ವಿಷಯಕ್ಕೆ ಹೋಗು
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.

ಡಾಸ್‌ (DOS)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
FreeDOS ಆರಂಭ ಕ್ರಮ.

DOS ಎಂಬುದು ಬಿಲ್ಲೆ (ಡಿಸ್ಕ್‌)‌ ಕಾರ್ಯಾಚರಣಾ ವಿಧಾನದ(ಡಿಸ್ಕ್‌ ಆಪರೇಟಿಂಗ್‌ ಸಿಸ್ಟಮ್‌ನ) ಸಂಕ್ಷಿಪ್ತರೂಪವಾಗಿದೆ.[] ಇಸವಿ 1981ರಿಂದ 1995ರ ತನಕ [[IBM PC (ಐಬಿಎಂ ಪಿಸಿ) ಹೊಂದಾಣಿಕೆಯುಳ್ಳ ಕಂಪ್ಯೂಟರ್‌ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಮೆರೆದ, ಹಲವು ನಿಕಟ ಸಂಬಂಧಿತ ಕಾರ್ಯಾಚರಣಾ ವ್ಯವಸ್ಥೆಗಳ ಸಂಕ್ಷಿಪ್ತ ಉಕ್ತಿಯಾಗಿದೆ. ]] ಸ್ವಲ್ಪ ಮಟ್ಟಿಗೆ DOS-ಆಧಾರಿತ ಮೈಕ್ರೊಸಾಫ್ಟ್‌ ವಿಂಡೋಸ್‌ನ 95, 98 ಹಾಗೂ ಮಿಲೆನಿಯಮ್‌ ಎಡಿಷನ್‌ನ್ನೂ ಪರಿಗಣಿಸಿದಲ್ಲಿ, DOS ಯುಗವು 2000ದ ತನಕ ಇತ್ತು ಎನ್ನಬಹುದು. ಇದಕ್ಕೆ ಸಂಬಂಧಿತ ಕಾರ್ಯಾಚರಣಾ ವಿಧಾನಗಳಲ್ಲಿ MS-DOS, PC DOS, DR-DOS, FreeDOS, PTS-DOS, ROM-DOS, JM-OS ಮತ್ತು ಹಲವು ಇತರೆ ಕಾರ್ಯಾಚರಣಾ ವ್ಯವಸ್ಥೆಗಳು ಸೇರಿವೆ. ಸಾಮಾನ್ಯ ಬಳಕೆಯಲ್ಲಿದ್ದರೂ, ಈ ಕಾರ್ಯಾಚರಣಾ ವ್ಯವಸ್ಥೆಗಳಲ್ಲಿ ಯಾವನ್ನೂ ಸರಳವಾಗಿ DOS ಎನ್ನುತ್ತಿರಲಿಲ್ಲ. 1960ರ ದಶಕದಲ್ಲಿ ಈ ಹೆಸರನ್ನು ಕೇವಲ ಸಂಬಂಧವಿಲ್ಲದ IBM ಮೇಯ್ನ್‌ಫ್ರೇಮ್‌ ಕಾರ್ಯಾಚರಣಾ ಪದ್ದತಿಗೆ ನೀಡಲಾಗಿತ್ತು. ಸಂಬಂಧವಿಲ್ಲದ ಹಲವು x86-ಇನ್ನಿತರ ಮೈಕ್ರೊಕಂಪ್ಯೂಟರ್‌ ಡಿಸ್ಕ್‌ ಕಾರ್ಯಾಚರಣಾ ವ್ಯವಸ್ಥೆಗಳು ತಮ್ಮ ಹೆಸರಿನಲ್ಲಿ DOS ಹೊಂದಿದ್ದವು. ಅವುಗಳನ್ನು ಬಳಸುವ ಕಂಪ್ಯೂಟರ್‌ಗಳ ಕುರಿತು ಚರ್ಚೆ ನಡೆಸುವಾಗ ಇವುಗಳನ್ನು ಸುಮ್ಮನೆ DOS ಎಂದು ಉಲ್ಲೇಖಿಸಲಾಗುತ್ತದೆ. (ಉದಾಹರಣೆಗೆ AmigaDOS, AMSDOS, ANDOS, ಆಪಲ್‌ DOS, ಅಟಾರಿ DOS, ಕೊಮೊಡೊರ್‌ DOS, CSI-DOS, ProDOS, and TRS-DOS). ತಮ್ಮ-ತಮ್ಮ ಕಂಪ್ಯೂಟರ್‌ ಕಾರ್ಯಾಚರಣೆಗಳಿಗಾಗಿ ಅದೇ ರೀತಿಯ ಕಾರ್ಯಾಚರಣಾ ವ್ಯವಸ್ಥೆಯ ಕ್ರಿಯೆಗಳನ್ನು ಒದಗಿಸುವಾಗ, ಈ ಕಾರ್ಯಾಚರಣಾ ವಿಧಾನಗಳ ಪೈಕಿ ಒಂದರಲ್ಲಿ ನಡೆಯುವ ತಂತ್ರಾಂಶವು ಇತರೆ ಕಾರ್ಯಾಚರಣಾ ಪದ್ದತಿಗಳಲ್ಲಿ ನಡೆಯಲಾರದು.

ವಿನ್ಯಾಸ

[ಬದಲಾಯಿಸಿ]

ಎಲ್ಲಾ DOS-ತರಹದ ಕಾರ್ಯಾಚರಣಾ ವ್ಯವಸ್ಥೆಗಳು ಇಂಟೆಲ್‌ x86 ಅಥವಾ ಹೊಂದಾಣಿಕೆಯಾಗಬಲ್ಲ CPUಗಳು (CPU = ಕೇಂದ್ರೀಯ ಸಂಸ್ಕರಣಾ ಘಟಕ), ಮುಖ್ಯವಾಗಿ IBM PC ಹಾಗೂ ಹೊಂದಾಣಿಕೆಯಾಗಬಲ್ಲ ಅಂಶ‌ಗಳುಳ್ಳ ಕಂಪ್ಯೂಟರ್‌ಗಳಲ್ಲಿ ನಡೆಯುತ್ತವೆ. ಆರಂಭದಲ್ಲಿ DOS ಮೇಲೆ ತಿಳಿಸಲಾದ ಕಂಪ್ಯೂಟರ್‌ಗಳಿಗೆ ನಿರ್ಬಂಧಿತವಾಗಿರಲಿಲ್ಲ. ಹಲವು IBM-ಸಾಮರಸ್ಯದ, x86-ಆಧಾರಿತ ಕಂಪ್ಯೂಟರ್‌ಗಳಿಗಾಗಿ DOSನ ಹಲವು ಕಂಪ್ಯೂಟರ್‌-ಅವಲಂಬಿತ ಆವೃತ್ತಿಗಳು ಹಾಗೂ ಇದೇ ರೀತಿಯ ಕಾರ್ಯಾಚರಣಾ ವ್ಯವಸ್ಥೆಗಳನ್ನು ಸಿದ್ಧಪಡಿಸಲಾಯಿತು.[] ಇದರಲ್ಲಿ ನಿರ್ಧಿಷ್ಟವಾಗಿ, DOS-C ನ ಹಿಂದಿನ ಆವೃತ್ತಿ DOS/NT ಮೊಟೊರೊಲಾ 68000 CPUಗಳಲ್ಲಿ ಕಾರ್ಯಾಚರಣೆಗಳು ನಡೆಯುತ್ತಿದ್ದವು. DOS ಏಕೈಕ-ಬಳಕೆದಾರರ, ಒಂದು-ಕ್ರಿಯೆಯ (uni-tasking) ಕಾರ್ಯಾಚರಣಾ ವ್ಯವಸ್ಥೆಯಾಗಿದೆ. ಇದು ಮರುಪ್ರವೇಶವಿಲ್ಲದ ಮೂಲಭೂತ ಕರ್ನೆಲ್ (ಸತ್ವಭಾಗ)‌ ಕ್ರಿಯೆಗಳನ್ನು ಹೊಂದಿದೆ. ಒಂದು ಹೊತ್ತಿಗೆ ಕೇವಲ ಒಂದೇ ಪ್ರೊಗ್ರಾಮ್‌ (ಸಂಕೇತಗಳಲ್ಲಿ ನೀಡಲಾದ ಆದೇಶ ಸರಣಿ) ಈ ಕ್ರಿಯೆಗಳನ್ನು ಬಳಸಬಹುದಾಗಿದೆ. ಆದರೆ ಟರ್ಮಿನೇಟ್‌ ಅಂಡ್‌ ಸ್ಟೇ ರೆಸಿಡೆಂಟ್‌ (TSR) ಪ್ರೊಗ್ರಾಮ್‌ಗಳು ಇದಕ್ಕೆ ಅಪವಾದ (TSR = ಕರ್ನೆಲ್‌ ಸೇವೆಯನ್ನು ಕೋರಿ, ಬಳಸಿ, ನಿಯಂತ್ರಣಾ ಸಮನ್ವಯ ನಡೆಸುವ ಪ್ರೊಗ್ರಾಮ್‌). ಕೆಲವು TSRಗಳು ಒಂದೇ ಹೊತ್ತಿಗೆ ಹಲವು ಕ್ರಿಯೆಗಳಿಗೆ ಅವಕಾಶ ನೀಡಬಹುದು. ಆದರೂ, ಮರುಪ್ರವೇಶವಿಲ್ಲದ ಕರ್ನಲ್‌ನೊಂದಿಗೆ(ಒಳ ತಿರುಳು) ಒಂದು ಸಮಸ್ಯೆ ಉಂಟು. ಕಾರ್ಯಾಚರಣಾ ವ್ಯವಸ್ಥೆಯ ಕರ್ನಲ್‌ ಒಳಗಿನ ಸೇವೆಯೊಂದನ್ನು ಸಂಸ್ಕರಣೆಯು ಬಯಸಿದರೆ (ಸಿಸ್ಟಮ್‌ ಕಾಲ್),(ಆ ವಿಧಾನದ ಸೂಚನೆ) ಈ ಮೊದಲ ಸಂಸ್ಕರಣೆಯ ಕರೆಯು ಸಂಪೂರ್ಣಗೊಳ್ಳುವ ತನಕ ಅದಕ್ಕೆ ಇತರೆ ಸಂಸ್ಕರಣಾ ಕರೆಯು ಅಡ್ಡಿ ಮಾಡಬಾರದು.[] DOS ಕರ್ನಲ್‌ ಪ್ರೊಗ್ರಾಮ್‌ಗಳಿಗಾಗಿ ಹಲವು ವಿವಿಧ ಕ್ರಿಯೆಗಳನ್ನು ಒದಗಿಸುತ್ತದೆ - ಉದಾಹರಣೆಗೆ, ಪರದೆಯ ಮೇಲೆ ಅಕ್ಷರಗಳನ್ನು ಮೂಡಿಸುವುದು, ಕೀಲಿಮಣೆಯಲ್ಲಿ ಒತ್ತಲಾದ ಅಕ್ಷರವೊಂದನ್ನು ಓದುವುದು, ಡಿಸ್ಕ್‌ ಕಡತಗಳನ್ನು ಪಡೆಯುವುದು ಇತ್ಯಾದಿ.

API (ಅಪ್ಲಿಕೇಶನ ಪ್ರೊಗ್ರಾಮಿಂಗ್ ಇಂಟರ್ ಫೇಸ್ )

[ಬದಲಾಯಿಸಿ]

ಸ್ಕ್ರಿಪ್ಟಿಂಗ್‌ (ಸರಳ ಆದೇಶ ಸಮೂಹ ಬರಹದ ರಚನೆ)

[ಬದಲಾಯಿಸಿ]

DOS ತನ್ನ ಯಥಾಸ್ಥಿತಿಯಲ್ಲಿ ಬ್ಯಾಚ್‌ (ಸಮೂಹ)ಕಡತಗಳ ಮೂಲಕ (. BAT ಕಡತನಾಮ ವಿಸ್ತರಣೆಯೊಂದಿಗೆ) ಷೆಲ್‌ ಸ್ಕ್ರಿಪ್ಟಿಂಗ್‌ಗಾಗಿ ಅತಿಸರಳ ಕ್ಷಮತೆಯನ್ನು ಒದಗಿಸುತ್ತದೆ. (BAT ).(ಸಂಕ್ಷಿಪ್ತ ಗೋಚರ) ಈ ಪಠ್ಯ ಕಡತಗಳನ್ನು MS-DOS ಎಡಿಟರ್‌ ಹಾಗೂ ಯಾವುದೇ DOS ಟೆಕ್ಸ್ಟ್‌ ಎಡಿಟರ್‌ (ಪಠ್ಯ ಪರಿಷ್ಕರಣ) ಬಳಸಿ ರಚಿಸಬಹುದಾಗಿದೆ. ಈ ಬ್ಯಾಚ್‌ (ಸರಳ ಆದೇಶ ಸಮೂಹ) ಕಡತಗಳನ್ನು ಸಂಯೋಜಿಸಿ ಪರಿಶೀಲಿಸಲಾದ ಪ್ರೊಗ್ರಾಮ್‌ಗಳಂತೆ ನಡೆಸಬಹುದಾಗಿದೆ. ಬ್ಯಾಚ್‌ ಕಡತದ ಪ್ರತಿಯೊಂದು ಸಾಲನ್ನೂ ಇದು ಒಂದೊಂದು ಆದೇಶದಂತೆ ನಡೆಸುತ್ತದೆ. ಬ್ಯಾಚ್‌ ಕಡತಗಳು ಹಲವು ಆಂತರಿಕ ಕಮ್ಯಾಂಡ್‌ಗಳನ್ನು (ಅದೇಶ) ಬಳಸಬಹುದು - ಉದಾಹರಣೆಗೆ goto(ಅಸ್ತಿತ್ವದಲ್ಲಿರುವ) ಹಾಗೂ ಸಂಭಾವನಾಸೂಚಕ ಆದೇಶಸಾಲುಗಳು (conditional statements).(ಷರತ್ತಿನ ಹೇಳಿಕೆಗಳು) gosub ಹಾಗೂ ಸರಳ ಅಂಕಗಣಿತದ ಆದೇಶಸರಣಿಗಳಿಗೆ ಕೆಲವು ತೃತೀಯಪಕ್ಷದ ಷೆಲ್‌ಗಳಲ್ಲಿ ಬೆಂಬಲವುಂಟು. ಆದರೆ ಕೆಲವು ವಿಚಿತ್ರ ವಿಧಾನಗಳ ಮೂಲಕವೂ ತಿರುಚಬಹುದು. ಆದರಿಲ್ಲಿ, ಪ್ರೊಗ್ರಾಮ್‌ನ ಯಾವುದೇ ನೈಜ ರೂಪಗಳನ್ನು ಸಾಮಾನ್ಯವಾಗಿ ಸಕ್ರಿಯಗೊಳಿಸಿಲ್ಲ. ಈ ಕಾರ್ಯಾಚರಣಾ ವ್ಯವಸ್ಥೆಯು ಯಂತ್ರಾಂಶ ಅಪಕರ್ಷಣ ಪದರ (hardware abstraction layer) ನ್ನು ಒದಗಿಸುತ್ತದೆ. ಈ ಪದರವು ಅಕ್ಷರ-ಆಧಾರಿತ ಆನ್ವಯಿಕೆಗಳ ಅಭಿವೃದ್ಧಿಗೆ ಅವಕಾಶ ನೀಡುತ್ತದೆ, ಆದರೆ, ಗ್ರ್ಯಾಫಿಕ್ಸ್ ‌(ಚಿತ್ರಕ) ಕಾರ್ಡ್‌ಗಳು, ಮುದ್ರಕಗಳು ಅಥವಾ ಮೌಸ್‌ಗಳು ಸೇರಿದಂತೆ ಬಹಳಷ್ಟು ಯಂತ್ರಾಂಶಗಳತ್ತ ಪ್ರವೇಶಾನುಮತಿ ನೀಡುವುದಿಲ್ಲ. ಇದಕ್ಕಾಗಿ, ಪ್ರೊಗ್ರಾಮರ್‌ಗಳಿಗೆ ಯಂತ್ರಾಂಶದತ್ತ ನೇರ ಪ್ರವೇಶಾನುಮತಿಯ ಅಗತ್ಯವಿತ್ತು. ಇದರ ಫಲವಾಗಿ, ಪ್ರತಿಯೊಂದು ಆನ್ಯಯಿಕೆಯೂ ಪ್ರತಿಯೊಂದು ಯಂತ್ರಾಂಶ ಬಾಹ್ಯಾಂಶಕ್ಕೂ (peripheral) ತನ್ನದೇ ಆದ ಸಾಧನ ಚಾಲಕಗಳ (device drivers) ಸಮೂಹ ಹೊಂದುವಂತಾಯಿತು. ಜನಪ್ರಿಯ ಆನ್ವಯಿಕೆಗಳಿಗಾಗಿ ಸಾಧನ ಚಾಲಕಗಳು ಲಭ್ಯವಿರುವಂತೆ ನೋಡಿಕೊಳ್ಳಲು, ಯಂತ್ರಾಂಶ ತಯಾರಕರು ತಮ್ಮ ಆನ್ವಯಿಕೆಗಳ ನಿರ್ದಿಷ್ಟ ವಿವರಣೆಗಳನ್ನು ಸ್ಪಷ್ಟವಾಗಿ ನಮೂದಿಸುವರು.[]

ಕಾಯ್ದಿರಿಸಿದ ವಿಧಾನದ ಹೆಸರುಗಳು

[ಬದಲಾಯಿಸಿ]

DOSನಲ್ಲಿ ಕೆಲವು ಕಾಯ್ದಿರಿಸಿದ ವಿಧಾನದ ಹೆಸರುಗಳಿವೆ. ಕಡತನಾಮ-ವಿಸ್ತರಣೆಯು ಎಂತಹದ್ದೇ ಇರಲಿ, ಈ ಮೀಸಲಿಟ್ಟ ಹೆಸರುಗಳನ್ನು ಕಡತನಾಮಗಳಿಗೆ ಬಳಸಲಾಗದು. ಆನ್ವಯಿಕೆಗಳ ಮಾಹಿತಿ-ಫಲಿತಾಂಶಗಳನ್ನು ಯಂತ್ರಾಂಶ-ಬಾಹ್ಯಾಂಶಗಳಿಗೆ ರವಾನಿಸಲು ಈ ಮೀಸಲಿಟ್ಟ ಕಡತಗಳನ್ನು ಬಳಸಲಾಗುತ್ತದೆ. ಈ ನಿರ್ಬಂಧಗಳು ವಿಂಡೋಸ್‌ ಕಾರ್ಯಾಚರಣಾ ವ್ಯವಸ್ಥೆಯ ಹಲವು ಆವೃತ್ತಿಗಳ ಮೇಲೆ ಪ್ರಭಾವ ಬೀರುತ್ತವೆ. ಕೆಲವೊಮ್ಮೆ ಹಠಾತ್‌ ವೈಫಲ್ಯ ಹಾಗೂ ಭದ್ರತಾ ನ್ಯೂನತೆಗಳೂ ಸಂಭವಿಸಬಹುದು.[] ಮೀಸಲು ಕಡತನಾಮಗಳಲ್ಲಿ ಕೆಲವನ್ನು ಇಲ್ಲಿ ತಿಳಿಸಲಾಗಿದೆ: NUL:, COM1: or AUX:, COM2:, COM3:, COM4:, CON:, LPT1: or PRN:, LPT2:, LPT3: ಹಾಗೂ CLOCK$.[]

ಡ್ರೈವ್‌ಗಳನ್ನು(ಚಾಲನಾ ಪದ್ದತಿಗಳ) ಹೆಸರಿಸುವ ವಿಧಾನ‌

[ಬದಲಾಯಿಸಿ]

DOSನಲ್ಲಿ, ಡ್ರೈವ್‌ಗಳನ್ನು ಇಂಗ್ಲಿಷ್‌ ವರ್ಣಮಾಲೆ ಮೂಲಕ ಉಲ್ಲೇಖಿಸಲಾಗುತ್ತದೆ. ‌'A' ಹಾಗೂ 'B' ಅಕ್ಷರಗಳನ್ನು ಫ್ಲಾಪಿ ಡಿಸ್ಕ್‌ ಡ್ರೈವ್‌ಗಳಿಗಾಗಿ ಮೀಸಲಿಡುವುದು ರೂಢಿಯಾಗಿದೆ. ಕೇವಲ ಒಂದೇ ಫ್ಲಾಪಿ ಡ್ರೈವ್‌ ಹೊಂದಿರುವ ಕಂಪ್ಯೂಟರ್‌ಗಳಲ್ಲಿ DOS ಎರಡೂ ಅಕ್ಷರಗಳನ್ನು ಒಂದೇ ಡ್ರೈವ್‌ಗೆ ಸ್ಸಂಕೇತಿಸುತ್ತವೆ. ಪ್ರೊಗ್ರಾಮ್‌ಗಳು ಎರಡೂ ಫ್ಲಾಪಿಗಳ ನಡುವೆ ಪರ್ಯಾಯವಾಗುವ ಕ್ಷಣದಲ್ಲಿ, ಫ್ಲಾಪಿಯನ್ನು ಬದಲಾಯಿಸುವಂತೆ ಬಳಕೆದಾರರಿಗೆ ಸೂಚಿಸುತ್ತದೆ. ಫ್ಲಾಪಿಯಿಂದ ಫ್ಲಾಪಿಗೆ ಮಾಹಿತಿಯನ್ನು ನಕಲು ಮಾಡಲು, ಅಥವಾ, ಪ್ರೊಗ್ರಾಮ್ ಒಂದು ಫ್ಲಾಪಿಯಿಂದ ನಡೆಸಿ, ಇನ್ನೊಂದು ಫ್ಲಾಪಿಯಿಂದ ಸಂಬಂಧಿತ ದತ್ತಾಂಶವನ್ನು ಪಡೆಯಲು ಈ ವ್ಯವಸ್ಥೆಯು ಬಹಳ ಉಪಯುಕ್ತವಾಗಿದೆ. ಸ್ಥಿರ ಡ್ರೈವ್‌ಗಳು (ಧೃಢ ಡ್ರೈವ್‌ಗಳು) (Hard drives) ಮೂಲತಃ C ಮತ್ತು D ಅಕ್ಷರಗಳನ್ನು ಹೊಂದಿದ್ದವು. DOS ಪ್ರತಿಯೊಂದು ಡ್ರೈವ್‌ಗೂ ಕೇವಲ ಒಂದೇ ಸಕ್ರಿಯ ವಿಭಾಗವನ್ನು ಮಾತ್ರ ಬೆಂಬಲಿಸಬಲ್ಲದು. ಇನ್ನಷ್ಟು ದೃಢ ಡ್ರೈವ್‌ಗಳಿಗಾಗಿ ಬೆಂಬಲಗಳು ಲಭ್ಯವಾದವು. ಇದರಿಂದಾಗಿ, ಮೊದಲಿಗೆ, ಪ್ರತಿಯೊಂದು ಡ್ರೈವ್‌ನ ಸಕ್ರಿಯ ಪ್ರಾಥಮಿಕ ವಿಭಾಗ (primary partition)ಕ್ಕೆ ಡ್ರೈವ್‌ ಅಕ್ಷರವನ್ನು ಸೂಚಿಸಲಾಯಿತು. ಇದಾದ ನಂತರ, ಎರಡನೆಯ ಕ್ರಮವಾಗಿ, ವಿಸ್ತರಿತ ವಿಭಾಗ (extended partition)ದಲ್ಲಿರುವ ತಾರ್ಕಿಕ ವಿಧಾನದ (logical) ಡ್ರೈವ್‌ಗಳಿಗೆ ಅಕ್ಷರ ನಮೂದಿಸಲಾಯಿತು. ನಂತರ, ಮೂರನೆಯ ಕ್ರಮದಲ್ಲಿ, DOS-ಬೆಂಬಲಿತ ಕಡತ ವ್ಯವಸ್ಥೆಗಳುಳ್ಳ ಹೆಚ್ಚುವರಿ ವಿಭಾಗಗಳನ್ನು ಹೊಂದಿದ, ಸಕ್ರಿಯವಾಗಿರದ ಇನ್ನೂ ಯಾವುದಾದರೂ ಪ್ರಾಥಮಿಕ ವಿಭಾಗಗಳಿಗೆ ಅಕ್ಷರಗಳನ್ನು ನಮೂದಿಸಲಾಯಿತು. ಕೊನೆಯಲ್ಲಿ, ದೃಷ್ಟಿ ವಿಜ್ಞಾನದ ಡಿಸ್ಕ್‌ ಡ್ರೈವ್ (optical disk drive)‌ಗಳು, RAM ಬಿಲ್ಲೆಗಳು (RAM disks) ಹಾಗೂ ಇತರೆ ಯಂತ್ರಾಂಶಗಳಿಗಾಗಿ DOS ಅಕ್ಷರಗಳನ್ನು ಗೊತ್ತುಪಡಿಸುತ್ತದೆ. ಡ್ರೈವರ್‌ಗಳು ವ್ಯವಸ್ಥೆಯೊಳಗೆ ಪ್ರವೇಶಿಸುವ ಕ್ರಮದಲ್ಲಿ ಅವುಗಳಿಗೆ ಇಂಗ್ಲಿಷ್‌ ಅಕ್ಷರಗಳನ್ನು ನಿಗದಿಪಡಿಸಲಾಗುತ್ತದೆ. ಆದರೆ, ಇನ್ನೂ ಪ್ರತ್ಯೇಕ ಅಕ್ಷರಗಳನ್ನು ಗೊತ್ತುಪಡಿಸುವಂತೆ ಈ ಡ್ರೈವರ್‌ಗಳು DOSಗೆ ಸೂಚನೆ ನೀಡಬಹುದಾಗಿದೆ. ಉದಾಹರಣೆಗೆ, (ಪರಸ್ಪರ ಸಂಪರ್ಕದಲ್ಲಿರುವ ಹಲವು ಕಂಪ್ಯೂಟರ್‌ಗಳ) ಜಾಲಕ್ಕೆ (network) ಸಂಬಂಧಿತ ಡ್ರೈವ್ ಗಳಿಗೆ ಇಂಗ್ಲಿಷ್‌ ಅಕ್ಷರಮಾಲೆಯ ಕೊನೆಯ ಅಕ್ಷರದ ವರೆಗೂ ನಿಗದಿಪಡಿಸಬಹುದು.[] ಯುನಿಕ್ಸ್‌ (Unix) ತರಹದ ವ್ಯವಸ್ಥೆಗಳಲ್ಲಿ /dev ಡೈರೆಕ್ಟರಿಗಿಂತಲೂ ಭಿನ್ನವಾಗಿ, DOS ಅಳವಡಿಕೆಗಳು ಈ ಡ್ರೈವ್‌ ಅಕ್ಷರಗಳನ್ನು ನೇರವಾಗಿ ಬಳಸುವ ಕಾರಣ, ಡ್ರೈವ್‌ ಅಕ್ಷರಗಳ ಅಗತ್ಯವಿರುವ ಹೊಸ ಯಂತ್ರಾಂಶವನ್ನು ಸೇರಿಸುವ ಮೂಲಕ, ಈ ಡ್ರೈವರ್‌ ಅಕ್ಷರಗಳನ್ನು ಅಸ್ತವ್ಯಸ್ತಗೊಳಿಸಬಹುದು. ಉದಾಹರಣೆಗೆ, ಮುಂಚೆಯೇ ಅಸ್ತಿತ್ವದಲ್ಲಿದ್ದ, ವಿಸ್ತರಿತ ವಿಭಾಗಗಳಲ್ಲಿ ತಾರ್ಕಿಕ ಡ್ರೈವ್‌ಗಳುಳ್ಳ ದೃಢ ಡ್ರೈವ್‌ ಒಂದನ್ನು ಹೊಸದಾಗಿ ಸೇರಿಸುವುದು. ಆಗ, ಮುಂಚೆಯೇ ವಿಸ್ತರಿತ ವಿಭಾಗದ ತಾರ್ಕಿಕ ಡ್ರೈವ್‌ಗೆ ಗೊತ್ತುಪಡಿಸಲಾಗಿದ್ದ ಅಕ್ಷರವನ್ನು ಈ ಹೊಸ ಡ್ರೈವ್‌ಗೆ‌ ಗೊತ್ತುಪಡಿಸಲಾಗುತ್ತದೆ. ಇನ್ನೂ ಹೆಚ್ಚಿಗೆ, ಕೇವಲ ವಿಸ್ತರಿತ ವಿಭಾಗದಲ್ಲಿ ಕೇವಲ ತಾರ್ಕಿಕ ಡ್ರೈವ್‌ಗಳನ್ನು ಹೊಂದಿದ ಹೊಸ ದೃಢ ಡ್ರೈವ್‌ ಒಂದನ್ನು ಸೇರಿಸಿದರೂ ಸಹ, RAM ಡಿಸ್ಕ್‌ಗಳು ಹಾಗೂ ದೃಷ್ಟಿಗೋಚರ ಡ್ರೈವ್‌ಗಳ ಅಕ್ಷರಗಳನ್ನು ಅಸ್ತವ್ಯಸ್ತಗೊಳಿಸಬಲ್ಲದು. ಈ ಸಮಸ್ಯೆಯು ವಿಂಡೋಸ್‌ 9x ಆವೃತ್ತಿಯ ವರೆಗೂ ಮುಂದುವರೆದಿತ್ತು. ಆನಂತರ ಬಿಡುಗಡೆಗೊಳಿಸಲಾದ ವಿಂಡೋಸ್‌ NT ಕಾರ್ಯಾಚರಣಾ ವ್ಯವಸ್ಥೆಯಲ್ಲಿ, ಅಸ್ತಿತ್ವದಲ್ಲಿರುವ ಡ್ರೈವ್‌ಗಳ ಅಕ್ಷರಗಳನ್ನು ಉಳಿಸಿಕೊಳ್ಳಲಾಗಿರುತ್ತದೆ. ಬಳಕೆದಾರರು ಅವನ್ನು ಬದಲಿಸಲು ಅವಕಾಶವೂ ಇದೆ.[]

ಆರಂಭಿಕ ಕಾರ್ಯಾಚರಣಾ ವ್ಯವಸ್ಥೆಯನ್ನು ಚಾಲನೆಗೊಳಿಸುವ ಕ್ರಮ (Booting sequence)

[ಬದಲಾಯಿಸಿ]
  • PCಯೊಂದಿಗೆ ಹೊಂದಿಕೊಳ್ಳಬಹುದಾದ ಕಂಪ್ಯೂಟರ್‌ಗಳ (MBR (ಮಾಸ್ಟರ್‌ ಬೂಟ್‌ ರೆಕಾರ್ಡ್‌)) ಆರಂಭ ಕ್ಷೇತ್ರ(boot sector)ವು ಟ್ರ್ಯಾಕ್‌ ಝೀರೊದಲ್ಲಿದೆ. ಸರಣಿಯಲ್ಲಿ, ಎಲ್ಲಾ ಡಿಸ್ಕ್‌ ಉಪಕರಣಗಳಲ್ಲಿನ ಬೂಟ್‌ ಸೆಕ್ಟರ್‌ನ್ನು 0000:7C00 ಸ್ಮೃತಿ ಸ್ಥಳದಲ್ಲಿ (memory segment) ಕೂಡಿಸಲಾಗುತ್ತದೆ. ಒಂದು ವೇಳೆ ಆ ಕ್ಷೇತ್ರವು 0x1FE ಸ್ಥಾನದಲ್ಲಿ '0x55 0xAA' ಮೌಲ್ಯವನ್ನು ಹೊಂದಿದ್ದಲ್ಲಿ, ಅದು ಸಿಂಧುವೆಂದು ಪರಿಗಣಿಸಿ, ಅದನ್ನು ನಡೆಸುತ್ತದೆ. bit-7=1 at pos 0x1BE+0x10*n ಎಂಬ ಒಂದು ಸಕ್ರಿಯ ವಿಭಾಗಕ್ಕಾಗಿ ದೃಢ ದಿಸ್ಕ್‌ಗಳ ನಾಲ್ಕೂ ವಿಭಾಗಗಳಲ್ಲಿ ಪ್ರತಿಯೊಂದರಲ್ಲೂ ಹುಡುಕಲಾಗುತ್ತದೆ.
  • ಬೂಟ್‌ ಸೆಕ್ಟರ್‌ ಕೋಡ್‌ DOS-BIOSನ್ನು ವಿಭಾಗ (segment) 0000:0600ರಲ್ಲಿ ಕೂಡಿಸುತ್ತದೆ. ಈ ವಿಭಾಗವು MS-DOS ವ್ಯವಸ್ಥೆಗಳಲ್ಲಿನ IO.SYSನಲ್ಲಿದೆ.[] ಕೆಲವೊಮ್ಮೆ, ಬೂಟ್‌ ಸೆಕ್ಟರ್‌ 0000:0600ಕ್ಕೆ ಸ್ಥಳಾಂತರಗೊಂಡು, ವಿಭಜನಾ ಬೂಟ್‌ ಕೋಡನ್ನು 0000:7C00ರಲ್ಲಿ ಸೇರಿಸಿ, ನಡೆಸುತ್ತದೆ.[]
  • ಆಗ DOS-BIOS, MS-DOS ಕಂಪ್ಯೂಟರ್‌ಗಳಲ್ಲಿ MSDOS.SYSನಲ್ಲಿರುವ DOS ಕರ್ನಲ್‌ನ್ನು ಸೇರಿಸುತ್ತದೆ. ವಿಂಡೋಸ್‌ 9xನ DOS-ಕರ್ನಲ್‌ನಲ್ಲಿ, DOS-BIOS ಮತ್ತು ಕರ್ನೆಲ್‌ನ್ನು IO.SYSನಲ್ಲಿ ಒಟ್ಟಿಗೆ ಸೇರಿಸಲಾಗಿದೆ. MSDOS.SYSನ್ನು ಪಠ್ಯ ವಿನ್ಯಾಸ ಕಡತವನ್ನಾಗಿ ಬಳಸಲಾಗುತ್ತದೆ.
  • ಆಗ, ವಿನ್ಯಾಸ ಪರಿಮಾಣವನ್ನು ಬಿಡಿಸಿ ಅನ್ವಯಿಸಲು, ಕರ್ನೆಲ್‌ \CONFIG.SYS ಕಡತವನ್ನು ಒಂದುಗೂಡಿಸುತ್ತದೆ. SHELL 'ಚರ'ಮೌಲ್ಯವು ಷೆಲ್‌ನ ಸ್ಥಳವನ್ನು ವಿವರಿಸುತ್ತದೆ. ಯಾಥಾಸ್ಥಿತಿಯಲ್ಲಿ ಅದು \COMMAND.COMಗೆ ಹೋಗುತ್ತದೆ.
  • ಷೆಲ್‌ನ್ನು ಒಂದುಗೂಡಿಸಿ ನಡೆಸಲಾಗುತ್ತದೆ.
  • ಆಗ ಷೆಲ್‌ ಆರಂಭಿಕ ಹಂತದಲ್ಲಿ ಚಾಲಿತವಾಗುವ AUTOEXEC.BAT ಬ್ಯಾಚ್‌ (ಸಮೂಹದ)ಕಡತವನ್ನು ಚಾಲನೆಗೊಳಿಸುತ್ತದೆ.[೧೦][೧೧] SHELL ಸೂಚನಾ ಸಾಲಿನಲ್ಲಿನ ಒಂದು ಪರಿಮಾಣದ ಮೂಲಕ ಆರಂಭಿಕ ಹಂತದ ಬ್ಯಾಚ್‌ ಕಡತದ ವಿವರಣೆಗೆ DR-DOS ಅವಕಾಶ ನೀಡುತ್ತದೆ.[೧೨][೧೩]: 392 

ಬೂಟ್ ಸೆಕ್ಟರ್‌ ಹೊತ್ತುತರುವ BIOS ಹಾಗೂ ಕರ್ನೆಲ್‌ ಫೈಲ್‌ಗಳು ಒಂದಕ್ಕೊಂದು ಕೊಂಡಿಯಂತಿರಬೇಕು ಹಾಗೂ ಮೊದಲ ಎರಡು (ಮಾರ್ಗದರ್ಶಿ)ಡೈರೆಕ್ಟರಿಗಳಾಗಿರಬೇಕು.[೧೪] ಈ ಕಡತವನ್ನು ಹೊರತೆಗೆಯುವುದು ಹಾಗೂ ಸೇರಿಸುವುದರಿಂದ ಈ ಮಾಧ್ಯಮವು ಬೂಟ್‌ ಆಗದಂತಹ ಸ್ಥಿತಿಗೆ ತರಬಹುದು. ಆದರೂ, ಷೆಲ್‌ನ್ನು ಯಾವಾಗ ಬೇಕಾದರೂ ಬದಲಾಯಿಸಬಹುದು. ಆದ್ಯತೆಯ (dedicated) ಅಳವಡಿಕೆಗಳನ್ನು ಇನ್ನೂ ವೇಗವಾಗಿ ಚಾಲಿತಗೊಳಿಸಲು ಷೆಲ್‌ನ್ನು ಬದಲಾಯಿಸಬಹುದಾಗಿದೆ. DR-DOS ಹಾಗೂ PC-DOSನಲ್ಲಿ IO.SYS ಬದಲಿಗೆ IBMBIO.COM ಹಾಗೂ MSDOS.SYS ಬದಲಿಗೆ IBMDOS.COM ಬಳಸಲಾಗಿದೆ. PC-DOS v1.10ಗಾಗಿ ವಿನ್ಯಾಸಗೊಳಿಸಲಾದ ಕಂಪ್ಯೂಟರ್‌ಗಳಲ್ಲಿ 0x1FE ಸ್ಥಾನದಲ್ಲಿ 0x55 0xAA ಸಿಗ್ನೇಚರ್‌‌ನ್ನು ಪರಿಶೀಲಿಸಲಾಗಿಲ್ಲ.[೧೫]

ಮೂಲಗಳು

[ಬದಲಾಯಿಸಿ]

IBM PC-DOS, ಇದರ ಪೂರ್ವವರ್ತಿ 86-DOS ಹಾಗೂ ಪರವಾನಗಿ ಹೊಂದಿ ಪ್ರತ್ಯೇಕವಾಗಿ ಮಾರಲಾದ MS-DOS - ಇವೆಲ್ಲವೂ ಸ್ಥೂಲವಾಗಿ CP/M (ಕಂಟ್ರೋಲ್ ಪ್ರೊಗ್ರಾಮ್‌ / [ಫಾರ್‌] ಮೈಕ್ರೊಕಂಪ್ಯೂಟರ್ಸ್‌) ನಿಂದ ಸ್ಫೂರ್ತಿ ಪಡೆದಿದ್ದವು. ಡಿಜಿಟಲ್‌ ರಿಸರ್ಚ್‌ ಉದ್ದಿಮೆಯು ವಿನ್ಯಾಸ-ಅಭಿವೃದ್ಧಿಪಡಿಸಿದ CP/M, 8-ಬಿಟ್‌ ಇಂಟೆಲ್‌ 8080 ಅಂಡ್‌ ಝೈಲಾಗ್‌ Z80-ಆಧಾರಿತ ಮೈಕ್ರೊಕಂಪ್ಯೂಟರ್‌ಗಳಿಗಾಗಿ ಪ್ರಬಲ ಡಿಸ್ಕ್‌ ಕಾರ್ಯಾಚರಣಾ ವ್ಯವಸ್ಥೆಯಾಗಿತ್ತು. ಆದರೂ, 8088 (16-ಬಿಟ್‌)ಗಿಂತಲೂ ಕಡಿಮೆಯ ವ್ಯವಸ್ಥೆಯಲ್ಲಿ PC-DOS ಕೆಲಸ ಮಾಡುತ್ತಿರಲಿಲ್ಲ. ಇಸವಿ 1980ರಲ್ಲಿ IBM ಇಂಟೆಲ್‌ 8088 ಮೈಕ್ರೊಪ್ರೊಸೆಸರ್‌ನೊಂದಿಗಿನ ತನ್ನ ಮೊದಲ ಮೈಕ್ರೊಕಂಪ್ಯೂಟರ್‌ನ್ನು ಪರಿಚಯಿಸಿದಾಗ ಅದಕ್ಕೆ ಕಾರ್ಯಾಚರಣೆಯ ಅಗತ್ಯವಿತ್ತು. CP/Mನ 8088-ಹೊಂದಾಣಿಕೆಯುಳ್ಳ ರಚನೆಯ ಅನ್ವೇಷಣೆಯಲ್ಲಿದ್ದ IBM, ಆರಂಭದಲ್ಲಿ ಮೈಕ್ರೊಸಾಫ್ಟ್‌ನ CEO ಬಿಲ್‌ ಗೇಟ್ಸ್‌ರೊಂದಿಗೆ ಮಾತುಕತೆ ನಡೆಸಲು ಮುಂದಾಯಿತು. ಏಕೆಂದರೆ, ಆಪೆಲ್‌ II [೧೬] ಮೇಲೆ ನಡೆಯುವಂತೆ CP/Mನಲ್ಲಿ ಮೈಕ್ರೊಸಾಫ್ಟ್‌ Z-80 ಸಾಫ್ಟ್‌ಕಾರ್ಡ್‌ ಅಳವಡಿಸಿದ್ದ ಕಾರಣ, ಮೈಕ್ರೊಸಾಫ್ಟ್‌ CP/Mನ ಮಾಲೀಕ ಎಂದು IBM ನಂಬಿತ್ತು. ಡಿಜಿಟಲ್‌ ರಿಸರ್ಚ್‌ ಉದ್ದಿಮೆಯನ್ನು ಸಂಪರ್ಕಿಸಲು IBMನವರಿಗೆ ತಿಳಿಸಲಾಯಿತು. ಉಭಯ ಪಕ್ಷಗಳು ಮಾತುಕತೆಗಳಿಗೆ ಸಿದ್ಧತೆ ನಡೆಸಿದವು. CP/M ಬಳಕೆಯ ಕುರಿತ ಆರಂಭಿಕ ಮಾತುಕತೆಗಳು ಮುರಿದುಬಿದ್ದವು. ಏಕೆಂದರೆ ಡಿಜಿಟಲ್‌ ರಿಸರ್ಚ್‌ CP/Mನ್ನು ರಾಯಧನದ ಮೇಲೆ ಮಾರಲು ಇಚ್ಚಿಸಿತು. IBM ಒಂದೇ ಲೈಸೆನ್ಸ್‌ ಹಾಗೂ ಹೆಸರನ್ನು PC DOSಗೆ ಪರಿವರ್ತಿಸಲು ಬಯಸಿತು. DR ಸಂಸ್ಥಾಪಕ ಗ್ಯಾರಿ ಕಿಲ್ಡಾಲ್‌ ಇದಕ್ಕೆ ಒಪ್ಪಲಿಲ್ಲ; IBM ಮಾತುಕತೆಗಳಿಂದ ಹಿಂದೆ ಸರಿಯಿತು.[೧೬][೧೭] IBM ಪುನಃ ಬಿಲ್‌ ಗೇಟ್ಸ್‌ರನ್ನು ಸಂಪರ್ಕಿಸಿತು. ಸರದಿಯಲ್ಲಿ ಬಿಲ್‌ ಗೇಟ್ಸ್‌ ಸಿಯಾಟ್ಲ್‌ ಕಂಪ್ಯೂಟರ್‌ ಪ್ರಾಡಕ್ಟ್ಸ್‌ ಉದ್ದಿಮೆಯನ್ನು ಸಂಪರ್ಕಿಸಿದರು. ಅಲ್ಲಿ ಟಿಮ್ ಪ್ಯಾಟರ್ಸನ್‌ ಎಂಬೊಬ್ಬ ಪ್ರೊಗ್ರಾಮರ್‌ CP/M-80 ಒಂದು ವಿಭಿನ್ನ ಮಾದರಿಯನ್ನು ಅಭಿವೃದ್ಧಿಪಡಿಸಿದ್ದರು. S-100 ಬಸ್‌ಗಾಗಿ SCPಯ ಹೊಸ 16-ಬಿಟ್‌ ಇಂಟೆಲ್‌ 8086 CPU ಕಾರ್ಡ್‌ನ್ನು ಪರೀಕ್ಷಿಸಲು ಇದನ್ನು ಬಳಸುವುದಾಗಿತ್ತು. ಆರಂಭದಲ್ಲಿ ಈ ವ್ಯವಸ್ಥೆಯನ್ನು "QDOS" (ಕ್ವಿಕ್‌ ಅಂಡ್‌ ಡರ್ಟಿ ಆಪರೇಟಿಂಗ್‌ ಸಿಸ್ಟಮ್‌) ಎನ್ನಲಾಗಿತ್ತು. ಆನಂತರ ಇದು ವಾಣಿಜ್ಯವಾಗಿ 86-DOS ಎಂಬ ಹೆಸರಿನಲ್ಲಿ ಲಭ್ಯವಾಯಿತು. ಮೈಕ್ರೋಸಾಫ್ಟ್‌ $50,000 ಪಾವತಿಸಿ 86-DOSನ್ನು ತನ್ನದಾಗಿಸಿಕೊಂಡಿತು. ಇದು 1981ರಲ್ಲಿ ಪರಿಚಯಿಸಲಾದ ಮೈಕ್ರೊಸಾಫ್ಟ್‌ ಡಿಸ್ಕ್‌ ಕಾರ್ಯಾಚರಣಾ ವ್ಯವಸ್ಥೆ (MS-DOS) ಆಯಿತು.[೧೮] ಮೈಕ್ರೊಸಾಫ್ಟ್‌ ತಮ್ಮ ಈ ಕಾರ್ಯಾಚರಣಾ ವ್ಯವಸ್ಥೆಯನ್ನು ಹಲವು ಕಂಪ್ಯೂಟರ್‌ ತಯಾರಿಕಾ ಉದ್ದಿಮೆಗಳಿಗೆ ಲೈಸೆನ್ಸ್‌ (ನೀ)ಮಾಡಿತು. ಈ ಉದ್ದಿಮೆಗಳು ತಮ್ಮದೇ ಯಂತ್ರಾಂಶಗಳಿಗೆ ಹಾಗೂ ಕೆಲವೊಮ್ಮೆ ತಮ್ಮ ಹೆಸರಿನಡಿಯಲ್ಲೇ MS-DOS ವಿತರಿಸಿದವು. ಆನಂತರ, IBM ವಿಭಿನ್ನ ಮಾದರಿಯ ಹೊರತುಪಡಿಸಿ, ಮೈಕ್ರೊಸಾಫ್ಟ್‌ MS-DOS ಹೆಸರಿನ ಬಳಕೆಯ ಅಗತ್ಯವನ್ನು ವ್ಯಕ್ತಪಡಿಸಿತು. IBM ತನ್ನ IBM PCಗಾಗಿ ತಮ್ಮ ಆವೃತ್ತಿ PC DOSನ್ನು ಅಭಿವೃದ್ಧಿ ಕಾರ್ಯ ಮುಂದುವರೆಸಿತು.[೧೮] CP/M ತರಹವೇ ಇರುವ ಕಾರ್ಯಾಚರಣಾ ವ್ಯವಸ್ಥೆಯನ್ನು IBM (ತನಗೆ ಬೇಕಾದ CP/Mನ ಹೊಸ ಹೆಸರಿನಡಿ) ಮಾರುತ್ತಿರುವ ವಿಚಾರವು ಡಿಜಿಟಲ್‌ ರಿಸರ್ಚ್‌ ಉದ್ದಿಮೆಗೆ ತಲುಪಿತು. ಡಿಜಿಟಲ್‌ ರಿಸರ್ಚ್‌ ಕಾನೂನು ಮೊಕದ್ದಮೆ ಹೂಡಲು ಮುಂದಾಯಿತು. IBM ತನ್ನ ಪ್ರತಿಕ್ರಿಯೆಯಲ್ಲಿ ಒಪ್ಪಂದದ ಪ್ರಸ್ತಾಪವಿಟ್ಟಿತು: PC DOS ಅಥವಾ CP/M-86, ಕಿಲ್ಡಾಲ್‌ರ 8086 ಆವೃತ್ತಿ - PC ಬಳಕೆದಾರರು ಇವುಗಳಲ್ಲಿ ಯಾವುದಾದರೂ ಒಂದನ್ನು ಅಯ್ಕೆ ಮಾಡಬಹುದಾಗಿತ್ತು. CP/M PC DOSಗಿಂತಲೂ $200ರಷ್ಟು ದುಬಾರಿಯಾಗಿತ್ತು, ಅದು ಹೆಚ್ಚು ಮಾರಾಟವಾಗಲಿಲ್ಲ. CP/M ಮಾರುಕಟ್ಟೆಯಿಂದ ಅಳಿಸಿಹೋಗಿ, MS-DOS ಹಾಗೂ PC DOS PCಗಳು ಹಾಗೂ PC ಹೊಂದಾಣಿಕೆಗಳಿಗಾಗಿ ಅತಿ ಹೆಚ್ಚು ಮಾರಾಟವಾಗುವ ಕಾರ್ಯಾಚರಣಾ ವ್ಯವಸ್ಥೆಗಳಾಗಿ ಪ್ರಾಬಲ್ಯ ಮೆರೆದವು.[೧೬]

CP/M-86ರಿಂದ ಕಳೆದುಹೋದ ಮಾರುಕಟ್ಟೆಯ ಪಾಲನ್ನು ಪುನಃ ಗಳಿಸಲು, ಡಿಜಿಟಲ್‌ ರಿಸರ್ಚ್‌ ಮೊದಲಿಗೆ DOS ಪ್ಲಸ್‌ ಹಾಗೂ DR-DOS ಎಂಬ ಕಾರ್ಯಾಚರಣಾ ವ್ಯವಸ್ಥೆಗಳನ್ನು ಪರಿಚಯಿಸಿತು. ಇವರಡೂ ಸಹ MS-DOS ಹಾಗೂ CP/M-86 ತಂತ್ರಾಂಶಗಳೊಂದಿಗೆ ಹೊಂದಾಣಿಕಯಾಗಬಲ್ಲವು. ನಾವೆಲ್‌ ಉದ್ದಿಮೆಯು ಡಿಜಿಟಲ್‌ ರಿಸರ್ಚ್‌ನ್ನು ತನ್ನದಾಗಿಸಿಕೊಂಡಿತು. DR DOS ನಾವೆಲ್‌ (Novell) DOS 7 ಎಂದಾಯಿತು. ಆನಂತರ ಇವು OpenDOS ಹಾಗೂ DR DOS 7 ಹೆಸರಿನಡಿ ಕ್ಯಾಲ್ಡೆರಾ ಸಿಸ್ಟಮ್ಸ್‌, ಲೈನಿಯೊ ಹಾಗೂ ಡಿವೈಸ್‌ಲಾಜಿಕ್ಸ್‌ಗಳ ಅಂಶವಾದವು. DOSನ ಆನಂತರದ ಎರಡು ಕಾರ್ಯಾಚರಣಾ ವ್ಯವಸ್ಥೆಗಳು - ಮೈಕ್ರೊಸಾಫ್ಟ್‌ನ ವಿಂಡೋಸ್‌ ಹಾಗೂ IBMನ OS/2 ಕುರಿತು ಮೈಕ್ರೊಸಾಫ್ಟ್‌ ಹಾಗೂ IBM ನಡುವೆ ತೀವ್ರ ಭಿನ್ನಾಭಿಪ್ರಾಯಗಳ ಸರಣಿಯಾಯಿತು.[೧೯] ಇದರ ಫಲವಾಗಿ, ಎರಡೂ ಉದ್ದಿಮೆಗಳು ತಮ್ಮ DOS ವ್ಯವಸ್ಥೆಗಳ ಅಭಿವೃದ್ಧಿಯನ್ನು ಇಬ್ಭಾಗವಾಗಿಸಿಕೊಂಡವು.[೨೦] MS-DOS ಭಾಗಶಃ ವಿಂಡೋಸ್‌ಗೆ ರೂಪಾಂತರವಾಯಿತು; PC DOSನ ಕೊನೆಯ ಆವೃತ್ತಿ PC DOS 2000ವನ್ನು 1998ರಲ್ಲಿ ಬಿಡುಗಡೆಗೊಳಿಸಲಾಯಿತು. ಮೈಕ್ರೊಸಾಫ್ಟ್‌ ತಾನು MS-DOS ವ್ಯವಸ್ಥೆಗೆ ಇನ್ನು ಮುಂದೆ ಮಾರಾಟವಾಗಲಿ ಬೆಂಬಲವಾಗಲಿ ನೀಡುವುದಿಲ್ಲ ಎಂದು ಘೋಷಿಸಿದಾಗ, FreeDOS ಯೋಜನೆಯು 26 ಜೂನ್‌ 1994ರಂದು ಆರಂಭವಾಯಿತು. ಮುಕ್ತ-ಸಂಪನ್ಮೂಲ ಬದಲಿಯನ್ನು ಅಭಿವೃದ್ಧಿಗೊಳಿಸಲು ಜಿಮ್‌ ಹಾಲ್‌ ಒಂದು ಪ್ರಣಾಳಿಕೆಯನ್ನು ಪ್ರಕಟಿಸಿದರು. ಇದಾದ ಕೆಲವೇ ವಾರಗಳಲ್ಲಿ ಪ್ಯಾಟ್‌ ವಿಲಾನಿ ಮತ್ತು ಟಿಮ್‌ ನಾರ್ಮನ್‌ ಈ ಯೋಜನೆಯಲ್ಲಿ ಪಾಲ್ಗೊಂಡರು. ಅವರು ಬರೆದ ಅಥವಾ ಮೊದಲೇ ಲಭ್ಯವಾಗಿದ್ದ ತಂತ್ರಾಂಶ ಸಾಲುಗಳನ್ನು ಒಟ್ಟು ಸಂಗ್ರಹಿಸಿ, ಒಂದು ಕರ್ನೆಲ್‌, command.com ಆದೇಶ ಸಾಲು ವ್ಯಾಖ್ಯಾನಕ (ಷೆಲ್‌) ಹಾಗೂ ಮೂಲ ಅನ್ವಯಿಕೆಗಳನ್ನು ರಚಿಸಲಾಯಿತು. FreeDOS 1.0 ವಿತರಣೆಯನ್ನು 3 ಸೆಪ್ಟೆಂಬರ್‌ 2006ರಂದು ಬಿಡುಗಡೆಗೊಳಿಸುವ ಮುಂಚೆ FreeDOSನ ಹಲವು ಅಧಿಕೃತ, ಬಿಡುಗಡೆ-ಪೂರ್ವ ವಿತರಣೆಗಳಿದ್ದವು. GNU ಜನರಲ್‌ ಪಬ್ಲಿಕ್‌ ಲೈಸೆನ್ಸ್‌ (GPL) ಅಡಿ ಲಭ್ಯವಾಗಿರುವ FreeDOSಗೆ ಯಾವುದೇ ಲೈಸೆನ್ಸ್‌ ಶುಲ್ಕ ಅಥವಾ ರಾಯಧನದ ಅಗತ್ಯವಿಲ್ಲ.[೨೧][೨೨]

ಇಳಿಮುಖ

[ಬದಲಾಯಿಸಿ]

ಮೈಕ್ರೊಸಾಫ್ಟ್‌ ವಿಂಡೋಸ್‌ನ ಮುಂಚಿನ ಆವೃತ್ತಿಗಳು DOSನ ಪ್ರತ್ಯೇಕ ಆವೃತ್ತಿಯ ಮೇಲೆ ನಡೆಯುವಂತಹ ಅನ್ವಯಿಕೆಯಾಗಿತ್ತು.[೨೩] 1990ರ ದಶಕದ ಮೊದಲ ಅರ್ಧದಲ್ಲಿ, ಹೊಸ DOS ವ್ಯವಸ್ಥೆಯಲ್ಲಿ ವಿಂಡೋಸ್‌ನ ಬಳಕೆಯು ಹೆಚ್ಚಾಗಿತ್ತು. MS-ವಿಂಡೋಸ್‌ ಫಾರ್‌ ವರ್ಕ್‌ಗ್ರೂಪ್ಸ್‌ 3.11ನೊಂದಿಗೆ, ವಿಂಡೋಸ್‌ ಕರ್ನೆಲ್‌ಗಾಗಿ ಕೇವಲ ಬೂಟ್‌ ಲೋಡರ್‌ನ ಸ್ಥಿತಿಗೆ DOSನ್ನು ಇಳಿಸಲಾಯಿತು. 1995ರಲ್ಲಿ, MS-ವಿಂಡೋಸ್‌ 95ನ್ನು ಏಕೈಕ ಕಂಪ್ಯೂಟರ್‌ನ ಕಾರ್ಯಾಚರಣಾ ಪದ್ದತಿಯಾಗಿ ಒಟ್ಟುಗೂಡಿಸಲಾಯಿತು. ಇದಕ್ಕೆ ಪ್ರತ್ಯೇಕ DOS ಲೈಸೆನ್ಸ್‌ನ ಅಗತ್ಯವಿರಲಿಲ್ಲ. ವಿಂಡೋಸ್‌ 95, ಇದರ ನಂತರ ಬಂದ ವಿಂಡೋಸ್‌ 98, ವಿಂಡೋಸ್‌ ಎಂಇ ಕಾರ್ಯಾಚರಣಾ ವ್ಯವಸ್ಥೆಯಲ್ಲಿ MS-DOS ಕರ್ನೆಲ್‌ ಉಳಿದುಕೊಂಡಿದೆ, ಆದರೆ ವಿಂಡೋಸ್‌ ಈ ವ್ಯವಸ್ಥೆಯ ಚಿತ್ರಕ (ಗ್ರ್ಯಾಫಿಕ್‌) ಷೆಲ್‌ ಆಗಿದೆ. ವಿಂಡೋಸ್‌ 95 ಹಾಗೂ 98 ಆವೃತ್ತಿಗಳೊಂದಿಗೆ (ಆದರೆ ME ಒಂದಿಗೆ ಅಲ್ಲ), ವಿಂಡೋಸ್‌ ಬಳಸದೆಯೇ MS-DOS ಅಂಶವನ್ನು ಕಾರ್ಯೋನ್ಮುಖಗೊಳಿಸಬಹುದು.[೨೪] ವಿಂಡೋಸ್‌ ಬಳಸಲು DOS ಅಗತ್ಯವಿಲ್ಲದ ಕಾರಣ, PC ಬಳಕೆದಾರರಲ್ಲಿ ಹಲವರು DOSನ್ನು ಕೈಬಿಟ್ಟು ವಿಂಡೋಸ್‌ ಬಳಸಲಾರಂಭಿಸಿದರು.

ಮುಂದುವರೆದ DOS ಬಳಕೆ

[ಬದಲಾಯಿಸಿ]

FreeDOS, DR-DOS (ಹಾಗೂ ಎನ್ಹ್ಯಾನ್ಸ್ಡ್‌ (Enhanced) DR-DOS), ROM-DOS, ರಷ್ಯನ್‌ PTS-DOS, NX-DOS, ಮಲ್ಟಿಯುಸರ್ (ಬಹುದ್ದೇಶಿತ-ಬಳಕೆ) DOS (ಇದು ಡಿಜಿಟಲ್‌ ರಿಸರ್ಚ್‌ನ ಕಾನ್ಕರೆಂಟ್‌ DOS ಆಧಾರಿತವಾಗಿದೆ)[೨೫] ಹಾಗೂ ಇತರೆ ಆವೃತ್ತಿಗಳು ಇಂದಿಗೂ ಲಭ್ಯ. ಡೆಲ್‌ ಹಾಗೂ HPಯಂತಹ ಕೆಲವು ಕಂಪ್ಯೂಟರ್‌ ತಯಾರಕರು OEM ಕಾರ್ಯಾಚರಣಾ ವ್ಯವಸ್ಥೆಯಾಗಿ FreeDOS ಹೊಂದಿರುವ ಕಂಪ್ಯೂಟರ್‌ಗಳನ್ನು ಮಾರುತ್ತಾರೆ.[೨೬][೨೭] NX-DOS ಸದ್ಯದಲ್ಲಿ ಅಭಿವೃದ್ಧಿ ಹಂತದಲ್ಲಿದೆ. ಈ ಕಾರ್ಯಾಚರಣಾ ವ್ಯವಸ್ಥೆಯು 16-ಬಿಟ್‌, ರಿಯಲ್‌-ಟೈಮ್‌, (ಬಹು-ಕಂಪ್ಯೂಟರ್‌ಗಳ) ಜಾಲಕ್ಕೆ ಹೊಂದಿಸಬಲ್ಲ, ಫ್ಲಾಪಿಯಿಂದ ಬೂಟ್‌ ಮಾಡಬಹುದಾದ, ಹಾಗೂ ಅಪೂರ್ಣ USB ಡ್ರೈವರ್‌ ವ್ಯವಸ್ಥೆ ಹೊಂದಿದೆ. ಇದು 1992ರ ಇಸವಿಯಲ್ಲಿ ವೈಯಕ್ತಿಕ ಪ್ರಾಜೆಕ್ಟ್‌ ಆಗಿತ್ತು. ಇಸವಿ 2005ರಲ್ಲಿ ಇದನ್ನು GPL ಅಡಿ ಬಿಡುಗಡೆಗೊಳಿಸಲಾಯಿತು.[೨೮]

ಸಮಗ್ರಗೊಳಿಸುವಿಕೆ

[ಬದಲಾಯಿಸಿ]

DOS ಯಂತ್ರಾಂಶವನ್ನು ನೇರವಾಗಿ ಪ್ರವೇಶಿಸುವಂತಹ ರಚನೆ ಹೊಂದಿರುವ ಕಾರಣ, ಅದನ್ನು ಸಮಗ್ರವಾಗಿ ಸಂಗ್ರಹಿಸಿ ಇಡಲಾದ ಸಾಧನಗಳಲ್ಲಿ ಬಳಸಲು ಅನುಕೂಲಕರವಾಗಿದೆ. DR-DOSನ ಅಂತಿಮ ಆವೃತ್ತಿಗಳು ಈ ಮಾರುಕಟ್ಟೆಯನ್ನು ಗುರಿಯಾಗಿಟ್ಟುಕೊಂಡಿದೆ.[೨೯] ಕೆನಾನ್‌ ಪವರ್‌ಷಾಟ್‌ ಪ್ರೊ 70 ಕ್ಯಾಮೆರಾದಲ್ಲಿ ROM-DOSನ್ನು ಯೋಜಿಸಲಾದ ಕಾರ್ಯಾಚರಣಾ ವ್ಯವಸ್ಥೆಯ ರೂಪದಲ್ಲಿ ಬಳಸಲಾಯಿತು.[೩೦]

ಸಮಬಲದ ಪೈಪೋಟಿಯ ಸಾಧನಗಳು

[ಬದಲಾಯಿಸಿ]
ವಿಂಡೋಸ್‌ ವಿಸ್ಟಾ ಮೇಲೆ ನಡೆಯುತ್ತಿರುವ DOSBox.

ಲಿನಕ್ಸ್‌ನಡಿ, DOS ಪ್ರೊಗ್ರಾಮ್‌ಗಳನ್ನು ಸಹಜ ವೇಗದಲ್ಲಿ ನಡೆಸಲು, DOS ಹಾಗೂ ಇದರ ಹಲವು ಪ್ರತಿರೂಪಗಳನ್ನು DOSEMU ಎಂಬ ಲಿನಕ್ಸ್‌-ಮೂಲದ ವಸ್ತುತಃ ಕಂಪ್ಯೂಟರ್‌ನಲ್ಲಿ ನಡೆಸಬಹುದಾಗಿದೆ. ಯುನಿಕ್ಸ್‌ (UNIX)ನ ಹಲವು ಆವೃತ್ತಿಗಳಡಿ DOS ನಡೆಸಲು ಹಲವು ಇತರೆ ಸರಿಸಮವಾಗುವ ಸಾಧನಗಳಿವೆ. ಇವು DOSBoxನಂತಹ x86-ಅಲ್ಲದ ಅಧಾರದ ಮೇಲೂ ಸಹ ನಡೆಯಬಹುದು.[೩೧][೩೨] MS ವಿಂಡೋಸ್‌ XP ಹಾಗೂ MS ವಿಂಡೋಸ್‌ ವಿಸ್ಟಾ ಕಾರ್ಯಾಚರಣಾ ವ್ಯವಸ್ಥೆಗಳ ಬಳಕೆದಾರ ಸಮುದಾಯಲ್ಲಿ DOS ಸರಿಸಮವಾಗಿಸುವ ಸಾಧನಗಳು ಹೆಚ್ಚು ಜನಪ್ರಿಯವಾಗುತ್ತಿವೆ. ಶುದ್ಧ DOSನೊಂದಿಗೆ ಇಂತಹ ವ್ಯವಸ್ಥೆಗಳು ಬಹಳಷ್ಟು ಹೊಂದಾಣಿಕೆಯಿರುವುದಿಲ್ಲ. ಕಂಪ್ಯೂಟರ್‌ ಆಟಗಳು ಹಾಗೂ ಇತರೆ DOS ತಂತ್ರಾಂಶಗಳನ್ನು ನಡೆಸಲು ಇವುಗಳನ್ನು ಬಳಸಲಾಗಿದೆ. ಇದರಲ್ಲಿ DOSBox ಅತಿ ಚಿರಪರಿಚಿತವಾದದ್ದು. ಅಧುನಿಕ ಕಾರ್ಯಾಚರಣಾ ವ್ಯವಸ್ಥೆಗಳ ಮೇಲೆ ಕಿಂಗ್ಸ್ ಕ್ವೆಸ್ಟ್‌, ಡೂಮ್‌ನಂತಹ ಲೆಗಸಿ ಗೇಮಿಂಗ್‌ ಗಾಗಿ ಇದನ್ನು ಬಳಸಲಾಗಿದೆ.[೨೩][೩೧] DOS ಎಮುಲೇಟರ್‌ಗಿಂತಲೂ ಸಮರ್ಪಕ ಹೊಂದಾಣಿಕೆಗೆ ಅವಕಾಶ ನೀಡಲು, ಮೈಕ್ರೊಸಾಫ್ಟ್‌ ವರ್ಚುಯಲ್‌ PCಯಡಿ DOS ಆನ್ವಯಿಕೆಗಳನ್ನು ನಡೆಸಲು ಸಾಧ್ಯವಾಗಿದೆ. MS-DOSನ ಸಿಂಧುವಾದ ಆವೃತ್ತಿಯನ್ನು ಅಳವಡಿಸಬಹುದಾಗಿದೆ; ಇದು 'ಅನಿಯಂತ್ರಿತ' ಆನ್ವಯಿಕೆಗಳ ಹೊರತುಪಡಿಸಿ, ಉಳಿದೆಲ್ಲಾ ಅಳವಡಿಕೆಗಳು ನಡೆಯಲು ಅವಕಾಶ ನೀಡಬಲ್ಲದು.[೩೩]

ಮೈಕ್ರೊಸಾಫ್ಟ್‌ ವಿಂಡೋಸ್‌ನೊಂದಿಗೆ

[ಬದಲಾಯಿಸಿ]
ಮೈಕ್ರೊಸಾಫ್ಟ್‌-NT-ಆಧಾರಿತ ವಿಂಡೋಸ್‌ನಲ್ಲಿ ಬಳಸಲಾದ DOS-ಶೈಲಿಯ ಆದೇಶ cmd.exe.

NTಯಿಂದ ಆರಂಭಗೊಂಡು, 2000, XP ಹಾಗು ವಿಸ್ಟಾ ಸೇರಿದಂತೆ, ವಿಂಡೋಸ್‌ನ ನೈಜ 32-ಬಿಟ್ ಆವೃತ್ತಿಗಳು‌ DOS ಆಧಾರಿತವಾಗಿಲ್ಲ. ಇವು ವರ್ಚುಯಲ್‌ ಕಂಪ್ಯೂಟರ್‌ನಲ್ಲಿ MS-DOS 5 ಪರಿವರ್ತಿತ ಆವೃತ್ತಿ ನಡೆಸುವಂತಹ NT ವರ್ಚುಯಲ್‌ DOS ಮೆಷಿನ್‌ (NTVDM) ಒಳಗೊಂಡಿದೆ. DOS-ಆಧಾರಿತ ಆವೃತ್ತಿಗಳು ಸೂಚನಾ ಸಾಲು ಅಂತರಸಂಪರ್ಕ (command line interface)ಕ್ಕಾಗಿ ಸಾಂಪ್ರದಾಯಿಕ COMMAND.COM ಬಳಸುತ್ತವೆ. ಆದರೆ MS ವಿಂಡೋಸ್‌ NT ಹಾಗೂ ಈಚಿನ ಆವೃತ್ತಿಗಳು OS/2ನ ಕಮ್ಯಾಂಡ್‌ ವ್ಯಾಖ್ಯಾನಕ (ಇಂಟರ್‌ಪ್ರಿಟರ್‌)ನ ಆನಂತರದ ಆವೃತ್ತಿಯಾದ cmd.exe ಬಳಸುತ್ತವೆ. ಇದು ಹಲವು DOS ಸೂಚನೆಗಳನ್ನು ಗುರುತಿಸುತ್ತದೆ. ಆದರೂ DOS.EXE ಕಡತಗಳನ್ನು ನಡೆಸಿದಾಗ, COMMAND.COM ಕಡತವನ್ನು ಇಂದಿಗೂ ಸಂಪರ್ಕಿಸಿ ಬಳಸಲಾಗುತ್ತದೆ.

ಪಠ್ಯಂತರಗಳು

[ಬದಲಾಯಿಸಿ]

x86 DOS ಕಾರ್ಯಾಚರಣಾ ವ್ಯವಸ್ಥೆಗಳ ಹೋಲಿಕೆ ಹಾಗೂ 'x86 DOS ಕಾರ್ಯಾಚರಣಾ ವ್ಯವಸ್ಥೆಗಳ ಕಾಲಾನುಕ್ರಮ' ನೋಡಿ.

ತಂತ್ರಾಂಶ

[ಬದಲಾಯಿಸಿ]
ಅರಾಕ್ನ್‌ ಅಂತರಜಾಲ ವೀಕ್ಷಕ (ವೆಬ್‌ ಬ್ರೌಸರ್‌)
ಇವನ್ನೂ ನೋಡಿ: DOS ತಂತ್ರಾಂಶ , CUA (DOS ಅಳವಡಿಕೆಯ 'ಯುಸರ್‌ ಇಂಟರ್ಫೇಸಸ್‌'ಗಳನ್ನು ಸಮನ್ವಯಗೊಳಿಸುವ ಉದ್ದೇಶ)

DOS ಪ್ರಬಲವಾದ, PCಗೆ-ಹೊಂದಾಣಿಕೆಯಾಗುವಂತಹ, ಆಧಾರವಾಗಿತ್ತು. ಹಲವು ಜನಪ್ರಿಯ ಪ್ರೊಗ್ರಾಮ್‌ಗಳನ್ನು ಇದಕ್ಕಾಗಿ ಅಭಿವೃದ್ಧಿಗೊಳಿಸಲಾಗಿತ್ತು. ಇದರಲ್ಲಿ ಕೆಲವು ಆನ್ವಯಿಕೆಗಳನ್ನು ಇಲ್ಲಿ ತಿಳಿಸಲಾಗಿದೆ:

ಮೊದಲೆರಡು 3D ರಿಯಲ್ಮ್‌' ಶೀರ್ಷಿಕೆಗಳನ್ನು ಕೆನ್‌ ಸಿಲ್ವರ್ಮನ್‌ ರಚಿಸಿದ, DOS-ಆಧಾರಿತ ಬಿಲ್ಡ್‌ ಇಂಜಿನ್‌. ಇದನ್ನು ಹಲವು DOS FPS ಆಟಗಳಿಗಾಗಿ ಬಳಸಲಾಯಿತು. ಇತರೆ ಆಟಗಳಲ್ಲಿ R.O.T.T. ಬಹಳಷ್ಟು ಪರಿವರ್ತಿತವಾದ ವುಲ್ಫೆನ್ಸ್ಟೀನ್‌ 3D-ಅಧಾರಿತವಾಗಿತ್ತು.

ಸುಲಭ ಬಳಕೆ

[ಬದಲಾಯಿಸಿ]

ಬಳಕೆದಾರರ ಅಂತರಸಂಪರ್ಕ

[ಬದಲಾಯಿಸಿ]
ಡೈರೆಕ್ಟರಿ (ಫೋಲ್ಡರ್‌) ಒಂದರಲ್ಲಿ ಕಡತಗಳ ಪಟ್ಟಿಯನ್ನು ತೋರಿಸುತ್ತಿರುವ ವಿಂಡೋಸ್‌ ಕಮ್ಯಾಂಡ್‌ ಷೆಲ್‌ನ ಒಂದು ಸ್ಕ್ರೀನ್‌ಷಾಟ್‌ ಚಿತ್ರ.

DOS ವ್ಯವಸ್ಥೆಗಳು ಸೂಚನಾ ಸಾಲು ಅಂತರಸಂಪರ್ಕ (command line interface) ಬಳಸುತ್ತವೆ. ಕಮ್ಯಾಂಡ್‌ ಪ್ರಾಂಟ್‌ನಲ್ಲಿ ಕಡತದ ಹೆಸರನ್ನು ನಮೂದಿಸಿ Enter ಕೀಲಿ ಒತ್ತುವುದರ ಮೂಲಕ ಪ್ರೊಗ್ರಾಮ್‌ಗಳನ್ನು ನಡೆಸಲಾಗುತ್ತದೆ. DOS ವ್ಯವಸ್ಥೆಗಳಲ್ಲಿ ಸಿಸ್ಟಮ್‌ ಯುಟಿಲಿಟೀಸ್‌ ರೂಪದಲ್ಲಿ ಹಲವು ಪ್ರೋಗ್ರಾಮ್‌ಗಳನ್ನು ಒಳಗೊಳ್ಳುತ್ತವೆ. ಇದರ ಜೊತೆಗೆ ಪ್ರೊಗ್ರಾಮ್‌ಗಳಿಗೆ ಸಂಬಂಧಿಸದ ಹೆಚ್ಚುವರಿ ಕಮ್ಯಾಂಡ್‌ಗಳನ್ನು (ಆಂತರಿಕ ಕಮ್ಯಾಂಡ್‌ಗಳು ) ಒದಗಿಸುತ್ತದೆ.[೩೫] ಬಳಕೆದಾರರಿಗೆ ಇನ್ನಷ್ಟು ಉಪಯುಕ್ತವಾಗಲೆಂದು, ಬಳಕೆದಾರರಿಗೆ ಮೆನು ಹಾಗೂ/ಅಥವಾ ಬಿಂಬ-ಆಧಾರಿತ ಅಂತರಸಂಪರ್ಕಗಳನ್ನು ನೀಡುವ ಕಡತ ನಿರ್ವಹಣಾ ವ್ಯವಸ್ಥೆ‌ಗಳನ್ನು (file management programs) ಹಲವು ತಂತ್ರಾಂಶ ತಯಾರಕರು ಅಭಿವೃದ್ಧಿಗೊಳಿಸಿದರು. ಮೈಕ್ರೊಸಾಫ್ಟ್‌ ವಿಂಡೋಸ್‌ ಗಮನಾರ್ಹ ಉದಾಹರಣೆಯಾಗಿದೆ. ಅಂತಿಮವಾಗಿ ಮೈಕ್ರೊಸಾಫ್ಟ್‌ ವಿಂಡೋಸ್‌ 9x ತಾನಾಗಿಯೇ ಲೋಡ್‌ ಆಗುವಂತಹ ಪ್ರೊಗ್ರಾಮ್‌ ಆಗಿ ಮೂಡಿಬಂದಿತು. DOS ಸ್ಥಾನದಲ್ಲಿ ಇದು ಅತಿ ಹೆಚ್ಚು ಬಳಕೆಯಾದ PCಯೊಂದಿಗೆ ಹೊಂದಾಣಿಕೆಯಾಗಬಲ್ಲ ಪ್ರೊಗ್ರಾಮ್‌ ಲೋಡರ್‌ ಆಯಿತು. ಪಠ್ಯ ಬಳಕೆದಾರ ಅಂತರಸಂಪರ್ಕ (Text user interface) ಪ್ರೊಗ್ರಾಮ್‌ಗಳಲ್ಲಿ ನಾರ್ಟನ್‌ ಕಮ್ಯಾಂಡರ್‌, DOS ನ್ಯಾವಿಗೇಟರ್‌, ವೊಲ್ಕೊವ್‌ ಕಮ್ಯಾಂಡರ್‌, ಕ್ವಾರ್ಟರ್‌ಡೆಸ್ಕ್‌ ಡೆಸ್ಕ್ಯೂವ್ಯೂ (DESQview) ಹಾಗೂ ಸೈಡ್‌ಕಿಕ್‌ (SideKick) ಸೇರಿವೆ. ಚಿತ್ರಕ ಬಳಕೆದಾರ ಅಂತರಸಂಪರ್ಕ (Graphical user interface) ಪ್ರೊಗ್ರಾಮ್‌ಗಳು, ಡಿಜಿಟಲ್‌ ರಿಸರ್ಚ್‌ನ ಚಿತ್ರಕ ವೇದಿಕೆ ನಿರ್ವಾಹಕ (Graphical Environment Manager) (ಮೂಲತಃ CP/Mಗಾಗಿ ರಚಿಸಲಾಗಿತ್ತು) ಹಾಗೂ GEOS ಹೊಂದಿದ್ದವು.

ಅಂತಿಮವಾಗಿ, ಪ್ರಮುಖ DOS ವ್ಯವಸ್ಥೆಗಳ ತಯಾರಕರು ತಮ್ಮದೇ ವ್ಯವಸ್ಥಾಪಕ ಪದ್ದತಿಗಳನ್ನು ಸೇರಿಸಲಾರಂಭಿಸಿದರು. MS-DOS/IBM DOS 4ನಲ್ಲಿ DOS ಷೆಲ್‌ ಸೇರಿತ್ತು;[೩೬] ತರುವಾಯ ವರ್ಷ ಬಿಡುಗಡೆಯಾದ DR-DOS 5ನಲ್ಲಿ GEM-ಆಧಾರಿತ ವ್ಯೂಮ್ಯಾಕ್ಸ್‌ (ViewMAX) ಸೇರಿತ್ತು.[೩೭]

ಮಲ್ಟಿಟಾಸ್ಕಿಂಗ್‌ (ಏಕಕಾಲದಲ್ಲಿ ಹಲವು ಕ್ರಿಯೆಗಳು)

[ಬದಲಾಯಿಸಿ]

ತನ್ನ ಮೂಲತಃ ವಿನ್ಯಾಸದ ಪ್ರಕಾರ, DOS ಏಕಕಾಲದಲ್ಲಿ ಒಂದೇ ಕಾರ್ಯ ನಡೆಸಬಲ್ಲ ಕಾರ್ಯಾಚರಣಾ ವ್ಯವಸ್ಥೆಯಾಗಿತ್ತು. MS ಹಾಗೂ PC DOS DOSShellನೊಂದಿಗೆ ಕ್ರಿಯೆ ಬದಲಾವಣೆಯನ್ನು ಪರಿಚಯಿಸುವುದು, DR-DOS ಟಾಸ್ಕ್‌ಮ್ಯಾಕ್ಸ್‌ (TaskMAX) ಸೂಚನೆ ಸಾಲಿನ ಮೂಲಕ ಅದನ್ನು DR-DOS 6 ನೊಂದಿಗೆ ಸೇರಿಸಬಹುದು.[೧೩] : 320–324  MS ಹಾಗೂ PC DOS ಎಂದಿಗೂ ಏಕಕಾಲದಲ್ಲಿ ಬಹಳಷ್ಟು ಕ್ರಿಯೆ ನಡೆಸಲು ಸಮರ್ಥವಾಗಿರಲಿಲ್ಲ.[೩೮] ಸಕ್ರಿಯಗೊಳಿಸಲಾದ DPMIನೊಂದಿಗೆ DR-DOS ನಡೆಯುತ್ತಿತ್ತು ಎಂಬ ಊಹೆ ಮೇರೆಗೆ, DR-DOS DR-DOS 7ರೊಂದಿಗೆ ಕ್ಷಮತೆ ಹೊಂದಿತ್ತು.[೩೯] 'VMIX (ಹಂಚಬಹುದಾದ ತಂತ್ರಾಂಶ)' ಅಥವಾ 'ಡೆಸ್ಕ್‌ವ್ಯೂ (DesqView) (ವಾಣಿಜ್ಯ)' - ಇಂತಹ ಪ್ರೊಗ್ರಾಮ್‌ಗಳು 8088 ವ್ಯವಸ್ಥೆಯಲ್ಲೂ ಸಹ ಏಕಕಾಲದಲ್ಲಿ ಬಹಳಷ್ಟು ಕಾರ್ಯ ನಡೆಸಬಲ್ಲದಾಗಿತ್ತು. ಅದರ ರಕ್ಷಿತ ರೀತಿಯ ಕೊರತೆಯಿದ್ದದ್ದರಿಂದ 8088 ಏಕಕಾಲಕ್ಕೆ ಬಹಳಷ್ಟು ಕ್ರಿಯೆಗಾಗಿ ಯಾವುದೇ ಯಂತ್ರಾಂಶ ಬೆಂಬಲ ಹೊಂದಿರಲಿಲ್ಲ.

ಇತಿಮಿತಿಗಳು

[ಬದಲಾಯಿಸಿ]

DOS ರಚನೆಯಲ್ಲಿ ಹಲವು ಇತಿಮಿತಿಗಳಿವೆ. ಮೂಲತಃ 8088 ಮೈಕ್ರೊಪ್ರೊಸೆಸರ್‌ ಕೇವಲ 1 ಮೆಗಾಬೈಟ್‌ನಷ್ಟು ಭೌತಿಕ RAMನ್ನು ಮಾತ್ರ ಸಂಪರ್ಕಿಸಬಹುದು. ಈ ವ್ಯಾಪ್ತಿಯಲ್ಲಿ ಹೆಚ್ಚುವರಿ ಯಂತ್ರಾಂಶವನ್ನು ಸೇರಿಸುವುದರೊಂದಿಗೆ, ಲಭ್ಯವಾದ ಅತಿ ಹೆಚ್ಚು ಸ್ಮೃತಿ ಸಾಮರ್ಥ್ಯ 640 ಕಿಲೋಬೈಟ್‌ಗಳಿಗೆ ಹೆಚ್ಚಿತು. ಇದನ್ನು ಸಾಂಪ್ರದಾಯಿಕ ಸ್ಮೃತಿಪಟಲ ಎನ್ನಲಾಗಿತ್ತು. DOSನ ರಚನೆಯ ಕಾರಣ, ಇದನ್ನು ಗರಿಷ್ಠ ಎಂದು ಊಹಿಸಲಾಗಿತ್ತು. DOS ಇದಕ್ಕಿಂತಲೂ ಹೆಚ್ಚಿನ ಪ್ರಮಾಣವನ್ನು ಸಂಸ್ಕರಿಸಲಾಗುತ್ತಿರಲಿಲ್ಲ. ವರ್ಧಿತ ಸ್ಮೃತಿಯೆಂಬುದು ಆರಂಭಿಕ ಕಾರ್ಯವಾಗಿತ್ತು. ಆನಂತರ, 80286 ಒಂದಿಗೆ ವಿಸ್ತರಿತ ಸ್ಮೃತಿಯನ್ನು ಅಭಿವೃದ್ಧಿಗೊಳಿಸಲಾಯಿತು. ಆನ್ವಯಿಕೆಗಳಿಗೆ ಇವು ಬಳಸಬಹುದಾದ ಸ್ಮೃತಿಗಳನ್ನು ನೀಡಿದರೂ ಸಹ, ಅವು ಸಾಂಪ್ರದಾಯಿಕ ಸ್ಮೃತಿಯಿಂದಲೇ ಆರಂಭಗೊಳ್ಳಬೇಕಾಯಿತು. ಇದರಿಂದಾಗಿ ಚಾಲ್ತಿಯಲ್ಲಿರುವ 640 KBಯಲ್ಲಿ ಒಂದು ಭಾಗವನ್ನು ಬಳಸಿಕೊಂಡಂತಾಯಿತು. 80386 ಮೈಕ್ರೊಪ್ರೊಸೆಸರ್‌ನ ಪುನರ್ವಿನ್ಯಾಸಗೊಂಡ protected modeನೊಂದಿಗೆ, DOS ವಿಸ್ತರಕಗಳು ಹಾಗೂ DOS ಪ್ರೊಟೆಕ್ಟೆಡ್‌ ಮೋಡ್‌ ಇಂಟರ್ಫೇಸ್‌ ಆನ್ವಯಿಕೆಗಳಿಗೆ ಹೆಚ್ಚುವರಿ ಸ್ಮೃತಿ ಸ್ಥಾನ ಹಾಗೂ ಏಕಕಾಲದಲ್ಲಿ ಹಲವು ಕ್ರಿಯೆಗಳಿಗೆ ಅವಕಾಶ ನೀಡುತ್ತಿದ್ದವು.[೪೦][೪೧] ದೃಢ ಡಿಸ್ಕ್‌ ವಿಭಜನೆಗೆ DOSನಲ್ಲಿ ಮೇಲ್ಮಟ್ಟದ ಗಾತ್ರದ ಮಿತಿಯಿದೆ. ಇದಕ್ಕೆ ಎರಡು ಕಾರಣಗಳಿವೆ. ಮೊದಲಿಗೆ, ಹಲವು DOS-ಮಾದರಿಯ ವ್ಯವಸ್ಥೆಗಳು FAT16ಗಿಂತ ಹೊಸತಾದ ಯಾವುದೇ ಕಡತ ವ್ಯವಸ್ಥೆಗೆ ಬೆಂಬಲ ಒದಗಿಸುತ್ತಿರಲಿಲ್ಲ. ವಿನ್ಯಾಸದ ಪ್ರಕಾರ, ಈ ವ್ಯವಸ್ಥೆಯು 2.1 ಗಿಗಾಬೈಟ್‌ಗಿಂತಲೂ ಹೆಚ್ಚಿನ ವಿಭಜನೆಗಳಿಗೆ ಅವಕಾಶ ನೀಡುತ್ತಿರಲಿಲ್ಲ.[೪೨] ಇನ್ನೂ ಹೆಚ್ಚಿಗೆ, ಇಂಟರಪ್ಟ್‌ 13 ಎಂಬುದರ ಮೂಲಕ ದೃಢ ಡಿಸ್ಕ್‌ನತ್ತ ಪ್ರವೇಶ ಪಡೆಯುತ್ತದೆ. ಈ ಇಂಟರಪ್ಟ್‌ 13 ಡಿಸ್ಕ್‌ ಮಾಪನದ ಸಿಲಿಂಡರ್‌-ಹೆಡ್‌-ಸೆಕ್ಟರ್‌ ವ್ಯವಸ್ಥೆಯ ವಿಧಾನವನ್ನು ಬಳಸುತ್ತದೆ. ಈ ವ್ಯವಸ್ಥೆಯಲ್ಲಿ, ಕೇವಲ 8 ಗಿಗಾಬೈಟ್‌ಗಳಷ್ಟು ಮಾತ್ರ ಕಾರ್ಯಾಚರಣಾ ವ್ಯವಸ್ಥೆಗೆ ಗೋಚರಿಸುತ್ತವೆ.[೪೩] ಇದಕ್ಕಿಂತಲೂ ಈಚೆಗಿನ ಕಾರ್ಯಾಚರಣಾ ವ್ಯವಸ್ಥೆಗಳು ತಂತ್ರಾಂಶದ ಮೂಲಕ ಡಿಸ್ಕ್‌ನತ್ತ ಪ್ರವೇಶ ಗಳಿಸಿವೆ. ಉದಾಹರಣೆಗೆ, 32-ಬಿಟ್‌ ಡಿಸ್ಕ್‌ ಅಕ್ಸೆಸ್‌. FAT16 (ಹಾಗೂ ಫ್ಲಾಪಿ ಡಿಸ್ಕ್‌ಗಳಿಗಾಗಿ FAT12) ಬಳಕೆಗೆ 8.3 ಕಡತನಾಮದ ಅಗತ್ಯವಿತ್ತು (ಎಂಟು ಅಕ್ಷರಗಳ ಕಡತನಾಮ ಹಾಗೂ ಚುಕ್ಕೆ (.) ನಂತರ ಮೂರು ಅಕ್ಷರಗಳ ಕಡತನಾಮ-ವಿಸ್ತರಣೆ; ಉದಾಹರಣೆಗೆ AUTOEXEC.BAT) DOSನಲ್ಲಿ ಕಡತನಾಮಗಳು ಎಂಟಕ್ಕಿಂತಲೂ ಹೆಚ್ಚು ಅಕ್ಷರಗಳನ್ನು ಹೊಂದಲಾಗದು, ಕಡತನಾಮ ವಿಸ್ತರಣೆಯು ಮೂರಕ್ಕಿಂತ ಹೆಚ್ಚು ಅಕ್ಷರಗಳನ್ನು ಹೊಂದಲಾಗದು. Win95 (ವಿಂಡೋಸ್‌ 95)ರ ಪೇಟೆಂಟ್‌ ಆಗಿರುವ VFAT ಹ್ಯಾಕ್‌ (ಅತಿಕ್ರಮ ಪ್ರವೇಶ) ಒಂದು ಅಪೂರ್ವ ರೀತಿಯಲ್ಲಿ ಈ ನಿಯಮವನ್ನು ಮುರಿದಿತ್ತು.

ಇವನ್ನೂ ನೋಡಿ

[ಬದಲಾಯಿಸಿ]

ಆಕರಗಳು

[ಬದಲಾಯಿಸಿ]
  1. Murdock, Everett (1988). DOS the Easy Way. EasyWay Downloadable Books. ISBN 0923178007.
  2. MS-DOS ನೋಡಿ
  3. Hyde, Randall (1996-09-30). "CHAPTER EIGHTEEN: RESIDENT PROGRAMS (Part 3)". The Art of Assembly Language Programming. Archived from the original on 2008-06-27. Retrieved 2008-09-02.
  4. Matczynski, Michael. "ZINGTECH - Guide to the New Game Programmer". Retrieved 2008-09-02.
  5. "Microsoft Windows MS DOS Device Name DoS Vulnerability". Archived from the original on 2011-07-25. Retrieved 2008-09-02.
  6. "DOS device names definition". PC Magazine. Archived from the original on 2008-09-29. Retrieved 2008-09-02.
  7. Jump up to: ೭.೦ ೭.೧ "Drive Letter Assignment and Choosing Primary vs. Logical Partitions". The PC Guide. 2007-05-17. Archived from the original on 2008-09-19. Retrieved 2008-09-02.
  8. "Reverse-Engineering DOS 1.0 – Part 1: The Boot Sector « pagetable.com". 090912 pagetable.com
  9. "The Master Boot Record (MBR) and What it Does". Archived from the original on 2013-05-27. Retrieved 2010-07-16. 090912 dewassoc.com
  10. "CONFIG.SYS Commands". Archived from the original on 2009-05-02. Retrieved 2010-07-16. 090913 academic.evergreen.edu
  11. Kozierok, Charles (2001). "The DOS Boot Process". The PC Guide. Retrieved 2008-09-02.
  12. "DR-DOS 7.02 User Guide chapter 9". Caldera Systems. 1998. Archived from the original on 2016-06-07. Retrieved 2009-09-15.
  13. Jump up to: ೧೩.೦ ೧೩.೧ DR DOS 6.0 User Guide. Digital Research. 1991. pp. 320–324.
  14. "misc.txt". Archived from the original on 2010-06-29. Retrieved 2010-07-16. 090912 arl.wustl.edu
  15. PC-DOS v1.10 ಬೂಟ್‌ ಇಮೇಜ್‌ನ 0x01FEಯಲ್ಲಿ 55 AA ಸಿಗ್ನೇಚರ್‌ ಇಲ್ಲ.
  16. Jump up to: ೧೬.೦ ೧೬.೧ ೧೬.೨ Rolander, Tom. The rest of the story: How Bill Gates beat Gary Kildall in OS war, Part 1. (Interview). http://www.podtech.net/scobleshow/technology/1593/the-rest-of-the-story-how-bill-gates-beat-gary-kildall-in-os-war-part-1. 
  17. Bove, Tony (2005). Just Say No to Microsoft. No Starch Press. p. 9–11. ISBN 159327064X.
  18. Jump up to: ೧೮.೦ ೧೮.೧ Bellis, Mary. "The Unusual History of MS-DOS The Microsoft Operating System". Archived from the original on 2012-04-27. Retrieved 2008-09-02.
  19. Pollack, Andrew (1991-07-27). "Microsoft Widens Its Split With I.B.M. Over Software". New York Times. Retrieved 2008-09-02.
  20. Brinkley, Joel (1999-05-28). "I.B.M. Executive Describes Price Pressure by Microsoft". New York Times. Retrieved 2008-09-02.
  21. Jim Hall (2002-03-25). "The past, present, and future of the FreeDOS Project". Archived from the original on 2012-05-29. Retrieved 2008-06-14.
  22. Hall, Jim (September 23, 2006). "History of FreeDOS". freedos.org. Archived from the original on 2007-05-27. Retrieved 2007-05-28.
  23. Jump up to: ೨೩.೦ ೨೩.೧ James Bannan (2006-10-13). "HOW TO: Coax retro DOS games to play on Vista". Retrieved 2008-07-03.
  24. "Finding The DOS In Windows 95". Smart Computing. 1996. Retrieved 2008-07-12. {{cite web}}: Unknown parameter |month= ignored (help)
  25. "ಆರ್ಕೈವ್ ನಕಲು". Archived from the original on 2008-12-29. Retrieved 2010-07-16.
  26. Hall, Jim (2007-07-13). "Jim Hall". Retrieved 2008-06-12.
  27. "Dell PCs Featuring FreeDOS". Retrieved 2008-06-14.
  28. "GPL'd DOS workalike adds features". 2007-04-01. Archived from the original on 2012-05-29. Retrieved 2008-06-01.
  29. "DR DOS Embedded DOS". Archived from the original on 2008-12-21. Retrieved 2008-09-26.
  30. "Datalight DOS Selected for Canon's New Line of Digital Still Cameras". Business Wire. 1999-08-24. Archived from the original on 2012-07-09. Retrieved 2008-09-26.
  31. Jump up to: ೩೧.೦ ೩೧.೧ "DOSBox Information". Retrieved 2008-05-18.
  32. "DOSEMU Home". 2007-05-05. Retrieved 2008-07-03.
  33. "DOS Games on Vista". 2008-03-11. Archived from the original on 2008-09-17. Retrieved 2008-09-02.
  34. Darrow, Barbara (1 February, 2002). "Whatever Happened To Lotus 1-2-3?". Archived from the original on 2009-01-09. Retrieved 2008-07-12. {{cite web}}: Check date values in: |date= (help)
  35. Murdock, Everett. DOS the Easy Way. EasyWay Downloadable Books. pp. 7–12. ISBN 0923178023.
  36. Murdock, Everett. DOS the Easy Way. EasyWay Downloadable Books. p. 71. ISBN 0923178023.
  37. Dvorak, John (1991). Dvorak's Guide to DOS and PC Performance. Osborne McGraw-Hill. pp. 442–444. {{cite book}}: Unknown parameter |coauthors= ignored (|author= suggested) (help)
  38. Perry, Greg (2003). Sams Teach Yourself Windows XP Computer Basics All in One. Sams Publishing. p. 445. ISBN 0672325357. {{cite book}}: Unknown parameter |coauthors= ignored (|author= suggested) (help)
  39. "Chapter 13 Multitasking and Task Switching". Caldera DR-DOS 7.02 User Guide. Caldera Systems. 1998. Archived from the original on 2008-07-04. Retrieved 2008-09-12.
  40. "DOS: still thriving after all these years". Software Magazine. Findarticles.com. 1990. Archived from the original on 2012-05-29. Retrieved 2008-07-10. {{cite web}}: Unknown parameter |month= ignored (help)
  41. Duncan, Ray (1991). Extending DOS: A Programmer's Guide to Protected-Mode DOS (2 ed.). Addison-Wesley. ISBN 0201567989.
  42. Mueller, Scott (2003). Upgrading and Repairing PCs. Que Publishing. p. 812. ISBN 0789729741.
  43. "The Int 13 Interface". The PC Guide. storagereview.com. Archived from the original on 2008-07-04. Retrieved 2008-07-10.


ಟಿಪ್ಪಣಿಗಳು
  • IBM ಕಾರ್ಪೊರೇಷನ್‌, IBM, (ಜನವರಿ 1984). “IBM DOS ರಿಲೀಸ್‌ 2.10 ಕ್ಲಾತ್‌-ಬೌಂಡ್‌ ರೀಟೈಲ್‌ ಹಾರ್ಡ್‌ ಬೋರ್ಡ್‌ ಬಾಕ್ಸ್‌”. ಮೊದಲ ಆವೃತ್ತಿ. IBM ಕಾರ್ಪೊರೇಷನ್‌. ಕ್ರಮ ಸಂಖ್ಯೆ. 6183946
  • IBM ಕಾರ್ಪೊರೇಷನ್‌, IBM, (ಜನವರಿ 1984). “ಡಿಸ್ಕ್‌ ಆಪರೇಟಿಂಗ್‌ ಸಿಸ್ಟಮ್‌ ಯುಸರ್ಸ್‌ ಗೈಡ್ (DOS ರಿಲೀಸ್‌ 2.10)”. ಮೊದಲ ಆವೃತ್ತಿ. ಮೈಕ್ರೊಸಾಫ್ಟ್‌ ಕಾರ್ಪೊರೇಷನ್‌ (ವರ್ಣ ಚಿತ್ರಗಳ ಸಹಿತ, 100 ಪುಟಗಳು) ಕ್ರಮ ಸಂಖ್ಯೆ. 6183947
  • IBM ಕಾರ್ಪೊರೇಷನ್‌, IBM, (ಜನವರಿ 1984). “ಡಿಸ್ಕ್‌ ಆಪರೇಟಿಂಗ್‌ ಸಿಸ್ಟಮ್‌ ಮ್ಯಾನುಯಲ್‌ (DOS ರಿಲೀಸ್‌ 2.10)”. ಮೊದಲ ಆವೃತ್ತಿ. ಮೈಕ್ರೊಸಾಫ್ಟ್‌ ಕಾರ್ಪೊರೇಷನ್‌ (3 ರಿಂಗ್‌ ಫೋಲ್ಡರ್‌ನಲ್ಲಿ 574 ಬಿಡಿ ಹಾಳೆಗಳು) ಕ್ರಮ ಸಂಖ್ಯೆ 6183940
  • IBM ಕಾರ್ಪೊರೇಷನ್‌, IBM, (ಮೇ 1984). “BASIC HANDBOOK ಜನರಲ್‌ ಪ್ರೊಗ್ರಾಮಿಂಗ್‌ ಇನ್ಫರ್ಮೇಷನ್‌ (BASIC ರಿಲೀಸ್‌ 3.0)”. 3ನೆಯ ಆವೃತ್ತಿ. IBM ಕಾರ್ಪೊರೇಷನ್‌ (127 ಪುಟಗಳು) ಕ್ರಮಸಂಖ್ಯೆ 6361129
  • IBM ಕಾರ್ಪೊರೇಷನ್‌, IBM, (ಮೇ 1984). “BASIC ರೆಫೆರೆನ್ಸ್‌ (BASIC ರಿಲೀಸ್‌ 3.0)”. 3ನೆಯ ಆವೃತ್ತಿ. IBM ಕಾರ್ಪೊರೇಷನ್‌. ಕ್ರಮ ಸಂಖ್ಯೆ 6361134

ಹೊರಗಿನ ಕೊಂಡಿಗಳು

[ಬದಲಾಯಿಸಿ]