ವಿಷಯಕ್ಕೆ ಹೋಗು

ಸದಸ್ಯ:Ksj dr

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮಸ್ಕಾರಗಳು!

ನನ್ನ ಹೆಸರು ಕಿರಣ, ನಾನು ಮೂಲತಃ ದಾವಣಗೆರೆಯವನು. ಎರಡೂವರೆ ದಶಕಗಳನ್ನು ಒಂದೇ ಬೀದಿಯಲ್ಲಿ ಕಳೆದ ನಾನು ಈಗ ವ್ಯಾಸಂಗ/ವೃತ್ತಿ ಮಾಡುತ್ತಿರುವುದು ಇಂಗ್ಲೆಂಡ್ ದೇಶದಲ್ಲಿ. ಬಂದ ಎರಡು ವರ್ಷ ಅಸ್ತಿತ್ವಕ್ಕಾಗಿಯೇ ಹೋರಾಡಬೇಕಾಯಿತು, ಈಗ 'ಸೆಟಲ್' ಆದ ಲಕ್ಷಣ ಕಂಡು ಬರುತ್ತಿರುವಾಗ ತಾಯ್ನಾಡು-ಭಾಷೆಯ ನೆನಪು ಕಾಡುತ್ತದೆ. ಕನ್ನಡಕ್ಕಾಗಿ ಕಿರುಬೆರಳೆತ್ತುವ ಹಂಬಲ ನನ್ನನ್ನು ವಿಕಿಪೀಡಿಯಕ್ಕೆ ಕರೆದುತಂದಿತು. ಇಲ್ಲಿರುವ ಹಳೆಯ ಸದಸ್ಯರ ಕೆಲಸವೇ ನನಗೆ ಸ್ಫೂರ್ತಿ ಮತ್ತು ಮಾರ್ಗದರ್ಶನ. ಬನ್ನಿ, ಎಲ್ಲರೂ ಭಾಗವಹಿಸೋಣ! Ksj dr ೧೩:೦೦, ೨೯ September ೨೦೦೬ (UTC)