ಯವನ್ನು ತಲುಪುವ ಮೂಲಕ ತಮ್ಮ 1999 ರ ಫ್ರೆಂಚ್ ಓಪನ್ ಜಯವನ್ನು ಹಿಂಬಾಲಿಸಿದರು, ಅಲ್ಲಿ ಅವರು ನೇರ ಸೆಟ್ ಗಳಲ್ಲಿ ಪೀಟ್ ಸಾಂಪ್ರಾಸ್ ಗೆ ಸೋತರು.[೧೯] ಅಂತಿಮ ಪಂದ್ಯದಲ್ಲಿ ಐದು ಸೆಟ್ ಗಳಲ್ಲಿ (ಒಟ್ಟು 2 ಸೆಟ್ ಗಳಿಂದ 1 ಸೆಟ್ ಕೊರತೆಯಿಂದ ಮುಂದೆ ಬಂದು) ಟಾಡ್ ಮಾರ್ಟಿನ್ ಅವರನ್ನು ಸೋಲಿಸಿ ಯುಎಸ್ ಓಪನ್ ಗೆಲ್ಲುವುದರ ಮೂಲಕ ತಮ್ಮ ವಿಂಬಲ್ಡನ್ ಸೋಲಿನಿಂದ ಪುಟಿದೆದ್ದರು. ಅನುಕ್ರಮವಾಗಿ ಸಾಂಪ್ರಾಸ್ ರ ಆರು ಬಾರಿ ವರ್ಷಾಂತ್ಯದ ದಾಖಲೆಯ ಅತ್ಯುನ್ನತ ಶ್ರೇಣಿಯ ಅಂತ್ಯವನ್ನು ಕೊನೆಗಾಣಿಸಿ(1993-1998), ಅಗಾಸ್ಸಿ 1999 ಅನ್ನು ವಿಶ್ವದ ಒಂದನೇ ಶ್ರೇಯಾಂಕದ ಆಟಗಾರರಾಗಿ ಮುಗುಸಿದರು.[೧೯] ಇದು ಕೇವಲ ಒಂದೇ ಬಾರಿ ಅಗಾಸ್ಸಿ ವರ್ಷವನ್ನು ಒಂದನೇ ಸ್ಥಾನದಲ್ಲಿ ಮುಗಿಸಿದ್ದುದು. ಸಾಂಪ್ರಾಸ್ ರನ್ನು ಉಪಾಂತ್ಯದಲ್ಲಿ ಐದು ಸೆಟ್ ಗಳಿಂದ ಮತ್ತು ಅಂತಿಮ ಪಂದ್ಯದಲ್ಲಿ ನಾಲ್ಕು ಸೆಟ್ ಗಳಿಂದ ಯೆವ್ ಜೆನಿ ಕೆಫೆಲ್ನಿಕೊವ್ ರನ್ನು ಸೋಲಿಸಿ, ಅಗಾಸ್ಸಿ ತಮ್ಮ ಎರಡನೆಯ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಗೆಲ್ಲುವುದರ ಮೂಲಕ ಮುಂದಿನ ವರ್ಷವನ್ನು ಪ್ರಾರಂಭಿಸಿದರು.[೧೯] 1969 ರಲ್ಲಿ ರಾಡ್ ಲೇವರ್ ಗ್ರ್ಯಾಂಡ್ ಸ್ಲ್ಯಾಂಮ್ ಸಾಧಿಸಿದ್ದಾಗಿನಿಂದ ಅನುಕ್ರಮವಾಗಿ ನಾಲ್ಕು ಗ್ರ್ಯಾಂಡ್ ಸ್ಲ್ಯಾಂಮ್ ಅಂತಿಮ ಪಂದ್ಯಗಳನ್ನು ತಲುಪಿದವರಲ್ಲಿ ಇವರೇ ಮೊದಲ ಪುರುಷ ಆಟಗಾರರಾದರು.[೨೫] ಆ ಸಮಯದಲ್ಲಿ, ಅಗಾಸ್ಸಿ ಯವರು ಲೇವರ್ ಅವರ ನಂತರ ವಿಂಬಲ್ಡನ್ ಪ್ರಶಸ್ತಿಯನ್ನು ಅನ್ನು ಹೊರತು ಪಡಿಸಿ, ನಾಲ್ಕು ಗ್ರ್ಯಾಂಡ್ ಸ್ಲ್ಯಾಂಮ್ ಸ್ಪರ್ಧೆಗಳಲ್ಲಿ ಮೂರರಲ್ಲಿ ಹಾಲಿ ವಿಜೇತರಾಗಿದ್ದ ನಾಲ್ಕನೇ ಆಟಗಾರರಾಗಿದ್ದರು.[೨೬] 2000 ರ ವರ್ಷವು ವಿಂಬಲ್ಡನ್ ನಲ್ಲಿ ಅಗಾಸ್ಸಿ ಯವರು ಉಪಾಂತ್ಯ ತಲುಪಿದ್ದನ್ನು ಕಂಡಿತು, ಅಲ್ಲಿ ಅವರು ಐದು ಸೆಟ್ ಗಳಲ್ಲಿ ಆ ಪಂದ್ಯವನ್ನು ರ್ಯಾಫ್ಟರ್ ಅವರಿಗೆ ಸೋತರಾದರೂ, ಅನೇಕರು ಆ ಪಂದ್ಯವನ್ನು ವಿಂಬಲ್ಡನ್ ನಲ್ಲಿ ಆಡಲಾದ ಪಂದ್ಯಗಳಲ್ಲೆಲ್ಲಾ ಅತ್ಯಂತ ಶ್ರೇಷ್ಠ ಪಂದ್ಯಗಳಲ್ಲಿ ಒಂದೆಂದು ಪರಿಗಣಿಸುತ್ತಾರೆ.[೨೭] ಪ್ರಾರಂಭೋತ್ಸವದ ಲಿಸ್ಬನ್ ನ್ನಿನ ಟೆನ್ನಿಸ್ ಮಾಸ್ಟರ್ಸ್ ಕಪ್ ನಲ್ಲಿ ಗೆದ್ದು ಟೆನ್ನಿಸ್ ಇತಿಹಾಸದಲ್ಲಿ ವಿಶ್ವದಲ್ಲೇ ಒಂದನೇ ಶ್ರೇಯಾಂಕ ಗಳಿಸಿದ ಅತ್ಯಂತ ಕಿರಿಯ ಆಟಗಾರನಾಗ ಬೇಕೆಂಬ ರಷಿಯಾದವನ ಆಸೆಯನ್ನು ಕೊನೆಗೊಳಿಸಿ ಉಪಾಂತ್ಯದಲ್ಲಿ 6-3, 6-3 ರಿಂದ ಮಾರತ್ ಸಾಫಿನ್ ಅನ್ನು ಸೋಲಿಸಿದ ನಂತರ ಅಗಾಸ್ಸಿ ಅಂತಿಮ ಹಂತವನ್ನು ತಲುಪಿದರು. ಅಗಾಸ್ಸಿ ನಂತರ ಅಂತಿಮ ಪಂದ್ಯದಲ್ಲಿ ಗುಸ್ಟಾವೊ ಕ್ಯುರ್ಟೆನ್ ಗೆ ಸೋತರು, ಕ್ಯುರ್ಟೆನ್ ಈ ಜಯದಿಂದ ವರ್ಷಾಂತ್ಯದ ವಿಶ್ವದ ಒಂದನೇ ಶ್ರೇಯಾಂಕದ ಕಿರೀಟ ಧರಿಸಿದರು. ಅರ್ನಾಡ್ ಕ್ಲೆಮೆಂಟ್ ಮೇಲೆ ನೇರ ಸೆಟ್ ಗಳ ಅಂತಿಮ ಪಂದ್ಯದಲ್ಲಿ ವಿಜಯದ ಸಹಿತ ತಮ್ಮ ಆಸ್ಟ್ರೇಲಿಯನ್ ಓಪನ್ ಬಿರುದನ್ನು ಯಶಸ್ವಿಯಾಗಿ ರಕ್ಷಿಸಿಕೊಳ್ಳುತ್ತಾ ಅಗಾಸ್ಸಿ 2001 ಅನ್ನು ಪ್ರಾರಂಭಿಸಿದರು.[೧೯] ಫೈನಲ್ ನ ಮಾರ್ಗದಲ್ಲಿ, ಅವರು ಕುಂಟುತ್ತಿರುವ ರಾಫ್ಟರ್ ಅನ್ನು (7-5, 2-6, 6-7, 6-2, 6-3), ಆ ಆಸ್ಟ್ರೇಲಿಯಾದ ಆಟಗಾರನ ಕೊನೆಯ ಆಸ್ಟ್ರೇಲಿಯನ್ ಓಪನ್ ಆಟವಾಗಿ ಸಂಭವಿಸಿದಂತಹ ಪಂದ್ಯದಲ್ಲಿ ಅತ್ಯಂತ ದೊಡ್ಡ ದಾಖಲೆಯ ಪ್ರೇಕ್ಷಕರೆದುರು ಸೋಲಿಸಿದರು. ವಿಂಬಲ್ಡನ್ ನಲ್ಲಿ, ಅವರು ಪುನಃ ಉಪಾಂತ್ಯ ಪಂದ್ಯದಲ್ಲಿ ಸಂಧಿಸಿದರು, ಅಲ್ಲಿ ಐದನೆಯ ಸೆಟ್ ನಲ್ಲಿ 8-6 ರಿಂದ ರಾಫ್ಟರ್ ಗೆ ಅಗಾಸ್ಸಿ ಮತ್ತೊಂದು ಹತ್ತಿರದ ಪಂದ್ಯದಲ್ಲಿ ಸೋತರು. ಯುಎಸ್ ಓಪನ್ ನ ಕ್ವಾರ್ಟರ್ ಫೈನಲ್ ನಲ್ಲಿ, 48-ಆಟಗಳ ಪಂದ್ಯದ ಅವಧಿಯಲ್ಲಿ ಯಾವುದೇ ಸರ್ವೀಸ್ ಬ್ರೇಕ್ ಇಲ್ಲದೆ[೨೮], 6–7(7), 7–6(7), 7–6(2), 7–6(5),[೨೯] ರಿಂದ ಸಾಂಪ್ರಾಸ್ ಜೊತೆ 3 ಘಂಟೆ, 33 ನಿಮಿಷಗಳ ಐತಿಹಾಸಿಕ ಪಂದ್ಯದಲ್ಲಿ ಅಗಾಸ್ಸಿ ಅಪಜಯಗಳಿಸಿದರು. ಹಿಂಜರಿತ ವಿದ್ದಾಗ್ಯೂ, ಮೂರು ಬೆರೆ ಬೇರೆ ದಶಕಗಳನ್ನು ಅಗ್ರ 10 ನೇ ಶ್ರೇಯಾಂಕದೊಳಗೆ ಮುಗಿಸಿದ ಏಕೈಕ ಪುರುಷ ಟೆನ್ನಿಸ್ ಆಟಗಾರರಾಗಿ, ಅಗಾಸ್ಸಿ 3 ನೇ ವಿಶ್ವ ಶ್ರೇಯಾಂಕದೊಂದಿಗೆ 2001 ಅನ್ನು ಮುಗಿಸಿದರು[೩೦](1980 ರಲ್ಲಿ - 1988 ರ 3 ನೇ ವಿಶ್ವ ಶ್ರೇಯಾಂಕ ಹಾಗೂ 1989 ರಲ್ಲಿ 7 ನೇ ಶ್ರೇಣಿ; 1990 ರಲ್ಲಿ - 1990 ರಲ್ಲಿ ವಿಶ್ವದ 4 ನೇ ಶ್ರೇಣಿ, 1991 ರಲ್ಲಿ 10 ನೇ ಶ್ರೇಯಾಂಕ, 1992 ರಲ್ಲಿ 9 ನೇ ಶ್ರೇಣಿ, 1994 ಮತ್ತು 1995 ರಲ್ಲಿ 2 ನೇ ಶ್ರೇಯಾಂಕ, 1996 ರಲ್ಲಿ 8 ನೇ ಶ್ರೇಯಾಂಕ, 1998 ರಲ್ಲಿ 6 ನೇ ಶ್ರೇಯಾಂಕ, ಮತ್ತು 1999 ರಲ್ಲಿ ಅಗ್ರ ಶ್ರೇಯಾಂಕ; 2000 ರಲ್ಲಿ - 2000 ದಲ್ಲಿ ವಿಶ್ವ ಶ್ರೇಯಾಂಕವನ್ನು 6 ರಲ್ಲಿ ಮುಗಿಸಿದರು, 2001 ರಲ್ಲಿ 3 ನೇ ಶ್ರೇಯಾಂಕ, 2002 ರಲ್ಲಿ 2 ನೇ ಶ್ರೇಯಾಂಕ, 2003 ರಲ್ಲಿ 4 ನೇ ಶ್ರೇಯಾಂಕ, 2004 ರಲ್ಲಿ 8 ನೇ ಶ್ರೇಯಾಂಕ ಮತ್ತು 2005 ರಲ್ಲಿ 7 ನೇ ಶ್ರೇಯಾಂಕ). 1984 ರಲ್ಲಿ ವಿಶ್ವದ 2 ನೇ ಶ್ರೇಯಾಂಕವನ್ನು ಗಳಿಸಿದ 32-ವರ್ಷದ ಕಾನರ್ಸ್ ನಂತರ 3 ನೇ ಅತ್ಯುನ್ನತ ಶ್ರೇಯಾಂಕದೊಳಗೆ ಮುಗಿಸಿದ ವಯಸ್ಸಾದ (31 ವರ್ಷ) ಆಟಗಾರರೂ ಸಹ ಆಗಿದ್ದಾರೆ.[೨೪] ಅಗಾಸ್ಸಿಗೆ 2002 ನಿರಾಶೆಯಿಂದ ಪ್ರಾರಂಭವಾಯಿತು, ಏಕೆಂದರೆ ಅವರು ಎರಡು ಬಾರಿ ಗೆದ್ದು ಹಾಲಿ ಚಾಂಪಿಯನ್ ಆಗಿದ್ದ ಆಸ್ಟ್ರೇಲಿಯನ್ ಓಪನ್ ಅನ್ನು ಗಾಯದ ತೊಂದರೆಯಿಂದಾಗಿ ತಪ್ಪಿಸಕೊಳ್ಳಬೇಕಾಯಿತು. ಅಗಾಸ್ಸಿ ಮತ್ತು ಸಾಂಪ್ರಾಸ್ ನಡುವಿನ ಕೊನೆಯ ದ್ವಂದ ಪಂದ್ಯವು ಯುಎಸ್ ಓಪನ್ ನ ಫೈನಲ್ ನಲ್ಲಿ ಬಂದಿತು, ಅದನ್ನು ಸಾಂಪ್ರಾಸ್ ನಾಲ್ಕು ಸೆಟ್ ಗಳಿಂದ ಗೆದ್ದುಕೊಂಡರು ಹಾಗೂ ತಮ್ಮ ವೃತ್ತಿ ಜೀವನದ 34 ಬೇಟಿಗಳಲ್ಲಿ ಸಾಂಪ್ರಾಸ್ 20-14 ಅಂತರದಿಂದ ಕೊನೆಗಾಣಿಸಿದರು. ಆ ಆಟವು ಸಾಂಪ್ರಾಸ್ ರ ವೃತ್ತಿ ಜೀವನದ ಕೊನೆಯ ಪಂದ್ಯವಾಯಿತು. ಅಗಾಸ್ಸಿ ಯವರ ಯುಎಸ್ ಓಪನ್ ಸಾಧನೆ, ಕೀ ಬಿಸ್ಕಯ್ನೆ, ರೋಮ್, ಮತ್ತು ಮ್ಯಾಡ್ರಿಡ್ ಗಳಲ್ಲಿನ ಮಾಸ್ಟರ್ಸ್ ಸೀರೀಸ್ ವಿಜಯಗಳ ಸಹಿತ, 32 ವರ್ಷ ಮತ್ತು 8 ತಿಂಗಳ ಆಯುವಿನಲ್ಲಿ, ವರ್ಷಾಂತ್ಯದ ವಿಶ್ವದ 2 ನೇ ಶ್ರೇಯಾಂಕ ಪಡೆದ ಅತ್ಯಂತ ವಯಸ್ಸಾದ ಆಟಗಾರನಾಗಿ 2002 ನ್ನು ಮುಗಿಸಲು ಅವರಿಗೆ ಸಹಾಯ ಮಾಡಿತು.[೨೪] 2003 ರಲ್ಲಿ, ಅಗಾಸ್ಸಿ ಆಸ್ಟ್ರೇಲಿಯನ್ ಓಪನ್ ನಲ್ಲಿ ತಮ್ಮ ವೃತ್ತಿ ಜೀವನದ ಎಂಟನೇ (ಹಾಗೂ ಕೊನೆಯ) ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿ ಪಡೆದರು, ಅಲ್ಲಿ ಅಂತಿಮ ಪಂದ್ಯದಲ್ಲಿ ನೇರ ಸೆಟ್ ಗಳಿಂದ ರೇಯ್ನರ್ ಶುಟ್ಲರ್ ಅನ್ನು ಸೋಲಿಸಿದರು. ಮಾರ್ಚ್ ನಲ್ಲಿ, ಅವರು ತಮ್ಮ ಆರನೆಯ ಹಾಗೂ ಮೂರನೆಯ ಅನುಕ್ರಮವಾದ ಕೀ ಬಿಸ್ಕಯ್ನೆ ಪ್ರಶಸ್ತಿಯನ್ನು ಗೆದ್ದರು, ಈ ಸಾಧನೆಯಿಂದ 5 ಬಾರಿ ಪಂದ್ಯಗಳಲ್ಲಿ ಜಯಗಳಿಸಿದ್ದ ತಮ್ಮ ಮಡದಿ ಸ್ಟೆಫಿ ಗ್ರಾಫ್ ಅನ್ನು ಮೀರಿಸಿದರು. ಆ ಅಂತಿಮ ಪಂದ್ಯದಲ್ಲಿನ ಜಯವು 18 ನೇ ನೇರ ಗೆಲುವಾಗಿತ್ತು, ಅದು 1993 ರಿಂದ 1995 ರ ನಡುವೆ ಸಾಂಪ್ರಾಸ್ ರಿಂದ ಸ್ಥಾಪಿಸಲ್ಪಟ್ಟಿದ್ದ 17 ರ ಹಿಂದಿನ ದಾಖಲೆಯನ್ನು ಮುರಿಯಿತು. (ಅಗುಸ್ಟಿನ್ ಕಲ್ಲೆರಿ ಅವರಿಗೆ ಸೋಲುವ ಮುಂಚೆ ಆ 2004 ರ ಆವೃತ್ತಿಯ ಪಂದ್ಯಗಳಲ್ಲಿ ಅವರ ಮೊದಲೆರಡು ವಿಜಯಗಳು ಅಗಾಸ್ಸಿ ಯವರ ಗೆಲುವಿನ ಸರಣಿಯನ್ನು 20 ಕ್ಕೇರಿಸಿತು.) ಈ ವಿಜಯದೊಂದಿಗೆ, ಕೀ ಬಿಸ್ಕಯ್ನೆ ಪಂದ್ಯಗಳಲ್ಲಿ ಅಗಾಸ್ಸಿ ಅವರು ಅತ್ಯಂತ ಕಿರಿಯ (19 ವರ್ಷ) ಹಾಗೂ ಅತ್ಯಂತ ಹಿರಿಯ (32 ವರ್ಷ) ವಿಜೇತ ವ್ಯಕ್ತಿಯಾದರು. ಏಪ್ರಿಲ್ 28, 2003 ರಂದು, ತಮ್ಮ 33 ನೇ ವರ್ಷ ಮತ್ತು 13 ದಿನಗಳ ಆಯುವಿನಲ್ಲಿ ATP ಶ್ರೇಯಾಂಕಗಳು ಪ್ರಾರಂಭವಾದಾಗಿನಿಂದ ಅಗ್ರ ಶ್ರೇಯಾಂಕ ಪಡೆದ ಅತ್ಯಂತ ವಯಸ್ಕ ಪುರುಷ ಆಟಗಾರನಾಗಲು, ಕ್ವೀನ್ಸ್ ಕ್ಲಬ್ ಚಾಂಪಿಯನ್ಶಿಪ್ ಗಳಲ್ಲಿ ಕ್ಸೇವಿಯರ್ ಮಾಲಿಸ್ಸೆ ಮೇಲೆ ಕ್ವಾರ್ಟರ್ ಫೈನಲ್ ವಿಜಯದ ನಂತರ ಅವರು ವಿಶ್ವ ಒಂದನೇ ಶ್ರೇಯಾಂಕವನ್ನು ಮರಳಿ ಪಡೆದರು. ಲೈಟಾನ್ ಹೆವಿಟ್ ಅವರು ಮೇ 12, 2003 ರಲ್ಲಿ ಹಿಂದಕ್ಕೆ ಪಡೆಯುವವರೆಗೂ, ಅವರು ಎರಡು ವಾರಗಳ ವರೆಗೆ ವಿಶ್ವದ 1 ನೇ ಶ್ರೇಯಾಂಕವನ್ನು ಹೊಂದಿದ್ದರು. ಅಗಾಸ್ಸಿ ಆನಂತರ ಜೂನ್ 16, 2003 ರಂದು, ಮತ್ತೊಮ್ಮೆ ವಿಶ್ವದ 1 ನೇ ಶ್ರೇಯಾಂಕವನ್ನು ಪುನಃ ಮರಳಿ ಪಡೆದರು, ಅದನ್ನು ಅವರು ಸೆಪ್ಟೆಂಬರ್ 7, 2003 ರ ತನಕ 12 ವಾರಗಳವರೆಗೆ ಹೊಂದಿದ್ದರು. ತಮ್ಮ ವೃತ್ತಿ ಜೀವನದಲ್ಲಿ, ಅಗಾಸ್ಸಿ ಯವರು ವಿಶ್ವದ 1 ನೇ ಶ್ರೇಯಾಂಕವನ್ನು ಒಟ್ಟು 101 ವಾರಗಳ ವರೆಗೆ ಹೊಂದಿದ್ದರು.[೩೧] ಅನೇಕ ಪಂದ್ಯಗಳಿಂದ ಗಾಯದ ಕಾರಣವಾಗಿ ಆವರು ಆಡುವುದನ್ನು ಬಿಟ್ಟಿದ್ದರಿಂದ ಅಗಾಸ್ಸಿ ಯವರ ಶ್ರೇಯಾಂಕಗಳು ಇಳಿಮುಖವಾದವು. ಯುಎಸ್ ಓಪನ್ ಉಪಾಂತ್ಯ ಪಂದ್ಯವನ್ನು ತಲುಪಲು ಸಫಲರಾದರೂ, ಅಲ್ಲಿ ಅವರು ಜುಆನ್ ಕಾರ್ಲೊಸ್ ಫೆರೆರೊ ಅವರಿಗೆ ಸೋತರು ಹಾಗೂ ತಮ್ಮ ವಿಶ್ವ 1 ನೇ ಶ್ರೇಯಾಂಕವನ್ನು ಫೆರೆರೊ ಅವರಿಗೆ ಬಿಟ್ಟುಕೊಟ್ಟರು. ವರ್ಷಾಂತ್ಯದ ಟೆನ್ನಿಸ್ ಮಾಸ್ಟರ್ಸ್ ಕಪ್ ನಲ್ಲಿ, ಅಗಾಸ್ಸಿ ಯವರು ಫೆಡೆರರ್ ಗೆ ಅಂತಿಮ ಪಂದ್ಯದಲ್ಲಿ ಸೋತರು ಹಾಗೂ ವಿಶ್ವದ 4 ನೇ ಶ್ರೇಯಾಂಕದೊಂದಿಗೆ ಆ ವರ್ಷವನ್ನು ಮುಕ್ತಾಯಗೊಳಿಸಿದರು. 35 ವರ್ಷ ವಯಸ್ಸಿನ, ಕಾನರ್ಸ್ 1987 ರಲ್ಲಿ ವಿಶ್ವ 4 ನೇ ಶ್ರೇಯಾಂಕ ಗಳಿಸಿದಾಗಿನಿಂದ, ತಮ್ಮ 33 ನೇ ವಯಸ್ಸಿನಲ್ಲಿ ಅವರು ಅತ್ಯುತ್ತಮ 5 ನೇ ಶ್ರೇಯಾಂಕದೊಳಗಿನ ಸ್ಥಾನ ಗಳಿಸಿದ ಅತ್ಯಂತ ಹಿರಿಯ ಆಟಗಾರರಾಗಿದ್ದರು.[೨೪]

2004 ರಲ್ಲಿ, ಮೊಂಟೆ ಕಾರ್ಲೊ ಮತ್ತು ಹ್ಯಾಂಬರ್ ನ ಸ್ಪರ್ಧೆಗಳನ್ನು ಹೊರತುಪಡಿಸಿ - ಒಬತ್ತು ATP ಮಾಸ್ಟರ್ಸ್ ಸ್ಪರ್ಧೆಗಳಲ್ಲಿ ಏಳನ್ನು ಆಗಲೇ ಗೆದ್ದು, ಒಂದು ದಾಖಲೆಯ 17 ATP ಮಾಸ್ಟರ್ಸ್ ಸೀರೀಸ್ ಪ್ರಶಸ್ತಿಗಳು ಹಾಗೂ 59 ಅತ್ಯುನ್ನತ ಮಟ್ಟದ ಸಿಂಗಲ್ಸ್ ಪ್ರಶಸ್ತಿಗಳನ್ನು ತಮ್ಮ ವೃತ್ತಿ ಜೀವನದಲ್ಲಿ ಪಡೆದು, ಅಗಾಸ್ಸಿ ಯವರು ಸಿನ್ ಸಿನಾಟಿಯಲ್ಲಿ ಮಾಸ್ಟರ್ಸ್ ಸೀರೀಸ್ ಪಂದ್ಯವನ್ನು ಗೆದ್ದರು. ತಮ್ಮ 35 ನೇ ವಯಸ್ಸಿನಲ್ಲಿ 1970 ರಲ್ಲಿ ಪ್ರಶಸ್ತಿ ಗೆದ್ದ ಕೆನ್ ರೋಸ್ ವೆಲ್ ರಿಂದ ಮಾತ್ರ ಮೀರಿಸಿದ, ಸಿನ್ ಸಿನಾಟಿ ಸ್ಪರ್ಧೆಗಳ ಇತಿಹಾಸದಲ್ಲಿ (ಈ ಪಂದ್ಯಗಳು 1899 ರಲ್ಲಿ ಪ್ರಾರಂಭವಾದವು), ಅವರು ತಮ್ಮ 34 ನೇ ವಯಸ್ಸಿನಲ್ಲಿ ಎರಡನೆ ಅತ್ಯಂತ ಹಿರಿಯ ಚಾಂಪಿಯನ್ ಆದರು. 1988 ರಲ್ಲಿ 36 ವರ್ಷ ವಯಸ್ಸಿನ ಕಾನರ್ಸ್ ಅವರು ವಿಶ್ವದ 7 ನೇ ಶ್ರೇಯಾಂಕವನ್ನು ಪಡೆದ ನಂತರ, ಅತ್ಯುತ್ತಮ 10 ನೇ ಸ್ಥಾನದೊಳಗೆ ಗೆದ್ದ, ಅವರು ವಿಶ್ವ 8 ನೇ ಶ್ರೇಯಾಂಕ ಗಳಿಸಿದ ಅತ್ಯಂತ ಹಿರಿಯ ಆಟಗಾರರಾಗಿ ಆ ವರುಷವನ್ನು ಮುಗಿಸಿದರು.[೨೪] ಅಗಾಸ್ಸಿ ಯವರು ಲಾಸ್ ಏಂಜಲ್ಸ್ ನಲ್ಲಿ ಕಂಟ್ರಿವೈಡ್ ಕ್ಲಾಸಿಕ್ ಪಂದ್ಯಗಳಲ್ಲಿ ಅಲೆಕ್ಸ್ ಬೊಗೊಮೊಲೊವ್ ಅವರ ಮೇಲೆ ತಮ್ಮ ಮೊದಲ ಸುತ್ತಿನ ವಿಜಯದಿಂದ, ತಮ್ಮ ವೃತ್ತಿ ಜೀವನದಲ್ಲಿ 800 ಗೆಲುವುಗಳನ್ನು ಸಾಧಿಸಿದ ಓಪನ್ ಎರಾ ದಲ್ಲಿನ ಕೇವಲ ಆರನೇ ಪುರುಷ ಆಟಗಾರರಾದರು. ಆಸ್ಟ್ರೇಲಿಯಾದ ಓಪನ್ ನಲ್ಲಿ ಫೆಡರರ್ ಗೆ ಕ್ವಾರ್ಟರ್ ಫೈನಲ್ ನಲ್ಲಿ ಸೋಲುವುದರೊಂದಿಗೆ ಅಗಾಸ್ಸಿ ಅವರ 2005 ಪ್ರಾರಂಭವಾಯಿತು. ಅಗಾಸ್ಸಿ ಅನೇಕ ಇತರೆ ಪಂದ್ಯಗಳಲ್ಲಿ ಭಾಗವಹಿಸಿ ಗೆಲ್ಲುತ್ತಿದ್ದರಾದರೂ, ಅವರು ತಮ್ಮ ಗಾಯದ ಕಾರಣದಿಂದಾಗಿ ಸುಮಾರು ಪಂದ್ಯಗಳಿಂದ ಹಿಂದೆಗುಕೊಳ್ಳಬೆಕಾಯಿತು. ಫ್ರೆಂಚ್ ಓಪನ್ ಪಂದ್ಯದ ಮೊದಲ ಸುತ್ತಿನಲ್ಲೇ ಅವರು ಜರಾಕ್ಕೊ ನಿಮಿನೆನ್ ಅವರಿಗೆ ಸೋತರು. ಅವರು ಲಾಸ್ ಏಂಜಲ್ಸ್ ನಲ್ಲಿ ತಮ್ಮ ನಾಲ್ಕನೆಯ ಪ್ರಶಸ್ತಿ ಗಳಿಸಿದರು ಹಾಗೂ ವಿಶ್ವದ 2 ನೇ ಶ್ರೇಯಾಂಕದ ರಾಫೆಲ್ ನಡಾಲ್ ಗೆ ಸೋಲುವ ಮೊದಲು ರೊಜರ್ಸ್ ಕಪ್ ನ ಅಂತಿಮ ಹಂತವನ್ನು ತಲುಪಿದರು. ಯುಎಸ್ ಓಪನ್ ಅಂತ್ಯಕ್ಕೆ ನಂಬಲಾಗದ ರೀತಿಯಲ್ಲಿ ತಲುಪಿದ ಅಗಾಸ್ಸಿ ಅವರ ಸಾಧನೆಯಿಂದ 2005 ಗುರುತಿಸಲ್ಪಟ್ಟಿದೆ. ರಜ್ವಾನ್ ಸಬಾವ್ ಮತ್ತು ಐವೊ ಕಾರ್ಲೊವಿಚ್ ರನ್ನು ನೇರ ಸೆಟ್ ಗಳಲ್ಲಿ ಹಾಗೂ ಟೊಮಸ್ ಬರ್ಡಿಕ್ ರನ್ನು ನಾಲ್ಕು ಸೆಟ್ ಗಳಲ್ಲಿ ಸೋಲಿಸಿದ ನಂತರ, ಅಗಾಸ್ಸಿ ಅನುಕ್ರಮವಾಗಿ ಮೂರು ಐದು ಸೆಟ್ ಗಳ ಪಂದ್ಯಗಳನ್ನು ಗೆದ್ದು ಫೈನಲ್ ಗೆ ಪ್ರವೇಶಿಸಿದರು. ಜೇಮ್ಸ್ ಬ್ಲೇಕ್ ಮೇಲೆ ಅವರ ಕ್ವಾರ್ಟರ್ ಫೈನಲ್ ಯಶಸ್ಸು ಈ ಪಂದ್ಯಗಳ ಅತ್ಯಂತ ಗಮನಾರ್ಹ ವಿಷಯವಾಗಿತ್ತು, ಅಲ್ಲಿ ಅವರು 3–6, 3–6, 6–3, 6–3, 7–6(6) ಸೆಟ್ ಗಳಲ್ಲಿ, ಎರಡು ಸೆಟ್ ಕೊರತೆಯಿಂದ ಮುಂದೆ ಬಂದು ಜಯಶಾಲಿಯಾದರು. ನಾಲ್ಕನೆಯ ಸುತ್ತಿನಲ್ಲಿ ಕ್ಸೇವಿಯರ್ ಮಾಲಿಸ್ಸೆ ಹಾಗೂ ಉಪಾಂತ್ಯದಲ್ಲಿ ರಾಬ್ಬಿ ಜಿನೆಪ್ರಿ ಅವರ ಇತರೆ ಐದು ಸೆಟ್ ಗಳಲ್ಲಿ ಸೋತವರು. ಎರಡು ವರ್ಷಗಳಲ್ಲಿ ತಮ್ಮ ಆರನೆಯ ಗ್ರ್ಯಾಂಡ್ ಸ್ಲ್ಯಾಂಮ್ ಪ್ರಶಸ್ತಿ ಹಾಗೂ ಅನುಕ್ರಮವಾಗಿ ಎರಡನೆಯ ಯುಎಸ್ ಓಪನ್ ಪ್ರಶಸ್ತಿ ಪಡೆಯಲು ಪ್ರಯತ್ನಿಸುತ್ತಿದ್ದ ಫೆಡರರ್ ರನ್ನು ಅಗಾಸ್ಸಿ ಅಂತಿಮ ಪಂದ್ಯದಲ್ಲಿ ಎದುರಿಸಿದರು. ಮೊದಲೆರಡು ಸೆಟ್ ಗಳಲ್ಲಿ ಒಂದನ್ನು ಗೆದ್ದು ಹಾಗೂ ಮೂರನೇ ಸೆಟ್ ನಲ್ಲಿ ಬ್ರೇಕ್ ತನಕ ಬಂದು ಅಗಾಸ್ಸಿ ಅವರಿಗೆ ಹೆದರಿಕೆ ಹುಟ್ಟಿಸಿದರಾದರೂ, ಫೆಡರರ್ ನಾಲ್ಕು ಸೆಟ್ ಗಳಲ್ಲಿ ಅಗಾಸ್ಸಿ ಅವರನ್ನು ಸೋಲಿಸಿದರು. ಶಾಂಗ್ಹಾಯ್ ನ 2005 ರ ಮಾಸ್ಟರ್ಸ್ ಕಪ್ ಗಿಂತಲೂ ಮೊದಲು ಒಂದು ರಾಕೆಟ್ ಬಾಲ್ ಅಪಘಾತದಲ್ಲಿ ಅಗಾಸ್ಸಿಯವರು ತಮ್ಮ ಪಾದದ ಕೀಲನ್ನು ಉರುಳಿಸಿದಾಗ ಅವರ ಅನೇಕ ಅಸ್ಥಿಕಟ್ಟುಗಳಿಗೆ ಗಾಯವಾಯಿತು. ವಾರಗಳವರೆಗೆ ಅವರಿಗೆ ಓಡಾಡಲಾಗಲಿಲ್ಲ. ಆದಾಗ್ಯೂ, ಅವರು ಆ ಪಂದ್ಯಗಳಲ್ಲಿ ಆಡಲು ಒಪ್ಪಿಕೊಂಡಿದ್ದರು, ಅದರಲ್ಲಿ ಇವರು ಮೂರನೇ ಶ್ರೇಯಾಂಕ ಪಡೆದು ಮೊದಲನೆ ಸುತ್ತಿನ ರೌಂಡ್ ರಾಬಿನ್ ಪಂದ್ಯದಲ್ಲಿ ನಿಕೊಲಾಯ್ ಡವ್ಡೆಂಕೊ ವಿರುದ್ಧ ಆಡಿದರು. ಅಗಾಸ್ಸಿಯವರ ಚಲನೆಯು ಗಮನಾರ್ಹವಾಗಿ ತೊಂದರೆಗೊಳಗಾಯಿತು, ವಿಶೇಷವಾಗಿ ಅವರ ಬ್ಯಾಕ್ ಹ್ಯಾಂಡ್ ಸರ್ವೀಸ್ ಹಿಂದಿರುಗಿಸುವುದು ಆಗಲಿಲ್ಲ, ಹಾಗೂ ಅವರು ನೇರ ಸೆಟ್ ಗಳಲ್ಲಿ ಸೋತರು. ನಂತರ ಅವರು ಆ ಸ್ಪರ್ಧೆಯಿಂದ ನಿರ್ಗಮಿಸಿದರು. ಅಗಾಸ್ಸಿ ವಿಶ್ವದ 7 ನೇ ಶ್ರೇಯಾಂಕದಿಂದ 2005 ನ್ನು ಮುಗಿಸಿದರು, ಇದು ಅವರ 16 ನೇ ಬಾರಿಯ ವರ್ಷಾಂತ್ಯದ ಅತ್ಯುತ್ತಮ 10 ನೇ ಶ್ರೇಯಾಂಕದೊಳಗಿನ ಮುಕ್ತಾಯವಾಗಿತ್ತು, ಇದು ಕಾನರ್ಸ್ ಅವರ ಹೆಚ್ಚು ಬಾರಿ 10 ರೊಳಗಿನ ವರ್ಷಾಂತ್ಯದ ಶ್ರೇಯಾಂಕದ ಸಾಧನೆಗೆ ಸರಿಸಮನಾಯಿತು. 2005 ರಲ್ಲಿ, ಅಗಾಸ್ಸಿ 17 ವರ್ಷಗಳ ನಂತರ ನೈಕ್ ಅನ್ನು ಬಿಟ್ಟರು, ಹಾಗೂ ಅಡಿಡಾಸ್ ಜೊತೆ ಪ್ರಾಯೋಜಕತ್ವಕ್ಕೆ ಒಪ್ಪಿಗೆಕೊಟ್ಟು ಸಹಿ ಹಾಕಿದರು.[೩೨] ಅಗಾಸ್ಸಿಯವರ ಸಹಾಯ ಸಂಸ್ಥೆಗೆ ನೈಕ್ ದಾನ ಕೊಡಲು ಒಪ್ಪದ ಕಾರಣ ಅಗಾಸ್ಸಿ ನೈಕ್ ಬಿಡಲು ಒಂದು ಮುಖ್ಯ ಕಾರಣವಾಗಿತ್ತು, ಹಾಗೂ ಅಡಿಡಾಸ್ ಹಾಗೆ ದಾನ ಕೊಡಲು ಹೆಚ್ಚು ಸಂತೋಷಪಟ್ಟರು. ಅಗಾಸ್ಸಿ 2006 ರನ್ನು ನೀರಸವಾಗಿ ಪ್ರಾರಂಭಿಸಿದೆರು ಪಾದದ ತೊಂದರೆಯಿಂದ ಅವರು ಇನ್ನೂ ಸುಧಾರಿಸಿಕೊಳ್ಳುತ್ತಿದ್ದರು ಮತ್ತು ಬೆನ್ನ ಮತ್ತು ಕಾಲು ನೋವಿನಿಂದ ಸಹ ನರಳುತ್ತಿದ್ದರು ಹಾಗೂ ಅವರಿಗೆ ಸೂಕ್ತ ಪಂದ್ಯದ ಆಟದ ಅಭ್ಯಾಸದ ಕೊರತೆಯಿತ್ತು. ಅಗಾಸ್ಸಿ ಪಾದದ ಕೀಲಿನ ತೊಂದರೆಯ ಕಾರಣ ಆಸ್ಟ್ರೇಲಿಯನ್ ಓಪನ್ ನಿಂದ ಹಿಂದೆಗೆದುಕೊಂಡರು ಮತ್ತು ಅವರ ಬೆನ್ನಿನ ತೊಂದರೆ ಹಾಗೂ ಇತರೆ ನೋವುಗಳು ಅವರನ್ನು ಅನೇಕ ಬೇರೆ ಪಂದ್ಯಗಳಿಂದ ನಿರ್ಗಮಿಸಲು ಒತ್ತಾಯಿಸಿದವು, ನಂತರ ಫ್ರೆಂಚ್ ಓಪನ್ ಸಹ ಒಳಗೊಂಡಂತೆ ಸಂಪೂರ್ಣ ಕ್ಲೇ ಕೋರ್ಟ್ ಆಡುವ ಕಾಲವನ್ನು ಬಿಡಬೇಕಾಯಿತು. ಇದು ಕೊನೆಯ ಬಾರಿಗೆ ಅವರ ಅತ್ಯುತ್ತಮ 10 ರೊಳಗಿನ ಶ್ರೇಯಾಂಕವನ್ನು ಕೆಳಗಿಳಿಸಿತು. ಅಗಾಸ್ಸಿ ಗ್ರಾಸ್ ಕೋರ್ಡ್ ಸೀಸನ್ ಗೆ ಆಡಲು ತೊಡಗಿದರು ಹಾಗೂ ನಂತರ ವಿಂಬಲ್ಡನ್ ಗೆ ಹಿಂದಿರುಗಿದರು. ಅಲ್ಲಿ ಅವರು ಮೂರನೇ ಸುತ್ತಿನಲ್ಲಿ ವಿಶ್ವದ 2 ನೇ ಶ್ರೇಯಾಂಕದ ಆಟಗಾರ (ಮತ್ತು ನಂತರದ ರನ್ನರ್-ಅಪ್) ರಫೆಲ್ ನಡಾಲ್ ರಿಂದ 7–6(5), 6–2, 6–4 ಸೋಲಿಸಲ್ಪಟ್ಟರು. ಇರುವ ಪದ್ಧತಿಗೆ ವಿರುದ್ಧವಾಗಿ, ಪಂದ್ಯದ ನಂತರ ಕೋರ್ಟ್ ನಲ್ಲಿ ಸೋತ ಆಟಗಾರ ಅಗಾಸ್ಸಿ ಯವರನ್ನು ಸಂದರ್ಶಿಸಲಾಯಿತು.[೩೩] ವಿಂಬಲ್ಡನ್ ನಲ್ಲಿ, ಅಗಾಸ್ಸಿ ಯವರು ಯುಎಸ್ ಓಪನ್ ಆದ ನಂತರ ನಿವೃತ್ತಿ ಹೊಂದುವ ತಮ್ಮ ಯೋಜನೆಗಳನ್ನು ಪ್ರಕಟಿಸಿದರು. ಅಗಾಸ್ಸಿ ಬೇಸಿಗೆಯ ಹಾರ್ಡ್ ಕೋರ್ಟ್ ಋತುಮಾನದ ಅವದಿಯಲ್ಲಿ ಕೇವಲ ಎರಡು ಪಂದ್ಯಗಳನ್ನು ಮಾತ್ರ ಆಡಿದರು, ಅದರಲ್ಲಿ 6–4, 3–6, 7–5 ಸೆಟ್ ಗಳಿಂದ ಚಿಲಿಯ ಫರ್ನಾಂಡೊ ಗೊಂಜಾಲೆಜ್ ಗೆ ಲಾಸ್ ಏಂಜಲ್ಸ್ ನಲ್ಲಿ ಕಂಟ್ರಿ ವೈಡ್ ಕ್ಲಾಸಿಕ್ ಪಂದ್ಯದಲ್ಲಿ ಕ್ವಾರ್ಟರ್ ಫೈನಲ್ ನಲ್ಲಿ ಪರಾಜಿತರಾದದ್ದು ಅವರ ಅತ್ಯುತ್ತಮ ಸಾಧನೆಯಾಗಿತ್ತು. ಪರಿಣಾಮವಾಗಿ ಅವರಿಗೆ ಯುಎಸ್ ಓಪನ್ ನಲ್ಲಿ ಶ್ರೇಯಾಂಕ ಸಿಗಲಿಲ್ಲ. ಅಗಾಸ್ಸಿ ತಮ್ಮ ಕೊನೆಯ ಯುಎಸ್ ಓಪನ್ ಪಂದ್ಯಗಳಲ್ಲಿ ಕಡಿಮೆ ಆದರೆ ನಾಟಕೀಯವಾದ ಸಾಧನೆಯನ್ನು ಹೊಂದಿದ್ದರು. ವಿಪರೀತವಾದ ಬೆನ್ನು ನೋವಿನ ಕಾರಣ, ಅಗಾಸ್ಸಿ ಯವರು ಪ್ರತಿ ಪಂದ್ಯದ ನಂತರ ಉರಿಯೂತದ ವಿರುದ್ಧದ ಸೂಜಿಮದ್ದುಗಳನ್ನು ತೆಗೆದುಕೊಳ್ಳಲೇ ಬೇಕಾಗುತ್ತಿತ್ತು. ಆಂಡ್ರೈ ಪವೆಲ್ ವಿರುದ್ಧ ಕಠಿಣ ನಾಲ್ಕು ಸೆಟ್ಟು ಗಳ ಜಯದ ನಂತರ, 2006 ರ ಆಸ್ಟ್ರೇಲಿಯನ್ ಓಪನ್ ಅಂತಿಮ ಹಂತ ಹಾಗೂ ವಿಂಬಲ್ಡನ್ ಉಪಾಂತ್ಯಕ್ಕೆ ಈ ಮುಂಚೆ ತಲುಪಿದ್ದ ಮಾರ್ಕೋಸ್ ಬಗ್ಧಟಿಸ್ ನನ್ನು ಎರಡನೇ ಸುತ್ತಿನಲ್ಲಿ ಅಗಾಸ್ಸಿ ಎದುರಿಸಿದರು. ಅಂತಿಮ ಸೆಟ್ ನಲ್ಲಿ ಯುವಕ ಬಗ್ಧಟಿಸ್ ಸ್ನಾಯು ಉಳುಕುವಿಕೆ ವಶವಾದ ಕಾರಣ, ಅಗಾಸ್ಸಿ ಆ ಪಂದ್ಯವನ್ನು 6–4, 6–4, 3–6, 5–7, 7–5 ರಿಂದ ಗೆದ್ದರು. ತಮ್ಮ ಕೊನೆಯ ಪಂದ್ಯದಲ್ಲಿ, ನಾಲ್ಕು ಸೆಟ್ ಗಳಿಂದ ಜರ್ಮನಿಯ 112 ನೇ ಶ್ರೇಯಾಂಕದ ದೊಡ್ಡದಾಗಿ ಸರ್ವ್ ಮಾಡುವ ಬೆಂಜಮಿನ್ ಬೇಕರ್ ಅವರಿಗೆ ಸೋತರು. ಪಂದ್ಯದ ನಂತರ ಅಗಾಸ್ಸಿಗೆ ಎದ್ದು ನಿಂತ ಜನಸಂದಣಿಯಿಂದ ಎಂಟು ನಿಮಿಷದ ಶ್ರೇಷ್ಠವಾದ ಉತ್ಸಾಹಪೂರ್ಣ ಸ್ವಾಗತವನ್ನು ಪಡೆದರು ಹಾಗೂ ನಿವೃತ್ತಿಯ ಒಂದು ಚಿರಸ್ಮರಣೀಯ ಭಾಷಣವನ್ನು ಮಾಡಿದರು.

ಸಂಪಾದನೆಗಳು

[ಬದಲಾಯಿಸಿ]

ಇಲ್ಲಿಯವರೆಗೂ ಸಾಂಪ್ರಾಸ್ ಮತ್ತು ಫೆಡರರ್ ಆದಮೇಲೆ ಕೇವಲ ಮೂರನೆಯವರಾಗಿ, ತಮ್ಮ ವೃತ್ತಿ ಜೀವನದ ಅವಧಿಯಲ್ಲಿ ಬಹುಮಾನದ ಹಣವಾಗಿ ಅಗಾಸ್ಸಿ 30 ಮಿಲಿಯನ್ ಯುಎಸ್ ಡಾಲರುಗಳಿಗಿಂತಲೂ ಹೆಚ್ಚು ಹಣವನ್ನು ಗಳಿಸಿದರು. ಅವರು ತಮ್ಮ ವೃತ್ತಿ ಜೀವನದ ಕಾಲದಲ್ಲಿ ಪ್ರಾಯೋಜಕತ್ವದ ಒಪ್ಪಂದದಿಂದಲೂ ಸಹ ಒಂದು ವರ್ಷಕ್ಕೆ 25 ಮಿಲಿಯನ್ ಯುಎಸ್ ಡಾಲರುಗಳಿಗಿಂತಲೂ ಮಿಗಿಲಾಗಿ ಸಂಪಾದಿಸಿ, ಆ ಕಾಲದ ಎಲ್ಲಾ ಕ್ರೀಡೆಗಳಲ್ಲಿ ನಾಲ್ಕನೆಯವರಾದರು. [ಸೂಕ್ತ ಉಲ್ಲೇಖನ ಬೇಕು]

ನಿವೃತ್ತಿಯ ನಂತರ

[ಬದಲಾಯಿಸಿ]

ತಮ್ಮ 2006 ರ ಯುಎಸ್ ಓಪನ್ ನಂತರ ನಿವೃತ್ತಿಯಾದಾಗಿನಿಂದ, ಅಗಾಸ್ಸಿ ಧಾರ್ಮಿಕ ಕ್ರೀಡಾಸ್ಪರ್ಧೆಗಳ ಸರಣಿಗಳಲ್ಲಿ ಭಾಗವಹಿಸಿ, ತಮ್ಮ ಸ್ವಂತ ದಾನ ಧರ್ಮಗಳ ಜೊತೆಗೆ ತಮ್ಮ ಕೆಲಸವನ್ನು ಮುಂದುವರೆಸುತ್ತಿದ್ದಾರೆ. ಸೆಪ್ಟೆಂಬರ್ 5, 2007 ರಂದು, ಅಗಾಸ್ಸಿ ಆಂಡಿ ರೊಡ್ಡಿಕ್/ರೊಜರ್ ಫೆಡರರ್ ಅವರ ಯುಎಸ್ ಓಪನ್ ಕ್ವಾರ್ಟರ್ ಫೈನಲ್ ಪಂದ್ಯಕ್ಕೆ ಅನಿರೀಕ್ಷಿತ ಅತಿಥಿ ವೀಕ್ಷಕ ವಿವರಣೆಗಾರರಾಗಿದ್ದರು. ಅವರು ಟಿಮ್ ಹೆನ್ ಮ್ಯಾನ್ ಮತ್ತು ಕಿಮ್ ಕ್ಲಿಜ್ ಸ್ಟರ್ ಅವರ ವಿರುದ್ಧ ಆಡಲು ತಮ್ಮ ಪತ್ನಿ ಸ್ಟೆಫಿ ಗ್ರಾಫ್ ಜೊತೆಗೂಡಿ ವಿಂಬಲ್ಡನ್ ನಲ್ಲಿ ಒಂದು ಪ್ರದರ್ಶನ ಪಂದ್ಯ ಆಡಿದರು. ಅವರು 2009 ರ ಬೇಸಿಗೆಯಲ್ಲಿ ಫಿಲೆಡೆಲ್ಫಿಯಾ ಫ್ರೀಡಮ್ಸ್ ಗೆ ವರ್ಲ್ಡ್ ಟೀಮ್ ಟೆನ್ನಿಸ್ ನಲ್ಲಿ ಆಡಿದರು[೩೪] ಮತ್ತು ಮೊದಲ ಬಾರಿಗೆ ಔಟ್ ಬ್ಯಾಕ್ ಚಾಂಪಿಯನ್ಸ್ ಸೀರೀಸ್ ಪಂದ್ಯದಲ್ಲಿ ಆಡಿದರು. ಅವರು ಅರಿಜೋನಾದ ಸರ್ ಪ್ರೈಜ್ ನಲ್ಲಿ ಕ್ಯಾನ್ಸರ್ ಟ್ರೀಟ್ಮೆಂಟ್ ಸೆಂಟರ್ಸ್ ಆಫ್ ಅಮೇರಿಕ ಟೆನ್ನಿಸ್ ಚಾಂಪಿಯನ್ಸ್ ಷಿಪ್ ಗೆ ಆಡಿದರು, ಅಲ್ಲಿ ಅವರು ತನ್ನ ವೃತ್ತಿ ಜೀವನದ ನಾಲ್ಕನೆಯ ಔಟ್ ಬ್ಯಾಕ್ ಚಾಂಪಿಯನ್ಸ್ ಸೀರೀಸ್ ಗೆಲುವನ್ನು ಪಡೆದ ನಂತರದ ಚಾಂಪಿಯನ್ ಟಾಡ್ ಮಾರ್ಟಿನ್ ಗೆ ಸೋಲುವ ಮುಂಚೆ ಅವರು ಅಂತಿಮ ಹಂತವನ್ನು ತಲುಪಿದರು.[೩೫] ತಮ್ಮ ಫೈನಲ್ ಪಂದ್ಯದ ಮಾರ್ಗದಲ್ಲಿ, ಅಗಾಸ್ಸಿ ಕ್ವಾರ್ಟರ್ ಫೈನಲ್ಸ್ ನಲ್ಲಿ ಮೈಖೆಲ್ ಪೆನ್ಫೋರ್ಸ್ ಮತ್ತು ಉಪಾಂತ್ಯದಲ್ಲಿ ವೆಯ್ನ್ ಫೆರೀರಾ ಅವರನ್ನು ಸೋಲಿಸಿದರು. ಆದರೂ, ಅವರು ತಮ್ಮ ದೀರ್ಘಕಾಲದ ಸ್ನೇಹಿತ ಜಿಮ್ ಕೊರಿಯರ್ ನ ಸಹಾಯಕ್ಕಾಗಿ ಮಾತ್ರ ತಾವು ಈ ಪಂದ್ಯಗಳಲ್ಲಿ ಆಡಿದೆನೆಂದೂ, ಪೂರ್ಣಕಾಲೀನ ತಳಹದಿಯ ಮೇಲೆ ತಾವು ಈ ಪ್ರವಾಸಗಳಲ್ಲಿ ಆಡುವುದಿಲ್ಲವೆಂದೂ ಸ್ಪಷ್ಟಪಡಿಸಿದರು.[೩೬] ಹೈಟಿಯನ್ನು ಪುನಃ ಕಟ್ಟಲು ಸಹಾಯ ಮಾಡಲು ಹಣಕ್ಕಾಗಿ ಸಾಂಪ್ರಾಸ್, ಫೆಡರರ್, ಮತ್ತು ನಡಾಲ್ ಜೊತೆ ಆಂಡ್ರೆ ಒಂದು ಸಹಾಯಾರ್ಥ ಪಂದ್ಯಗಳನ್ನು ಆಡಿದರು. ಆ ಪಂದ್ಯದಲ್ಲಿ, ಒಂದು ಸೌಮ್ಯ ವಾಗ್ವಾದ ಅಗಾಸ್ಸಿ ಮತ್ತು ಸಾಂಪ್ರಾಸ್ ನಡುವೆ ನಡೆಯಿತು. ಸಾಂಪ್ರಾಸ್ ಅಗಾಸ್ಸಿಯವರ ಪಾರಿವಾಳದ ಹೆಜ್ಜೆಯ ನಡಿಗೆಯನ್ನು ಗೇಲಿ ಮಾಡಿದಾಗ, ಅಗಾಸ್ಸಿ ಸಾಂಪ್ರಾಸ್ ರನ್ನು ಅಗ್ಗದವನೆಂದು ಕರೆದು ಪ್ರತಿಕ್ರಿಯಿಸಿದರು (ಸಾಂಪ್ರಾಸ್ ರ ಇನಾಮು ಕೊಡುವ ಅಭ್ಯಾಸವನ್ನು ಉಲ್ಲೇಖಿಸುತ್ತಾ). ಸಾಂಪ್ರಾಸ್ ಮತ್ತು ಫೆಡರರ್ ಆ ಪಂದ್ಯವನ್ನು ಎರಡು ಸೆಟ್ ಗಳಲ್ಲಿ ಗೆದ್ದರು.

ಆಟದ ಶೈಲಿ

[ಬದಲಾಯಿಸಿ]

ತಮ್ಮ ವೃತ್ತಿ ಜೀವನದ ಪ್ರಾರಂಭದಲ್ಲಿ ಅಗಾಸ್ಸಿ ಜಾಗ್ರತೆಯಾಗಿ ಪಾಂಯಿಂಟ್ ಗಳನ್ನು ಮುಕ್ತಾಯಗೊಳಿಸಲು ನೋಡುತ್ತಿದ್ದರು, ತಮ್ಮ ಆಳವಾದ ಕಠಿಣ ಹೊಡೆತದಿಂದ ಪ್ರತಿಸ್ಪರ್ಧಿಯಿಂದ ಒಂದು ಬಲಹೀನ ಹಿಂದಿರುಗಿಸುವುದನ್ನು ಪ್ರೇರೇಪಿಸಿ, ಮತ್ತು ನಂತರ ತುಟ್ಟತುದಿಯ ಕೋನದಲ್ಲಿ ಆಡಿ ಜಯಶಾಲಿಯಾಗುತ್ತಿದ್ದರು. ಅವರ ಸರ್ವ್ ನ ಹಿಂದಿರುಗಿಸುವಿಕೆ, ಬೇಸ್ ಲೈನ್ ಆಟ ಮತ್ತು ಮುಂಜಾಗ್ರತೆಯ ತೀಕ್ಷ್ಣ ವಿವೇಕ ಪಂದ್ಯಗಳಲ್ಲೇ ಅತ್ಯುತ್ತಮವಾದುವುಗಳಾಗಿದ್ದವು, ಹಾಗೂ 1992 ರಲ್ಲಿ ಅವರು ವಿಂಬಲ್ಡನ್ ನಲ್ಲಿ ಪ್ರಶಸ್ತಿ ಗೆಲ್ಲಲು ಸಹಾಯ ಮಾಡಿತು. ಅಪರೂಪದ ಸಂದರ್ಭದಲ್ಲಿ ನೆಟ್ ಬಳಿ ಓಡಿಬಂದು, ಚೆಂಡನ್ನು ಗಾಳಿಯಲ್ಲೇ ತೆಗೆದುಕೊಂಡು ಹಾಗೂ ಒಂದು ಸ್ವಿಂಗಿಂಗ್ ವಾಲಿಯ ಜೊತೆ ವಿಜಯದ ಪಾಯಿಂಟ್ ಹೊಡೆಯುತ್ತಿದ್ದರು. ಅಗಾಸ್ಸಿ ಪ್ರತಿಸ್ಪರ್ಧಿಗಳಿಗೆ ಚೆಂಡನ್ನು ಬೇಗನೆ ತೆಗೆದುಕೊಳ್ಳುವ ಆಯ್ಕೆಯ ಸಹಿತ ನಿರಂತರ ಒತ್ತಡ ಹೇರುತ್ತಿದ್ದರು ಮತ್ತು ಗೆರೆಯ ಮೇಲೆ ಸ್ಮೋಕಿಂಗ್ ಬ್ಯಾಕ್ ಹ್ಯಾಂಡ್ ನಂತಹ ತೂಗಾಡುವ ಆಳ ಕೋನಗಳಿಗೆ ಅತ್ಯಂತ ಹೆಸರುವಾಸಿಯಾಗಿದ್ದರು. ಕೋರ್ಟ್ ನ ಹಿಂದಿನಿಂದ ಆದೇಶಿಸುತ್ತಾ ಆಡುವುದು ಅವರ ಶಕ್ತಿಯಾಗಿತ್ತು. ಬೆಳೆಯುವಾಗ ಅವರ ತಂದೆ ಹಾಗೂ ನಿಕ್ ಬೊಲ್ಲೆಟ್ಟೆರಿ ಈ ರೀತಿಯಾಗಿ ಅವರನ್ನು ತರಬೇತು ಮಾಡಿದ್ದರು. ಅವರು ಎಂದಿಗೂ ಶಕ್ತಿಯುತವಾದ ಸರ್ವ್, ನೆಟ್ ಬಳಿಯ ಆಟ ಅಥವಾ ವಾಲಿ ಮಾಡಲು ಹೆಸರುವಾಸಿಯಾಗಿರಲಿಲ್ಲ.[೩೭] ಅಂಕವು ಹಿಡಿತದಲ್ಲಿರುವಾಗ, ಅಗಾಸ್ಸಿಯವರು ಅಗಾಗ್ಗೆ ಆ ಅಂಕವನ್ನು ಗೆಲ್ಲುವ ಅವಕಾಶವನ್ನು ಬಿಟ್ಟುಕೊಡುತ್ತಿದ್ದರು ಮತ್ತು ಒಂದು ಸಂಪ್ರದಾಯಬದ್ಧ ಹೊಡೆತದೊಂದಿದೆ ತಮ್ಮ ತಪ್ಪುಗಳನ್ನು ಕನಿಷ್ಠಗೊಳಿಸಿಕೊಂಡು ಹಾಗೂ ಪ್ರತಿಸ್ಪರ್ಧಿಯು ಹೆಚ್ಚು ಓಡುವಂತೆ ಮಾಡುತ್ತಿದ್ದರು. ಪಾಯಿಂಟ್ ಗಳ ನಂತರ ಪಾಯಿಂಟ್ ಗಳ ಸುತ್ತ ತಮ್ಮ ಪ್ರತಿಸ್ಪರ್ಧಿಗಳನ್ನು ಓಡಾಡಿಸುವ ಅವರ ಒಲವಿನಿಂದಾಗಿ "ದಿ ಪನಿಷರ್" ಎಂಬ ಅಡ್ಡ ಹೆಸರನ್ನು ಅವರು ಗಳಿಸುವಂತೆ ಮಾಡಿತು.[] ಅಗಾಸ್ಸಿಯವರ ಸರ್ವ್ ಎಂದಿಗೂ ಅವರ ಆಟದ ಸಾಮರ್ಥ್ಯವಾಗಿರಲಿಲ್ಲ, ಆದರೆ ಅದು ಅವರ ವೃತ್ತಿ ಜೀವನದ ಅವಧಿಯಲ್ಲಿ ಸ್ಥಿರವಾಗಿ ಸುಧಾರಿಸಿತು, ಹಾಗೂ ಹೊಣೆಯಾಗುವುದರಿಂದ ಸರಾಸರಿಯ ಮೇಲಿನವರೆಗೆ ಹೋಯಿತು. ಅವರು ಆಗಾಗ್ಗೆ ಪ್ರತಿಸ್ಪರ್ಧಿಯ ವಿರುದ್ಧ ದಿಕ್ಕಿನ ತುದಿಗೆ ಒಂದು ಹೊಡೆತದಿಂದ ಹಿಂಬಾಲಿಸಿ, ತಮ್ಮ ಎದುರಾಳಿಯನ್ನು ಕೋರ್ಟಿನಾಚೆಗೆ ಕಳುಹಿಸಲು ಡ್ಯುಸ್ ಸರ್ವಿಸ್ ಬಾಕ್ಸ್ ನಲ್ಲಿದ್ದಾಗ ತಮ್ಮ ಗಡುಸಾದ ಸ್ಲೈಸ್ ಸರ್ವಗಳನ್ನು ಉಪಯೋಗಿಸುತ್ತಿದ್ದರು. ಅಗಾಸ್ಸಿಯವರ ಸರ್ವಿಸ್ ವೇಗ ಸಮಮಟ್ಟದ ಮೊದಲ ಸರ್ವ್ ಹೊಡೆಯುವಾಗ ಸಮಾನ್ಯವಾಗಿ 110 mph (177 km/h) ರಿಂದ 125 mph (201 km/h) ರ ನಡುವಿನ ವ್ಯಾಪ್ತಿಯಲ್ಲಿರುತ್ತಿತ್ತು. ಅವರ ಎರಡನೆ ಸರ್ವ ಏನೇ ಆದರೂ ಸಾಮಾನ್ಯವಾಗಿ ಕೇವಲ 80 ರ ಮಧ್ಯದಲ್ಲಿರುತ್ತಿತ್ತು. ಅವರು ತಮ್ಮ ಎರಡನೆ ಸರ್ವ್ ಗೆ ಒಂದು ಹೆಚ್ಚಾದ ಕಿಕ್ ಸರ್ವ್ ಮೇಲೆ ಭರವಸೆ ಇಡುತ್ತಿದ್ದರು.

ವೈಯಕ್ತಿಕ ಮತ್ತು ಕುಟುಂಬ ಜೀವನ

[ಬದಲಾಯಿಸಿ]

ಏಪ್ರಿಲ್ 19, 1997 ರಂದು, ಅಗಾಸ್ಸಿ ನಟಿ ಬ್ರೂಕ್ ಶೀಲ್ಡ್ಸ್ ರನ್ನು ಮದುವೆಯಾದರು. ಫೆಬ್ರುವರಿ 1998 ರಂದು ದಂಪತಿಗಳ ಬಗ್ಗೆ "ತಪ್ಪು ಹಾಗೂ ಕೃತ್ರಿಮ ಹೇಳಿಕೆಯ" ಹೇಳಿಕೆಗಳನ್ನು ಅದು ಮುದ್ರಿಸಿದೆಯೆಂದು ಆಪಾದಿಸುತ್ತಾ ದಿ ನ್ಯಾಷನಲ್ ಎನ್ಕ್ವರರ್ ವಿರುದ್ಧ ಅವರು ದಾವೆ ಹೂಡಿದರು, ಆದರೆ ವ್ಯಾಜ್ಯವು ವಜಾಗೊಳಿಸಲ್ಪಟ್ಟಿತು. ದಂಪತಿಗಳು ನಂತರ ವಿವಾಹ ವಿಚ್ಛೇದನಕ್ಕೆ ದಾಖಲಿಸಿದಾಗ, ಏಪ್ರಿಲ್ 9, 1990 ರಂದು ಅದು ಸಮ್ಮತಿಸಲ್ಪಟ್ಟಿತು. 1999 ರ ಫ್ರೆಂಚ್ ಓಪನ್ ನಲ್ಲಿ, 1995 ರಿಂದ ಅವರು ಮತ್ತು 1996 ರಿಂದ ಆಕೆ, ಒಂದೂ ಗ್ರ್ಯಾಂಡ್ ಸ್ಲ್ಯಾಂಮ್ ಪ್ರಶಸ್ತಿಯನ್ನು ಗೆದ್ದಿಲ್ಲವಾದ ಕಾರಣ, ಅಗಾಸ್ಸಿ ಹಾಗೂ ಸ್ಟೆಫಿ ಗ್ರಾಫ್ ಅನಿರೀಕ್ಷಿತ ಚಾಂಪಿಯನ್ ಗಳಾಗಿದ್ದರು. ಜಯಶಾಲಿಗಳ ಬಾಲ್ ನ ಪಾರ್ಟಿಯಲ್ಲಿ, ಎರಡನೆ ಬಾರಿಗೆ ಅವರು ಪರಸ್ಪರ ಭೇಟಿಯಾದರು ಕೆಲವೇ ಸಮಯದ ನಂತರ, ಅವರು ಪ್ರೇಮದ ನಡೆವಳಿಕೆಯನ್ನು ಪ್ರಾರಂಭಿಸಿದರು. ಜುಲೈನಲ್ಲಿ ವಿಂಬಲ್ಡನ್ ಅಂತಿಮವನ್ನು ಅವರಿಬ್ಬರೂ ತಲುಪಿದ ನಂತರ ಗ್ರಾಫ್ ನಿವೃತ್ತಿ ಹೊಂದಿದರು. ಅವರು ಅಕ್ಟೋಬರ್ 22, 2001 ರಂದು ವಿವಾಹವಾದರು.[೩೮] ಅವರ ಮಗ, ಜೇಡನ್ ಗಿಲ್, ನಾಲ್ಕು ದಿನಗಳ ನಂತರ, ಅಕ್ಟೋಬರ್ 26 ರಂದು ಜನಿಸಿದನು. ಅವರ ಮಗಳು, ಜಾಜ್ ಎಲ್ಲೆ, ಅಕ್ಟೋಬರ್ 3, 2003 ರಂದು ಜನಿಸಿದಳು. ದಂಪತಿಗಳು ಲಾಸ್ ವೇಗಸ್ ಪ್ರದೇಶದಲ್ಲಿ ವಾಸಿಸುತ್ತಿದ್ದು, ಅನೇಕ ವಿರಾಮ ಕಾಲದ ಮನೆಗಳನ್ನು ಹೊಂದಿದ್ದಾರೆ. ಅಗಾಸ್ಸಿಯವರ ಅಕ್ಕ, ರೀಟಾ, ಟೆನ್ನಿಸ್ ಆಟಗಾರ ಪಾಂಚೋ ಗೊಂಜಾಲೆಸ್ ರನ್ನು ವಿವಾಹವಾಗಿದ್ದಾರೆ. 1995 ರಲ್ಲಿ ಗೊಂಜಾಲೆಸ್ ಲಾಸ್ ವೇಗಸ್ ನಲ್ಲಿ ಮರಣಿಸಿದಾಗ, ಅಗಾಸ್ಸಿ ಶವ ಸಂಸ್ಕಾರಕ್ಕೆ ಹಣವನ್ನು ನೀಡಿದರು. ದೀರ್ಘಕಾಲದ ತರಬೇತುದಾರ ಗಿಲ್ ರೆಯಸ್ ಅಗಾಸ್ಸಿಯವರ ಅತ್ಯಂತ ಹತ್ತಿರದ ಗೆಳೆಯರಲ್ಲಿ ಒಬ್ಬನೆಂದು ಕರೆಯಲ್ಪಟ್ಟಿದ್ದಾರೆ; ಕೆಲವರು ಅವರನ್ನು "ತಂದೆಯಂತಹ ವ್ಯಕ್ತಿ" ಯೆಂದು ವರ್ಣಿಸಿದ್ದಾರೆ.[೩೯][೪೦] ಆಂಡ್ರೆ ಅಗಾಸ್ಸಿಯವರ ಮತ್ತೊಬ್ಬ ಸಹೋದರಿ, ಟಾಮಿ Archived 2010-03-10 ವೇಬ್ಯಾಕ್ ಮೆಷಿನ್ ನಲ್ಲಿ., ಅವರ ತಾಯಿ ಬೆಟ್ಟಿಯಂತೆ, ಸ್ತನ ಕ್ಯಾನ್ಸರ್ ನಿಂದ ಬದುಕುಳಿದವರು. ಡಿಸೆಂಬರ್ 2008 ರಲ್ಲಿ, ಅಗಾಸ್ಸಿಯ ಬಾಲ್ಯದ ಗೆಳೆಯ ಹಾಗೂ ಹಿಂದಿನ ವ್ಯಾಪಾರದ ಕಾರ್ಯನಿರ್ವಾಹಕ ಪೆರ್ರಿ ರೋಜರ್ಸ್, ಗ್ರಾಫ್ ವಿರುದ್ಧ ಕಾರ್ಯನಿರ್ವಹಣೆಯ ಶುಲ್ಕವಾಗಿ 50,000 ಡಾಲರುಗಳನ್ನು ಆಕೆ ತನಗೆ ಕೂಡಬೇಕಾಗಿದೆಯೆಂದು ಹಕ್ಕಿನಿಂದ ಕೇಳಿ ಕೋರ್ಟಿನಲ್ಲಿ ದಾವೆ ಹೂಡಿದನು.[೪೧][೪೨] ಅಗಾಸ್ಸಿಯವರ ಆತ್ಮಚರಿತ್ರೆ, ಓಪನ್ (ಜೆ.ಆರ್. ಮೊಹ್ರೆಂಜಿರ್ ಸಹಾಯದಿಂದ ಬರೆದದ್ದು[೪೩]), ನವೆಂಬರ್ 2009 ರಲ್ಲಿ ಪ್ರಕಟಿಸಲ್ಪಟ್ಟಿತು. ಅದರಲ್ಲಿ, ಅವರ ಒಂದು ಕಾಲದ ವೈಶಿಷ್ಟ್ಯಪೂರ್ಣ ಪೊದೆಯಂತಹ ಕುತ್ತಿಗೆಯ ಮೇಲಿನ ಉದ್ದ ಕೂದಲು ನಿಜವಾಗಿಯೂ ಒಂದು ವಿಗ್ ಯೆಂದೂ, ಹಾಗೂ ಮೆಥಾಂಪೆಟಮೈನ್ ಅನ್ನು ಖಂಡಿತವಾಗಿ ಉಪಯೋಗಿಸಿ ಮತ್ತು ಪರೀಕ್ಷೆಯಲ್ಲಿ ಪಾಸಿಟಿವ್ ಅಗಿತ್ತೆಂದು ಒಪ್ಪಿಕೊಂಡಿದ್ದಾರೆ.[೨೨][೪೪][೪೫] ಈ ರೀತಿಯಾಗಿ ಅವರು ಒಪ್ಪಿಕೊಂಡಿದ್ದಕ್ಕೆ, ರೋಜರ್ ಫೆಡರರ್ ಸ್ವತಃ ತಾವು ಗಾಬರಿ ಮತ್ತು ನಿರಾಸೆಗೊಂಡಿದ್ದಾಗಿ ಘೋಷಿಸಿದರು,[೪೬] ಹಾಗೂ ಅಗಾಸ್ಸಿಯನ್ನು ಅನರ್ಹಗೊಳಿಸಬೇಕಿತ್ತೆಂದು ಸರ್ಗೆಜ್ ಬುಬ್ಕ ತಿಳಿಸಿದರು.[೪೭] CBS ಗೆ ನೀಡಿದ ಒಂದು ವಿಶೇಷ ಸಂದರ್ಶನದಲ್ಲಿ ಅಗಾಸ್ಸಿ ತಮ್ಮ ತಾವೇ ಸಮರ್ಥಿಸಿ ಕೊಳ್ಳುತ್ತಾ ಹಾಗೂ ತಮ್ಮನ್ನು ಅರ್ಥ ಮಾಡಿಕೊಳ್ಳಬೇಕೆಂದು ಯಾಚಿಸುತ್ತಾ, ಹೇಳಿದರು "ನನ್ನ ಜೀವನದಲ್ಲಿ ನನಗೆ ಸಹಾಯದ ಅವಶ್ಯಕತೆಯಿದ್ದ ಸಮಯವದಾಗಿತ್ತು."[೪೮] ಅದು ತನ್ನ ಮೇಲೆ ಹೇರುತ್ತಿದ್ದ ನಿರಂತರ ಒಂದು ಒತ್ತಡದ ಕಾರಣ ತನ್ನ ವೃತ್ತಿ ಜೀವನದ ಅವಧಿಯಲ್ಲಿ ತಾವು ಯಾವಾಗಲೂ ಟೆನ್ನಿಸ್ ಅನ್ನು ದ್ವೇಶಿಸುತ್ತಿದ್ದೆನೆಂದು ಸಹ ಬಹಿರಂಗಗೊಳಿಸಿದ್ದಾರೆ. ಪೀಟ್ ಸಾಂಪ್ರಾಸ್ "ಯಾಂತ್ರಿಕ ಮನುಷ್ಯ" ನೆಂದು ತಾವು ಯೋಚಿಸಿದ್ದಾಗಿಯೂ ತಿಳಿಸಿದ್ದಾರೆ.[೪೯][೫೦] ಪುಸ್ತಕವು ನ್ಯೂಯಾರ್ಕ್ ಟೈಮ್ಸ್ ಬೆಸ್ಟ್ ಸೆಲ್ಲರ್ ಪಟ್ಟಿಯಲ್ಲಿ #1 [೫೧] ತಲುಪಿತು ಹಾಗೂ ಅನುಕೂಲಕರವಾದ ಪುನರಾವಲೋಕನಗಳನ್ನು ಪಡೆಯಿತು.[೫೨]

ರಾಜಕೀಯ

[ಬದಲಾಯಿಸಿ]

ಅಗಾಸ್ಸಿ ಒಬ್ಬ ದಾಖಲಿಸಲ್ಪಟ್ಟ ಡೆಮೊಕ್ರೇಟ್ [೫೩] ಆಗಿದ್ದಾರೆ ಮತ್ತು ಡೆಮೊಕ್ರೇಟ್ ನ ಅಭ್ಯರ್ಥಿಗಳಿಗೆ 100,000 ಡಾಲರುಗಳಿಗಿಂತಲೂ ಹೆಚ್ಚು ಹಣವನ್ನು ದಾನ ಮಾಡಿದ್ದಾರೆ.[೫೪]

ಪರೋಪಕಾರ

[ಬದಲಾಯಿಸಿ]

ಅಗಾಸ್ಸಿ ಅನೇಕ ಸಹಾಯಾರ್ಥ ಸಂಸ್ಥೆಗಳಲ್ಲಿ ಭಾಗವಹಿಸಿದ್ದಾರೆ ಹಾಗೂ ಆಂಡ್ರೆ ಅಗಾಸ್ಸಿ ಚಾರಿಟಬಲ್ ಅಸೋಸಿಯೇಷನ್ ಅನ್ನು 1994 ರಲ್ಲಿ ಸ್ಥಾಪಿಸಿದ್ದಾರೆ, ಇದು ಲಾಸ್ ವೇಗಾಸ್ ನ ಯುವ ಜನತೆಗೆ ಸಹಾಯ ಮಾಡುತ್ತಿದೆ. ಪ್ರತಿಕೂಲತೆಯ ಯುವ ಪೀಳಿಗೆಗೆ ಸಹಾಯ ಮಾಡುವ ಅವರ ಪ್ರಯತ್ನಗಳಿಗಾಗಿ 1995 ರಲ್ಲಿ ಅಗಾಸ್ಸಿಗೆ ATP ಆರ್ಥರ್ ಆಶ್ ಹ್ಯುಮಾನಿಟೇರಿಯನ್ ಅವಾರ್ಡ್ ಅನ್ನು ಪ್ರದಾನ ಮಾಡಲಾಯಿತು. ಅವರು ವೃತ್ತಿಪರ ಟೆನ್ನಿಸ್ ನಲ್ಲಿ ಅತ್ಯಂತ ಸಹಾಯ ಮಾಡುವ ಹಾಗೂ ಸಾಮಾಜಿಕವಾಗಿ ತೊಡಗಿಸಿಕೊಳ್ಳುವ ಆಟಗಾರನೆಂದು ಅನೇಕ ಬಾರಿ ಉದಾಹರಿಸಲ್ಪಡುತ್ತಾರೆ. ಲ್ಯಾನ್ಸ್ ಆರ್ಮ್ ಸ್ಟ್ರಾಂಗ್ ರನ್ನು ಒಳಗೊಂಡಂತೆ, ಅವರು ತಮ್ಮ ಪೀಳಿಗೆಯ ಅತ್ಯಂತ ಸಹಾಯಪೂರ್ಣ ಆಟಗಾರರೆಂದೂ ಸಹ ಊಹಿಸಲ್ಪಡುತ್ತಾರೆ.[೫೫] ಆಂಡ್ರೆ ಅಗಾಸ್ಸಿಯವರ ದಾನ ಧರ್ಮಗಳು ಮಕ್ಕಳು ತಮ್ಮ ಹುದುಗಿರುವ ಆಟದ ಸಾಮರ್ಥ್ಯವನ್ನು ತಲುಪಲು ಸಹಾಯ ಮಾಡುತ್ತವೆ. ಅವರ ಹುಡುಗ ಮತ್ತು ಹುಡುಗಿಯರ ಕ್ಲಬ್ 2000 ಮಕ್ಕಳನ್ನು ವರ್ಷಪೂರ್ತಿ ನೋಡಿಕೊಳ್ಳುತ್ತದೆ, ಮತ್ತು ವಿಶ್ವ ಮಟ್ಟದ ಕಿರಿಯರ ಟೆನ್ನಿಸ್ ತಂಡವನ್ನು ಹೊಂದಿದೆ. ಅದು ಒಂದು ಬ್ಯಾಸ್ಕೆಟ್ ಬಾಲ್ ಕಾರ್ಯಕ್ರಮವನ್ನೂ (ದಿ ಅಗಾಸ್ಸಿ ಸ್ಟಾರ್ಸ್) ಸಹ ಹೊಂದಿದೆ ಮತ್ತು ಶೈಕ್ಷಣಿಕ ಹಾಗೂ ಆಟವೆರಡನ್ನೂ ಪ್ರೋತ್ಸಾಹಿಸುವಂತಹ ಪರಿಶ್ರಮ ವ್ಯವಸ್ಥೆಯಿದೆ. 2001 ರಲ್ಲಿ, ಲಾಸ್ ವೇಗಾಸ್ ನಲ್ಲಿ ಆ ಪ್ರದೇಶದ ತೊಂದರೆಗೊಳಗಾದ ಮಕ್ಕಳಿಗೆ ಶಾಸನಾಧಿಕಾರ ಪಡೆದ ಮುಫತ್ತಾಗಿ ಕಲಿಸುವ ಒಂದು ಶಾಲೆಯಾದ ಆಂಡ್ರೆ ಅಗಾಸ್ಸಿ ಕಾಲೇಜ್ ಪ್ರಿಪರೇಟರಿ ಅಕ್ಯಾಡೆಮಿ [೫೬] ಯನ್ನು ತೆರೆದರು. 2009 ರಲ್ಲಿ, ಪದವಿ ಪಡೆಯುವ ತರಗತಿಯು ನೂರಕ್ಕೆ ನೂರರಷ್ಟು ಪದವಿ ಪ್ರಾಪ್ತಿಯ ಮಟ್ಟ ಮತ್ತು ಶೇಕಡಾ ನೂರರಷ್ಟು ಕಾಲೇಜು ಭರ್ತಿಯ ದರವನ್ನು ಹೊಂದಿತ್ತು.[ಸೂಕ್ತ ಉಲ್ಲೇಖನ ಬೇಕು] ಚೈಲ್ಡ್ ಹೆವೆನ್ ಎಂದು ಕರೆಯಲ್ಪಡುವ ನಿಂದನೆ ಹಾಗೂ ತಿರಸ್ಕಾರಕ್ಕೆ ಒಳಗಾದ ಮಕ್ಕಳಿಗೆ ತಮ್ಮ ಆಂಡ್ರೆ ಅಗಾಸ್ಸಿ ಚಾರಿಟಬಲ್ ಫೌಂಡೇಷನ್ ಮುಖಾಂತರ ಅಗಾಸ್ಸಿಯವರು ಬೆಂಬಲಿಸುವ ಮಗುವಿಗೆ ಸಂಬಂಧಿಸಿದ ಇತರೆ ಕಾರ್ಯಕ್ರಮಗಳಲ್ಲಿ ಕ್ಲಾರ್ಕ್ ಕೌಂಟಿಯ ಏಕೈಕ ವಸತಿ ಸೌಲಭ್ಯದ ಶಾಲೆಯೂ ಒಂದು. 1997 ರಲ್ಲಿ, ಅಗಾಸ್ಸಿಯವರು ಈಗ ಅಗಾಸ್ಸಿ ಸೆಂಟರ್ ಫಾರ್ ಎಜುಕೇಷನ್ ಎಂದು ಕರೆಯಲ್ಪಡುವ ಆರು ತರಗತಿಯ ಕೊಠಡಿಯ ಕಟ್ಟಡಕ್ಕಾಗಿ ಚೈಲ್ಡ್ ಹೆವೆನ್ ಗೆ ನಿಧಿಯನ್ನು ದಾನವಾಗಿ ಕೊಟ್ಟಿದ್ದಾರೆ. ಅವರ ಪ್ರತಿಷ್ಠಾನವು ವೈದ್ಯಕೀಯವಾಗಿ ಬಲಹೀನ ಮಕ್ಕಳಿಗೆ ಆಂಡ್ರೆ ಅಗಾಸ್ಸಿ ಕಾಟೇಜ್ ನ ಕಟ್ಟುವಲ್ಲಿ ಸಹಾಯಕ್ಕಾಗಿ 720,000 ಡಾಲರುಗಳನ್ನು ಸಹ ಒದಗಿಸಿದ್ದಾರೆ. ಸಾಂಕ್ರಾಮಿಕ ರೋಗಗಳಿಗಾಗಿ ನಿಷೇಧಿಸಲ್ಪಟ್ಟ ಮಕ್ಕಳು ಮತ್ತು ನಿಧಾನ ಮಾನಸಿಕ ಪ್ರಗತಿ ಅಥವಾ ವಿಕಲಾಂಗ ಮಕ್ಕಳಿಗೆ ಆಶ್ರಯ ಕೊಟ್ಟಿರುವ ಈ ಅನುಕೂಲತೆಯು ಡಿಸೆಂಬರ್ 2001 ರಂದು ಪ್ರಾರಂಭಿಸಲ್ಪಟ್ಟಿತು. ತಮ್ಮ ಹೊಸ ಪರಿಸರದಲ್ಲಿ ಹಿತಕರವಾದ ಭಾವನೆಯನ್ನು ಅವರಲ್ಲಿ ಉಂಟುಮಾಡಲು ಅವಶ್ಯವಾದ ವಿಶೇಷ ಗಮನ ಮತ್ತು ಅಸಾಧಾರಣ ಅಗತ್ಯತೆಗಳನ್ನು ಅದು ಮಕ್ಕಳಿಗೆ ಒದಗಿಸುತ್ತದೆ ಹಾಗೂ ಸುಮಾರು 20 ಹಾಸಿಗೆಗಳನ್ನು ಹೊಂದಿದೆ." [ಸೂಕ್ತ ಉಲ್ಲೇಖನ ಬೇಕು] 2007 ರಲ್ಲಿ, ಅಗಾಸ್ಸಿ, ಮೊಹಮ್ಮದ್ ಅಲಿ, ಲ್ಯಾನ್ಸ್ ಆರ್ಮ್ ಸ್ಟ್ರಾಂಗ್, ವಾರ್ವಿಕ್ ಡುನ್, ಜೆಫ್ ಗಾರ್ಡಾನ್, ಮಿಯಾ ಹಮ್ಮ್, ಟೊನಿ ಹ್ವಾಕ್, ಆಂಡ್ರಿಯಾ ಜಾಗೆರ್, ಜಾಕಿ ಜೋಯ್ನರ್-ಕೆರ್ಸೀ, ಮಾರಿಯೊ ಲೆಮಿಯುಕ್ಸ್, ಅಲೋಂಜೊ ಮೌರ್ನಿಂಗ್, ಮತ್ತು ಕಾಲ್ ರಿಪ್ಕೆನ್, ಜ್ಯೂ. ಸೇರಿ ಚಾರಿಟಿ ಅಥ್ಲೀಟ್ಸ್ ಫಾರ್ ಹೋಪ್ ಸ್ಥಾಪಿಸಿದ್ದಾರೆ,[೫೭] ಇದು ವೃತ್ತಿಪರ ಆಟಗಾರರು ದಾನಶೀಲತೆಯ ಕೆಲಸಗಳಲ್ಲಿ ತೊಡಗುವಂತೆ ಸಹಾಯ ಮಾಡುತ್ತದೆ ಮತ್ತು ಲಕ್ಷಾಂತರ ಆಟಗಾರರಲ್ಲದವರೂ ಸ್ವಯಂಸೇವೆ ಮಾಡಲು ಮತ್ತು ಸಮಾಜವನ್ನು ಪ್ರೋತ್ಸಾಹಿಸಲು ಪ್ರೇರೇಪಿಸುತ್ತದೆ.

ಮನ್ನಣೆ

[ಬದಲಾಯಿಸಿ]

1965 ರಿಂದ 2005 ರ ಸಂಪೂರ್ಣ ಅವಧಿಯಲ್ಲಿ 12 ನೇ ಅತ್ಯಂತ ಶ್ರೇಷ್ಠ ಆಟಗಾರ ಮತ್ತು - 7 ನೇ ಅತ್ಯಂತ ಮಹಾನ್ ಪುರುಷ ಆಟಗಾರ ನೆಂದು ಟೆನ್ನಿಸ್ ಸಂಚಿಕೆ ಅವರನ್ನು ಹೆಸರಿಸಿದೆ.[]

ದಾಖಲೆಗಳು

[ಬದಲಾಯಿಸಿ]
  • ಟೆನ್ನಿಸ್ ನ ಓಪನ್ ಎರಾ ದಲ್ಲಿ ಈ ದಾಖಲೆಗಳು ಸಾಧಿಸಲ್ಪಟ್ಟವು.
ಗ್ರ್ಯಾಂಡ್ ಸ್ಲ್ಯಾಂಮ್ ವರ್ಷಗಳು ಸಾಧಿಸಿದ ದಾಖಲೆ ಜೊತೆಗಾರ ಆಟಗಾರ
ವಿಂಬಲ್ಡನ್
ಯುಎಸ್ ಓಪನ್
ಆಸ್ಟ್ರೇಲಿಯನ್ ಓಪನ್
ಒಲಂಪಿಕ್ಸ್
ಫ್ರೆಂಚ್ ಓಪನ್
1992
1994
1995
1996
1999
ವೃತ್ತಿಜೀವನದ ಗೋಲ್ಡನ್ ಸ್ಲ್ಯಾಂಮ್ ಒಬ್ಬರೇ ನಿಲ್ಲುತ್ತಾರೆ
ವಿಂಬಲ್ಡನ್
ಯುಎಸ್ ಓಪನ್
ಆಸ್ಟ್ರೇಲಿಯನ್ ಓಪನ್
ಫ್ರೆಂಚ್ ಓಪನ್
1992
1994
1995
1999
ವೃತ್ತಿಜೀವನದ ಗ್ರ್ಯಾಂಡ್ ಸ್ಲ್ಯಾಂಮ್ ರಾಡ್ ಲೇವರ್
ರೋಜರ್ ಫೆಡರರ್
ಆಸ್ಟ್ರೇಲಿಯನ್ ಓಪನ್ 1995–2003 ಎಲ್ಲಾ ಸೇರಿ 4 ಜಯಗಳು ರೋಜರ್ ಫೆಡರರ್
ಆಸ್ಟ್ರೇಲಿಯನ್ ಓಪನ್ 2000-04 26 ಪಂದ್ಯಗಳ ಸತತ ಜಯಗಳು ಒಬ್ಬರೇ ನಿಲ್ಲುತ್ತಾರೆ
ಆಸ್ಟ್ರೇಲಿಯನ್ ಓಪನ್ 2000-03 ನಾಲ್ಕು ವರ್ಷಗಳಲ್ಲಿ ಮೂರನೇ ಜಯ ರೋಜರ್ ಫೆಡರರ್
ಆಸ್ಟ್ರೇಲಿಯನ್ ಓಪನ್ 2000-01 2 ಬಾರಿ ಸತತ ಜಯಗಳು ಕೆನ್ ರೋಸ್ ವಾಲ್
ಗ್ವಿಲೆರ್ಮೊ ವಿಲಾಸ್
ಜಾನ್ ಕ್ರೀಕ್
ಮ್ಯಾಟ್ಸ್ ವಿಲ್ಯಾಂಡರ್
ಸ್ಟಿಫಾನ್ ಎಡ್ಬರ್ಗ್
ಐವಾನ್ ಲೆಂಡ್ಲ್
ಜಿಮ್ ಕೊರಿಯರ್
ರೋಜರ್ ಫೆಡರರ್

ಇತರ ದಾಖಲೆಗಳು: ATP ವರ್ಲ್ಡ್ ಟ್ಯೂರ್ ಮಾಸ್ಟರ್ಸ್ 1000 (ಹಿಂದಿನ ATP ಮಾಸ್ಟರ್ಸ್ ಸೀರೀಸ್) ಪ್ರಶಸ್ತಿಗಳು: 17 (ಕೇವಲ ನಡಾಲ್ ಗೆ ಎರಡನೆಯವರಾಗಿ: 18) ATP ಎಂಟ್ರಿ ರ್ಯಾಂಕಿಂಗ್ಸ್ ನಲ್ಲಿ ಅತ್ಯಂತ ವಯಸ್ಸಾದ ಅತ್ಯುತ್ತಮ ಶ್ರೇಣಿಯ ಪುರುಷ ಆಟಗಾರ: 33 ವರ್ಷ 4 ತಿಂಗಳು.

ವೃತ್ತಿ ಜೀವನದ ಅಂಕಿಅಂಶಗಳು

[ಬದಲಾಯಿಸಿ]

ಈ ಕೆಳಗಿನವುಗಳನ್ನೂ ನೋಡಬಹುದು

[ಬದಲಾಯಿಸಿ]

ಟೆಂಪ್ಲೇಟು:Portal

ಆಕರಗಳು

[ಬದಲಾಯಿಸಿ]
  1. ೧.೦ ೧.೧ "The Career of Andre Agassi". igotennis.com. 2009-03-15. Archived from the original on 2016-01-31. Retrieved 2009-06-17.
  2. ೨.೦ ೨.೧ ೨.೨ {0/{1}}"ಟೆನ್ನಿಸ್ ನ ಪ್ರೀತಿಯ ವಿಷಯ ಅಗಾಸ್ಸಿ ಜೊತೆ ಮುಕ್ತಾಯ ಗೊಂಡಿತು" CBC ಸ್ಪೋರ್ಟ್ಸ್. ಮರುಸ್ಥಾಪನೆ ಮೇ 13 , 2009 .
  3. "ಗ್ರ್ಯಾಂಡ್-ಸ್ಲ್ಯಾಂಮ್ಮಡ್". ದಿ ಡೈಲಿ ಟೆಲಿಗ್ರಾಫ್ . ಮರುಸ್ಥಾಪನೆ ಮೇ 13 , 2009 .
  4. ೪.೦ ೪.೧ ೪.೨ {0/{1}}"ಅಗಾಸ್ಸಿಗೆ ಆಟಗಾರರು ಗೌರವ ಸಲ್ಲಿಸಿದರು" BBC. ತೆಗೆದುಕೊಂಡಿದ್ದು ಮೇ 15, 2010.
  5. "ರೀಡ್ ನ ಹೊಡೆತಗಾರರು: ಪುರುಷರ ಸರ್ವ್ ನ ಹಿಂದಿರುಗಿಸುವಿಕೆ". ಯಾಹೂ! ಸ್ಪೋರ್ಟ್ಸ್. ಮರುಸ್ಥಾಪನೆ ಮೇ 13 , 2009 .
  6. "ಅಡ್ಜೆಕ್ಟಿವ್ಸ್ ಟ್ಯಾಂಗಲ್ಡ್ ಇನ್ ದಿ ನೆಟ್". ದಿ ನ್ಯೂಯಾರ್ಕ್ ಟೈಮ್ಸ್ . ಮರುಸ್ಥಾಪನೆ ಮೇ 13 , 2009 .
  7. "ಸಾಂಪ್ರಾಸ್ ಅಗಾಸ್ಸಿ ಈಗ ತಾನೇ ಹೋರಾಟವನ್ನು ಪ್ರಾರಂಭಿಸಿದ್ದಾರೆ" ಲಾಸ್ ಏಂಜಲ್ಸ್ ಟೈಮ್ಸ್ . ಮರುಸ್ಥಾಪನೆ ಮೇ 13 , 2009 .
  8. ಲಾಸ್ ಏಂಜಲ್ಸ್ ಟೈಮ್ಸ್ ವರದಿ
  9. ೯.೦ ೯.೧ "ಟೆನ್ನಿಸ್.ಕಾಂ: "ಟೆನ್ನಿಸ್ ಶಕೆಯ 40 ಅತ್ಯಂತ ಶ್ರೇಷ್ಠ ಆಟಗಾರರು "". Archived from the original on 2006-11-12. Retrieved 2010-06-22.
  10. "Tribute to a legend: Andre Agassi Charitable Foundation". ATP Tour, Inc. Retrieved 2007-02-15.
  11. "ಆರ್ಕೈವ್ ನಕಲು". Archived from the original on 2002-10-29. Retrieved 2010-06-22.
  12. "Homepage of". Andre Agassi Preparatory Academy. Retrieved 2007-02-15.
  13. "ದಿ ಇಂಡಿಪೆಂಡೆಂನ್ಟ್: "ಡೋಂನ್ಟ್ ವಾಕ್ ಅವೇ, ಆಂಡ್ರೆ"". Archived from the original on 2011-06-06. Retrieved 2010-06-22.
  14. "Andre Agassi Biography". Netglimpse.com. Retrieved 2007-08-14.
  15. https://books.google.com/books?id=5R1y1nvcWccC&pg=PA278&lpg=PA278&dq=andre+aghassi+Armenian+-wikipedia.org&source=bl&ots=MiSYlmHbHG&sig=wMd8xu9J8iOQyv_RuVwJvaJWiyc&hl=en&sa=X&oi=book_result&resnum=48&ct=result
  16. "ಆರ್ಕೈವ್ ನಕಲು". Archived from the original on 2006-01-30. Retrieved 2010-06-22.
  17. http://www.zindamagazine.com/html/archives/1995/zn082895.html
  18. "ಆರ್ಕೈವ್ ನಕಲು". Archived from the original on 2007-07-08. Retrieved 2010-06-22.
  19. ೧೯.೦೦ ೧೯.೦೧ ೧೯.೦೨ ೧೯.೦೩ ೧೯.೦೪ ೧೯.೦೫ ೧೯.೦೬ ೧೯.೦೭ ೧೯.೦೮ ೧೯.೦೯ ೧೯.೧೦ ೧೯.೧೧ ೧೯.೧೨ ೧೯.೧೩ ೧೯.೧೪ ೧೯.೧೫ Jensen, Jeffry (2002) [1992]. Dawson, Dawn P (ed.). Great Athletes. Vol. 1 (Revised ed.). Salem Press. pp. 17–19. ISBN 1-58765-008-8.
  20. "Coming Into Focus". Gary Smith for Sports Illustrated. Archived from the original on 2010-01-05. Retrieved 2007-02-15.
  21. "http://www.tennis28.com/rankings/history/agassi.html". Tennis28. Retrieved 2009-06-12. {{cite web}}: External link in |title= (help)
  22. ೨೨.೦ ೨೨.೧ http://sports.espn.go.com/sports/tennis/news/story?id=4600027
  23. "Agassi admits use of crystal meth". BBC News. October 28, 2009. Retrieved March 30, 2010.
  24. ೨೪.೦ ೨೪.೧ ೨೪.೨ ೨೪.೩ ೨೪.೪ ಆಂಡ್ರೆ ಅಗಾಸ್ಸಿ ಆಟಗಾರನ ವ್ಯಕ್ತಿಚಿತ್ರ
  25. ರೋಜರ್ ಫೆಡರರ್ 2005 ರಿಂದ 2007 ರ ವರೆಗೆ ಆಗಿನಿಂದ ಹತ್ತು ಅನುಕ್ರಮವಾದ ಗ್ರ್ಯಾಂಡ್ ಸ್ಲ್ಯಾಂಮ್ ಅಂತಿಮ ಪಂದ್ಯಗಳಲ್ಲಿ ಭಾಗವಹಿಸಿ, ಈ ಸಾಹಸ ಕಾರ್ಯವನ್ನು ಸರಿಸಮಗೊಳಿಸಿದ್ದಾರೆ.
  26. ಪೀಟ್ ಸಾಂಪ್ರಾಸ್ 1993 ರ ವಿಂಬಲ್ಡನ್, 1993 ರ ಯುಎಸ್ ಓಪನ್, ಮತ್ತು 1994 ರ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಗಳನ್ನು ಏಕಕಾಲವಾಗಿ ಪಡೆದಿದ್ದರು. ಆ ಕಾಲದಲ್ಲಿ ಎಲ್ಲಾ ಮೂರೂ ಗ್ರಾಸ್ ಕೋರ್ಟ್ ನಲ್ಲಿಯೇ ಆಡಿದ್ದರೂ, 1974 ರಲ್ಲಿ ಆ ಎಲ್ಲಾ ಮೂರೂ ಪಂದ್ಯಗಳನ್ನು ಜಿಮ್ಮಿ ಕಾನರ್ಸ್ ಗೆದ್ದಿದ್ದರು. 1988 ರಲ್ಲಿ ವಿಂಬಲ್ಡನ್ ಬಿಟ್ಟು ಮಾಟ್ಸ್ ವಿಲಾಂಡರ್ ತನ್ನ ಸಮಾನರೂಪದ ವರ್ಷಾಂತ್ಯದ ಅತ್ಯುತ್ತಮ ವಿಶ್ವದ ಒಂದನೇ ಶ್ರೇಯಾಂಕಕ್ಕೆ ಏರುವಾಗ ಗೆದ್ದಿದ್ದರು. 2006 ರಿಂದ 2007 ರ ಉದ್ದಕ್ಕೂ ಅಲ್ಲದೆ 2004 ರ ಕೊನೆಯಲ್ಲಿ ಫ್ರೆಂಚ್ ಓಪನ್ ಹೊರತುಪಡಿಸಿ ಎಲ್ಲಾ ಗ್ರ್ಯಾಂಡ್ ಸ್ಲ್ಯಾಂಮ್ ಪ್ರಶಸ್ತಿಗಳನ್ನು ಗೆದ್ದು ಅಂದಿನಿಂದ ಫೆಡರರ್ ಈ ಅದ್ಭುತ ಕಾರ್ಯವನ್ನು ಸರಿಸಮಗೊಳಿಸಿದ್ದಾರೆ. ರಾಫೆಲ್ ನಡಾಲ್ 2008 ಫ್ರೆಂಚ್ ಓಪನ್, 2008 ರ ವಿಂಬಲ್ಡನ್, ಹಾಗೂ 2009 ರ ಆಸ್ಟ್ರೇಲಿಯನ್ ಓಪನ್ ನಲ್ಲಿ ಜಯಗಳಿಸಿದ್ದಾರೆ.
  27. "Classic Matches: Rafter v Agassi". BBC Sport. 2004-05-31. Retrieved 2007-10-25.
  28. "ಉತ್ತೇಜಿಸುವುದನ್ನು ನಂಬು". Archived from the original on 2011-06-04. Retrieved 2010-06-22.
  29. "ಮುರಿಯಲಾಗದಂತಹ". Archived from the original on 2011-02-17. Retrieved 2010-06-22.
  30. "ಆರ್ಕೈವ್ ನಕಲು". Archived from the original on 2007-12-24. Retrieved 2010-06-22.
  31. ವಾರಗಳು ಒಂದನೇ ಶ್ರೇಯಾಂಕದಲ್ಲಿ
  32. ESPN - ನೈಕ್-ಟೆನ್ನಿಸ್ ಜೊತೆಗಿದ್ದ ದೀರ್ಘಕಾಲದ ವ್ಯವಹಾರದ ನಂತರ ಅಗಾಸ್ಸಿ ಅಡಿಡಾಸ್ ಜೊತೆ ವ್ಯವಹಾರದ ಸಹಿ ಹಾಕುತ್ತಾರೆ
  33. "Upsetting day: Agassi, then Roddick ousted". Associated Press. NBC Sports. 2006-06-01. Retrieved 2007-10-27.
  34. WTT ಅನ್ನು ಆಂಡ್ರೆ ಅಗಾಸ್ಸಿ ಆಡುತ್ತಾರೆ Archived 2009-03-04 ವೇಬ್ಯಾಕ್ ಮೆಷಿನ್ ನಲ್ಲಿ. ಸೈ.ಕಾಂ, ಮಾರ್ಚ್ 1, 2009
  35. "ಆರ್ಕೈವ್ ನಕಲು". Archived from the original on 2009-10-15. Retrieved 2021-08-24.
  36. [೧]
  37. ಓಪನ್: ಆಂಡ್ರೆ ಅಗಾಸ್ಸಿ ಹಾರ್ಪರ್ ಕಾಲಿನ್ಸ್ 2009
  38. ಆಂಡ್ರೆ ಅಗಾಸ್ಸಿ ಹಾಗೂ ಸ್ಟೆಫಿ ಗ್ರಾಫ್ ವಿವಾಹ
  39. "ತಂದೆಯವರಿಗೆ ಚೆನ್ನಾಗಿ ಗೊತ್ತು". Archived from the original on 2011-02-17. Retrieved 2010-06-22.
  40. ಪೀಟರ್ ಬೊಡೊ ರ ಬ್ಲಾಗ್: ಪಪಾ ಗಿಲ್
  41. Alliance Sports Management v. Stephanie Graf Las Vegas Sun . Accessed 23 October 2009
  42. "Ex-manager for Agassi sues Graf" Las Vegas Review-Journal 7 December 2008. Accessed 23 October 2009
  43. "ಅಗಾಸ್ಸಿ ಬಾಸ್ಕ್ ಇನ್ ಹಿಸ್ ಓನ್ ಸ್ಪಾಟ್ ಲೈಟ್" ಜಾನೆಟ್ ಮಲಿನ್ ರಿಂದ ದಿ ನ್ಯೂಯಾರ್ಕ್ ಟೈಮ್ಸ್ ನವೆಂಬರ್ 8, 2009 11 ಡಿಸೆಂಬರ್ 2009 ರಂದು ನೋಡಲಾಗಿದೆ.
  44. http://www.nydailynews.com/sports/more_sports/2009/10/27/2009-10-27_agassi.html
  45. http://www.nbcwashington.com/news/sports/NATL-Andre-Agassi-Admits-to-Using-Crystal-Meth-66510482.html
  46. [೨]
  47. http://sport.repubblica.it/news/sport/tennis-doping-bubka-agassi-dovrebbe-essere-punito/3730891
  48. "ಆರ್ಕೈವ್ ನಕಲು". Archived from the original on 2013-07-28. Retrieved 2010-06-22.
  49. "ಆರ್ಕೈವ್ ನಕಲು". Archived from the original on 2010-01-17. Retrieved 2021-08-24.
  50. Jeffries, Stuart (2009-10-29). "Why did Andre Agassi hate tennis?". London: guardian.co.uk. Retrieved 2010-01-25.
  51. "Hardcover Nonfiction". The New York Times. November 29, 2009. Retrieved March 30, 2010.
  52. http://latimesblogs.latimes.com/jacketcopy/2009/11/book-reviews-agassi-mayle-mourlevat-palin.html
  53. "ಹಾಲಿವುಡ್, ಪ್ರಖ್ಯಾತ ಆಟಗಾರರು ಅದೇ ದೇಣಿಗೆಯ ಪುಟದಲ್ಲಿಲ್ಲ". Archived from the original on 2010-08-22. Retrieved 2010-06-22.
  54. ಆಂಡ್ರೆ ಅಗಾಸ್ಸಿಯ ಸ್ವತಂತ್ರವಾದ ರಾಜ್ಯಗಳ ಒಕ್ಕೂಟ ಕಾರ್ಯಾಚರಣೆಯ ಸಹಾಯಧನದ ವರದಿ
  55. ಆಟಗಾರ/ವರ್ಷದ ವ್ಯಕ್ತಿ
  56. [೩]
  57. [೪]


ಹೆಚ್ಚಿನ ಓದಿಗಾಗಿ

[ಬದಲಾಯಿಸಿ]
  • Agassi, Mike; Cobello, Dominic; Welsh, Kate (2004). The Agassi Story. Toronto: ECW Press. ISBN 1-55022-656-8.{{cite book}}: CS1 maint: multiple names: authors list (link)
  • ಓಪನ್ ಆಂಡ್ರೆ ಅಗಾಸ್ಸಿ ಹಾರ್ಪರ್ ಕೊಲಿನ್ಸ್ 2009

ವಿಡಿಯೊ

[ಬದಲಾಯಿಸಿ]
  • ವಿಂಬಲ್ಡನ್ 2000 ರ ಉಪಾಂತ್ಯ - ಅಗಾಸ್ಸಿ ವಿರುದ್ಧ ರಾಫ್ಟರ್ (2003) ಆಟಗಾರರು: ಆಂಡ್ರೆ ಅಗಾಸ್ಸಿ, ಪ್ಯಾಟ್ರಿಕ್ ರಾಫ್ಟರ್; ಸ್ಟಾಂಡಿಂಗ್ ರೂಮ್ ಓನ್ಲಿ, ಡಿವಿಡಿ ಬಿಡುಗಡೆಯಾದ ದಿನಾಂಕ: ಆಗಸ್ಟ್ 16, 2005, ಆಡಿದ ಕಾಲ 213 ನಿಮಿಷಗಳು, ASIN: B000A343QY.
  • ಆಂಡ್ರೆ ಅಗಾಸ್ಸಿ ಜೊತೆ ಚಾರ್ಲಿ ರೋಸ್ (ಮೇ 7, 2001) ಚಾರ್ಲಿ ರೋಸ್, ಇಂಕ್., ಡಿವಿಡಿ ಬಿಡುಗಡೆಯ ದಿನಾಂಕ: ಆಗಸ್ಟ್ 15, 2006, ಆಟದ ಕಾಲ: 57 ನಿಮಿಷ, ASIN: B000HBL6VO
  • ವಿಂಬಲ್ಡನ್ ರೆಕಾರ್ಡ್ ಬ್ರೇಕರ್ಸ್ (2005) ಆಟಗಾರರು: ಆಂಡ್ರೆ ಅಗಾಸ್ಸಿ, ಬೋರಿಸ್ ಬೆಕರ್; ಸ್ಟಾಂಡಿಗ್ ರೂಮ್ ಓನ್ಲಿ, ಡಿವಿಡಿ ಬಿಡುಗಡೆಯಾದ ದಿನಾಂಕ: ಆಗಸ್ಟ್ 16, 2005, ಆಟದ ಕಾಲ: 52 ನಿಮಿಷ, ASIN: B000A3XYYQ.

ವಿಡಿಯೋ ಆಟ

[ಬದಲಾಯಿಸಿ]