ವಿಷಯಕ್ಕೆ ಹೋಗು

ಆಂಧ್ರ ಪ್ರದೇಶ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಂಧ್ರ ಪ್ರದೇಶ
ಆಂಧ್ರ ಪ್ರದೇಶ
ಆಂಧ್ರ ಪ್ರದೇಶ
state
 • Rank8th
Population
 • Total೭,೬೨,೧೦,೦೦೭
 • Rank5th
Websitewww.ap.gov.in

ಆಂಧ್ರ ಪ್ರದೇಶ (ತೆಲುಗು:ఆంధ్ర ప్రదేశ్) (pronunciation, ಭಾಷಾಂತರ: ಆಂಧ್ರದ ಪ್ರಾಂತ್ಯ, ಸಂಕ್ಷಿಪ್ತವಾಗಿ ಎ.ಪಿ. ಎಂದು ಕರೆಯಲ್ಪಡುವ ರಾಜ್ಯವಾಗಿದ್ದು ಇದುಭಾರತದ ಆಗ್ನೇಯ ಕರಾವಳಿ ಭಾಗದಲ್ಲಿದೆ. ಭಾರತದಲ್ಲಿ ಇದು ವಿಸ್ತೀರ್ಣದ ಆಧಾರದಲ್ಲಿ ಭಾರತದ ರಾಜ್ಯಗಳ ವಿಸ್ತೀರ್ಣದಲ್ಲಿ ಎಂಟನೇ ಅತಿದೊಡ್ಡ ರಾಜ್ಯವಾಗಿದೆ ಮತ್ತು ಜನಸಂಖ್ಯೆಯ ಆಧಾರದಲ್ಲಿ ಭಾರತದ ರಾಜ್ಯಗಳ ಜನಸಂಖ್ಯೆಯಲ್ಲಿ ಹತ್ತನೇ ಅತಿ ದೊಡ್ಡ ರಾಜ್ಯವಾಗಿದೆ. ಪ್ರಸ್ತುತ ರಾಜಧಾನಿ ಮತ್ತು ಹೈದರಾಬಾದ್‌. ಆಂಧ್ರ ಪ್ರದೇಶದ ಹೊಸ ರಾಜಧಾನಿ ಅಮರಾವತಿ ಎಂದು ಗುರುತಿಸಲಾಗಿದೆ‌. ದೇಶದ ಎಲ್ಲ ರಾಜ್ಯಗಳ ಪೈಕಿ ಆಂಧ್ರ ಪ್ರದೇಶವು ಎರಡನೇ ಅತಿ ಉದ್ದದ ಕರಾವಳಿ (೯೭೨ km)ಪ್ರದೇಶವನ್ನು ಹೊಂದಿದೆ. ಗುಜರಾತ್‌‌ ರಾಜ್ಯವು ಅತಿ ಉದ್ದದ ಕರಾವಳಿ (೧೬೦೦ km)ಯನ್ನು ಹೊಂದಿದ್ದು, ದೇಶದಲ್ಲೇ ಮೊದಲ ಸ್ಥಾನದಲ್ಲಿದೆ.[] ಆಂಧ್ರ ಪ್ರದೇಶವು ೧೨°೪೧' ಮತ್ತು ೨೨°N ಅಕ್ಷಾಂಶ ಹಾಗೂ ೭೭° ಮತ್ತು ೮೪°೪೦'E ರೇಖಾಂಶಗಳ ನಡುವೆ ಇದೆ. ಇದು ಉತ್ತರದಲ್ಲಿ ಮಹಾರಾಷ್ಟ್ರ, ಛತ್ತಿಸ್‌ಗಡ ಮತ್ತು ಒಡಿಶಾ ರಾಜ್ಯಗಳು, ಪೂರ್ವದಲ್ಲಿ ಬಂಗಾಳಕೊಲ್ಲಿ, ದಕ್ಷಿಣಕ್ಕೆ ತಮಿಳುನಾಡು ಹಾಗೂ ಪಶ್ಚಿಮಕ್ಕೆ ಕರ್ನಾಟಕ ರಾಜ್ಯವನ್ನು ತನ್ನ ಗಡಿಯನ್ನಾಗಿ ಹೊಂದಿದೆ. ಆಂಧ್ರ ಪ್ರದೇಶವು ಐತಿಹಾಸಿಕವಾಗಿ "ಭಾರತದ ಅನ್ನದ ಪಾತ್ರೆ " ಎಂದು ಕರೆಯಲ್ಪಟ್ಟಿದೆ. ಏಕೆಂದರೆ, ೭೭%ಗೂ ಹೆಚ್ಚಿನ ಪ್ರಮಾಣದಲ್ಲಿ ಇಲ್ಲಿ ಭತ್ತವನ್ನು ಬೆಳೆಯಲಾಗುತ್ತದೆ. ಇದರ [] ಎರಡು ಪ್ರಮುಖ ನದಿಗಳಾದ ಗೋದಾವರಿ ಮತ್ತು ಕೃಷ್ಣಾ ರಾಜ್ಯದ ಉದ್ದಗಲಕ್ಕೂ ಹರಿಯುತ್ತವೆ. ಪುದುಚೆರಿ (ಪಾಂಡಿಚೆರಿ) ರಾಜ್ಯದ ಯಾಣಮ್ ಜಿಲ್ಲೆಯ ಪರಾವೃತ ಪ್ರದೇಶವು (೧೨ sq mi (೩೦ km²)) ರಾಜ್ಯದ ಈಶಾನ್ಯ ಭಾಗದಲ್ಲಿನ ಗೋದಾವರಿ ನದಿ ಮುಖಜ ಭೂಮಿ ಪ್ರದೇಶದಲ್ಲಿದೆ. ರಾಜ್ಯವನ್ನು ಒಳಗೊಂಡ ಪ್ರದೇಶವನ್ನು ಐತಿಹಾಸಿಕವಾಗಿ ಆಂಧ್ರಾಪಥ , ಆಂಧ್ರದೇಸ , ಆಂಧ್ರಾವನಿ ಮತ್ತು ಆಂಧ್ರ ವಿಷಯ ಎಂದು ಕರೆಯಲಾಗುತ್ತಿತ್ತು.[] ಆಂಧ್ರ ಪ್ರದೇಶವು ೧೯೫೬ರ ನವೆಂಬರ್ ೧ರಂದು ಆಂಧ್ರ ರಾಜ್ಯದಿಂದ ರಚನೆಯಾಯಿತು.

ಆಂಧ್ರ ಪ್ರದೇಶದ ರಾಜ್ಯ ಚಿಹ್ನೆಗಳು
ರಾಜ್ಯ ಭಾಷೆ ತೆಲುಗು
ರಾಜ್ಯ ಚಿನ್ಹೆ ಪೂರ್ಣಕುಂಭಂ
ರಾಜ್ಯ ಗೀತೆ "ಮಾ ತೆಲುಗುತಲ್ಲಿಕಿ ಮಲ್ಲೆಪೂದಂಡ"

ರಾಜ್ಯ ಪ್ರಾಣಿ

ಕೃಷ್ಣ ಮೃಗ

ರಾಜ್ಯ ಪಕ್ಷಿ

ಉರುಳು ಹಕ್ಕಿ

ರಾಜ್ಯ ವೃಕ್ಷ

ಬೇವು

ರಾಜ್ಯ ಕ್ರೀಡ

ಕಬಡ್ಡಿ

ರಾಜ್ಯ ನೃತ್ಯ

ಕೂಚಿಪೂಡಿ
ರಾಜ್ಯ ಪುಷ್ಪ ಜಲ ನೈದಿಲೆ

ಇತಿಹಾಸ

[ಬದಲಾಯಿಸಿ]

ಐತರೇಯ ಬ್ರಾಹ್ಮಣ (B.C.೮೦೦) ಹಾಗೂ ಮಹಾಭಾರತದಂತಹ ಸಂಸ್ಕೃತ ಮಹಾಕಾವ್ಯಗಳಲ್ಲಿ ಆಂಧ್ರ ಸಾಮ್ರಾಜ್ಯ ವೊಂದರ ಬಗ್ಗೆ ಉಲ್ಲೇಖಿಸಲಾಗಿದೆ. []"ಆಂಧ್ರ" ಜನಾಂಗದ ಬಗೆಗೆ ಭರತನ ನಾಟ್ಯಶಾಸ್ತ್ರದಲ್ಲೂ (B.C ೧ನೇ ಶತಮಾನ) ಉಲ್ಲೇಖವಾಗಿದೆ. []ಭಟ್ಟಿಪ್ರೊಲುವಿನಲ್ಲಿ ಪತ್ತೆಯಾದ ಶಾಸನಗಳಲ್ಲಿ ತೆಲುಗು ಭಾಷೆಯ ಮೂಲ ಪತ್ತೆಯಾಗಿದೆ.[] ಚಂದ್ರಗುಪ್ತ ಮೌರ್ಯ(B.C.೩೨೨–೨೯೭)ನ ಆಸ್ಥಾನಕ್ಕೆ ಭೇಟಿ ನೀಡಿದ್ದ ಮೆಗಾಸ್ತನೀಸ್‌ನು, ಕೋಟೆಗಳಿಂದ ಸುತ್ತುವರಿಯಲ್ಪಟ್ಟಿರುವ ೩ ಪಟ್ಟಣಗಳು, ೧೦೦,೦೦೦ ಪದಾತಿ ದಳ, ೨೦೦ ಅಶ್ವದಳ ಮತ್ತು ೧,೦೦೦ ಆನೆಗಳನ್ನು ಒಳಗೊಂಡ ಸೈನ್ಯವನ್ನು ಆಂಧ್ರ ದೇಶವು ಹೊಂದಿತ್ತು ಎಂದು ಉಲ್ಲೇಖಿಸಿದ್ದಾನೆ. ಆ ಸಮಯದಲ್ಲಿ ಆಂಧ್ರರು ತಮ್ಮ ಸಾಮ್ರಾಜ್ಯವನ್ನು ಗೋದಾವರಿ ನದಿಬಯಲಿನಲ್ಲಿ ನಿರ್ಮಿಸಿದರು ಎಂದು ಬೌದ್ಧ ಗ್ರಂಥಗಳು ಹೇಳುತ್ತವೆ. ಆಂಧ್ರರು ತನ್ನ ಸಾಮಂತರಾಗಿದ್ದರು ಎಂದು ಅಶೋಕನು ತನ್ನ ೧೩ನೇ ಶಿಲಾ ಶಾಸನದಲ್ಲಿ ಉಲ್ಲೇಖಿಸಿದ್ದಾನೆ.[] ಶಾಸನಾಧಾರಗಳು ತೋರಿಸುವಂತೆ ಆಂಧ್ರದ ಕರಾವಳಿಯಲ್ಲಿ ಆರಂಭಿಕ ಸಾಮ್ರಾಜ್ಯವೊಂದಿದ್ದು, ಅದನ್ನು ಕುಬೇರಕ[] ನು ಆಳುತ್ತಿದ್ದನು ಮತ್ತು ಪ್ರತಿಪಾಲಪುರವು(ಭಟ್ಟಿಪ್ರೊಲು) ಅವನ ರಾಜಧಾನಿಯಾಗಿತ್ತು. ಬಹುಶಃ ಇದು ಭಾರತದಲ್ಲಿನ ಅತ್ಯಂತ ಪ್ರಾಚೀನವಾದ ಪ್ರಸಿದ್ಧ ಸಾಮ್ಯಾಜ್ಯವಾಗಿರಬಹುದು.[] ಅದೇ ಸಮಯದ ಆಸುಪಾಸಿನಲ್ಲಿ ಧಾನ್ಯಕಟಕಮ್‌/ಧರಣಿಕೋಟ(ಈಗಿನ ಅಮರಾವತಿ) ಒಂದು ಮುಖ್ಯವಾದ ಸ್ಥಳವಾಗಿತ್ತು ಎಂದು ಕಾಣುತ್ತದೆ. ಈ ಸ್ಥಳಕ್ಕೆ ಗೌತಮ ಬುದ್ಧರು ಭೇಟಿ ನೀಡಿದ್ದರು. ಪ್ರಾಚೀನ ಟಿಬೆಟ್‌ ವಿದ್ವಾಂಸ ತಾರಾನಾಥರ ಪ್ರಕಾರ: "ತನಗೆ ಜ್ಞಾನೋದಯವಾದ ನಂತರದ ವರ್ಷದ ಚೈತ್ರ ಮಾಸದ ಹುಣ್ಣಿಮೆಯ ದಿನದಂದು, ಧಾನ್ಯಕಟಕದ ಮಹಾನ್‌ ಸ್ತೂಪದಲ್ಲಿ ಬುದ್ಧನು 'ಭವ್ಯವಾದ ಚಾಂದ್ರ ಸೌಧಗಳ' (ಕಾಲಚಕ್ರ) ಮಂಡಲವನ್ನು ಹೊರಹೊಮ್ಮಿಸಿದನು." [೧೦][೧೧] thumb|left|ವಾರಂಗಲ್‌ನಲ್ಲಿರುವ ಕಾಕತೀಯರ ಶಿಲ್ಪಕಲೆ BCE ೧೪ನೇ ಶತಮಾನದಲ್ಲಿ ಮೌರ್ಯರು ತಮ್ಮ ಆಳ್ವಿಕೆಯನ್ನು ಅಂಧ್ರದವರೆಗೂ ವಿಸ್ತರಿಸಿದರು. ಮೌರ್ಯ ಸಾಮ್ರಾಜ್ಯದ ಪತನಾನಂತರ ಆಂಧ್ರದ ಶಾತವಾಹನರು BCE ೩ನೇ ಶತಮಾನದಲ್ಲಿ ಸ್ವತಂತ್ರರಾದರು. ಶಾತವಾಹನರು CE ೨೨೦ರಲ್ಲಿ ಅವನತಿ ಹೊಂದಿದ ನಂತರ ಇಕ್ಷ್ವಾಕು ಮನೆತನ, ಪಲ್ಲವರು, ಆನಂದ ಗೋತ್ರಿಕರು, ವಿಷ್ಣುಕುಂದಿನರು, ಪೂರ್ವದ ಚಾಲುಕ್ಯರು ಮತ್ತು ಚೋಳರು ತೆಲುಗು ನಾಡನ್ನು ಆಳಿದರು. CE ೫ನೇ ಶತಮಾನದಲ್ಲಿ ರೇನಾಟಿ ಚೋಳರು(ಕಡಪ ಪ್ರದೇಶ) ಆಳ್ವಿಕೆ ನಡೆಸುತ್ತಿದ್ದ ಸಮಯದಲ್ಲಿ ತೆಲುಗು ಭಾಷೆಯ ಶಾಸನಾಧಾರಗಳು [೧೨] ದೊರೆತವು. ಈ ಅವಧಿಯಲ್ಲಿ ಪ್ರಾಕೃತ ಮತ್ತು ಸಂಸ್ಕೃತ ಭಾಷೆಗಳ ಪ್ರಾಬಲ್ಯವನ್ನು ತಗ್ಗಿಸಿ ತೆಲುಗು ಭಾಷೆಯು ಜನಪ್ರಿಯ ಮಾಧ್ಯಮವಾಗಿ ಹೊರಹೊಮ್ಮಿತು.[೧೩]ವಿನುಕೊಂಡವನ್ನು ರಾಜಧಾನಿಯಾಗಿ ಮಾಡಿಕೊಂಡು ಆಳ್ವಿಕೆ ನಡೆಸಿದ ವಿಷ್ಣುಕುಂದಿನ ರಾಜರಿಂದ ತೆಲುಗು ಅಧಿಕೃತ ಭಾಷೆಯಾಯಿತು. ವಿಷ್ಣುಕುಂದಿನರು ಅವನತಿ ಹೊಂದಿದ ನಂತರ, ಪೂರ್ವದ ಚಾಲುಕ್ಯರು ವೆಂಗಿಯಲ್ಲಿನ ತಮ್ಮ ರಾಜಧಾನಿಯಿಂದ ಸುದೀರ್ಘ ಕಾಲದವರೆಗೆ ಆಳ್ವಿಕೆ ನಡೆಸಿದರು.ಇವರು CE ೧ನೇ ಶತಮಾನದದ ಆರಂಭದಲ್ಲಿ ಶಾತವಾಹನರು ಮತ್ತು ನಂತರದ ದಿನಗಳಲ್ಲಿ ಇಕ್ಷ್ವಾಕು ಮನೆತನಗಳ ಅಡಿಯಲ್ಲಿ ಚಾಲುಕ್ಯರು, ಸಾಮಂತರು ಮತ್ತು ಸೇನಾನಾಯಕರಾಗಿದ್ದರು ಎಂದು ಉಲ್ಲೇಖವಾಗಿದೆ. ಚಾಲುಕ್ಯ ದೊರೆಯಾದ ರಾಜರಾಜ ನರೇಂದ್ರನು ರಾಜಮುಂಡ್ರಿಯನ್ನು CE ೧೦೨೨ರ ಆಸುಪಾಸಿನಲ್ಲಿ ಆಳಿದನು. ಪಲ್ನಾಡು ಯದ್ಧದಿಂದಾಗಿ ಪೂರ್ವದ ಚಾಲುಕ್ಯರ ಶಕ್ತಿಯು ದುರ್ಬಲಗೊಂಡಿತು ಮತ್ತು ಇದರ ಪರಿಣಾಮವಾಗಿ CE ೧೨ ಮತ್ತು ೧೩ನೇ ಶತಮಾನದಲ್ಲಿ ಕಾಕತೀಯಸಾಮ್ರಾಜ್ಯವು ಪ್ರವರ್ಧಮಾನಕ್ಕೆ ಬಂದಿತು. ವಾರಂಗಲ್‌ ಸಮೀಪದ ಸಣ್ಣ ಪ್ರದೇಶವನ್ನು ಆಳುತ್ತಿದ್ದ ರಾಷ್ಟ್ರಕೂಟರಿಗೆ ಕಾಕತೀಯರು ಮೊದಲ ಊಳಿಗಮಾನ್ಯ ಸಾಮಂತರಾಗಿದ್ದರು. ಕಾಕತೀಯರಿಂದ ಎಲ್ಲ ತೆಲುಗು ಪ್ರದೇಶಗಳು ಒಂದುಗೂಡಿದವು. CE ೧೩೨೩ರಲ್ಲಿ, ದೆಹಲಿಯ ಸುಲ್ತಾನನಾದ ಘಿಯಾಜುದ್ದೀನ್‌ ತುಘಲಕ್‌ನು ತೆಲುಗು ದೇಶವನ್ನು ಗೆಲ್ಲಲು ಮತ್ತು ವಾರಂಗಲ್‌‌ನ್ನು ವಶಪಡಿಸಿಕೊಳ್ಳಲು ಉಲುಘ್‌‌ ಖಾನ್‌ ನೇತೃತ್ವದಲ್ಲಿ ದೊಡ್ಡ ಸೈನ್ಯವನ್ನು ಕಳಿಸಿದನು.ಪ್ರತಾಪರುದ್ರರಾಜನನ್ನು ಯುದ್ಧಖೈದಿಯಾಗಿ ಕರೆದೊಯ್ಯಲಾಯಿತು. CE ೧೩೨೬ರಲ್ಲಿ ದೆಹಲಿ ಸುಲ್ತಾನರಿಂದ ವಾರಂಗಲ್‌ನ್ನು ಪುನಃ ವಶಪಡಿಸಿಕೊಂಡ ಮುಸುನೂರಿ ನಾಯಕರು, ಮುಂದಿನ ೫೦ ವರ್ಷಗಳವರೆಗೆ ಆಳ್ವಿಕೆ ನಡೆಸಿದನು. ಅವರ ಈ ವಿಜಯದ ಪ್ರೇರಣೆಯಿಂದ ಆಂಧ್ರ ಪ್ರದೇಶ ಮತ್ತು ಭಾರತದ ಇತಿಹಾಸದಲ್ಲಿನ ಮಹಾನ್‌ ಚಕ್ರಾಧಿಪತ್ಯಗಳಲ್ಲಿ ಒಂದಾದ ವಿಜಯನಗರ ಸಾಮ್ರಾಜ್ಯವು ಸ್ಥಾಪನೆಯಾಯಿತು. ವಾರಂಗಲ್‌ನ ಕಾಕತೀಯರ ಖಜಾನೆ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿದ್ದ ಹರಿಹರ ಮತ್ತು ಬುಕ್ಕರು ಈ ಸಾಮ್ರಾಜ್ಯದ ಸಂಸ್ಥಾಪಕರು.[೧೪] ಅಲ್ಲಾವುದ್ದೀನ್‌ ಹಸನ್‌ ಗಂಗು ಎಂಬುವವನು ದೆಹಲಿ ಸುಲ್ತಾನರ ವಿರುದ್ಧ ದಂಗೆಯೆದ್ದು, CE ೧೩೪೭ನೇ ಇಸವಿಯಲ್ಲಿ ಬಹಮನಿ ಸಾಮ್ರಾಜ್ಯ ಎಂಬ ಸ್ವತಂತ್ರ ಮುಸ್ಲಿಂ ರಾಜ್ಯವನ್ನು ದಕ್ಷಿಣ ಭಾರತದಲ್ಲಿ ಸ್ಥಾಪನೆ ಮಾಡಿದನು. ಕುತುಬ್‌ ಷಾಹಿ ಮನೆತನವು, ೧೬ನೇ ಶತಮಾನದ ಆರಂಭದಿಂದ ೧೭ನೇ ಶತಮಾನದ ಅಂತ್ಯದವರೆಗೆ, ಅಂದರೆ ಸುಮಾರು ಇನ್ನೂರು ವರ್ಷಗಳ ಕಾಲ ಆಂಧ್ರ ದೇಶದ ಮೇಲೆ ಪ್ರಭುತ್ವ ಸಾಧಿಸಿತ್ತು.

ಹೈದರಾಬಾದ್‌ನಲ್ಲಿನ ಚಾರ್ಮಿನಾರ್‌

ವಸಾಹತು ಭಾರತದಲ್ಲಿ ಉತ್ತರದ ಸರ್ಕಾರ್‌ಗಳು ಬ್ರಿಟಿಷ್‌ ಆಳ್ವಿಕೆಯ ಮದ್ರಾಸ್‌ ಪ್ರಾಂತ್ಯದ ಭಾಗವಾದರು. ಅಂತಿಮವಾಗಿ ಈ ಪ್ರದೇಶವು ಕರಾವಳಿ ಆಂಧ್ರ ಪ್ರಾಂತ್ಯವಾಗಿ ಹೊರಹೊಮ್ಮಿತು. ನಂತರ ನಿಜಾಮ‌ನು ಐದು ಪ್ರದೇಶಗಳನ್ನು ಬ್ರಿಟಿಷರಿಗೆ ಬಿಟ್ಟುಕೊಟ್ಟನು. ಮುಂದೆ ಈ ಪ್ರದೇಶಗಳೇ ರಾಯಲಸೀಮಾ ಪ್ರಾಂತ್ಯವಾಗಿ ಹೊರಹೊಮ್ಮಿತು.ಸ್ಥಳೀಯ ಸ್ವಯಮಾಧಿಪತ್ಯಕ್ಕೆ ಪ್ರತಿಯಾಗಿ ಬ್ರಿಟಿಷ್‌ ಆಡಳಿತವನ್ನು ಒಪ್ಪಿಕೊಂಡ ನಿಜಾಮರು, ಹೈದರಾಬಾದ್‌ನ ರಾಜೋಚಿತ ರಾಜ್ಯವಾಗಿ ಒಳನಾಡು ಪ್ರಾಂತ್ಯಗಳ ಮೇಲೆ ತಮ್ಮ ನಿಯಂತ್ರಣವನ್ನು ಉಳಿಸಿಕೊಂಡರು. ಈ ಮಧ್ಯೆ, ಗೋದಾವರಿ ನದೀ ಮುಖಜ ಭೂಮಿಯಲ್ಲಿ ಯಾಣಮ್‌ (ಯಾಣೋನ್‌)ನ್ನು ಫ್ರೆಂಚರು ಆಕ್ರಮಿಸಿಕೊಂಡರು ಹಾಗೂ ಅದನ್ನು ೧೯೫೪ರವರೆಗೂ (ಬ್ರಿಟಷ್‌ ನಿಯಂತ್ರಣದ ಅವಧಿಗಳನ್ನು ಹೊರತುಪಡಿಸಿ) ತಮ್ಮ ಹಿಡಿತದಲ್ಲಿಟ್ಟುಕೊಂಡರು. ೧೯೪೭ರಲ್ಲಿ ಯುನೈಟೆಡ್‌ ಕಿಂಗ್‌ಡಂನಿಂದ ಭಾರತವು ಸ್ವತಂತ್ರಗೊಂಡಿತು. ಹೈದರಾಬಾದ್‌ನ ಮುಸ್ಲಿಂ ನಿಜಾಮನು ಭಾರತದಿಂದ ತನ್ನ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಲು ಬಯಸಿದನು. ಆದರೆ, ಆ ಪ್ರಾಂತ್ಯದ ಜನರು ಭಾರತದ ಒಕ್ಕೂಟಕ್ಕೆ ಸೇರಲು ಚಳವಳಿಯನ್ನು ಆರಂಭಿಸಿದರು. ೫ ದಿನಗಳ ಕಾಲ ನಡೆದ ಪೋಲೋ ಕಾರ್ಯಾಚರಣೆಗೆ ಹೈದರಾಬಾದ್ ರಾಜ್ಯದ ಜನತೆಯ ಅಪೂರ್ವ ಬೆಂಬಲ ದೊರೆತಿದ್ದರಿಂದಾಗಿ, ೧೯೪೮ರಲ್ಲಿ ಹೈದರಾಬಾದ್ ರಾಜ್ಯವು ಬಲವಂತವಾಗಿ ಭಾರತ ಗಣರಾಜ್ಯದ ಒಂದು ಭಾಗವಾಗಬೇಕಾಯಿತು. ಮದ್ರಾಸ್‌ ರಾಜ್ಯದ ತೆಲುಗು ಜನರ ಹಿತಾಸಕ್ತಿಗಳನ್ನು ಕಾಪಾಡುವ ಮತ್ತು ಸ್ವತಂತ್ರ ರಾಜ್ಯವನ್ನು ಗಳಿಸುವ ಪ್ರಯತ್ನದಲ್ಲಿ ಉಪವಾಸ ಆರಂಭಿಸಿದ ಅಮರಜೀವಿ ಪೊಟ್ಟಿ ಶ್ರೀರಾಮುಲು ಉಪವಾಸದಿಂದಲೇ ತಮ್ಮ ಪ್ರಾಣತ್ಯಾಗ ಮಾಡಿದರು. ಅವರ ಸಾವಿನ ನಂತರ ಸಾರ್ವಜನಿಕರ ಹುಯಿಲು ಮತ್ತು ನಾಗರಿಕ ಕ್ಷೋಭೆಗೆ ಹೆದರಿದ ಸರ್ಕಾರವು ಅನಿವಾರ್ಯವಾಗಿ ತೆಲುಗು ಭಾಷಿಕರಿಗಾಗಿ ಹೊಸ ರಾಜ್ಯವೊಂದನ್ನು ರಚಿಸುವುದಾಗಿ ಅಧಿಕೃತವಾಗಿ ಘೋಷಿಸಿತು. ೧೯೫೩ರ ಅಕ್ಟೋಬರ್‌ ೧ರಂದು ಆಂಧ್ರಕ್ಕೆ ರಾಜ್ಯದ ಸ್ಥಾನಮಾನವು ದಕ್ಕಿ, ಕರ್ನೂಲ್ ಅದರ ರಾಜಧಾನಿಯಾಯಿತು. ೧೯೫೬ರ ನವೆಂಬರ್‌ ೧ರಂದು ಆಂಧ್ರರಾಜ್ಯವು ಹೈದರಾಬಾದ್‌ ರಾಜ್ಯದ ತೆಲಂಗಾಣ ಪ್ರಾಂತ್ಯದಲ್ಲಿ ವಿಲೀನವಾಗುವ ಮೂಲಕ ಆಂಧ್ರ ಪ್ರದೇಶ ರಾಜ್ಯದ ರಚನೆಯಾಯಿತು. ಹೈದರಾಬಾದ್‌ ರಾಜ್ಯದ ಹಿಂದಿನ ರಾಜಧಾನಿಯಾಗಿದ್ದ ಹೈದರಾಬಾದ್‌ನ್ನು ಆಂಧ್ರ ಪ್ರದೇಶ ಎಂಬ ಹೊಸ ರಾಜ್ಯದ ರಾಜಧಾನಿಯಾಗಿ ಮಾಡಲಾಯಿತು. ೧೯೫೪ರಲ್ಲಿ ಫ್ರೆಂಚರಿಂದ ಯಾಣಮ್‌ ಬಿಡುಗಡೆ ಹೊಂದಿತು. ಆದರೆ ಜಿಲ್ಲೆಯ ಪ್ರತ್ಯೇಕ ಮತ್ತು ವಿಶಿಷ್ಟ ಅನನ್ಯತೆಯನ್ನು ಉಳಿಸಬೇಕು ಎಂಬುದು ಬಿಡುಗಡೆಯ ಒಪ್ಪಂದದ ಷರತ್ತಾಗಿತ್ತು. ಇದು ದಕ್ಷಿಣ ಭಾರತದ ಇತರ ಪರಾವೃತ ಪ್ರದೇಶಗಳಿಗೂ ಅನ್ವಯಿಸಿ, ಇಂದಿನ ಪುದುಚೆರಿ ರಾಜ್ಯದ ರಚನೆಯಾಯಿತು.

ಭೂಗೋಳ ಮತ್ತು ಹವಾಮಾನ

[ಬದಲಾಯಿಸಿ]

ಆಂಧ್ರ ಪ್ರದೇಶದ ಹವಾಮಾನವು ಸಾಮಾನ್ಯವಾಗಿ ಬಿಸಿ ಮತ್ತು ತೇವಾಂಶದಿಂದ ಕೂಡಿರುತ್ತದೆ. ನೈರುತ್ಯ ಮಳೆ‌ ಮಾರುತಗಳು ರಾಜ್ಯದ ಹವಾಮಾನವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಆದರೆ ಆಂಧ್ರ ಪ್ರದೇಶದಲ್ಲಿನ ಚಳಿಗಾಲವು ಹಿತಕರವಾಗಿರುತ್ತದೆ. ಆದ್ದರಿಂದ ಈ ಸಮಯದಲ್ಲಿಯೇ ರಾಜ್ಯವು ತನ್ನ ಬಹುತೇಕ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಆಂಧ್ರ ಪ್ರದೇಶದಲ್ಲಿ ಬೇಸಿಗೆ ಕಾಲವು ಮಾರ್ಚ್‌ನಿಂದ ಜೂನ್‌ವರೆಗೂ ಇರುತ್ತದೆ. ಈ ತಿಂಗಳುಗಳ ಅವಧಿಯಲ್ಲಿ ಪಾದರಸದ ಮಟ್ಟವು ತುಂಬಾ ಉನ್ನತವಾಗಿರುತ್ತದೆ. ಕರಾವಳಿ ಪ್ರದೇಶದಲ್ಲಿನ ಬೇಸಿಗೆ ತಾಪಮಾನವು ಸಾಮಾನ್ಯವಾಗಿ ರಾಜ್ಯದ ಉಳಿದ ಭಾಗಗಳಿಗಿಂತ ಹೆಚ್ಚಿರುತ್ತದೆ. ಬೇಸಿಗೆಯಲ್ಲಿ, ತಾಪಮಾನವು ಸಾಮಾನ್ಯವಾಗಿ ೨೦ °C ಮತ್ತು ೪೦ °C ನ ನಡುವಣ ಇರುತ್ತದೆ. ಕೆಲವೊಂದು ಪ್ರದೇಶಗಳಲ್ಲಿ ಬೇಸಿಗೆಯ ದಿನವೊಂದರಲ್ಲಿ ತಾಪಮಾನವು ೪೫ ಡಿಗ್ರಿಗಳಷ್ಟು ಮಟ್ಟವನ್ನು ಮುಟ್ಟಿರುತ್ತದೆ. ಜುಲೈನಿಂದ ಸೆಪ್ಟೆಂಬರ್ ನಡುವಿನ ಅವಧಿಯು ಆಂಧ್ರ ಪ್ರದೇಶದಲ್ಲಿ ಸಮೃಧ್ಧ ಮಳೆಯಾಗುವ ಕಾಲ. ಹಾಗಾಗಿ ಈ ತಿಂಗಳುಗಳ ಅವಧಿಯಲ್ಲಿ ರಾಜ್ಯದಲ್ಲಿ ಹೆಚ್ಚಿನ ಮಳೆಯಾಗುತ್ತದೆ. ಆಂಧ್ರ ಪ್ರದೇಶದಲ್ಲಿ ಬೀಳುವ ಒಟ್ಟು ಮಳೆಯ ಮೂರನೇ ಒಂದು ಭಾಗವನ್ನು ಈಶಾನ್ಯ ಮಳೆ ಮಾರುತಗಳು ಹೊತ್ತು ತರುತ್ತವೆ. ಕೆಲವು ವೇಳೆ ಅಕ್ಟೋಬರ್ ತಿಂಗಳ ಆಸುಪಾಸಿನಲ್ಲಿ ಚಳಿಗಾಲವು ರಾಜ್ಯವನ್ನು ಪ್ರವೇಶಿಸುತ್ತದೆ. ಅಕ್ಟೋಬರ್‌, ನವೆಂಬರ್, ಡಿಸೆಂಬರ್‌, ಜನವರಿ ಮತ್ತು ಫೆಬ್ರವರಿ ತಿಂಗಳುಗಳಲ್ಲಿ ಆಂಧ್ರ ಪ್ರದೇಶದಲ್ಲಿ ಚಳಿಗಾಲವಿರುತ್ತದೆ. ರಾಜ್ಯವು ಗಣನೀಯ ಪ್ರಮಾಣದ ಉದ್ದದ ಕರಾವಳಿ ಪ್ರದೇಶವನ್ನು ಹೊಂದಿರುವುದರಿಂದ ಇಲ್ಲಿ ಚಳಿಗಾಲದಲ್ಲಿ ಹೆಚ್ಚಿನ ಚಳಿ ಇರುವುದಿಲ್ಲ.ಚಳಿಗಾಲದಲ್ಲಿ ಇಲ್ಲಿನ ಉಷ್ಣಾಂಶವು ಸಾಮಾನ್ಯಾಗಿ ೧೩ °Cನಿಂದ ೩೦ °Cವರೆಗೆ ಇರುತ್ತದೆ. ಬೇಸಿಗೆಯ ತಿಂಗಳುಗಳಲ್ಲಿ ಆಂಧ್ರಕ್ಕೆ ನೀವು ಪ್ರವಾಸ ಹೊರಡುವುದಾದಲ್ಲಿ ಬೇಸಿಗೆಯ ಉಡುಪುಗಳೊಂದಿಗೆ ಸಿದ್ಧರಿರುವುದು ಅಗತ್ಯವಾಗಿರುತ್ತದೆ. ಬೇಸಿಗೆಯ ಹವಾಮಾನಕ್ಕೆ ಚೆನ್ನಾಗಿ ಹೊಂದಿಕೊಳುವಲ್ಲಿ ಹತ್ತಿ ಉಡುಪುಗಳು ಸೂಕ್ತವಾಗಿರುತ್ತವೆ. ವರ್ಷದ ಪ್ರಮುಖ ಭಾಗದ ಅವಧಿಯಲ್ಲಿ ಆಂಧ್ರ ಪ್ರದೇಶದ ಹವಾಮಾನ ಅಷ್ಟೇನೂ ಹಿತಕರವಾಗಿರುವುದಿಲ್ಲ. ಆದ್ದರಿಂದ ರಾಜ್ಯಕ್ಕೆ ಭೇಟಿ ನೀಡಲು ಅಕ್ಟೋಬರ್‌ನಿಂದ ಫೆಬ್ರವರಿಯ ನಡುವಿನ ಅವಧಿಯು ಪ್ರಶಸ್ತ ಕಾಲವೆಂದು ಹೇಳಬಹುದು.

ವಿಭಾಗಗಳು

[ಬದಲಾಯಿಸಿ]
ಆಂಧ್ರ ಪ್ರದೇಶದ ಜಿಲ್ಲೆಗಳ ನಕ್ಷೆ

ಆಂಧ್ರ ಪ್ರದೇಶವನ್ನು ಕರಾವಳಿ ಆಂಧ್ರ, ರಾಯಲಸೀಮಾ ಮತ್ತು ತೆಲಂಗಾಣ ಎಂದು ಮೂರು ವಿಭಾಗಗಳಾಗಿ ವಿಭಾಗಿಸಬಹುದು.[೧೫] ಆಂಧ್ರ ಪ್ರದೇಶ ೨೩ ಜಿಲ್ಲೆಗಳನ್ನು ಹೊಂದಿದ್ದು ಅವು ಈ ರೀತಿ ಇವೆ: ಅದಿಲಾಬಾದ್‌‌, ಅನಂತಪುರ್‌‌, ಚಿತ್ತೂರ್‌, ಕಡಪ, ಪೂರ್ವ ಗೋದಾವರಿ, ಪಶ್ಚಿಮ ಗೋದಾವರಿ, ಗುಂಟೂರ್‌‌, ಹೈದರಾಬಾದ್‌, ಕರೀಂನಗರ, ಖಮ್ಮಮ್‌, ಕೃಷ್ಣ, ಕರ್ನೂಲ್‌, ಮೆಹಬೂಬ್‌ ನಗರ‌, ಮೇಡಕ್‌, ನಲ್ಗೊಂಡ, ಶ್ರೀ ಪೊಟ್ಟಿ ಶ್ರೀರಾಮುಲು ನೆಲ್ಲೂರ್‌, ನಿಜಾಮಬಾದ್‌‌, ಪ್ರಕಾಶಮ್‌, ರಂಗಾರೆಡ್ಡಿ, ಶ್ರೀಕಾಕುಲಂ, ವಿಶಾಖಪಟ್ಟಣಂ, ವಿಜಯನಗರಂ ಮತ್ತು ವಾರಂಗಲ್‌. ಪ್ರತಿ ಜಿಲ್ಲೆಯನ್ನೂ ವಿವಿಧ ಮಂಡಲಗಳಾಗಿ ವಿಭಾಗಿಸಲಾಗಿದ್ದು, ಪ್ರತಿ ಮಂಡಲವೂ ಕೆಲವು ಹಳ್ಳಿಗಳ ಒಂದು ಗುಂಪಾಗಿದೆ.ಹೈದರಾಬಾದ್‌ ಇದರ ರಾಜಧಾನಿಯಾಗಿದ್ದು, ಇದಕ್ಕೆ ಪಕ್ಕದಲ್ಲಿರುವ ಅವಳಿ ನಗರವಾದ ಸಿಕಂದರಾಬಾದ್‌ನ ಒಡಗೂಡಿ ರಾಜ್ಯದಲ್ಲೇ ಅತ್ಯಂತ ದೊಡ್ಡ ನಗರವಾಗಿದೆ. ವಿಶಾಖಪಟ್ಟಣವು ಆಂಧ್ರ ಪ್ರದೇಶದ ಪ್ರಮುಖ ರೇವು ಪಟ್ಟಣವಾಗಿದ್ದು ಇದು ರಾಜ್ಯದ ಎರಡನೇ ಅತಿ ದೊಡ್ಡ ನಗರವಾಗಿದೆ ಹಾಗೂ ಭಾರತೀಯ ನೌಕಾಪಡೆಯ ಪೂರ್ವ ನೌಕಾದಳಕ್ಕೆ ನೆಲೆಯಾಗಿದೆ. ವಿಜಯವಾಡ ವು ತನ್ನ ಭೌಗೋಳಿಕ ನೆಲೆಯಿಂದಾಗಿ ಹಾಗೂ ಪ್ರಮುಖ ರೈಲು ಮತ್ತು ರಸ್ತೆ ಮಾರ್ಗಗಳಿಗೆ ಸಮೀಪವಿರುವುದರಿಂದಾಗಿ ಪ್ರಮುಖ ವ್ಯಾಪಾರಿ ತಾಣವಾಗಿದೆ; ಅಲ್ಲದೆ ರಾಜ್ಯದ ಮೂರನೇ ಅತಿದೊಡ್ಡ ನಗರವಾಗಿದೆ. ರಾಜ್ಯದ ಇತರೆ ಮುಖ್ಯ ನಗರ ಮತ್ತು ಪಟ್ಟಣಗಳೆಂದರೆ: ಕಾಕಿನಾಡ, ವಾರಂಗಲ್‌, ಗುಂಟೂರ್‌, ತಿರುಪತಿ, ರಾಜಮುಂಡ್ರಿ, ನೆಲ್ಲೂರ್‌, ಓಂಗೊಲ್, ಕರ್ನೂಲ್‌, ಅನಂತಪುರ್‌, ಕರೀಂನಗರ‌, ನಿಜಾಮಾಬಾದ್‌ ಮತ್ತು ಏಲೂರು.

ಸೀಮಾಂಧ್ರಕ್ಕೆ ಹೊಸ ರಾಜಧಾನಿ

[ಬದಲಾಯಿಸಿ]
ಆಂಧ್ರ ಪ್ರದೇಶ ರಾಜ್ಯದಲ್ಲಿ ತೆಲಂಗಾಣ ಪ್ರದೇಶವನ್ನು ಬಿಳಿ ಬಣ್ಣದಲ್ಲಿ ಗುರುತಿಸಲಾಗಿದೆ

೨ Dec, ೨೦೧೬

ಆಂಧ್ರಪ್ರದೇಶದ ರಾಜಧಾನಿ ಪ್ರದೇಶ ಅಮರಾವತಿ ತೋರಿಸುವ ನಕ್ಷೆ, ಗುಂಟೂರು ಮತ್ತು ಕೃಷ್ಣ ಜಿಲ್ಲೆಗಳಲ್ಲಿ ಮಧ್ಯದಲ್ಲಿದೆ-ಬಣ್ಣದಗೆರೆ ಕೃಷ್ಣಾನದಿ
  • ದಿ. ಜೂನ್ ೨, ೨೦೧೪, ಆಂಧ್ರ ಪ್ರದೇಶ ರಾಜ್ಯವು ಎರಡು ಭಾಗವಾಗಿ ಒಡೆದು, ಎರಡು ರಾಜ್ಯವಾಯಿತು. ಅವು ತೆಲಂಗಾಣ ಮತ್ತು ಸೀಮಾಂಧ್ರ (ಆಂಧ್ರ).[೧೬]
  • ಮೂಲ ಆಂದ್ರಪ್ರದೇಶ ಇಬ್ಭಾಗವಾಗಿ ತೆಲಂಗಾಣ ಆಂಧ್ರ ಎಂದುಎರಡು ರಾಜ್ಯಗಳಾದಾಗ ಹೈದರಾಭಾದು ತೆಲಂಗಾಣಾಕ್ಕೆ ರಾಧಾನಿಯಾಯಿತು. ಆಂಧ್ರವು ಅಮರಾವತಿ ಅಂಬ ಹೊಸನಗರವನ್ನು ಕಟ್ಟಿ ಆಂಧ್ರಪ್ರದೇಶದ ಸಂಪೂರ್ಣ ಆಡಳಿತ ನೂತನ ರಾಜಧಾನಿ ಅಮರಾವತಿಗೆ 1-12-2016 ಗುರುವಾರ ಸ್ಥಳಾಂತರವಾಗುವ ಮೂಲಕ ಹೊಸ ಅಧ್ಯಾಯ ಆರಂಭಿಸಿತು.
  • ಅಮರಾವತಿಗೆ ಸಮೀಪದ ವೆಲಗಪುಡಿಯಲ್ಲಿನ ತಾತ್ಕಾಲಿಕ ಸಚಿವಾಲಯದಲ್ಲಿನ ಕಚೇರಿಯಿಂದಲೇ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಕಾರ್ಯನಿರ್ವಹಿಸಲು ಆರಂಭಿಸಿದರು. ಸಚಿವ ಸಂಪುಟದ ಸಭೆಯೂ ಸಹ ಪ್ರಥಮಬಾರಿ ಇಲ್ಲಿ ನಡೆಯಿತು.[೧೭]

ಸಾಲಾರ್ ಜಂಗ್ ವಸ್ತು ಸಂಗ್ರಹಾಲಯ

[ಬದಲಾಯಿಸಿ]

ಹೈದರಾಬಾದ್ ಜಿಲ್ಲೆಯ ಈ ವಸ್ತುಸಂಗ್ರಹಾಲಯವನ್ನು ಮೂರನೆಯ ಸಾಲಾರ್ ಜಂಗರು (ಮೀರ್ ಯೂಸಿಫ್ ಆಲಿಖಾನ್) ಒಬ್ಬರೇ ಸಂಗ್ರಹಿಸಿರುತ್ತಾರೆ. ವಿಶ್ಬದಲ್ಲಿ ವ್ಯಕ್ತಿಯೊಬ್ಬನೇ ಸಂಗ್ರಹಿಸಿದ ವಸ್ತುಗಳ ಅತಿದೊಡ್ಡ ಸಂಗ್ರಹವೆಂದು ಪ್ರಸಿದ್ಧಿಪಡೆದಿದೆ. ಇಲ್ಲಿನ ವಿಶೇಷ ವಸ್ತುಗಳ ಚಿಕ್ಕ ಪಟ್ಟಿ ಹೀಗಿದೆ. ಪರ್ಷಿಯಾದ ರತ್ನಗಂಬಳಿಗಳು, ಮೊಗಲ್ ಕಾಲದ ಸೂಕ್ಷ್ಮಚಿತ್ರಗಳು,ಚೀನಾದೇಶದ ಪಿಂಗಾಣಿ ಹೂಜಿಗಳು, ಜಪಾನಿನ ಅರಗಿನ ವಸ್ತುಗಳು, ಯೂರೋಪಿನ ಪ್ರಖ್ಯಾತ ಅಮೃತಶಿಲೆಯ ಮೂರ್ತಿಗಳು, (ಇವುಗಳಲ್ಲಿ ಅತ್ಯಂತ ಹೆಸರಾದ,'ಮುಸುಕಿನ ರೆಬೆಕ್ಕಾ,'(ಮಾರ್ಗರೆಟ್ ಮತ್ತು, ಮೆಫಿಸ್ಟೋಫೆಲೆಸ್)ಜೆಡ್ ಕಲ್ಲಿನಿಂದ ಮಾಡಿದ ಕಠಾರಿಗಳು,(ಜೆಹಾಂಗೀರ್, ಶೆಹಜಹಾನ್ ಮತ್ತು ಔರಂಗ್ ಜೇಬ್ ರ ಕಠಾರಿಗಳು)ಮತ್ತು ಇತರ ಆಕರ್ಷಕ ವಸ್ತುಗಳಿವೆ.

ಜನಸಂಖ್ಯಾ ವಿವರ

[ಬದಲಾಯಿಸಿ]
ತೆಲುಗು ಇತರೆ ಭಾಷೆಗಳು ಒಟ್ಟು
ಹಿಂದು ೮೨% ೨% ೮೪%
ಮುಸ್ಲಿಂ ೧% ೮%ಟೆಂಪ್ಲೇಟು:Fn ೯%
ಕ್ರೈಸ್ತ ೪% ೧% ೫%
ಇತರೆ ಧರ್ಮೀಯರು ೦.೫% ೦.೫% ೧%

ಒಟ್ಟು

೮೮.೫% ೧೧.೫% ೧೦೦%
colspan=೪ ಟೆಂಪ್ಲೇಟು:Fnb ಮುಖ್ಯವಾಗಿ ಉರ್ದು
Population Trend 
CensusPop.
1961೩,೫೯,೮೩,೦೦೦
1971೪,೩೫,೦೩,೦೦೦20.9%
1981೫,೩೫,೫೦,೦೦೦23.1%
1991೬,೬೫,೦೮,೦೦೦24.2%
2001೭,೫೭,೨೭,೦೦೦13.9%
Source:Census of India[೧೮]

ತೆಲುಗು ರಾಜ್ಯದ ಅಧಿಕೃತ ಭಾಷೆಯಾಗಿದ್ದು, ಸುಮಾರು ೮೮.೫% ಜನರು ತೆಲುಗು ಮಾತನಾಡುತ್ತಾರೆ. ತೆಲುಗು ಭಾಷೆ ಅತಿ ಹೆಚ್ಚು ಜನರು ಮಾತನಾಡುವ ಭಾರತದ ಮೂರನೇ ಭಾಷೆ.[೧೯] ರಾಜ್ಯದಲ್ಲಿನ ಪ್ರಮುಖ ಅಲ್ಪಸಂಖ್ಯಾತ ಭಾಷಿಕ ಸಮುದಾಯಗಳಲ್ಲಿ ಉರ್ದು (೮.೬೩%), ಹಿಂದಿ (೦.೬೩%) ಮತ್ತು ತಮಿಳು (೧.೦೧%) ಮಾತನಾಡುವವರು ಸೇರಿದ್ದಾರೆ.[೨೦] ಭಾರತ ಸರ್ಕಾರವು ೨೦೦೮ರ ನವೆಂಬರ್ ೧ರಂದು ತೆಲುಗು ಭಾಷೆಗೆ ಶಾಸ್ತ್ರೀಯ ಮತ್ತು ಪ್ರಾಚೀನ ಭಾಷೆ ಎಂಬ ಸ್ಥಾನಮಾನ ನೀಡಿದೆ.[೨೧] ಆಂಧ್ರ ಪ್ರದೇಶದಲ್ಲಿ ೧%ಗಿಂತ ಕಡಿಮೆ ಜನರಿಂದ ಮಾತನಾಡಲ್ಪಡುವ ಇತರೆ ಭಾಷೆಗಳೆಂದರೆ, ಕನ್ನಡ (೦.೯೪%), ಮರಾಠಿ (೦.೮೪%), ಒರಿಯಾ (೦.೪೨%), ಗೊಂಡಿ (೦.೨೧%) ಮತ್ತು ಮಲಯಾಳಂ (೦.೧%). ೦.೧%ಗಿಂತ ಕಡಿಮೆ ಪ್ರಮಾಣದ ರಾಜ್ಯ ನಿವಾಸಿಗಳಿಂದ ಆಡಲ್ಪಡುತ್ತಿರುವ ಭಾಷೆಗಳಲ್ಲಿ ಗುಜರಾತಿ (೦.೦೯%), ಸಾವರ (೦.೦೯%), ಕೋಯ (೦.೦೮%), ಜಟಪು (೦.೦೪%), ಪಂಜಾಬಿ (೦.೦೪%), ಕೊಳಮಿ (೦.೦೩%), ಕೊಂಡ (೦.೦೩%), ಗಡಬ (೦.೦೨%), ಸಿಂಧಿ (೦.೦೨%), ಗೋರ್ಖಾಲಿ/ನೇಪಾಳಿ (೦.೦೧%) ಮತ್ತು ಖೊಂಡ್‌/ಕೊಂಧ್(೦.೦೧%) ಸೇರಿವೆ. ಆಂಧ್ರ ಪ್ರದೇಶದ ಪ್ರಧಾನ ಜನಾಂಗವೆಂದರೆ ತೆಲುಗು ಜನ; ಇವರು ಆರ್ಯರು ಮತ್ತು ದ್ರಾವಿಡರ ಸಮ್ಮಿಶ್ರ ಜನಾಂಗಕ್ಕೆ ಪ್ರಮುಖವಾಗಿ ಸೇರುತ್ತಾರೆ.

ಆರ್ಥಿಕ ವ್ಯವಸ್ಥೆ

[ಬದಲಾಯಿಸಿ]

ಕೃಷಿಯು, ರಾಜ್ಯದ ಆರ್ಥಿಕತೆಗೆ ಪ್ರಮುಖ ಆದಾಯದ ಮೂಲವಾಗಿದೆ. ಭಾರತದ ನಾಲ್ಕು ಪ್ರಮುಖ ನದಿಗಳಾದ ಗೋದಾವರಿ, ಕೃಷ್ಣ, ಪೆನ್ನಾ ಮತ್ತು ತುಂಗಭದ್ರ ರಾಜ್ಯದ ಮೂಲಕ ಹರಿಯುತ್ತಿದ್ದು, ಕೃಷಿಗೆ ನೀರಾವರಿ ಸೌಲಭ್ಯವನ್ನು ಒದಗಿಸಿವೆ.ಅಕ್ಕಿ, ಕಬ್ಬು, ಹತ್ತಿ, ಮೆಣಸಿನಕಾಯಿ (ಮೆಣಸಿನ ಹಣ್ಣು), ಮಾವು ಮತ್ತು ಹೊಗೆಸೊಪ್ಪು ಇಲ್ಲಿನ ಪ್ರಾದೇಶಿಕ ಬೆಳೆಗಳು. ಇತ್ತೀಚೆಗೆ, ಸಸ್ಯಜನ್ಯ ತೈಲದ ಉತ್ಪಾದನೆಗೆ ಬಳಕೆಯಾಗುವ ಸೂರ್ಯಕಾಂತಿ ಮತ್ತು ಕಡಲೆಕಾಯಿಯಂತಹ ಬೆಳೆಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆತಿದೆ.ವಿಶ್ವದ ಅತಿ ಎತ್ತರದ ಕಲ್ಲಿನ ಜಲಾಶಯ ಎನಿಸಿರುವ ನಾಗಾರ್ಜುನ ಸಾಗರ ಜಲಾಶಯ, ಗೋದಾವರಿ ನದಿ ಜಲಾನಯನ ನೀರಾವರಿ ಯೋಜನೆಗಳನ್ನು ಒಳಗೊಂಡಂತೆ ಹಲವು ಅಂತರ‌ರಾಜ್ಯ ನೀರಾವರಿ ಯೋಜನೆಗಳು ಪ್ರಗತಿಯಲ್ಲಿವೆ.[೨೨][೨೩]

ಚಿತ್ರ:Hitec city.jpg
ರಾಜ್ಯದ ರಾಜಧಾನಿ ಮತ್ತು ರಾಜ್ಯದಲ್ಲಿನ ಅತಿ ದೊಡ್ಡ ನಗರವಾದ ಹೈದರಬಾದ್‌ನಲ್ಲಿನ ಸೈಬರ್‌ಗೋಪುರಗಳು

ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಕ್ಷೇತ್ರಗಳ ಮೇಲೂ ರಾಜ್ಯವು ಹೆಚ್ಚಿನ ಗಮನ ಹರಿಸಲು ಪ್ರಾರಂಭಿಸಿದೆ. ೨೦೦೪–೨೦೦೫ರ ಅವಧಿಯಲ್ಲಿ, ಹೆಚ್ಚಿನ IT ರಫ್ಟು ಮಾಡುತ್ತಿದ್ದ ಭಾರತದ ರಾಜ್ಯಗಳ ಪಟ್ಟಿಯಲ್ಲಿ ಆಂಧ್ರ ಪ್ರದೇಶವು ಐದನೇ ಸ್ಥಾನದಲ್ಲಿತ್ತು. ೨೦೦೪-೨೦೦೫ರ ಅವಧಿಯಲ್ಲಿ ರಾಜ್ಯದ IT ರಫ್ತು ಮೌಲ್ಯವು ೮೨,೭೦೦ ದಶಲಕ್ಷ ರೂ.ಗಳಷ್ಟು ‌(೧,೮೦೦ ದಶಲಕ್ಷ ‌‌$)ಇತ್ತು.[೨೪] IT ಕ್ಷೇತ್ರವು ಪ್ರತಿ ವರ್ಷವೂ ೫೨.೩% ದರದಲ್ಲಿ ವಿಸ್ತರಿಸುತ್ತಿದೆ. ೨೦೦೬–೨೦೦೭ರಲ್ಲಿ ೧೯೦,೦೦೦ ದಶಲಕ್ಷ ರೂ.ಗಳಿಗೆ (೪.೫ ದಶಲಕ್ಷ ‌$) ಮುಟ್ಟಿದ IT ರಫ್ತು, ದೇಶದ ಒಟ್ಟು IT ರಫ್ತಿಗೆ ಶೇ ೧೪ರಷ್ಟು ಕೊಡುಗೆ ನೀಡಿ, ದೇಶದಲ್ಲಿ ನಾಲ್ಕನೇ ಸ್ಥಾನದಲ್ಲಿತ್ತು.[೨೫] ರಾಜ್ಯದ ಸೇವಾ ವಲಯವು ೪೩%ನಷ್ಟು ಆದಾಯವನ್ನು ರಾಜ್ಯದ ಒಟ್ಟು ದೇಶೀಯ ಉತ್ಪನ್ನ(GSDP)ಕ್ಕೆ ಈಗಾಗಲೇ ನೀಡುತ್ತಿದ್ದು, ೨೦%ರಷ್ಟು ಉದ್ಹೋಗಿಗಳನ್ನು ತನ್ನಲ್ಲಿ ತೊಡಗಿಸಿಕೊಂಡಿದೆ.[೨೩] ರಾಜ್ಯದ ರಾಜಧಾನಿಯಾದ ಹೈದರಾಬಾದ್‌, ದೇಶದ ಬೃಹತ್‌ ಮೂಲ ಔಷಧವಸ್ತು ತಯಾರಕ ರಾಜಧಾನಿ ಎಂದು ಪರಿಗಣಿತವಾಗಿದ್ದು, ದೇಶದ ೧೦ ಅಗ್ರಗಣ್ಯ ಔಷಧೀಯ ಕಂಪನಿಗಳಲ್ಲಿ ೫೦%ನಷ್ಟು ಕಂಪನಿಗಳು ರಾಜ್ಯದ ಮೂಲವನ್ನು ಹೊಂದಿವೆ. ಮೂಲಭೂತ ಸೌಕರ್ಯ ಕ್ಷೇತ್ರದಲ್ಲೂ ರಾಜ್ಯವು ಅತ್ಯಂತ ಪ್ರಮುಖ ಸ್ಥಾನವನ್ನು ಪಡೆದಿದ್ದು, ರಾಜ್ಯದ ಹಲವು ಕಂಪನಿಗಳು ಅಲ್ಲಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಮುಂಚೂಣಿಯಲ್ಲಿವೆ. ಆಂಧ್ರ ಪ್ರದೇಶವು ಖನಿಜಗಳಿಂದ ಸಂಪದ್ಭರಿತವಾಗಿರುವ ರಾಜ್ಯವಾಗಿದ್ದು, ಖನಿಜ ಸಂಪತ್ತಿಗೆ ಸಂಬಂಧಿಸಿ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ದೇಶದ ಸುಣ್ಣದ ಕಲ್ಲುಸಂಗ್ರಹಗಳ ಸುಮಾರು ಮೂರನೇ ಒಂದರಷ್ಟು ಭಾಗವನ್ನು ರಾಜ್ಯವು ಹೊಂದಿದ್ದು, ಆ ಪ್ರಮಾಣವು ಸುಮಾರು ೩೦ ಬಿಲಿಯನ್‌ ಟನ್‌ಗಳಷ್ಟಿದೆ ಎಂದು ಅಂದಾಜಿಸಲಾಗಿದೆ. ಕೃಷ್ಣ ಗೋದಾವರಿ ಜಲಾನಯನ ಪ್ರದೇಶವು ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ಸಂಪತ್ತಿನ ಬೃಹತ್ ಸಂಗ್ರಹವನ್ನು ಹೊಂದಿದೆ. ರಾಜ್ಯದಲ್ಲಿ ಬೃಹತ್‌ ಪ್ರಮಾಣದ ಕಲ್ಲಿದ್ದಲು ಸಂಗ್ರಹವೂ ಇದೆ.[೨೩] ಜಲ ವಿದ್ಯುತ್‌ ಉತ್ಪಾದನೆಯಲ್ಲಿ ಇಡೀ ದೇಶದಲ್ಲೇ ರಾಜ್ಯವು ಮೊದಲ ಸ್ಥಾನದಲ್ಲಿದ್ದು, ಒಟ್ಟು ದೇಶೀಯ ಉತ್ಪಾದನೆಯಲ್ಲಿ ೧೧%ಕ್ಕೂ ಹೆಚ್ಚಿನ ಜಲವಿದ್ಯುತ್‌‌ ರಾಜ್ಯದಲ್ಲೇ ಉತ್ಪಾದನೆಯಾಗುತ್ತದೆ. ೨೦೦೫ರ ಅವಧಿಯಲ್ಲಿನ ಆಂಧ್ರ ಪ್ರದೇಶದ GSDPಯು ಪ್ರಚಲಿತ ಬೆಲೆಗಳಲ್ಲಿ ೬೨ ಶತಕೋಟಿ $ನಷ್ಟಿತ್ತು ಎಂದು ಅಂದಾಜಿಸಲಾಗಿತ್ತು. ಇದು ಆಂಧ್ರ ಪ್ರದೇಶದ GSDPಯ ಪ್ರವೃತ್ತಿಯನ್ನು ತೋರಿಸುವ ಕೋಷ್ಟಕವಾಗಿದೆ. ಇದನ್ನು ಅಂಕಿ ಅಂಶಗಳು ಮತ್ತು ಯೋಜನಾ ಜಾರಿಯ ಸಚಿವಾಲಯ ವು ಮಾರುಕಟ್ಟೆ ಬೆಲೆಯನ್ನು ಆಧರಿಸಿ ಅಂದಾಜಿಸಿದ್ದು, ಅಂಕಿಗಳನ್ನು ಭಾರತದ ದಶಲಕ್ಷ ರೂಪಾಯಿಗಳಲ್ಲಿ ತೋರಿಸಲಾಗಿದೆ.ಆದ್ದರಿಂದ, ಒಟ್ಟಾರೆ GSDPಯ ಹೋಲಿಕೆಯಲ್ಲಿ ರಾಜ್ಯವು ನಾಲ್ಕನೇ ಸ್ಥಾನದಲ್ಲಿದೆ[೨೬] ಮತ್ತು ಒಟ್ಟು GSDPಯ ತಲಾದಾಯದಲ್ಲೂ ಭಾರತದ ಪ್ರಮುಖ ರಾಜ್ಯಗಳ ಪೈಕಿ ಇದು ನಾಲ್ಕನೇ ಸ್ಥಾನವನ್ನು ಪಡೆದಿದೆ. ಮತ್ತೊಂದು ಅಳತೆಗೋಲಿನ ಪ್ರಕಾರ, ರಾಜ್ಯದ ಒಟ್ಟು ದೇಶೀಯ ಉತ್ಪನ್ನದ ವಿಚಾರದಲ್ಲಿ ಭಾರತೀಯ ಒಕ್ಕೂಟದ ಎಲ್ಲ ರಾಜ್ಯಗಳ ಪೈಕಿ ಒಟ್ಟು ರಾಜ್ಯವು ಮೂರನೇ ಸ್ಥಾನದಲ್ಲಿದೆ.[೨೭]

ವರ್ಷ

ರಾಜ್ಯ GDP (Rs.MM)

೧೯೮೦ ೮೧,೯೧೦
೧೯೮೫ ೧೫೨,೬೬೦
೧೯೯೦ ೩೩೩,೩೬೦
೧೯೯೫ ೭೯೮,೫೪೦
೨೦೦೦ ೧,೪೦೧,೧೯೦
೨೦೦೭ ೨,೨೯೪,೬೧೦

ಸರ್ಕಾರ ಮತ್ತು ರಾಜಕೀಯ

[ಬದಲಾಯಿಸಿ]

ಆಂಧ್ರ ಪ್ರದೇಶ ವಿಧಾನಸಭೆಯು ೨೯೪ ಸದಸ್ಯ ಸ್ಥಾನಗಳನ್ನು ಹೊಂದಿದೆ.ಭಾರತದ ಸಂಸತ್‌‌ನಲ್ಲಿ ರಾಜ್ಯವು ೬೦ ಜನ ಸದಸ್ಯರನ್ನು ಹೊಂದಿದ್ದು, ಅವರಲ್ಲಿ ಮೇಲ್ಮನೆಯಾದ ರಾಜ್ಯಸಭೆಯಲ್ಲಿ ೧೮ ಮಂದಿಯಿದ್ದರೆ, ಕೆಳಮನೆಯಾದ ಲೋಕಸಭೆಯಲ್ಲಿ ೪೨ ಮಂದಿ ಸದಸ್ಯರಿದ್ದಾರೆ.[೨೮][೨೯] ೧೯೮೨ರವರೆಗೂ ಆಂಧ್ರ ಪ್ರದೇಶವು ಭಾರತ ರಾಷ್ಟ್ರೀಯ ಕಾಂಗ್ರಸ್‌‌(INC) ನೇತೃತ್ವದ ಸರಣಿ ಸರ್ಕಾರಗಳನ್ನೇ ಹೊಂದಿತ್ತು. ಕಾಸು ಬ್ರಹ್ಮಾನಂದ ರೆಡ್ಡಿ ಯವರು ಅತಿ ಹೆಚ್ಚು ಅವಧಿಯವರೆಗೆ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದ ದಾಖಲೆಯನ್ನು ಹೊಂದಿದ್ದರು. ಇದನ್ನು ಎನ್‌.ಟಿ.ರಾಮ ‌ರಾವ್‌ರವರು ೧೯೮೩ರಲ್ಲಿ ಮುರಿದರು. ಪಿ.ವಿ.ನರಸಿಂಹ ರಾವ್‌ರವರೂ ಸಹ ರಾಜ್ಯದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದು, ನಂತರ ೧೯೯೧ರಲ್ಲಿ ಇವರು ಭಾರತದ ಪ್ರಧಾನಿಯೂ ಆದರು. ರಾಜ್ಯದ ಗಮನಾರ್ಹ ಮುಖ್ಯಮಂತ್ರಿಗಳ ಪೈಕಿ ತಂಗುತೂರಿ ಪ್ರಕಾಶಮ್‌, ಆಂಧ್ರ ರಾಜ್ಯದ ಮುಖ್ಯಮಂತ್ರಿ (CM) (ಪ್ರಸ್ತುತ ಆಂಧ್ರ ಪ್ರದೇಶದ ಮೊದಲ ಮಖ್ಯಮಂತ್ರಿ ನೀಲಂ ಸಂಜೀವ ರೆಡ್ಡಿ) ಸೇರಿದ್ದಾರೆ. ಉಳಿದ ಇತರರಲ್ಲಿ ಕಾಸು ಬ್ರಹ್ಮಾನಂದ ರೆಡ್ಡಿ, ಮರ್ರಿ ಚೆನ್ನಾ ರೆಡ್ಡಿ, ಜಲಗಂ ವೆಂಗಲ್‌ ರಾವ್‌, ನೆದುರುಮಲ್ಲಿ ಜನಾರ್ಧನ ರೆಡ್ಡಿ, ನಾದೇಂಡ್ಲ ಭಾಸ್ಕರ ರಾವ್‌, ಕೋಟ್ಲ ವಿಜಯ ಭಾಸ್ಕರ ರೆಡ್ಡಿ, ಎನ್‌.ಟಿ.ರಾಮ ರಾವ್, ನಾರಾ ಚಂದ್ರಬಾಬು ನಾಯ್ಡು ಮತ್ತು ವೈ.ಎಸ್‌.ರಾಜಶೇಖರ ರೆಡ್ಡಿಯವರುಗಳು ಸೇರಿದ್ದಾರೆ. thumb|250px|right|ಹೈದರಾಬಾದ್‌ನಲ್ಲಿರುವ ಉಚ್ಚ ನ್ಯಾಯಾಲಯ ರಾಜ್ಯದ ಪ್ರಮುಖ ನ್ಯಾಯಿಕ ಸಂಸ್ಥೆ ೧೯೮೩ರಲ್ಲಿ ತೆಲುಗು ದೇಶಮ್‌ ಪಕ್ಷವು (TDP) ರಾಜ್ಯದ ಚುನಾವಣೆಗಳಲ್ಲಿ ಜಯಭೇರಿ ಬಾರಿಸಿತು ಮತ್ತು ಎನ್‌.ಟಿ.ರಾಮ ರಾವ್‌ರವರು (NTR) ಮೊದಲ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾದರು. ಇದರೊಂದಿಗೆ ಆಂಧ್ರ ಪ್ರದೇಶದ ರಾಜಕೀಯಕ್ಕೆ ಅಸಾಧಾರಣವಾದ ಎರಡನೇ ರಾಜಕೀಯ ಪಕ್ಷವೊಂದರ ಪರಿಚಯವಾದಂತಾಗಿ, ಆಂಧ್ರ ಪ್ರದೇಶದ ರಾಜಕೀಯದಲ್ಲಿದ್ದ ಏಕಪಕ್ಷದ ಏಕಸ್ವಾಮ್ಯತೆ ಅಂತ್ಯಗೊಂಡಿತು. ಕೆಲವು ತಿಂಗಳುಗಳ ನಂತರ, NTRರವರು ವೈದ್ಯಕೀಯ ಚಿಕಿತ್ಸೆಗೆಂದು ಅಮೆರಿಕಕ್ಕೆ ತೆರಳಿದ ಸಮಯದಲ್ಲಿ ನಾದೇಂಡ್ಲ ಭಾಸ್ಕರ್‌ ರಾವ್‌ರವರು ಮುಖ್ಯಮಂತ್ರಿಯ ಅಧಿಕಾರದ ಗದ್ದುಗೆಯನ್ನು ಆಕ್ರಮಿಸಿದರು. ಹಿಂತಿರುಗಿ ಬಂದ ನಂತರ, ವಿಧಾನಸಭೆಯನ್ನು ವಿಸರ್ಜಿಸಲು ಮತ್ತು ಹೊಸದಾಗಿ ಚುನಾವಣೆಯನ್ನು ಘೋಷಿಸಿಸಲು ರಾಜ್ಯದ ಆಗಿನ ರಾಜ್ಯಪಾಲರನ್ನು ಒಪ್ಪಿಸುವಲ್ಲಿ NTRರವರು ಯಶಸ್ವಿಯಾರು. ಇದರಿಂದ ಮತ್ತೆ ನಡೆದ ಚುನಾವಣೆಯಲ್ಲಿ TDPಯು ಅತ್ಯಧಿಕ ಬಹುಮತದೊಂದಿಗೆ ಗೆಲುವು ಸಾಧಿಸಿತು. ೧೯೮೯ರ ಸಾರ್ವಜನಿಕ ಚುನಾವಣೆಯಲ್ಲಿ ಗೆಲುವು ಸಾಧಿಸಿದ INC, Dr. ಮರ್ರಿ ಚೆನ್ನಾ ರೆಡ್ಡಿಯವರ ನೇತ್ಥತ್ವದಲ್ಲಿ ಮರಳಿ ಅಧಿಕಾರಕ್ಕೆ ಬಂದಿತು. ಇದರೊಂದಿಗೆ NTRರವರ ೭ ವರ್ಷಗಳ ಆಳ್ವಿಕೆಯು ಅಂತ್ಯಗೊಂಡಿತು. ಮರ್ರಿ ಚೆನ್ನಾ ರೆಡ್ಡಿಯವರ ನಂತರ ಎನ್‌. ಜನಾರ್ಧನ್‌ ರೆಡ್ಡಿ ಅಧಿಕಾರಕ್ಕೆ ಬಂದರು. ಕೋಟ್ಲ ವಿಜಯ ಭಾಸ್ಕರ್‌ ರೆಡ್ಡಿಯವರು ತಾವು ಅಧಿಕಾರಕ್ಕೆ ಬರುವ ಮೂಲಕ ಇವರನ್ನು ಬದಲಿಸಿದರು. ೧೯೯೪ರಲ್ಲಿ ಮತ್ತೆ TDPಗೆ ಜನಾದೇಶವನ್ನು ನೀಡಿದ ಆಂಧ್ರ ಪ್ರದೇಶವು, NTRರವರು ಮತ್ತೆ ಮುಖ್ಯಮಂತ್ರಿಯಾಗುವುದನ್ನು ಕಂಡಿತು. ಆದರೆ NTRರವರ ಅಳಿಯನಾಗಿದ್ದ ಚಂದ್ರಬಾಬು ನಾಯ್ಡುರವರು ರಾಜಕೀಯ ಕ್ಷಿಪ್ತಕ್ರಾಂತಿಯೊಂದರಲ್ಲಿ ಅವರ ಬೆನ್ನಿಗೆ ಚೂರಿ ಹಾಕುವ ಮೂಲಕ ಅಧಿಕಾರವನ್ನು ಕಿತ್ತುಕೊಂಡರು. ಈ ನಂಬಿಕೆ ದ್ರೋಹವನ್ನು ಅರಗಿಸಿಕೊಳ್ಳಲಾಗದ NTRರವರು ಕೆಲವು ಕಾಲದ ನಂತರ ಹೃದಯಾಘಾತದಿಂದ ಮರಣ ಹೊಂದಿದರು. ೧೯೯೯ರಲ್ಲಿ TDPಯು ಚುನಾವಣೆಯಲ್ಲಿ ಗೆದ್ದಿತು. ಮುಂದಿನ ಚುನಾವಣೆಯಲ್ಲಿ INC ನೇತೃತ್ವದ ರಾಜಶೇಖರ ರೆಡ್ಡಿಯವರ ಶಕ್ತಿಶಾಲಿ ಮುಂಚೂಣಿಯನ್ನು ಹೊಂದಿದ್ದ ಮೈತ್ರಿಕೂಟದ ಎದುರು ೨೦೦೪ರ ಚುನಾವಣೆಯಲ್ಲಿ ಚಂದ್ರಬಾಬು ನಾಯ್ಡು ಸೋಲನ್ನನುಭವಿಸಿದರು. ೨೦೦೮ರಲ್ಲಿ ಚಲನಚಿತ್ರ ತಾರೆ ಜಿರಂಜೀವಿಯವರಿಂದ ಪ್ರಜಾ ರಾಜ್ಯಂ ಪಕ್ಷ(PRP) ಸ್ಥಾಪಿತವಾಯಿತು. ಇದು ೨೦೦೯ರ ಚುನಾವಣೆಯಲ್ಲಿ ತ್ರಿಕೋನ ಹೋರಾಟವನ್ನು ಹುಟ್ಟುಹಾಕಿತು. ಅತಿಯಾದ ನಿರೀಕ್ಷೆ ಮತ್ತು ಮಾಧ್ಯಮದ ಭಾರೀ ಪ್ರಚಾರದ ನಡುವೆಯೂ ಇದು ಆಂಧ್ರ ರಾಜಕೀಯದಲ್ಲಿ ಮಹತ್ತರ ಬದಲಾವಣೆ ತರುವಲ್ಲಿ ವಿಫಲವಾಯಿತು. ಹೀಗಾಗಿ ೧೮ ಸ್ಥಾನಗಳನ್ನಷ್ಟೆ ಗೆಲ್ಲುವುದಕ್ಕೆ ಸಾಧ್ಯವಾಯಿತು.ಒಂದೇ ಆಶಾಕಿರಣವೆಂದರೆ ಒಟ್ಟು ಮತಗಳಲ್ಲಿ ಶೇ ೩೬ರಷ್ಟು ಮತ ಪಡೆದ ಕಾಂಗ್ರೆಸ್‌ ಮತ್ತು ಶೇ ೨೫ರಷ್ಟು ಗಳಿಸಿದ ತೆಲುಗು ದೇಶಮ್‌ ಪಕ್ಷಗಳಿಗೆ ಪ್ರತಿಯಾಗಿ, ಇದು ಶೇ ೧೭ರಷ್ಟು ಮತವನ್ನು ಗಳಿಸುವಲ್ಲಿ ಸಫಲವಾಯಿತು. ಪ್ರಜಾ ರಾಜ್ಯಂ ಪಕ್ಷ ಮತ್ತು TDP, TRS, CPI ಮತ್ತು CPM ಪಕ್ಷಗಳ ಬೃಹತ್‌ ಮೈತ್ರಿಕೂಟವನ್ನು ಹಿಮ್ಮೆಟ್ಟಿಸುವುದರೊಂದಿಗೆ ವೈ.ಎಸ್‌.ರಾಜಶೇಖರ ರೆಡ್ಡಿ ಮತ್ತೆ ಮುಖ್ಯಮಂತ್ರಿಯಾದರು. YSR ರೆಡ್ಡಿಯವರು APಯ ಇತಿಹಾಸದಲ್ಲಿ, ಒಂದು ಅವಧಿಯಲ್ಲಿ ಮುಖ್ಯಮಂತ್ರಿಯಾಗಿ ೫ ವರ್ಷಗಳನ್ನು ಸಂಪೂರ್ಣಗೊಳಿಸಿದ ಮೊದಲ ಮುಖ್ಯಮಂತ್ರಿಯಾದರು.

ಸಂಸ್ಕೃತಿ

[ಬದಲಾಯಿಸಿ]

ಸಾಂಸ್ಕೃತಿಕ ಸಂಸ್ಥೆಗಳು

[ಬದಲಾಯಿಸಿ]

ಆಂಧ್ರ ಪ್ರದೇಶವು ಹಲವು ವಸ್ತುಸಂಗ್ರಹಾಲಯಗಳನ್ನು ಹೊಂದಿದೆ. ಅವುಗಳೆಂದರೆ, ಗುಂಟೂರು ನಗರದ ಬಳಿ ಇರುವ ಅಮರಾವತಿಯಲ್ಲಿನ ಪುರಾತತ್ವ ವಸ್ತುಸಂಗ್ರಹಾಲಯ, ಇದು ಸುತ್ತಮುತ್ತಲ ಪ್ರಾಚೀನ ಸ್ಥಳಗಳ ಅವಶೇಷಗಳನ್ನು ಹೊಂದಿದೆ; ಹೈದರಾಬಾದ್‌ನಲ್ಲಿರುವ ಸಾಲಾರ್‌ ಜಂಗ್‌ ವಸ್ತುಸಂಗ್ರಹಾಲಯ, ಇದು ಶಿಲ್ಪಗಳು, ವರ್ಣಚಿತ್ರಗಳು ಮತ್ತು ಧಾರ್ಮಿಕ ಕರಕುಶಲ ವಸ್ತುಗಳೂ ಸೇರಿದಂತೆ ವೈವಿಧ್ಯಮಯ ಸಂಗ್ರಹವನ್ನು ಹೊಂದಿದೆ; ವಿಶಾಖಪಟ್ಟಣಂನಲ್ಲಿರುವ ವಿಶಾಖ ವಸ್ತುಸಂಗ್ರಹಾಲಯ, ಇದು ನವೀಕರಣಗೊಂಡ ಡಚ್‌‌ ಬಂಗಲೆಯಲ್ಲಿದ್ದು ಮದ್ರಾಸ್‌ ಪ್ರಾಂತ್ಯದಯ ಸ್ವಾತಂತ್ರ್ಯಪೂರ್ವ ಇತಿಹಾಸವನ್ನು ಪ್ರದರ್ಶಿಸುತ್ತದೆ.[೩೦]ವಿಜಯವಾಡದಲ್ಲಿರುವ ವಿಕ್ಟೋರಿಯಾ ಜುಬಿಲಿ ವಸ್ತುಸಂಗ್ರಹಾಲಯವು ಪ್ರಾಚೀನ ಶಿಲ್ಪಗಳು, ವರ್ಣಚಿತ್ರಗಳು, ಮೂರ್ತಿಗಳು, ಶಸ್ತ್ರಾಸ್ತ್ರಗಳು, ಮೊನಚಾದ ಆಯುಧಗಳು ಮತ್ತು ಶಾಸನಗಳನ್ನು ಹೊಂದಿದೆ.[೩೧]

ಆಹಾರ ಪದ್ಧತಿ

[ಬದಲಾಯಿಸಿ]
ಇತರೆ ಭಾರತೀಯ ಆಹಾರಗಳೊಂದಿಗೆ ಬಡಿಸುವ ಹೈದರಾಬಾದಿ ಬಿರಿಯಾನಿ

ಆಂಧ್ರ ಪ್ರದೇಶದ ಆಹಾರ ಅಥವಾ ಅಡಿಗೆ ಪದ್ದತಿಯು ಭಾರತದ ಆಹಾರ ಪದ್ಧತಿಗಳಲ್ಲೇ ಅತ್ಯಂತ ಮಸಾಲೆಪೂರಿತ ಆಹಾರ ಪದ್ಧತಿಯಾಗಿದೆ.[ಸೂಕ್ತ ಉಲ್ಲೇಖನ ಬೇಕು] ಭೌಗೋಳಿಕ ಪ್ರದೇಶ, ಜಾತಿ, ಸಂಪ್ರದಾಯ ಮುಂತಾದ ಅಂಶಗಳನ್ನು ಆಧರಿಸಿ ಆಂಧ್ರದ ಆಹಾರ ಪದ್ಧತಿಯಲ್ಲಿ ಹಲವು ವೈವಿಧ್ಯಗಳು ರೂಪುಗೊಂಡಿವೆ. ಉಪ್ಪಿನಕಾಯಿಗಳು ಮತ್ತು ತೆಲುಗು ಭಾಷೆಯಲ್ಲಿ ಪಚ್ಚಡಿ ಎಂದು ಕರೆಯಲ್ಪಡುವ ಚಟ್ನಿಗಳು ವಿಶೇಷವಾಗಿ ಆಂಧ್ರ ಪ್ರದೇಶದ ಜನಪ್ರಿಯ ಖಾದ್ಯಗಳು. ಚಟ್ಟಿ ಮತ್ತು ಉಪ್ಪಿನಕಾಯಿಗಳಲ್ಲಿರುವ ವೈವಿಧ್ಯಗಳು ರಾಜ್ಯಕ್ಕೆ ಅನನ್ಯತೆಯನ್ನು ತಂದುಕೊಟ್ಟಿವೆ.ಟೊಮ್ಯಾಟೊ, ಬದನೆಕಾಯಿ(ನೆಲಗುಳ್ಳ), ದಾಸವಾಳ ಜಾತಿಯ(ಗೊಂಗೂರ) ತರಕಾರಿಗಳೂ ಸೇರಿದಂತೆ ಹೆಚ್ಚೂ ಕಡಿಮೆ ಪ್ರತಿಯೊಂದು ತರಕಾರಿಗಳಿಂದ ಚಟ್ನಿಗಳನ್ನು ತಯಾರಿಸಲಾಗುತ್ತದೆ.ಆವಕಾಯ ಎಂದು ಕರೆಯಲ್ಪಡುವ ಮಾವಿನ ಉಪ್ಪಿನಕಾಯಿಯು, ಬಹುಶಃ ಆಂಧ್ರ ಪ್ರದೇಶದ ಉಪ್ಪಿನಕಾಯಿಗಳಲ್ಲೇ ಅತ್ಯಂತ ಜನಪ್ರಿಯ ಉಪ್ಪಿನಕಾಯಿ ಎನ್ನಬಹುದು. ಅಕ್ಕಿಯು ಇಲ್ಲಿನ ಪ್ರಮುಖ ಆಹಾರವಾಗಿದ್ದು, ವಿವಿಧ ಬಗೆಯಲ್ಲಿ ಇದನ್ನು ಬಳಸಲಾಗುತ್ತದೆ. ಅಕ್ಕಿಯನ್ನು ಬೇಯಿಸಿ ಅನ್ನ ಮಾಡಿಕೊಂಡು ಯಾವುದಾದರೊಂದು ರೀತಿಯ ಮೇಲೋಗರದ ಜೊತೆ ಸೇವಿಸಲಾಗುತ್ತದೆ; ಇಲ್ಲವೇ, ಕಲಸಿದ ಹಿಟ್ಟು ಮಾಡಿಕೊಂಡು ತೆಳುವಾದ ಬಟ್ಟೆಯಂತೆ ಕಾಣುವ ಅಟ್ಟು (ಕಲಸಿದ ಹಿಟ್ಟು ಮತ್ತು ಹೆಸರುಕಾಳಿನ ಮಿಶ್ರಣದಿಂದ ತಯಾರಿಸುವ ಪೆಸರಟ್ಟು ಎಂಬ ತಿಂಡಿ)ಅಥವಾ ದೋಸೆ ಎಂಬ ತಿಂಡಿಯನ್ನು ತಯಾರಿಸಲು ಬಳಸಲಾಗುವುದು. ಮಾಂಸ, ತರಕಾರಿಗಳು, ಸೊಪ್ಪುಗಳೊಂದಿಗೆ ವಿವಿಧ ಸಾಂಬಾರ ಪದಾರ್ಥಗಳನ್ನು (ಮಸಾಲೆ) ಸೇರಿಸಿ ವೈವಿಧ್ಯಮಯ ರುಚಿಕಟ್ಟಾದ ಆಹಾರ ಪದಾರ್ಥಗಳನ್ನು ತಯಾರಿಸಲಾಗುತ್ತದೆ. ೧೪ನೇ ಶತಮಾನದಲ್ಲಿ ತೆಲಂಗಾಣ ಪ್ರದೇಶವನ್ನು ಪ್ರವೇಶಿಸಿದ್ದ ಮುಸ್ಲಿಮರ ಆಹಾರ ಪದ್ಧತಿಯಿಂದ ಹೈದರಾಬಾದಿ ಆಹಾರ ಪದ್ಧತಿಯು ಪ್ರಭಾವಿತಗೊಂಡಿದೆ. ಬಹುತೇಕ ಆಹಾರ ವೈವಿಧ್ಯಗಳು ಮಾಂಸ ಸಂಬಂಧಿಯಾಗಿರುತ್ತವೆ. ವಿಲಕ್ಷಣ ರೀತಿಯ ಮಸಾಲೆ ಪದಾರ್ಥಗಳು ಹಾಗೂ ತುಪ್ಪ ವನ್ನು (ಶೋಧಿಸಿದ ಬೆಣ್ಣೆ) ಧಾರಾಳವಾಗಿ ಬಳಸುವುದರಿಂದ ಈ ಆಹಾರಗಳು ರುಚಿಕರ ಮತ್ತು ಪರಿಮಳಯುಕ್ತವಾಗಿರುತ್ತವೆ. ಕುರಿ, ಕೋಳಿ ಮತ್ತು ಮೀನಿನ ಮಾಂಸಗಳು ಮಾಂಸಾಹಾರಿ ಆಹಾರ ಪದಾರ್ಥಗಳಲ್ಲಿ ಹೇರಳವಾಗಿ ಬಳಕೆಯಾಗುತ್ತವೆ. ಹೈದರಾಬಾದಿ ಆಹಾರಗಳಲ್ಲಿ ಬಿರಿಯಾನಿಯು ಬಹುಶಃ ಅತ್ಯಂತ ವಿಶಿಷ್ಟ ಮತ್ತು ಜನಪ್ರಿಯ ಆಹಾರ ಎಂದು ಹೇಳಬಹುದು.

ನೃತ್ಯ

[ಬದಲಾಯಿಸಿ]
ಚಿತ್ರ:Kuchi pudi dancers.jpg
ಆಂಧ್ರ ಪ್ರದೇಶದ ಸಾಂಪ್ರದಾಯಿಕ ನೃತ್ಯವಾದ ಕೂಚಿಪುಡಿ

ಆಂಧ್ರ ಪ್ರದೇಶದಲ್ಲಿ ಚಾಲ್ತಿಯಲ್ಲಿರುನ ನೃತ್ಯ ಪ್ರಕಾರಗಳ ಬಗೆಗೆ ಬರೆದ ಮೊದಲ ವ್ಯಕ್ತಿ ಜಯಪ ಸೇನಾನಿ (ಜಯಪ ನಾಯುಡು).[೩೨] ದೇಸಿ ಮತ್ತು ಮಾರ್ಗಿ ಪ್ರಕಾರದ ನೃತ್ಯಗಳೆರಡೂ ಇವರ 'ನೃತ್ಯ ರತ್ನಾವಳಿ' ಎಂಬ ಸಂಸ್ಕೃತ ಪ್ರಕರಣ ಗ್ರಂಥದಲ್ಲಿ ಸೇರ್ಪಡೆಗೊಂಡಿವೆ. ಇದು ಎಂಟು ಅಧ್ಯಾಯಗಳನ್ನು ಒಳಗೊಂಡಿದೆ. ಪೆರಾನಿ, ಪ್ರೇಂಖನ, ಶುದ್ಧ ನರ್ತನ, ಕಾರ್ಕರಿ, ರಾಸಕ, ದಂಡ ರಾಸಕ, ಶಿವ ಪ್ರಿಯ, ಕಂದುಕ ನರ್ತನ, ಭಂದಿಕಾ ನೃತ್ಯಂ, ಕರಣ ನೃತ್ಯಂ, ಚಿಂದು, ಗೊಂಡಾಲಿ, ಕೋಲಾಟಂ ಮುಂತಾದ ಜಾನಪದ ನೃತ್ಯ ಪ್ರಕಾರಗಳು ಇಲ್ಲಿ ವಿವರಿಸಲ್ಪಟ್ಟಿವೆ. ಮಾರ್ಗ ಮತ್ತು ದೇಸಿ, ತಾಂಡವ ಮತ್ತು ಲಾಸ್ಯ, ನಾಟ್ಯ ಹಾಗೂ ನೃತ್ಯವೆಂಬ ಪ್ರಕಾರಗಳ ನಡುವಿರುವ ವ್ಯತ್ಯಾಸಗಳ ಕುರಿತಾದ ವಿಚಾರಗಳನ್ನು ಮೊದಲ ಅಧ್ಯಾಯದಲ್ಲಿ ಲೇಖಕನು ಚರ್ಚಿಸುತ್ತಾನೆ. ಆಂಗಿಕಾಭಿನಯ, ಕಾರಿಗಳು, ಸ್ಥಾನಕಗಳು, ಮತ್ತು ಮಂಡಲಗಳ ಕುರಿತು ೨ ಮತ್ತು ೩ನೇ ಅಧ್ಯಾಯಗಳಲ್ಲಿ ವಿವರಿಸುತ್ತಾನೆ. ೪ನೇ ಅಧ್ಯಾಯದಲ್ಲಿ ಕರಣಗಳು, ಅಂಗಾಹಾರಗಳು ಮತ್ತು ರೇಚಕಗಳು ವಿವರಿಸಲ್ಪಟ್ಟಿವೆ. ಮುಂದಿನ ಅಧ್ಯಾಯಗಳಲ್ಲಿ ಅವನು ದೇಸಿ ನೃತ್ಯ ಪ್ರಕಾರಗಳ ಕುರಿತು ವಿವರಿಸಿದ್ದಾನೆ. ಕೊನೆಯ ಅಧ್ಯಾಯದಲ್ಲಿ ಕಲೆ ಮತ್ತು ನೃತ್ಯಾಭ್ಯಾಸದ ಕುರಿತು ಆತ ವಿವರಿಸುತ್ತಾನೆ. ಆಂಧ್ರ ಪ್ರದೇಶದಲ್ಲಿ ಶಾಸ್ತ್ರೀಯ ನೃತ್ಯವು ಪುರುಷರು ಮತ್ತು ಮಹಿಳೆಯರಿಬ್ಬರಿಂದಲೂ ಅಭಿನಯಿಸಲ್ಪಡುತ್ತದೆ. ಆದರೂ ಮಹಿಳೆಯರು ಇದನ್ನು ಕಲಿಯಲು ಹೆಚ್ಚು ಆಸಕ್ತಿ ತೋರಿಸುತ್ತಾರೆ. ಕೂಚಿಪುಡಿಯು ರಾಜ್ಯದ ಅತ್ಯಂತ ಪರಿಚಿತ ಶಾಸ್ತ್ರೀಯ ನೃತ್ಯ ಪ್ರಕಾರವಾಗಿದೆ.ರಾಜ್ಯದ ಇತಿಹಾಸದ ಆದ್ಯಂತವಾಗಿ ಅಸ್ಥಿತ್ವದಲ್ಲಿರುವ ಹಲವು ನೃತ್ಯ ಪ್ರಕಾರಗಳೆಂದರೆ, ಚೆಂಚು ಭಾಗೋತಂ, ಕೂಚಿಪುಡಿ, ಭಾಮಕಲಾಪಮ್‌, ಬುರ್ರಕಥಾ, ವೀರನಾಟ್ಯಂ, ಬುಟ್ಟು ಬೊಮ್ಮಲು, ದಪ್ಪು, ತಪ್ಪೆಟ ಗುಲ್ಲು, ಲಂಬಾಡಿ, ಬೊನಾಲು, ಧಿಂಸ, ಕೋಲಾಟಂ ಮತ್ತು ಚಿಂಡು.

ಹಬ್ಬಗಳು

[ಬದಲಾಯಿಸಿ]

ಮಾರ್ಚ್‌ನಲ್ಲಿ ಹೋಳಿ

ಆಗಷ್ಟ್‌ನಲ್ಲಿ ರಾಖಿ ಪೂರ್ಣಿಮ

ಆಗಷ್ಟ್‌ನಲ್ಲಿ ವಿನಾಯಕ ಚೌತಿ

ಸೆಪ್ಟೆಂಬರ್‌/ಅಕ್ಟೋಬರ್‌ನಲ್ಲಿ ದಸರಾ

(ತೆಲಂಗಾಣ ಪ್ರದೇಶದಲ್ಲಿ ಆಚರಿಸಲ್ಪಡುತ್ತದೆ.)

ಸಾಹಿತ್ಯ

[ಬದಲಾಯಿಸಿ]

ನನ್ನಯ್ಯ, ತಿಕ್ಕನ ಮತ್ತು ಯರ್ರಾಪ್ರಗದ ಎಂಬ ಕವಿತ್ರಯರು ಶ್ರೇಷ್ಠ ಮಹಾಕಾವ್ಯ ಮಹಾಭಾರತ ವನ್ನು ತೆಲುಗು ಭಾಷೆಗೆ ಅನುವಾದಿಸಿದರು. ಬಮ್ಮೆರ ಪೋತನ ಎಂಬ ಮತ್ತೋರ್ವ ಕವಿಯು ಶ್ರೀಮದ್‌ ಆಂಧ್ರ ಮಹಾ ಭಾಗವತಮು ಎಂಬ ಅತ್ಯುತ್ಕೃಷ್ಟ ಕೃತಿಯನ್ನು ರಚಿಸಿದ್ದು, ಇದು ವೇದವ್ಯಾಸರು ಸಂಸ್ಕೃತದಲ್ಲಿ ಬರೆದ ಶ್ರೀ ಭಾಗವತಮ್ ‌ನ ತೆಲುಗು ಭಾಷಾಂತರವಾಗಿದೆ. ನನ್ನಯ್ಯನನ್ನು ಆದಿಕವಿ ಎಂದು ಕರೆಯಲಾಗಿದ್ದು, ರಾಜಮಹೇಂದ್ರವರಂ(ರಾಜಮಂಡ್ರಿ)ಯಿಂದ ಆಳ್ವಿಕೆ ನಡೆಸುತ್ತಿದ್ದ ರಾಜರಾಜನರೇಂದ್ರನು ಇವನ ಆಶ್ರಯದಾತನಾಗಿದ್ದನು. ವಿಜಯನಗರದ ಚಕ್ರವರ್ತಿ ಕೃಷ್ಣದೇವರಾಯನು ಅಮುಕ್ತಮಾಲ್ಯದ ಎಂಬ ಕೃತಿಯನ್ನು ಬರೆದನು. ಕಡಪ ಪ್ರದೇಶದವನಾದ ತೆಲುಗು ಕವಿ ವೇಮನಕೂಡಾ ತನ್ನ ತಾತ್ವಿಕ ಪದ್ಯಗಳಿಂದ ಪರಿಚಿತನಾಗಿದ್ದಾನೆ. ಕಂದುಕೂರಿ ವೀರೇಶಲಿಂಗಮ್‌ರವರ ನಂತರದ ತೆಲುಗು ಸಾಹಿತ್ಯವನ್ನು ಆಧುನಿಕ ಸಾಹಿತ್ಯ ಎಂದು ಕರೆಯಲಾಗುತ್ತದೆ. ಗದ್ಯ ಟಿಕ್ಕಣ ಎಂದೇ ಹೆಸರಾದ ಸತ್ಯವತಿ ಚರಿತಂರವರು ಸತ್ಯವತಿ ಚರಿತಂ ಎಂಬ ತೆಲುಗು ಭಾಷೆಯ ಸಾಮಾಜಿಕ ಕಾದಂಬರಿಯನ್ನು ಬರೆದಿದ್ದಾರೆ. ಇತರೆ ಆಧುನಿಕ ಬರಹಗಾರರಲ್ಲಿ, ಜ್ಷಾನಪೀಠ ಪ್ರಶಸ್ತಿ ವಿಜೇತರುಗಳಾದ ಶ್ರೀ ವಿಶ್ವನಾಥ ಸತ್ಯನಾರಾಯಣ ಮತ್ತು ಡಾ.ಸಿ. ನಾರಾಯಣ ರೆಡ್ಡಿಯವರುಗಳು ಸೇರಿದ್ದಾರೆ. ಆಂಧ್ರ ಪ್ರದೇಶದ ಸ್ಥಳೀಕ ಮತ್ತು ಕ್ರಾಂತಿಕಾರಿ ಕವಿ ಶ್ರೀ ಶ್ರೀಯವರು ತೆಲುಗು ಸಾಹಿತ್ಯಕ್ಕೆ ಹೊಸ ರೂಪದ ಅಭಿವ್ಯಕ್ತಿವಾದವನ್ನು ಪರಿಚಯಿಸಿದರು. ಶ್ರೀ ಪುಟ್ಟಪರ್ತಿ ನಾರಾಯಣಚಾರ್ಯುಲುರವರು ಕೂಡ ತೆಲುಗು ಸಾಹಿತ್ಯದ ವಿದ್ವಾಂಸ ಕವಿಗಳಲ್ಲಿ ಒಬ್ಬರು. ಇವರು ವಿಶ್ವನಾಥ ಸತ್ಯನಾರಾಯಣರ ಸಮಕಾಲೀನರಾಗಿದ್ದರು. ಶ್ರೀ ಪುಟ್ಟಪರ್ತಿ ನಾರಾಯಣಾಚಾರ್ಯಲುರವರು ದ್ವಿಪದಿ ಕಾವ್ಯವಾಗಿ ಶಿವತಾಂಡವಂ , ಪಾಂಡುರಂಗ ಮಹಾತ್ಯಂ , ಎಂಬ ಜನಪ್ರಿಯ ಪುಸ್ತಕಗಳನ್ನು ಬರೆದರು.[clarification needed] ಶ್ರೀರಂಗಂ ಶ್ರೀನಿವಾಸರಾವ್‌, ಗುರ್ರಂ ಜಷುವಾ, ಚಿನ್ನಯ ಸೂರಿ, ವಿಶ್ವನಾಥ ಸತ್ಯನಾರಾಯಣ ಮತ್ತು ವದ್ದೇರ ಚಂಡಿದಾಸ್‌ ಮುಂತಾದವರು ಆಂಧ್ರ ಪ್ರದೇಶದ ಇತರೆ ಜನಪ್ರಿಯ ಲೇಖಕರಾಗಿದ್ದಾರೆ.

ಚಲನಚಿತ್ರಗಳು

[ಬದಲಾಯಿಸಿ]

ಆಂಧ್ರ ಪ್ರದೇಶ ಸುಮಾರು ೨೭೦೦ ಚಲನಚಿತ್ರ ಮಂದಿರಗಳನ್ನು ಹೊಂದಿದ್ದು, ಭಾರತದಲ್ಲೇ ಅತಿ ಹೆಚ್ಚು ಚಲನಚಿತ್ರ ಮಂದಿರಗಳನ್ನು ಹೊಂದಿರುವ ರಾಜ್ಯವಾಗಿದೆ.[ಸೂಕ್ತ ಉಲ್ಲೇಖನ ಬೇಕು] ರಾಜ್ಯವು ವರ್ಷವೊಂದಕ್ಕೆ ಸುಮಾರು ೨೦೦[ಸೂಕ್ತ ಉಲ್ಲೇಖನ ಬೇಕು] ಚಲನಚಿತ್ರಗಳನ್ನು ತಯಾರಿಸುತ್ತದೆ. ಭಾರತದಲ್ಲಿರುವ ಡಾಲ್ಬಿ ಡಿಜಿಟಲ್‌ ಥಿಯೇಟರ್‌ಗಳ ಪೈಕಿ ಸುಮಾರು ೪೦% (೯೩೦ರ ಪೈಕಿ ೩೩೦)ರಷ್ಟನ್ನು ಇದು ಹೊಂದಿದೆ.[೩೩] ಈಗ ಇದು ಬೃಹತ್ ೩D ಪರದೆಯನ್ನೊಳಗೊಂಡ ಐಮ್ಯಾಕ್ಸ್‌ ಥಿಯೇಟರ್‌ ಒಂದನ್ನು ಹಾಗೂ ೩-೫ ಮಲ್ಟಿಪ್ಲೆಕ್ಸ್‌ಗಳನ್ನೂ ಹೊಂದಿದೆ. ಟಾಲಿವುಡ್‌‌ (ತೆಲುಗು ಚಿತ್ರರಂಗ) ಭಾರತದಲ್ಲೇ ಅತಿ ಹೆಚ್ಚಿನ ಸಂಖ್ಯೆಯ ಚಿತ್ರಗಳನ್ನು ತಯಾರಿಸುತ್ತದೆ. NTR ರವರು ಟಾಲಿವುಡ್‌ನ ದಂತಕತೆಯಾಗಿದ್ದಾರೆ.ಇವರು ತಮ್ಮ ಪಕ್ಷ ಸ್ಥಾಪಿಸಿದ ೯ ತಿಂಗಳಲ್ಲೇ ಮುಖ್ಯಮಂತ್ರಿಯಾಗಿ ಇತಿಹಾಸ ನಿರ್ಮಿಸಿದರು. ಇದೊಂದು ವಿಶ್ವದಾಖಲೆ ಮತ್ತು ಈವರೆಗೆ ಯಾರೂ ಈ ಸಾಧನೆ ಮಾಡಿಲ್ಲ.

ಸಂಗೀತ

[ಬದಲಾಯಿಸಿ]

ರಾಜ್ಯವು ಶ್ರೀಮಂತ ಸಂಗೀತ ಪರಂಪರೆಯನ್ನು ಹೊಂದಿದೆ. ಕರ್ನಾಟಕ ಸಂಗೀತದ ತ್ರಿಮೂರ್ತಿಗಳು ಎಂದೇ ಹೆಸರಾಗಿರುವ ತ್ಯಾಗರಾಜರು, ಅನ್ನಮಾಚಾರ್ಯರು, ಕ್ಷೇತ್ರಯ್ಯನವರೂ ಸೇರಿದಂತೆ ಭದ್ರಾಚಲ ರಾಮದಾಸುರವರಂತಹ ಕರ್ನಾಟಕ ಸಂಗೀತದ ಅನೇಕ ಪ್ರಸಿದ್ಧರು ತೆಲುಗು ಪರಂಪರೆಗೆ ಸೇರಿದವರು. ಮಹಾನ್‌‌ ಮ್ಯಾಂಡೋಲಿನ್‌ ವಾದಕ ಮ್ಯಾಂಡೋಲಿನ್‌ ಶ್ರೀನಿವಾಸ್‌ ಕೂಡ ಆಂಧ್ರ ಪ್ರದೇಶದವರು. ರಾಜ್ಯದ ಗ್ರಾಮೀಣ ಪ್ರದೇಶಗಳಲ್ಲಿ ಜನಪದ ಹಾಡುಗಳೂ ಬಹಳ ಜನಪ್ರಿಯವಾಗಿವೆ.ಕರ್ನಾಟಕ ಸಂಗೀತದಲ್ಲಿ ಮತ್ತಷ್ಟು ರಾಗಗಳನ್ನು ಸೃಷ್ಟಿಸಿದ, ಕರ್ನಾಟಕ ಸಂಗೀತದ ಮಹಾನ್‌ ಗಾಯಕರಾದ ಶ್ರೀ ಮಂಗಳಂಪಲ್ಲಿ ಬಾಲಮುರಳಿಕೃಷ್ಣ ರವರು ಕೂಡ ತೆಲುಗು ಪರಂಪರೆಗೆ ಸೇರಿದವರು.

ಎಲ್ಲ ಜಾತಿಗಳ ಹಿಂದೂ ಸಂತರು ಆಂಧ್ರ ಪ್ರದೇಶದಲ್ಲಿ ನೆಲೆ ಕಂಡಿದ್ದಾರೆ. ಸಂತ ಯೋಗಿ ಶ್ರೀ ಪೋತುಲೂರಿ ವೀರ ಬ್ರಹ್ಮೇಂದ್ರ ಸ್ವಾಮಿಯವರು ಹಿಂದುಳಿದ ವರ್ಗಕ್ಕೆ ಸೇರಿದ ಓರ್ವ ಪ್ರಮುಖ ವ್ಯಕ್ತಿಯಾಗಿದ್ದು, ವಿಶ್ವಬ್ರಾಹ್ಮಣ (ಅಕ್ಕಸಾಲಿಗ) ಜಾತಿಯಲ್ಲಿ ಜನಿಸಿದ್ದರೂ ಸಹ, ಬ್ರಾಹ್ಮಣ, ಹರಿಜನ ಮತ್ತು ಮುಸ್ಲಿಂ ಅನುಯಾಯಿಗಳನ್ನು ಹೊಂದಿದ್ದರು.[೩೪] ಬೆಸ್ತರಾಗಿದ್ದ ರಘು ಕೂಡ ಶೂದ್ರರಾಗಿದ್ದರು.[೩೫] ಸಂತ ಕಕ್ಕಯ್ಯ ಚೂರ(ಚಮ್ಮಾರ) ಹರಿಜನ ಸಂತರಾಗಿದ್ದರು. ಆಧುನಿಕ ಕಾಲದ ಹಲವಾರು ಪ್ರಮುಖ ಹಿಂದೂ ಸಂತರು ಆಂಧ್ರ ಪ್ರದೇಶದಿಂದ ಬಂದಿದ್ದಾರೆ. ಅವರೆಂದರೆ, ದ್ವೈತಾದ್ವೈತ ತತ್ವವನ್ನು ಸ್ಥಾಪಿಸಿದ ನಿಂಬರ್ಕ, ಭಾರತ ಸ್ವಾತಂತ್ರ್ಯದ ಪ್ರತಿಪಾದನೆ ಮಾಡಿದ ತಾಯಿ ಮೀರಾ, ದೈವಾರಾಧನೆಯಲ್ಲಿ ಧಾರ್ಮಿಕ ಐಕ್ಯತೆಯನ್ನು ಪ್ರತಿಪಾದಿಸಿದ ಶ್ರೀ ಸತ್ಯ ಸಾಯಿ ಬಾಬಾ, ಸ್ವಾಮಿ ಸುಂದರ ಚೈತನ್ಯಾನಂದಜೀ ಮತ್ತು ಅರಬಿಂದೋ ಮಿಷನ್‌.

ತೀರ್ಥಯಾತ್ರಾ ಮತ್ತು ಧಾರ್ಮಿಕ ಸ್ಥಳಗಳು

[ಬದಲಾಯಿಸಿ]

thumb|right|250px|ತಿರುಮಲ ವೆಂಕಟೇಶ್ವರ ದೇವಸ್ಥಾನ, ತಿರುಪತಿಯಲ್ಲಿರುವ ಅತಿ ಮುಖ್ಯವಾದ ಯಾತ್ರಾಸ್ಥಳ ಭಾರತದಾದ್ಯಂತ ಇರುವ ಹಿಂದೂಗಳಿಗೆ ತಿರುಪತಿ ಅಥವಾ ತಿರುಮಲ ಒಂದು ಬಹು ಮುಖ್ಯ ಯಾತ್ರಾಸ್ಥಳವಾಗಿದೆ. ಇದು ಇಡೀ ಜಗತ್ತಿನಲ್ಲಿನ (ಯಾವುದೇ ಧಾರ್ಮಿಕ ನಂಬುಗೆಗೆ ಸೇರಿದವುಗಳ ಪೈಕಿ) ಅತಿ ಶ್ರೀಮಂತ ಯಾತ್ರಾನಗರವಾಗಿದೆ. ಇದರ ಮುಖ್ಯ ದೇವಸ್ಥಾನವು ವೆಂಕಟೇಶ್ವರದೇವರಿಗೆ ಸಮರ್ಪಣೆಯಾಗಿದೆ. ತಿರುಪತಿಯು ಚಿತ್ತೂರ್ ಜಿಲ್ಲೆಯಲ್ಲಿದೆ. ಸತ್ಯನಾರಾಯಣ ಸ್ವಾಮಿ ದೇವಸ್ಥಾನ ಪೂರ್ವ ಗೋದಾವರಿ ಜಿಲ್ಲೆಯ ಅಣ್ಣಾವರಂನಲ್ಲಿರುವ ಪ್ರಸಿದ್ಧ ದೇವಸ್ಥಾನ. ಸಿಂಹಾಚಲಂ ಮತ್ತೊಂದು ಜನಪ್ರಿಯ ಯಾತ್ರಾ ಸ್ಥಳವಾಗಿದ್ದು, ರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದಿದೆ. ಸಿಂಹಾಚಲಂ ಯಾತ್ರಾಸ್ಥಳವು, ಪ್ರಹ್ಲಾದನನ್ನು ಅವನ ದುಷ್ಠ ತಂದೆ ಹಿರಣ್ಯಕಶಿಪುವಿನಿಂದ ರಕ್ಷಿಸಿದ ಸಂರಕ್ಷಕ ದೇವರಾದ ನರಸಿಂಹನ ನೆಲೆಬೀಡಾಗಿತ್ತು ಎಂದು ಪುರಾಣದಲ್ಲಿ ಹೇಳಲಾಗಿದೆ. ವಿಜಯವಾಡ ನಗರದಲ್ಲಿರುವ ಕನಕ ದುರ್ಗ ದೇವಸ್ಥಾನ ಆಂಧ್ರ ಪ್ರದೇಶದ ಜನಪ್ರಿಯ ದೇವಸ್ಥಾನಗಳಲ್ಲೊಂದು. ಶ್ರೀ ಕಾಳಹಸ್ತಿ ಯು ಬಹಳ ಮುಖ್ಯವಾದ ಪ್ರಾಚೀನ ಶಿವನ ದೇವಸ್ಥಾನಗಳಲ್ಲಿ ಒಂದಾಗಿದ್ದು, ಚಿತ್ತೂರ್‌‌ ಜಿಲ್ಲೆಯಲ್ಲಿನ ಸ್ವರ್ಣಮುಖಿ ನದಿಯ ದಡದಲ್ಲಿದೆ. ಸಿಂಹಾಚಲಂ ಕ್ಷೇತ್ರವು ಪರ್ವತದ ಮೇಲಿರುವ ಪುಣ್ಯಕ್ಷೇತ್ರವಾಗಿದ್ದು ವಿಶಾಖಪಟ್ಟಣಂನಿಂದ ೧೬ ಕಿ.ಮೀ.ನಷ್ಟು ದೂರದಲ್ಲಿದೆ ಹಾಗೂ ನಗರದ ಉತ್ತರ ದಿಕ್ಕಿನಲ್ಲಿರುವ ಬೆಟ್ಟದ ಮತ್ತೊಂದು ಭಾಗದಲ್ಲಿದೆ. ಇದು ಅತಿ ಮನೋಹರ ಶಿಲ್ಪಕಲೆಯನ್ನು ಒಳಗೊಂಡ ಆಂಧ್ರ ಪ್ರದೇಶದ ಪುಣ್ಯಕ್ಷೇತ್ರಗಳಲ್ಲಿ ಒಂದಾಗಿದ್ದು, ದಟ್ಟವಾದ ಅರಣ್ಯದಿಂದ ಆವೃತವಾಗಿರುವ ಬೆಟ್ಟಗಳ ಮಧ್ಯದಲ್ಲಿ ಸ್ಥಾಪಿತಗೊಂಡಿದೆ. ಅತ್ಯಂತ ಸುಂದರವಾಗಿ ಕೆತ್ತಲಾಗಿರುವ ೧೬ ಕಂಬಗಳ ನಾಟ್ಯ ಮಂಟಪ ಮತ್ತು ೯೬ ಕಂಬಗಳ ಕಲ್ಯಾಣ ಮಂಟಪಗಳು ದೇವಸ್ಥಾನದ ಉತ್ಕೃಷ್ಠ ವಾಸ್ತುಶೈಲಿಗೆ ಸಾಕ್ಷಿಯಾಗಿವೆ. ತನ್ನ ಸ್ಥಾನವನ್ನು ಅಲಂಕರಿಸಿರುವ ದೈವವಾದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿಯ ಮೂರ್ತಿಗೆ ಚಂದನದ ದಪ್ಪ ಲೇಪನವನ್ನು ಮಾಡಲಾಗಿದೆ. ಇದು, ವಿಷ್ಣುವಿನ ಅವತಾರಗಳಲ್ಲೊಂದಾದ ನರಸಿಂಹ ಸ್ವಾಮಿಗೆ ಸಮರ್ಪಿಸಲಾದ ಭಾರತದ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದ್ದು, ಚೋಳರ ದೊರೆಯಾದ ಕುಲೋತ್ತುಂಗ ೧೧ ನೇ ಶತಮಾನದಲ್ಲಿ ಈ ದೇವಾಲಯವನ್ನು ನಿರ್ಮಿಸಿದ. ಒಡಿಶಾದ ಗಜಪತಿ ದೊರೆಗಳ ಮೇಲೆ ವಿಜಯಿಯಾಗಿ ಹೊರಹೊಮ್ಮಿದ ನೆನಪಿಗಾಗಿ ಶ್ರೀ ಕೃಷ್ಣ ದೇವರಾಯನು ಸ್ಥಾಪಿಸಿದ ವಿಜಯ ಸ್ಢಂಭ ಇಲ್ಲಿದೆ. ಈ ದೇವಸ್ಥಾನದಲ್ಲಿ ಪ್ರಾಚೀನ ತೆಲುಗು ಶಾಸನಗಳನ್ನು ಕಾಣಬಹುದು. ಈ ದೇವಾಲಯವು ಭಾರತದಲ್ಲಿನ ಅತ್ಯಂತ ಪ್ರಸಿದ್ಧ ದೇವಾಲಯಗಳಲ್ಲೊಂದು.ಇದು ದ್ರಾವಿಡ (ದಕ್ಷಿಣ ಭಾರತದ) ವಾಸ್ತುಶೈಲಿಯನ್ನು ಹೊಂದಿದೆ.ನೆರೆಹಾವಳಿ, ಚಂಡಮಾರುತ, ಭೂಕಂಪ ಮತ್ತು ಸುನಾಮಿಯಂತಹ ನೈಸರ್ಗಿಕ ವಿಕೋಪಗಳಿಂದ ವೈಜಾಗ್‌ನ್ನು ಈ ಸ್ವಾಮಿಯು ರಕ್ಷಿಸುತ್ತಿದ್ದಾನೆ ಎಂಬ ಜನಪ್ರಿಯ ನಂಬಿಕೆಯು ಇಲ್ಲಿ ಹಾಸುಹೊಕ್ಕಾಗಿದೆ. ಇದಕ್ಕೆ ಸಾಕ್ಷಿಯೆಂಬಂತೆ, ಇಲ್ಲಿಯವರೆಗೂ ನೈಸರ್ಗಿಕ ವಿಕೋಪಗಳಿಂದ ಒಂದೇ ಒಂದು ಸಾವು ಕೂಡ ಸಂಭವಿಸಿಲ್ಲ. ಪತಿ-ಪತ್ನಿಯಾಗ ಬಯಸುವ ಜೋಡಿಗಳು ಮದುವೆಗೆ ಮುಂಚೆ ಈ ದೇವಸ್ಥಾನಕ್ಕೆ ಹೋಗುವುದು ಒಂದು ವಾಡಿಕೆಯಾಗಿದೆ. ಆಂಧ್ರ ಪ್ರದೇಶದಲ್ಲಿ ಅತಿ ಹೆಚ್ಚು ಜನಸಂದಣಿಯಿರುವ ಕೂಡಿರುವ ದೇವಸ್ಥಾನಗಳಲ್ಲಿ ಈ ದೇವಸ್ಥಾನವೂ ಒಂದು.

ಹುಸೇನ್‌ ಸಾಗರ್ ಸರೋವರದ ಮೇಲಿನ ಬುದ್ಧನ ವಿಗ್ರಹ

ಶ್ರೀ ಶೈಲಂ, ಆಂಧ್ರ ಪ್ರದೇಶದ ಮತ್ತೊಂದು ಮಹತ್ವದ ದೇವಾಲಯವಾಗಿದ್ದು, ಇದೂ ಕೂಡ ರಾಷ್ಟ್ರಮಟ್ಟದ ಪ್ರಾಮುಖ್ಯತೆಯನ್ನು ಪಡೆದಿದೆ. ಇದು ಶಿವ ದೇವರಿಗೆ ಸಮರ್ಪಿಸಲ್ಪಟ್ಟಿರುವ ದೇವಾಲಯವಾಗಿದೆ. ವಿವಿಧ ಜ್ಯೋತಿರ್ಲಿಂಗಗಳಿರುವ ಹಲವು ಸ್ಥಳಗಳ ಪೈಕಿ ಇದೂ ಒಂದಾಗಿದೆ. ಸ್ಕಂದ ಪುರಾಣ ದಲ್ಲಿ "ಶ್ರೀ ಶೈಲ ಕಾಂಡಂ' ಎಂಬ ಅಧ್ಯಾಯವಿದ್ದು ಅದು ಸಂಪೂರ್ಣವಾಗಿ ಈ ಸ್ಥಳಕ್ಕೇ ಸಂಬಂಧಿಸಿದ್ದಾಗಿದೆ. ಈ ಅಧ್ಯಾಯದಲ್ಲಿ ಈ ಸ್ಥಳದ ಪ್ರಾಚೀನ ಮೂಲದ ಬಗ್ಗೆ ಉಲ್ಲೇಖವಿದೆ. ಕಳೆದ ಸಹಸ್ರಮಾನದ ತಮಿಳು ಸಂತರು ಈ ದೇವಾಲಯದ ಕುರಿತು ಹಾಡಿ ಹೊಗಳಿರುವುದರಿಂದಲೂ ಇದರ ಪ್ರಾಚೀನತೆಯು ದೃಢಪಟ್ಟಿದೆ.ಆದಿ ಶಂಕರರು ಈ ದೇವಸ್ಥಾನಕ್ಕೆ ಭೇಟಿ ನೀಡಿದ್ದರು ಮತ್ತು ಆ ಸಮಯದಲ್ಲಿಯೇ ತಮ್ಮ "ಶಿವಾನಂದ ಲಹರಿ "ಯನ್ನು ರಚಿಸಿದರು ಎಂದು ಹೇಳಲಾಗಿದೆ. ಶಿವನ ಪವಿತ್ರ ಬಸವನಾಗಿರುವ ವೃಷಭನು, ಶಿವ ಮತ್ತು ಪಾರ್ವತಿಯರು ತನ್ನ ಎದುರು ಮಲ್ಲಿಕಾರ್ಜುನ ಮತ್ತು ಭ್ರಮರಾಂಬರ ರೂಪದಲ್ಲಿ ಕಾಣಿಸಿಕೊಳ್ಳುವವರೆಗೂ ಮಹಾಕಾಳಿ ದೇವಸ್ಥಾನದಲ್ಲಿ ತಪಸ್ಸು ಮಾಡಿದ್ದ ಎಂಬುದೊಂದು ನಂಬಿಕೆಯಿದೆ. ಈ ದೇವಸ್ಥಾನವು ೧೨ ಪವಿತ್ರ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿದೆ. ಶ್ರೀರಾಮ ಸ್ವಾಮಿಯು ಸ್ವತಃ ಇಲ್ಲಿ ಸಹಸ್ರಲಿಂಗಗಳನ್ನು ಪ್ರತಿಷ್ಠಾಪಿಸಿದ; ಜೊತೆಗೆ ಪಾಂಡವರು ಪಂಚಪಾಂಡವ ಲಿಂಗಗಳನ್ನು ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಿದರು ಎನ್ನಲಾಗಿದೆ. ಶ್ರೀ ಶೈಲಂ ಕ್ಷೇತ್ರವು ಕರ್ನೂಲ್‌ ಜಿಲ್ಲೆಯಲ್ಲಿದೆ.

ಚಿತ್ರ:Vb211.jpg
ಸಿಂಹಾಚಲಂ ದೇವಸ್ತಾನದಲ್ಲಿನ ಮಂಪಟ

ಭದ್ರಾಚಲಂ ಕ್ಷೇತ್ರವು, ಶ್ರೀರಾಮನ ದೇವಸ್ಥಾನ ಮತ್ತು ಗೋದಾವರಿ ನದಿಗಾಗಿ ಹೆಸರುವಾಸಿಯಾಗಿದೆ. ಶ್ರೀರಾಮನನ್ನು ಕುರಿತು ಅವನ ಪರಮ ಭಕ್ತನಾದ ರಾಮದಾಸು(ಮೂಲದಲ್ಲಿ-ಕಂಚೇರ್ಲ ಗೋಪಣ್ಣ) ತನ್ನ ಭಕ್ತಿಗೀತೆಗಳನ್ನು ಬರೆದದ್ದು ಇದೇ ಸ್ಥಳದಲ್ಲಿ. ತ್ರೇತಾಯುಗದಲ್ಲಿ ಶ್ರೀರಾಮನು ಇದೇ ಗೋದಾವರಿ ನದಿಯ ದಡದಲ್ಲಿ ಕೆಲವು ವರ್ಷಗಳ ಕಾಲ ತಂಗಿದ್ದನು ಎಂಬ ನಂಬಿಕೆಯಿದೆ. ಭದ್ರ ಎಂಬ ಒಂದು ಪರ್ವತವು ಸುದೀರ್ಘವಾದ ತಪಸ್ಸಿನ ನಂತರ, ತನ್ನ ಮೇಲೆಯೇ ಚಿರಕಾಲ ನೆಲೆಸುವಂತೆ ಶ್ರೀರಾಮನನ್ನು ಕೋರಿತು ಎಂಬುದಾಗಿ ಒಂದು ದಂತಕಥೆಯಿದೆ. ಶ್ರೀರಾಮ ನು ಪತ್ನಿ ಸೀತೆ ಮತ್ತು ಸಹೋದರ ಲಕ್ಷ್ಮಣರೊಡಗೂಡಿ ಭದ್ರಗಿರಿಯಲ್ಲಿಯೇ ನೆಲೆಸುವುದಾಗಿ ಹೇಳಿದನು ಎಂದು ಪ್ರತೀತಿಯಿದೆ. ಭದ್ರಾಚಲಂ ಕ್ಷೇತ್ರವು ಖಮ್ಮಮ್ ಜಿಲ್ಲೆಯಲ್ಲಿದೆ. ೧೭ನೇ ಶತಮಾನದಲ್ಲಿ ತಾನಿಶನ ಆಳ್ವಿಕೆಯ ಕಾಲದಲ್ಲಿ ಗೋಪಣ್ಣನು ಜನರಿಂದ ದೇಣಿಗೆ ಸಂಗ್ರಹಿಸಿ ರಾಮನಿಗಾಗಿ ಈ ದೇವಸ್ಥಾನವನ್ನು ನಿರ್ಮಿಸಿದನು. ಅವನು ರಾಮ-ಸೀತಾರ ಕಲ್ಯಾಣವನ್ನು ಆಚರಿಸಲು ಆರಂಭಿಸಿದನು. ಆಗಿನಿಂದ ಪ್ರತಿವರ್ಷ ಶ್ರೀರಾಮ ನವಮಿಯನ್ನು ಆಚರಿಸಲಾಗುತ್ತಿದೆ. ಭದ್ರಾಚಲಂನಲ್ಲಿ ನಡೆಯುವ ಈ ಆಚರಣೆಗೆ ಆಂಧ್ರ ಪ್ರದೇಶ ಸರ್ಕಾರವು ಪ್ರತಿ ವರ್ಷವೂ ಮುತ್ತುಗಳನ್ನು ಕಳಿಸುತ್ತದೆ. ಬಸರ್‌-ಸರಸ್ವತಿ ದೇವಸ್ಥಾನವು, ವಿದ್ಯಾದೇವತೆ ಸರಸ್ವತಿಯ ಮತ್ತೊಂದು ಪ್ರಸಿದ್ಧ ಸ್ಥಳ. ಬಸರಾ ಕ್ಷೇತ್ರವು ಅದಿಲಾಬಾದ್‌ ಜಿಲ್ಲೆಯಲ್ಲಿದೆ. ಯಾಗಂಟಿ ಗುಹೆಗಳು ಕೂಡ ಆಂಧ್ರ ಪ್ರದೇಶದ ಮತ್ತೊಂದು ಬಹುಮುಖ್ಯ ಯಾತ್ರಾ ಸ್ಥಳವಾಗಿದೆ. ಮಹಾನಂದಿಯನ್ನು ಹೊರತುಪಡಿಸಿ ಕರ್ನೂಲ್‌ ಜಿಲ್ಲೆಯು ಮತ್ತೊಂದು ಯಾತ್ರಾ ಕೇಂದ್ರವಾಗಿದ್ದು ಹಸಿರಿನಿಂದ ಕೂಡಿದೆ.ಪ್ರಸಿದ್ಧ ಹಿಂದೂ ಬಿರ್ಲಾ ಮಂದಿರ, ಮತ್ತು ರಾಮಪ್ಪ ದೇವಸ್ಥಾನ, ಮುಸ್ಲಿಂರ ಮೆಕ್ಕಾ ಮಸೀದಿ ಮತ್ತು ಚಾರ್ಮಿನಾರ್‌, ಜೊತೆಗೆ ಹುಸೇನ್‌ ಸಾಗರ್‌ ಜಲಾಶಯದ ಮೇಲಿರುವ ಬುದ್ಧನ ಪ್ರತಿಮೆ ಮುಂತಾದುವುಗಳು ಆಂಧ್ರ ಪ್ರದೇಶದ ಮನಮೋಹಕ ಧಾರ್ಮಿಕ ಸ್ಮಾರಕಗಳಾಗಿವೆ.

ರಾಮಪ್ಪ ದೇವಸ್ಥಾನ

ಕನಕದುರ್ಗ ದೇವಸ್ಥಾನವು ಭಾರತದ ಆಂಧ್ರ ಪ್ರದೇಶದಲ್ಲಿನ ಮತ್ತೊಂದು ಪ್ರಖ್ಯಾತ ದೇವಸ್ಥಾನವಾಗಿದೆ.ಕೃಷ್ಣಾ ನದಿಯ ದಂಡೆಯ ಮೇಲಿರುವ ವಿಜಯವಾಡ ನಗರದ ಇಂದ್ರಕೀಲಾದ್ರಿ ಪರ್ವತದ ಮೇಲೆ ಈ ದೇವಸ್ಥಾನ ಸ್ಥಾಪಿತವಾಗಿದೆ. ಹಚ್ಚಹಸಿರಿನಿಂದ ಆವೃತವಾಗಿರುವ ಈಗಿನ ವಿಜಯವಾಡ ಹಿಂದೆ ಕಲ್ಲುಬಂಡೆಗಳ ಪ್ರಾಂತ್ಯವಾಗಿದ್ದು, ದಿಣ್ಣೆಗಳಿಂದ ತುಂಬಿಕೊಂಡಿದ್ದರಿಂದಾಗಿ ಕೃಷ್ಣಾ ನದಿಯ ಹರಿವಿಗೆ ತಡೆಯೊಡ್ಡುತ್ತಿತ್ತು ಎಂದು ದಂತಕಥೆಯೊಂದು ಹೇಳುತ್ತದೆ. ಹೀಗಾಗಿ ಆ ಭೂಮಿಯು ವಾಸ ಮಾಡುವುದಕ್ಕಾಗಲೀ ವ್ಯವಸಾಯಕ್ಕಾಗಲೀ ಯೋಗ್ಯವಾಗಿರಲಿಲ್ಲ. ಶಿವನನ್ನು ಪ್ರಾರ್ಥಿಸಿದಾಗ, ಅವನ ಆಜ್ಞಾಪನೆಯ ಮೇರೆಗೆ ಪರ್ವತಗಳು ಕೃಷ್ಣಾ ನದಿ ಹರಿಯಲು ದಾರಿ ಮಾಡಿಕೊಟ್ಟವು. ಅದು ಆದದ್ದೇ ತಡ!ಕೃಷ್ಣಾ ನದಿಯು ಬೆಟ್ಟದಲ್ಲಿ ಶಿವನು ಕೊರೆದ ಸುರಂಗಗಳ ಅಥವಾ "ಬೆಜ್ಜಮ್‌" ಮೂಲಕ ಯಾವುದೇ ಅಡೆತಡೆಯಿಲ್ಲದೆ ರಭಸದಿಂದ ಹರಿಯಲು ಪ್ರಾರಂಭಿಸಿತು. ಹೀಗೆ ಆ ಸ್ಥಳ ಬೆಜವಾಡ ಎಂಬ ಹೆಸರು ಪಡೆಯಿತು. ಹಲವು ಪುರಾಣಗಳಲ್ಲೊಂದು ಈ ಸ್ಥಳದೊಂದಿಗೆ ಸಂಬಂಧ ಹೊಂದಿದೆ. ಅದೆಂದರೆ, ಶಿವನಿಂದ ವರ ಪಡೆಯಲು ಅರ್ಜುನ ಶಿವವನ್ನು ಕುರಿತು ಇಂದ್ರಕೀಲ ಪರ್ವತದ ಮೇಲೆ ಕುಳಿತು ತಪಸ್ಸು ಮಾಡಿದನು. ನಂತರ ಅರ್ಜುನ ಶಿವನಿಂದ ವರ ಪಡೆದು ವಿಜಯಿಯಾದನು. ಈ ನಗರಕ್ಕೆ "ವಿಜಯವಾಡ" ಎಂದು ಹೆಸರು ಬರಲು ಇದೇ ಕಾರಣವಾಯಿತು. ಅಸುರಾಧಿಪತಿ ಮಹಿಷಾಸುರನನ್ನು ಸಂಹರಿಸಿದ ಕನಕದುರ್ಗ ದೇವತೆಯ ವಿಜಯೋತ್ಸವದ ಕುರಿತು ಮತ್ತೊಂದು ಜನಪ್ರಿಯ ದಂತಕಥೆಯಿದೆ. ಒಂದಾನೊಂದು ಕಾಲದಲ್ಲಿ ಈ ಪ್ರದೇಶದಲ್ಲಿ ವಾಸಿಸುತ್ತಿದ್ದ ಜನತೆಗೆ ರಾಕ್ಷಸರ ಕಾಟವು ಅತಿಯಾಗಿ ಸಹಿಸಲು ಅಸಾಧ್ಯವಾಗಿತ್ತು. ಆಗ ಇಂದ್ರಕೀಲ ಋಷಿಯು ಉಗ್ರವಾಗಿ ತಪಸ್ಸು ಮಾಡಿದನು. ಅದನ್ನು ಮೆಚ್ಚಿ ದೇವತೆಯು ಪ್ರತ್ಯಕ್ಷಳಾದಾಗ, ತನ್ನ ತಲೆಯ ಮೇಲೆ ಆಕೆಯು ನೆಲೆಸಿ ದುರುಳ ರಾಕ್ಷಸರಿಂದ ರಕ್ಷಣೆ ಒದಗಿಸಬೇಕೆಂದು ಋಷಿಯು ಪ್ರಾರ್ಥಿಸಿದನು. ಋಷಿಯ ಕೋರಿಕೆಯ ಮೇರೆಗೆ, ರಾಕ್ಷಸರನ್ನು ಸಂಹರಿಸಿದ ದುರ್ಗಾ ದೇವತೆಯು ಇಂದ್ರಕೀಲದಲ್ಲಿ ಶಾಶ್ವತವಾಗಿ ನೆಲೆಸಿದಳು. ತದನಂತರ, ಅವಳು ರಾಕ್ಷಸದೊರೆ ಮಹಿಷಾಸುರರನ್ನು ಸಂಹರಿಸಿ ವಿಜಯವಾಡದ ಜನರನ್ನು ರಾಕ್ಷಸರ ದುಷ್ಟ ಹಿಡಿತದಿಂದ ರಕ್ಷಿಸಿದಳು. ನವರಾತ್ರಿ ಎಂದು ಕರೆಯುವ ದಸರಾ ಹಬ್ಬದ ಸಮಯದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಗುತ್ತದೆ. ಅವುಗಳಲ್ಲಿ ಅತ್ಯಂತ ಮಹತ್ವವಾದವುಗಳೆಂದರೆ, ಸರಸ್ವತಿ ಪೂಜೆ ಮತ್ತು ತೆಪ್ಪೋತ್ಸವ. ದುರ್ಗಾ ದೇವತೆಗಾಗಿ ದಸರಾ ಹಬ್ಬವನ್ನು ಇಲ್ಲಿ ಪ್ರತಿವರ್ಷವೂ ಆಚರಿಸಲಾಗುತ್ತದೆ. ಈ ಸಮಯದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ಆಗಮಿಸುವ ಭಕ್ತಾದಿಗಳು ಈ ವರ್ಣಮಯ ಆಚರಣೆಯಲ್ಲಿ ಭಾಗವಹಿಸಿ ನಂತರ ಕೃಷ್ಣಾ ನದಿಯಲ್ಲಿ ಮಿಂದು ಪುನೀತರಾಗುತ್ತಾರೆ.

ಇತರೆ ಸಾಂಸ್ಕೃತಿಕ ವಿಚಾರಗಳು

[ಬದಲಾಯಿಸಿ]

ಬಾಪೂರವರ ಚಿತ್ರಕಲೆ, ನಂದೂರಿ ಸುಬ್ಬರಾವ್‌ ಅವರ ಯೆಂಕಿ ಪಾಟಲು ,(ಯೆಂಕಿ ಎಂದು ಕರೆಯಲ್ಪಡುವ ಅಗಸಗಿತ್ತಿಯ/ಅವಳ ಕುರಿತಾದ ಹಾಡುಗಳು), ತುಂಟ ಬುಡುಗು,(ಮುಲ್ಲಪುಡಿಯವರಿಂದ ರಚನೆಯಾದ ಪಾತ್ರ), ಅನ್ನಮಯ್ಯನ ಹಾಡುಗಳು, ಅವಕಾಯ (ವಿಭಿನ್ನವಾದ ಒಂದು ಬಗೆಯ ಮಾವಿನ ಉಪ್ಪಿನ ಕಾಯಿ, ಇದರಲ್ಲಿ ಮಾವಿನ ಓಟೆಯನ್ನು ಹಾಗೆಯೇ ಉಳಿಸಿಕೊಳ್ಳಲಾಗಿರುತ್ತದೆ), ಗೊಂಗುರ (ದಾಸವಾಳದ ಜಾತಿಯ ಗಿಡದಿಂದ ಮಾಡಲಾದ ಚಟ್ನಿ), ಅಟ್ಲ ತಡ್ಡಿ (ಹದಿಹರೆಯದ ಹುಡುಗಿಯರಿಗೆಂದೇ ಆಚರಿಸಲಾಗುವ ವಿಶೇಷವಾದ ಋತುಕಾಲಿಕ ಹಬ್ಬ.) ಗೋದಾವರಿ ನದಿಯ ದಂಡೆಗಳು, ದೂಡು ಬಸವಣ್ಣ (ಸುಗ್ಗಿಯ ಹಬ್ಬವಾದ ಸಂಕ್ರಾಂತಿಯ ಸಮಯದಲ್ಲಿ ಸಾಂಪ್ರದಾಯಿಕ ಬಸವನನ್ನು ಸಿಂಗರಿಸಿ ಮನೆ ಮನೆಗೆ ಕರೆದೊಯ್ದು ಪ್ರದರ್ಶಿಸುವ ಒಂದು ಆಚರಣೆ) ಮುಂತಾದ ಹಬ್ಬ-ಆಚರಣೆಗಳು ತೆಲುಗು ಸಂಸ್ಕೃತಿಯನ್ನು ಶ್ರೀಮಂತಗೊಳಿಸಿವೆ. ಮೆದು ಕಲ್ಲುಗಳಲ್ಲಿ ವಿಗ್ರಹಗಳನ್ನು ಕೆತ್ತುವುದಕ್ಕೆ ಸಂಬಂಧಿಸಿದ ಶಿಲ್ಪಕಲಾ ಕುಶಲತೆಗಾಗಿ ದುರ್ಗಿಯ ಹಳ್ಳಿಯು ಹೆಸರುವಾಸಿಯಾಗಿದೆ. ಈ ಮೆದುಕಲ್ಲುಗಳು ಕೆಟ್ಟ ಹವಾಗುಣಕ್ಕೆ ಗುರಿಯಾಗುವ ಸಂಭವವಿರುತ್ತವೆಯಾದ್ದರಿಂದ ಅವುಗಳನ್ನು ನೆರಳಿನಟ್ಟು ಪ್ರದರ್ಶಿಸುವುದು ಅಗತ್ಯವಾಗಿರುತ್ತದೆ. 'ಕಲಂಕಾರಿ' ಅತ್ಯಂತ ಪ್ರಾಚೀನ ಕಲಾಪ್ರಕಾರವಾಗಿದ್ದು, ಇದರ ಇತಿಹಾಸ ಹರಪ್ಪ ನಾಗರಿಕತೆಯವರೆಗೂ ಹೋಗುತ್ತದೆ. ಗೊಂಬೆ ತಯಾರಿಕೆಗೂ ಆಂಧ್ರ ಹೆಸರುವಾಸಿಯಾಗಿದೆ. ಗೊಂಬೆಗಳನ್ನು ಮರ, ಮಣ್ಣು, ಒಣ ಹುಲ್ಲು, ಮತ್ತು ಹಗುರವಾದ ಮಿಶ್ರಲೋಹಗಳಿಂದ ತಯಾರಿಸಲಾಗುತ್ತದೆ. ತಿರುಪತಿಯು ಮಂಜತ್ತಿಮರದ ಕೆತ್ತನೆಗಳಿಗೆ ಹೆಸರವಾಸಿಯಾಗಿದೆ. ಸಮೃದ್ಧವಾದ ಬಣ್ಣಗಳನ್ನು ಹೊಂದಿರುವ ಮಣ್ಣಿನ ಗೊಂಬೆಗಳಿಗೆ ಕೊಂಡಪಲ್ಲಿ ಹೆಸರುವಾಸಿಯಾಗಿದೆ. ವಿಶಾಖಪಟ್ಟಣದಲ್ಲಿ ನೆಲೆಗೊಂಡಿರುವ ಈಟಿಕೊಪ್ಪವು ಗೊಂಬೆಗಳಿಗೆ ಹೆಸರುವಾಸಿಯಾಗಿದೆ. ನಿರ್ಮಲ್‌ ಚಿತ್ರಕಲೆಯು ಅಭಿವ್ಯಕ್ತಿಗೆ ಒತ್ತುಕೊಡುವ ಪ್ರಕಾರವಾಗಿದ್ದು ಅವುಗಳನ್ನು ಸಾಮಾನ್ಯವಾಗಿ ಕಪ್ಪು ಹಿನ್ನೆಲೆಯುಳ್ಳ ಮಾಧ್ಯಮದ ಮೇಲೆ ಚಿತ್ರಿಸಲಾಗುತ್ತದೆ. ಕಥಾ ನಿರೂಪಣಾ ಪ್ರಕಾರಕ್ಕೆ ಆಂಧ್ರದಲ್ಲಿ ತನ್ನದೇ ಆದ ಒಂದು ಸ್ಥಾನವಿದೆ. 'ಯಕ್ಷಗಾನಂ'‌, 'ಬುರ್ರ ಕಥಾ' (ಸಾಮಾನ್ಯವಾಗಿ ಮೂರು ಜನರಿಂದ ಮಾಡುವಂಥಾದ್ದಾಗಿದ್ದು, ಕಥೆಯನ್ನು ಹೇಳಲು ಮೂರು ವಿಭಿನ್ನ ಸಂಗೀತ ವಾದ್ಯಗಳನ್ನು ಬಳಸಿಕೊಳ್ಳಲಾಗುತ್ತದೆ), 'ಜಂಗಮ ಕಥಾಲು', 'ಹರಿ ಕಥಾಲು', 'ಚೆಕ್ಕ ಭಜನ', 'ಉರುಮುಲ ನಾಟ್ಯಂ'(ಸಾಮಾನ್ಯವಾಗಿ ಹಬ್ಬ ಹರಿದಿನಗಳಲ್ಲಿ ಆಚರಿಸಲಾಗುವ ನೃತ್ಯವಾಗಿದ್ದು, ಭಾರೀ ಸಂಗೀತದ ಲಯಕ್ಕೆ ನೃತ್ಯಗಾರರ ತಂಡವು ವೃತ್ತಾಕಾರದಲ್ಲಿ ಕುಣಿಯುತ್ತದೆ), 'ಘಟ ನಾಟ್ಯಂ'(ಒಬ್ಬರ ತಲೆಯ ಮೇಲೆ ಮಣ್ಣಿಯ ಮಡಕೆಯನ್ನು ಇಟ್ಟು ಕುಣಿಯುವ ಪ್ರದರ್ಶನ ಕಲೆ) ಇವೆಲ್ಲವೂ ಪ್ರಖ್ಯಾತ ವಿಶಾಖಾ ಉತ್ಸವದಲ್ಲಿ ಆಚರಿಸಲಾಗುವ ಜಾನಪದ ನೃತ್ಯ ಪ್ರಕಾರಗಳಾಗಿದ್ದು, ಆಂಧ್ರ ಪ್ರದೇಶದ ಪಲುಮಾಂಬ ಜಾತ್ರೆಗೇ ಅನನ್ಯತೆಯನ್ನು ತಂದುಕೊಟ್ಟಿವೆ.

ಶಿಕ್ಷಣ

[ಬದಲಾಯಿಸಿ]
ಇಂಡಿಯನ್‌ ಸ್ಕೂಲ್‌ ಆಫ್‌ ಬಿಸಿನೆಸ್‌

ಆಂಧ್ರ ಪ್ರದೇಶದಲ್ಲಿ ೨೦ಕ್ಕೂ ಹೆಚ್ಚಿನ ಉನ್ನತ ಶಿಕ್ಷಣ ಸಂಸ್ಥೆಗಳು ಶೈಕ್ಷಣಿಕ ಸೇವೆ ನೀಡುತ್ತಿವೆ. ಬಹುತೇಕ ಎಲ್ಲಾ ಕಲಾ ಕೋರ್ಸುಗಳು, ಮಾನವ ಶಾಸ್ತ್ರಗಳು, ವಿಜ್ಞಾನ, ಎಂಜಿನಿಯರಿಂಗ್‌‌, ಕಾನೂನು, ಔಷಧ ವೈದ್ಯಶಾಸ್ತ್ರ, ವ್ಯವಹಾರ ಮತ್ತು ಪಶುವೈದ್ಯ ವಿಜ್ಞಾನ ಮುಂತಾದ ವಿಷಯಗಳಲ್ಲಿ ಇವು ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ನೀಡುತ್ತಿವೆ.ಎಲ್ಲಾ ಪ್ರಮುಖ ಕ್ಷೇತ್ರಗಳಲ್ಲೂ ಅತ್ಯಾಧುನಿಕ ಸಂಶೋಧನೆಗಳು ನಡೆಯುತ್ತಿವೆ. ಆಂಧ್ರ ಪ್ರದೇಶದಲ್ಲಿ ೧೩೩೦ ಕಲೆ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜುಗಳು; ೧೦೦೦ MBA ಮತ್ತು MCA ಕಾಲೇಜುಗಳು; ೫೦೦ ಎಂಜಿನಿಯರಿಂಗ್‌ ಕಾಲೇಜುಗಳು ಮತ್ತು ೫೩ ವೈದ್ಯಕೀಯ ಕಾಲೇಜುಗಳಿವೆ. ಉನ್ನತ ಶಿಕ್ಷಣದಲ್ಲಿ ಶಿಕ್ಷಕ-ವಿದ್ಯಾರ್ಥಿಗಳ ಅನುಪಾತ ೧೯:೧ರಷ್ಟು ಇದೆ. ೨೦೦೧ರ ಜನಗಣತಿಯ ಪ್ರಕಾರ ಆಂಧ್ರ ಪ್ರದೇಶವು ಒಟ್ಟಾರೆಯಾಗಿ ೬೦.೫%ರಷ್ಟು ಸಾಕ್ಷರತಾ ಪ್ರಮಾಣವನ್ನು ಹೊಂದಿದೆ. ಇದರಲ್ಲಿ ಪುರುಷ ಸಾಕ್ಷರತಾ ಪ್ರಮಾಣವು ೭೦.೩%ರಷ್ಟು ಇದ್ದರೆ ಮಹಿಳಾ ಸಾಕ್ಷರತಾ ಪ್ರಮಾಣವು ೫೦.೪%ರಷ್ಟು ಮಾತ್ರ ಇದ್ದು, ಅದೇ ಕಳವಳಕ್ಕೆ ಕಾರಣವಾಗಿದೆ. ಹಲವು ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವಲ್ಲಿ ರಾಜ್ಯವು ಇತ್ತೀಚೆಗೆ ದಾಪುಗಾಲಿಟ್ಟಿದೆ. ಪ್ರತಿಷ್ಠಿತ ಬಿರ್ಲಾ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಅಂಡ್‌ ಸೈನ್ಸ್‌ (ಹೈದರಾಬಾದ್‌ನಲ್ಲಿರುವ BITS ಪಿಲಾನಿ ಆವರಣ) ಮತ್ತು IIT ಹೈದರಾಬಾದ್‌ನಂತಹ ಸಂಸ್ಥೆಗಳಿಗೆ ಆಂಧ್ರ ಪ್ರದೇಶವು ತವರು ಮನೆಯಾಗಿದೆ. ಇಂಟರ್‌ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಇನ್‌ಫರ್ಮೇಶನ್ ಟೆಕ್ನಾಲಜಿ , ಹೈದರಾಬಾದ್ (IIIT-H), ಹೈದರಾಬಾದ್‌ ವಿಶ್ವವಿದ್ಯಾಲಯ(ಹೈದರಾಬಾದ್‌ ಕೇಂದ್ರೀಯ ವಿಶ್ವವಿದ್ಯಾಲಯ), ಮತ್ತು ಇಂಡಿಯನ್‌ ಸ್ಕೂಲ್‌ ಆಫ್‌ ಬಿಸಿನೆಸ್‌ (ISB), ಇವು ತಮ್ಮ ಗುಣಮಟ್ಟದ ಶಿಕ್ಷಣದಿಂದಾಗಿ ಅಂತಾರಾಷ್ಟ್ರೀಯ ಗಮನ ಸೆಳೆಯುತ್ತಿವೆ. ದಿ ನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಫ್ಯಾಷನ್‌ ಟೆಕ್ನಾಲಜಿ (NIFT) ಮತ್ತು ದಿ ಇನ್‌ಸ್ಟಿಟ್ಯೂಟ್‌ ಆಫ್‌ ಹೊಟೇಲ್‌ ಮ್ಯಾನೇಜ್‌ಮೆಂಟ್‌, ಕೇಟರಿಂಗ್‌ ಟೆಕ್ನಾಲಜಿ ಅಂಡ್‌‌ ಅಪ್ಲೈಡ್‌ ನ್ಯೂಟ್ರಿಷನ್‌ ಇವೂ ಕೂಡ ಹೈದರಾಬಾದ್‌ನಲ್ಲಿವೆ. ಪ್ರತಿಷ್ಠಿತ ಒಸ್ಮಾನಿಯಾ ವಿಶ್ವವಿದ್ಯಾಲಯ ಕೂಡ ಇರುವುದು ಹೈದರಾಬಾದ್‌ನಲ್ಲೇ.

ಆಂಧ್ರ ಪ್ರದೇಶ ಸರ್ಕಾರವು ಮೊದಲ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವನ್ನು ಸ್ಥಾಪಿಸಿದ ಹೆಗ್ಗಳಿಕೆಯನ್ನು ಹೊಂದಿದ್ದು, ತನ್ಮೂಲಕ ಇದು ಹಲವು ಸಮಿತಿಗಳ ಶಿಫಾರಸ್ಸುಗಳನ್ನು ಕಾರ್ಯಗತಗೊಳಿಸಿದಂತಾಗಿದೆ. ಈ ರೀತಿಯಲ್ಲಿ, ಆಂಧ್ರ ಪ್ರದೇಶ ವಿಧಾನಸಭೆಯ ಕಾಯಿದೆ ಸಂಖ್ಯೆ ೬ರ ಪ್ರಕಾರ "ಆಂಧ್ರ ಪ್ರದೇಶ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ"ವನ್ನು ಸ್ಥಾಪಿಸಲಾಯಿತು ಹಾಗೂ ದಿನಾಂಕ: ೯-೪-೧೯೮೬ರಂದು ಆಂಧ್ರ ಪ್ರದೇಶದ ಆಗಿನ ಮುಖ್ಯಮಂತ್ರಿ ದಿವಂಗತ ಎನ್.ಟಿ.ರಾಮ ರಾವ್‌ ಇದನ್ನು ಉದ್ಘಾಟಿಸಿದರು. ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯವು ವಿಜಯವಾಡದಲ್ಲಿ ದಿನಾಂಕ: ೦೧-೧೧-೧೯೮೬ರಿಂದ ಕಾರ್ಯಾರಂಭ ಮಾಡಿತು. ಇದರ ಸಂಸ್ಥಾಪಕರಾದ ಶ್ರೀ ಎನ್‌.ಟಿ.ರಾಮ ರಾವ್‌ರವರ ನಿಧನಾ ನಂತರ, ೧೯೯೮ರ ಅವಲೋಕಿಸುವ ಕಾಯಿದೆ ಸಂಖ್ಯೆ ೪ರ ಅನುಸಾರ, ದಿನಾಂಕ: ೨.೨.೯೮ರಂದು ಅನ್ವಯವಾಗುವಂತೆ, ಅವರ ಸ್ಮರಣೆಗಾಗಿ 'NTR ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ', ಆಂದ್ರ ಪ್ರದೇಶ ಎಂದು ವಿಶ್ವವಿದ್ಯಾಲಯಕ್ಕೆ ಮರುನಾಮಕರಣ ಮಾಡಲಾಯಿತು.

ವೃತ್ತ ಪತ್ರಿಕೆಗಳು

[ಬದಲಾಯಿಸಿ]

ಆಂಧ್ರ ಪ್ರದೇಶವು ತೆಲುಗು ಭಾಷೆಯ ಹಲವು ವೃತ್ತ ಪತ್ರಿಕೆಗಳನ್ನು ಹೊಂದಿದೆ. ಈನಾಡು , ಆಂಧ್ರ ಜ್ಯೋತಿ , ಸಾಕ್ಷಿ , ಪ್ರಜಾಶಕ್ತಿ , ವಾರ್ತಾ , ಆಂಧ್ರ ಭೂಮಿ , ವಿಶಾಲಾಂಧ್ರ , ಸೂರ್ಯಾ , ಮತ್ತು ಆಂಧ್ರ ಪ್ರಭ , ಇವು ರಾಜ್ಯದಲ್ಲಿನ ಪ್ರಮುಖ ತೆಲುಗು ಭಾಷಾ ವೃತ್ತಪತ್ರಿಕೆಗಳು. ಆಂಧ್ರ ಪ್ರದೇಶದ ಉರ್ದು ಭಾಷಾ ವೃತ್ತಪತ್ರಿಕೆಗಳೆಂದರೆ, ಸಿಯಾಸತ್‌ ಡೈಲಿ , ಮುನ್ಸಿಫ್‌ ಡೈಲಿ , ರೆಹ್ನುಮಾ-ಇ-ಡೆಕ್ಕನ್‌ , ಇತಿಮದ್ ಉರ್ದು ಡೈಲಿ , ಆವಾಂ ಮತ್ತು ಮಿಲಾಪ್‌ ಡೈಲಿ ಆಂಧ್ರ ಪ್ರದೇಶದಲ್ಲಿ ಇಂಗ್ಷೀಷ್‌ ಭಾಷೆಯ ಹಲವು ಪತ್ರಿಕೆಗಳೂ ಪ್ರಕಟವಾಗುತ್ತಿದ್ದು ಅವು ಇಂತಿವೆ, ಡೆಕ್ಕನ್‌ ಕ್ರಾನಿಕಲ್‌, ದಿ ಹಿಂದು , ದಿ ಟೈಮ್ಸ್ ಆಫ್ ಇಂಡಿಯಾ , ದಿ ನ್ಯೂ ಇಂಡಿಯನ್‌ ಎಕ್ಸ್‌‌ಪ್ರೆಸ್ , ದಿ ಎಕನಾಮಿಕ್‌ ಟೈಮ್ಸ್ , ದಿ ಬಿಸಿನೆಸ್‌ ಲೈನ್‌ ಹಿಂದಿ ಭಾಷೆಯ ಹಲವಾರು ವೃತ್ತಪತ್ರಿಕೆಗಳಿಗೂ ಆಂಧ್ರ ಪ್ರದೇಶ ತವರು ಮನೆಯಾಗಿದೆ. ಅವುಗಳೆಂದರೆ, ಸ್ವತಂತ್ರ ವಾರ್ತಾ , ವಿಶಾಖಪಟ್ಟಣಂ ನಿಜಾಮಾಬಾದ್‌ , ಮತ್ತು ಹೈದರಾಬಾದ್‌ನಿಂದ ಪ್ರಕಟವಾಗುವ ಅತ್ಯಂತ ಹಳೆಯ ಹಿಂದಿ ಪತ್ರಿಕೆಗಳಲ್ಲಿ ಒಂದಾದ ಹಿಂದಿ ಮಿಲಾಪ್‌ .

ಪ್ರವಾಸೋದ್ಯಮ

[ಬದಲಾಯಿಸಿ]
ಚಿತ್ರ:Araku-valley.gif
ಅರಕು ಕಣಿವೆ
ಚಿತ್ರ:Vb125.jpg
ಬೊರ್ರ ಗುಹೆಗಳು (ಇಳಿಬಿದ್ದಿರುವ ನೀರ್ಗೋಲುಳು ಮತ್ತು ನೆಲದಿಂದ ಮೇಲೆದ್ದಿರುವ ನೀರ್ಗೋಲುಗಳು )
ಬೆಲಂ ಗುಹೆಗಳು

ಆಂಧ್ರ ಪ್ರದೇಶವನ್ನು ಇಲ್ಲಿನ ಪ್ರವಾಸೋದ್ಯಮ ಇಲಾಖೆಯು "ಭಾರತದ ಕೊಹಿನೂರ್‌ " ಎಂದು ಬಿಂಬಿಸಿದೆ. ಆಂಧ್ರ ಪ್ರದೇಶವು ಹಲವು ಧಾರ್ಮಿಕ ಯಾತ್ರಾ ಕೇಂದ್ರಗಳ ತವರೂರಾಗಿದೆ. ವೆಂಕಟೇಶ್ವರ ಸ್ವಾಮಿಯ ನೆಲೆಬೀಡಾದ ತಿರುಪತಿಯು ಪ್ರಪಂಚದಲ್ಲಿನ ಯಾತ್ರಾಕೇಂದ್ರಗಳ ಪೈಕಿ (ಯಾವುದೇ ಧರ್ಮದ) ಅತಿ ಹೆಚ್ಚು ಜನ ಯಾತ್ರಾರ್ಥಿಗಳು ಭೇಟಿ ಕೊಡುವ ಸ್ಥಳವಾಗಿದೆ. ನಲ್ಲಮಲ ಬೆಟ್ಟದಲ್ಲಿ ಸೇರಿಕೊಂಡಿರುವ [ಸೂಕ್ತ ಉಲ್ಲೇಖನ ಬೇಕು]ಶ್ರೀ ಶೈಲಂ ಕ್ಷೇತ್ರವು ಶ್ರೀ ಮಲ್ಲಿಕಾರ್ಜುನ ನ ನೆಲೆಬೀಡಾಗಿದ್ದು, ಭಾರತದಲ್ಲಿನ ಹನ್ನೆರಡು ಜ್ಯೋತಿರ್ಲಿಂಗ ಗಳಲ್ಲಿ ಒಂದಾಗಿದೆ. ಯಾದಗಿರಿಗುಟ್ಟವು ವಿಷ್ಣುವಿನ ಮತ್ತೊಂದು ಅವತಾರವಾಗಿರುವ ಶ್ರೀ ಲಕ್ಷ್ಮೀ ನರಸಿಂಹನ ಆವಾಸಸ್ಥಾನವಾಗಿರುವಂತೆಯೇ, ಅಮರಾವತಿಯ ಶಿವನ ದೇವಾಲಯವು ಪಂಚಾರಾಮಮ್‌ಗಳಲ್ಲಿ (ಐದು ದೇವಾಲಯಗಳಲ್ಲಿ) ಒಂದಾಗಿದೆ. ವಾರಂಗಲ್‌ನಲ್ಲಿನ ಸಾವಿರ ಕಂಬಗಳ ದೇವಸ್ಥಾನ ಮತ್ತು ರಾಮಪ್ಪ ದೇವಸ್ಥಾನಗಳು ತಮ್ಮ ದೇವಾಲಯದಲ್ಲಿನ ಕೆತ್ತನೆಗಳಿಗೆ ಹೆಸರುವಾಸಿಯಾಗಿವೆ. ಅಮರಾವತಿ, ನಾಗಾರ್ಜುನ ಕೊಂಡ, ಭಟ್ಟಿಪ್ರೊಲು, ಘಂಟಸಾಲ, ನೆಲಕೊಂಡಪಲ್ಲಿ, ಧೂಲಿಕಟ್ಟ, ಬಾವಿಕೊಂಡ, ಥೊಟ್ಲಕೊಂಡ, ಶಾಲಿಹುಂಡಂ, ಪವುರಾಲಕೊಂಡ, ಶಂಕರಂ, ಫಣಿಗಿರಿ ಮತ್ತು ಕೋಲನ್‌ಪಾಕ ಇವೇ ಮೊದಲಾದ ಸ್ಥಳಗಳಲ್ಲಿ ರಾಜ್ಯವು ಅಸಂಖ್ಯಾತ ಬೌದ್ಧ ಕೇಂದ್ರಗಳನ್ನು ಹೊಂದಿದೆ. ಬಾದಾಮಿ ಚಾಲುಕ್ಯರು (ಬಾದಾಮಿಯು ಕರ್ನಾಟಕದಲ್ಲಿದೆ.) ೬ನೇ ಶತಮಾನದಲ್ಲಿ ನಿರ್ಮಿಸಿರುವ ಆಲಂಪುರ್‌ ಭ್ರಮಾ ದೇವಸ್ಥಾನಗಳು [೩೬]ಚಾಲುಕ್ಯರ ಕಲೆ ಮತ್ತು ಶಿಲ್ಪಕಲೆಗೆ ಅತ್ಯುತ್ತಮ ಉದಾಹರಣೆಯಾಗಿವೆ. ವಿಜಯನಗರ ಸಾಮ್ರಾಜ್ಯವು ಅಸಂಖ್ಯಾತ ಸ್ಮಾರಕಗಳು, ಶ್ರೀಶೈಲಂ ದೇವಸ್ಥಾನ ಮತ್ತು ಲೇಪಾಕ್ಷಿ ದೇವಸ್ಥಾನಗಳನ್ನು ನಿರ್ಮಿಸಿತು. ವಿಶಾಖಪಟ್ಟಣಂನಲ್ಲಿರುವ ಗೋಲ್ಡನ್‌ ಬೀಚ್‌, ಬೊರ್ರದಲ್ಲಿನ ಒಂದು ದಶಲಕ್ಷ ವರ್ಷಗಳಷ್ಟು ಹಳೆಯದಾದ ಸುಣ್ಣದ ಕಲ್ಲಿನ ಗುಹೆಗಳು, ಚಿತ್ರಸದೃಶ ಅರಕು ಕಣಿವೆ, ಹಾರ್‌ಸ್ಲೆ ಬೆಟ್ಟಗಳ ಗಿರಿಧಾಮಗಳು, ಪಾಪಿ ಕೊಂಡಾಲು ವಿನಲ್ಲಿ ಕಿರಿದಾದ ಕಮರಿಯೊಂದರ ಮೂಲಕ ಹರಿಯುವ ಗೋದಾವರಿ ನದಿ, ಕುಂತಲ, ಎಟ್ಟಿಪೊತಾಲದಲ್ಲಿರುವ ಜಲಪಾತಗಳು ಮತ್ತು ತಲಕೋಣದಲ್ಲಿರುವ ಸಮೃದ್ಧ ಜೀವ-ವೈವಿಧ್ಯ ಇವೇ ಮೊದಲಾದವುಗಳು ರಾಜ್ಯದ ಕೆಲವೊಂದು ಪ್ರಾಕೃತಿಕ ಆಕರ್ಷಣೆಗಳಾಗಿವೆ. ವಿಶಾಖಪಟ್ಟಣಂನಲ್ಲಿನ ಸಮದ್ರತೀರಕ್ಕೆ ಸನಿಹದಲ್ಲಿ ಕೈಲಾಸಗಿರಿಯಿದೆ. ಕೈಲಾಸಗಿರಿಯ ಪರ್ವತದ ತುದಿಯಲ್ಲಿ ಒಂದು ಉದ್ಯಾನವನವಿದೆ. ವಿಶಾಖಪಟ್ಟಣಂ ಹಲವು ಪ್ರವಾಸೀ ಆಕರ್ಷಣೆಯ ತಾಣಗಳ ತವರು. ಅವುಗಳೆಂದರೆ, INS ಕರಶೂರ ಜಲಾಂತರ್ಗಾಮಿ ವಸ್ತುಸಂಗ್ರಹಾಲಯ, (ಈ ತೆರನಾದ ವಸ್ತುಸಂಗ್ರಹಾಲಯ ಭಾರತದಲ್ಲೇ ಏಕೈಕ), ಭಾರತದಲ್ಲಿನ ಅತಿ ಉದ್ದದ ಕಡಲತೀರದ‌ ರಸ್ತೆಯನ್ನು ಹೊಂದಿರುವ ಯರಾಡ ಬೀಚ್‌, ಅರಕು ಕಣಿವೆ, VUDA ಉದ್ಯಾನವನ ಮತ್ತು ಇಂದಿರಾಗಾಂಧಿ ಮೃಗಾಲಯ ಇವೇ ಮೊದಲಾದವುಗಳು. thumb|left|ಬೊರ್ರ ಗುಹೆಗಳು

ಚಿತ್ರ:RishikondaBeachmain.jpg
ರಿಷಿಕೊಂಡ ಬೀಚ್

ಬೊರ್ರ ಗುಹೆಗಳು ಭಾರತದಲ್ಲಿನ ಆಂಧ್ರ ಪ್ರದೇಶದ ವಿಶಾಖಪಟ್ಟಣಂ ಸಮೀಪದ ಪೂರ್ವ ಘಟ್ಟಗಳ ಅನಂತಗಿರಿ ಬೆಟ್ಟಗಳಲ್ಲಿ ನೆಲೆಗೊಂಡಿವೆ. ಇವು ಸರಾಸರಿ ಸಮುದ್ರ ಮಟ್ಟದಿಂದ ಸುಮಾರು ೮೦೦ ರಿಂದ ೧೩೦೦ ಮೀಟರ್‌ಗಳಷ್ಟು ಎತ್ತರದಲ್ಲಿದ್ದು, ದಶಲಕ್ಷ ವರ್ಷಗಳಷ್ಟು ಹಳೆಯದಾದ, ಗುಹೆಯ ಚಾವಣಿಯಿಂದ ಇಳಿಬಿದ್ದಿರುವ ನೀರ್ಗೋಲು ಹಾಗೂ ಗುಹೆಯ ನೆಲದಲ್ಲಿ ಎದ್ದು ನಿಂತಿರುವ ನೀರ್ಗೋಲುಗಳ ವ್ಯೂಹಕ್ಕೆ ಹೆಸರುವಾಸಿಯಾಗಿವೆ. ಬ್ರಿಟಿಷ್‌ ಭೂವಿಜ್ಞಾನಿಯಾದ ವಿಲಿಯಂ ಕಿಂಗ್‌ ಜಾರ್ಜ್‌, ೧೮೦೭ರಲ್ಲಿ ಈ ಗುಹೆಗಳನ್ನು ಪತ್ತೆಹಚ್ಚಿದನು. ಗುಹೆಯ ಒಳಭಾಗದಲ್ಲಿ ಕಂಡುಬರುವ ರಚನೆಯು ಮನುಷ್ಯನ ಮೆದುಳಿನಂತೆ ಕಾಣುತ್ತದೆ. ಸ್ಥಳೀಯ ಭಾಷೆಯಾದ ತೆಲುಗಿನಲ್ಲಿ ಮೆದುಳಿಗೆ ಬುರ್ರ ಎಂಬ ಹೆಸರಿದೆ. ಹೀಗಾಗಿ ಈ ಗುಹೆಗಳಿಗೆ ಆ ಹೆಸರು ಬಂದಿದೆ. ಇದೇ ರೀತಿಯಲ್ಲಿ, ದಶಲಕ್ಷ ವರ್ಷಗಳಷ್ಟು ಹಿಂದೆಯೇ ಈ ಪ್ರದೇಶದಲ್ಲಿನ ಸುಣ್ಣದ ಕಲ್ಲಿನ ನಿಕ್ಷೇಪಗಳು ಚಿತ್ರಾವತಿ ನದಿಯಿಂದ ಸವಕಳಿಗೆ ಒಳಗಾಗಿದ್ದರಿಂದಾಗಿ ಬೆಲಂ ಗುಹೆಗಳು ರೂಪುಗೊಂಡವು. ಸುಣ್ಣದ ಕಲ್ಲು ಮತ್ತು ನೀರಿನ ನಡುವಿನ ರಾಸಾಯನಿಕ ಕ್ರಿಯೆಯಿಂದ ರೂಪುಗೊಂಡ ದುರ್ಬಲ ಆಮ್ಲೀಯ ಅಂತರ್ಜಲ ಅಥವಾ ಕಾರ್ಬಾನಿಕ್‌ ಆಮ್ಲದ ಕ್ರಿಯೆಯಿಂದಾಗಿ ಈ ಸುಣ್ಣದ ಕಲ್ಲಿನ ಗುಹೆಗಳು ರೂಪುಗೊಂಡವು. ಬೆಲಂ ಗುಹೆಗಳು ಭಾರತದ ಉಪ-ಖಂಡದಲ್ಲಿನ ಎರಡನೇ ಅತಿದೊಡ್ಡ ಗುಹಾ ವ್ಯವಸ್ಥೆಯಾಗಿವೆ. ಗುಹೆ ಎಂಬುದಕ್ಕೆ ಸಂಸ್ಕೃತದಲ್ಲಿ ಬಿಲಂ ಎಂಬ ಹೆಸರಿದ್ದು, ಇದರಿಂದಲೇ ಬೆಲಂ ಗುಹೆಗಳು ತಮ್ಮ ಹೆಸರನ್ನು ಪಡೆದಿವೆ. ತೆಲುಗಿನಲ್ಲಿ ಈ ಗುಹೆಗಳಿಗೆ ಬೆಲಂ ಗುಹಾಲು ಎಂಬ ಹೆಸರಿದೆ. ಬೆಲಂ ಗುಹೆಗಳು ೩೨೨೯ ಮೀಟರ್‌ನಷ್ಟು ಉದ್ದವಿದ್ದು, ಇದರಿಂದಾಗಿ ಅವು ಭಾರತದ ಉಪಖಂಡದಲ್ಲಿನ ಎರಡನೇ ಅತಿದೊಡ್ಡ ನೈಸರ್ಗಿಕ ಗುಹೆಗಳಾಗಿವೆ. ಉದ್ದನೆಯ ನಡುವಣಂಕಗಳು, ವಿಶಾಲವಾದ ಕೋಣೆಗಳು, ಸಿಹಿನೀರಿನ ಓಣಿಗಳು ಮತ್ತು ಕೊಳಾಯಿಗಳನ್ನು ಬೆಲಂ ಗುಹೆಗಳು ಹೊಂದಿವೆ. ಗುಹೆಯ ಆಳವಾದ ಸ್ಥಳವು120 feet (37 m) ಪ್ರವೇಶದ್ವಾರದಿಂದ ಇದ್ದು, ಅದನ್ನು ಪಾತಾಳಗಂಗಾ ಎಂದು ಕರೆಯಲಾಗುತ್ತದೆ. ೧,೨೬೫ ಮೀಟರ್‌ನಷ್ಟು ಎತ್ತರದಲ್ಲಿರುವ ಹಾರ್‌ಸ್ಲೆ ಬೆಟ್ಟಗಳು, ಆಂಧ್ರ ಪ್ರದೇಶದಲ್ಲಿನ ಪ್ರಸಿದ್ಧ ಬೇಸಿಗೆ ಗಿರಿಧಾಮವಾಗಿದ್ದು, ಬೆಂಗಳೂರಿನಿಂದ ಸುಮಾರು ೧೬೦ ಕಿ.ಮೀ. ಮತ್ತು ತಿರುಪತಿಯಿಂದ ಸುಮಾರು ೧೪೪ ಕಿ.ಮೀ.ನಷ್ಟು ದೂರದಲ್ಲಿದೆ.ಇದರ ಸಮೀಪದಲ್ಲಿಯೇ ಮದನಪಲ್ಲಿ ಪಟ್ಟಣವಿದೆ. ಪ್ರಮುಖವಾದ ಪ್ರವಾಸೀ ಆಕರ್ಷಣೆಯ ತಾಣಗಳಲ್ಲಿ ಮಲ್ಲಮ್ಮ ದೇವಸ್ಥಾನ ಮತ್ತು ರಿಷಿ ವ್ಯಾಲಿ ಸ್ಕೂಲ್‌ ಸೇರಿವೆ. ೮೭ ಕಿ.ಮಿ. ದೂರ ಇರುವ ಕೌಂಡಿನ್ಯ ವನ್ಯಜೀವಿ ಅಭಯಾರಣ್ಯಕ್ಕೆ ಹಾರ್‌ಸ್ಲೆ ಬೆಟ್ಟಗಳು ನಿರ್ಗಮನಾ ತಾಣವಾಗಿದೆ. ಚಾರ್ಮಿನಾರ್‌, ಗೋಲ್ಕೊಂಡ ಕೋಟೆ, ಚಂದ್ರಗಿರಿ ಕೋಟೆ, ಚೌಮಹಲ್ಲ ಅರಮನೆ, ಮತ್ತು ಫಲಕ್ನುಮ ಅರಮನೆ ಮುಂತಾದವುಗಳು ರಾಜ್ಯದಲ್ಲಿರುವ ಕೆಲವೊಂದು ಸ್ಮಾರಕಗಳು. ಕೃಷ್ಣ ಜಿಲ್ಲೆಯಲ್ಲಿರುವ ವಿಜಯವಾಡದಲ್ಲಿನ ಕನಕ ದುರ್ಗ ದೇವಸ್ಥಾನ, ಪಶ್ಚಿಮ ಗೋದಾವರಿ ಜಿಲ್ಲೆಯಲ್ಲಿರುವ ದ್ವಾರಕಾತಿರುಮಲದಲ್ಲಿನ ವೆಂಕಟೇಶ್ವರ ದೇವಸ್ಥಾನ (ಇದಕ್ಕೆ ಚಿನ್ನ ತಿರುಪತಿ ಎಂದೂ ಹೆಸರಿದೆ), ಶ್ರೀಕಾಕುಲಂ ಜಿಲ್ಲೆಯಲ್ಲಿರುವ ಅರಸವೆಲ್ಲಿಯಲ್ಲಿನ ಸೂರ್ಯ ದೇವಸ್ಥಾನ- ಇವು ಕೂಡಾ ಆಂಧ್ರ ಪ್ರದೇಶದಲ್ಲಿ ನೋಡಬಹುದಾದ ಮತ್ತಷ್ಟು ಸ್ಥಳಗಳು. ಅಣ್ಣಾವರಂ ಸತ್ಯನಾರಾಯಣ ಸ್ವಾಮಿ ದೇವಾಲಯವು ಪೂರ್ವ ಗೋದಾವರಿ ಜಿಲ್ಲೆಯಲ್ಲಿದೆ.

ಸಾರಿಗೆ

[ಬದಲಾಯಿಸಿ]
ಆಂಧ್ರ ಪ್ರದೇಶದ ಪ್ರಮುಖ ರಸ್ತೆ ಸಂಪರ್ಕಗಳು
ವಿಶಾಖಪಟ್ಟಣಂ ಕಡಲ ಬಂದರು
ಸಿಕಂದರಾಬಾದ್ ರೈಲ್ವೇ ನಿಲ್ದಾಣ, ದಕ್ಷಿಣ ಕೇಂದ್ರೀಯ ರೈಲ್ವೆಯ ಕೇಂದ್ರ ಕಾರ್ಯಾಲಯ

ರಾಜ್ಯವು ಒಟ್ಟು ೧,೪೬,೯೪೪ ಕಿ.ಮೀ.ನಷ್ಟು ರಸ್ತೆಯನ್ನು ನಿರ್ವಹಿಸುತ್ತಿದ್ದು, ಅದರಲ್ಲಿ ೪೨,೫೧೧ ಕಿ.ಮೀ. ನಷ್ಟು ರಾಜ್ಯ ಹೆದ್ದಾರಿಗಳು, ೨,೯೪೯ ಕಿ.ಮೀ.ನಷ್ಟು ರಾಷ್ಟ್ರೀಯ ಹೆದ್ದಾರಿಗಳು ಹಾಗೂ ೧,೦೧,೪೮೪ ಕಿ.ಮೀ.ನಷ್ಟು ಜಿಲ್ಲಾ ರಸ್ತೆಗಳು ಸೇರಿವೆ. ಆಂಧ್ರ ಪ್ರದೇಶದಲ್ಲಿನ ವಾಹನಗಳ ಬೆಳವಣಿಗೆಯ ಪ್ರಮಾಣವು ೧೬%ರಷ್ಟಿದ್ದು ಇದು ದೇಶದಲ್ಲೇ ಅತಿ ಹೆಚ್ಚು.[೩೭] ಆಂಧ್ರ ಪ್ರದೇಶದ ಸರ್ಕಾರದ ಒಡೆತನದ ಆಂಧ್ರ ಪ್ರದೇಶ ರಾಜ್ಯ ರಸ್ತೆ ಸಾರಿಗೆ ನಿಗಮವು (APSRTC), ರಾಜ್ಯದ ಪ್ರಮುಖ ಸಾರ್ವಜನಿಕ ಸಾರಿಗೆ ನಿಗಮವಾಗಿದ್ದು, ಎಲ್ಲ ನಗರಗಳು ಮತ್ತು ಹಳ್ಳಿಗಳನ್ನು ಸಂಪರ್ಕಿಸುತ್ತದೆ. ಅತಿ ಹೆಚ್ಚಿನ ವಾಹನಗಳನ್ನು ಹೊಂದಿರುವ ಮತ್ತು ಪ್ರತಿದಿನವೂ ಅತಿ ಉದ್ದದ ಪ್ರದೇಶದವರೆಗೆ ಸಾಗಿಸುವ/ಹೆಚ್ಚಿನ ಪ್ರಯಾಣಿಕರನ್ನು ಕೊಂಡೊಯ್ಯುವ ಮೂಲಕ APSRTCಯು ವಿಶ್ವ ದಾಖಲೆಗಳ ಗಿನ್ನೆಸ್‌ ಪುಸ್ತಕದಲ್ಲಿ ದಾಖಲಾಗುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಇದನ್ನು ಹೊರತುಪಡಿಸಿ, ಸಾವಿರಾರು ಖಾಸಗಿ ನಿರ್ವಾಹಕರೂ ಕೂಡ ಬಸ್ಸುಗಳನ್ನು ಓಡಿಸುವ ಮೂಲಕ ರಾಜ್ಯದ ಪ್ರಮುಖ ನಗರಗಳು ಮತ್ತು ಪಟ್ಟಣಗಳನ್ನು ಸಂಪರ್ಕಿಸುತ್ತಾರೆ. ಕಾರು, ಮೋಟಾರು ಅಳವಡಿತ ಸ್ಕೂಟರ್‌ ಮತ್ತು ಬೈಸಿಕಲ್‌ಗಳಂತಹ ಖಾಸಗಿ ವಾಹನಗಳು, ನಗರ ಮತ್ತು ಅವಕ್ಕೆ ಹೊಂದಿಕೊಂಡಿರುವ ಹಳ್ಳಿಗಳಲ್ಲಿನ ಸ್ಥಳೀಯ ಸಾರಿಗೆಯಲ್ಲಿ ಗಣನೀಯ ಪಾಲನ್ನು ಹೊಂದಿವೆ. ರಾಜ್ಯದಲ್ಲಿ ಐದು ವಿಮಾನ ನಿಲ್ದಾಣಗಳಿವೆ. ಅವುಗಳೆಂದರೆ: ಹೈದರಾಬಾದ್‌ (ರಾಜೀವ್‌ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ)(ರಾಜ್ಯದ ಅತ್ಯಂತ ದೊಡ್ಡ ವಿಮಾನ ನಿಲ್ದಾಣ), ವಿಶಾಖಪಟ್ಟಣಂ, ವಿಜಯವಾಡ, ರಾಜಮುಂಡ್ರಿ ಮತ್ತು ತಿರುಪತಿ.ಇನ್ನೂ ಆರು ನಗರಗಳಲ್ಲಿ ವಿಮಾನನಿಲ್ದಾಣಗಳನ್ನು ಆರಂಭಿಸಲು ಸರ್ಕಾರವು ಯೋಜನೆಯನ್ನು ಹಾಕಿಕೊಂಡಿದೆ. ಅವುಗಳೆಂದರೆ, ನೆಲ್ಲೂರ್, ವಾರಂಗಲ್‌, ಕಡಪ, ತಡೆಪಲ್ಲಿಗುಡೆಂ ರಾಮಗುಂಡಂ ಮತ್ತು ಒಂಗೊಲ್‌ ಆಂಧ್ರ ಪ್ರದೇಶವು ವಿಶಾಖಪಟ್ಟಣಂ ಮತ್ತು ಕಾಕಿನಾಡದಲ್ಲಿ ಭಾರತದ ಎರಡು ಪ್ರಮುಖ ಬಂದರುಗಳನ್ನು ಹೊಂದಿದೆ ಹಾಗೂ ಮಚಲೀಪಟ್ಣಂ, ನಿಜಾಮ್‌ಪಟ್ಣಂ(ಗುಂಟೂರ್‌‌) ಮತ್ತು ಕೃಷ್ಣಪಟ್ಣಂಗಳಲ್ಲಿ ಮೂರು ಸಣ್ಣ ಬಂದರುಗಳನ್ನು ಹೊಂದಿದೆ. ವಿಶಾಖಪಟ್ಟಣಂ ಬಳಿ ಇರುವ ಗಂಗಾವರಂನಲ್ಲಿ ಮತ್ತೊಂದು ಖಾಸಗಿ ಬಂದರನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಆಳಸಮುದ್ರದ ಬಂದರು ೨೦೦,೦೦೦-೨೫೦,೦೦೦ DWT ವರೆಗಿನ ಸಾಮರ್ಥ್ಯದ ಹಡಗುಗಳು ತಂಗಲು ಅವಕಾಶ ಮಾಡಿಕೊಡುವುದರಿಂದ ಬೃಹತ್ ಹಡಗುಗಳು ಭಾರತೀಯ ಕಡಲತೀರದೊಳಗೆ ಪ್ರವೇಶಿಸಲು ಅನುವಾಗುತ್ತದೆ.

ಆಂಧ್ರ ರಾಜಕೀಯ ಮತ್ತು ಆಡಳಿತ

[ಬದಲಾಯಿಸಿ]
  • ೨೦೦೯ ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಜಾರಾಜಯಂ ಪಾರ್ಟಿ, ಟಿಡಿಪಿ, ಟಿಆರ್.ಎಸ್. ಸಿಪಿಎಮ್ ಪಕ್ಷಗಳನ್ನು ಸೋಲಿಸಿ ನಂತರ ೨ ನೇ ಬಾರಿಗೆ ವೈ.ಎಸ್.ರಾಜಶೇಖರ ರೆಡ್ಡಿಯವರು ಆಂಧ್ರದ ಮುಖ್ಯಮಂತ್ರಿಯಾದರು . ಅವರು ೨-೯-೨೦೦೯ ರಂದು ಹೆಲಿಕ್ಯಾಪರ್ ಅವಘಡದಲ್ಲಿ ಸಾವನ್ನಪ್ಪಿದರು. ಹಿರಿಯ ರಾಜಕಾರಣಿ ಹಾಗೂ ನಣಕಸಿನ ಮಂತ್ರಿಯಾಗಿದ್ದ ಕೊನಿಜೇತಿ ರೋಸಚಿi ನವರು ೩-೯-೨೦೦೯ ರಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು. ಅವರು ವಯಸ್ಸಾದಕಾರಣ ಕೆಲಸದ ವತ್ತಡ ಹೆಚ್ಚಾಗಿದೆಯೆಂದು ೨೪-೧೧-೨೦೧೦ ರಲ್ಲಿ ರಾಜೀನಾಮೆ ಸಲ್ಲಿಸಿದರು. ನಲ್ಲೇರಿ ಕಿರಣ ಕುಮಾರ ರೆಡ್ಡಿ ಯವರು ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡರು

ಆಂಧ್ರ ಪ್ರದೇಶದ ರಾಜಕೀಯ

[ಬದಲಾಯಿಸಿ]
ರಾಜ್ಯ /ಲೋಕ ಸಭೆ ಸ್ಥಾನ ಹೆಸರು ಅಧಿಕಾರ ಸ್ವೀಕರಿಸಿದ ದಿನಾಂಕ ಪಕ್ಷ ವಿವರ -ವಿಧಾನ ಸಭೆ FMR (ಒಟ್ಟು ವಿಧಾನ ಸಭೆ ಸದಸ್ಯರು )
ಆಂಧ್ರ ಪ್ರದೇಶ
(೪೨)ಕಾಂ.೩೩(೩೮.೯೫)/ಬಿಜೆಪಿ ೦/ಟಿಡಿಪಿ ೬(೨೪.೯೩);ಟಿಆರ್.ಎಸ್.೨;ಐಎ.ಎಂ೧
೧.ವೈ. ಎಸ್. ರಾಜಶೇಖರ ರೆಡ್ಡಿ

೨.ಕೊನಿಜೇಟಿ ರೋಸಯ್ಯ ; ೩.ಕಿರಣಕುಮಾರ ರೆಡ್ಡಿ; (ಕಾಂಗ್ರೆಸ್)

೨೦೦೪/ಮೇ-೨೦೦೯; ೩-೯-೦೨೦೦೯ ; ೨೪-೧೧-೨೦೧೦ ಕಾಂ~೧೫೬/೩೬.೫೬%;(-೨% -೨೯); ತೆ.ದೇ.ಪಾ.(ಟಿಡಿಪಿ) ೯೨/೨೮.೧೨(೪೫); ತೆ.ರಾ.ಸ ೧೦(-೧೬) ; ಪಿಆರ್.ಪಿ..೧೮ (+೧೮);ಇತರೆ:೧೪ ಒಟ್ಟು ೨೯೪

ಆಂಧ್ರ ಮತ್ತು ತೆಲಂಗಾಣ ವಿಧಾನ ಸಭೆ ಚುನಾವಣೆಗಳು ೨೦೧೪ಸೀಮಾಂಧ್ರ

  • ದಿ. ಜೂನ್ 2, 2014, ರಂದು ಆಂಧ್ರ ಪ್ರದೇಶ ರಾಜ್ಯವು ಎರಡು ಭಾಗವಾಗಿ ಒಡೆದು, ಎರಡು ರಾಜ್ಯವಾಯಿತು. ಅವು ತೆಲಂಗಾಣ ಮತ್ತು ಸೀಮಾಂಧ್ರ (ಆಂಧ್ರ).[೩೮]

ದೇಶದ 29ನೇ ರಾಜ್ಯವಾಗಿ ತೆಲಂಗಾಣ ಉದಯವಾಗಿದ್ದು, ರಾಜ್ಯದ ಮೊದಲ ಮುಖ್ಯಮಂತ್ರಿಯಾಗಿ ತೆಲಂಗಾಣ ರಾಷ್ಟ್ರ ಸಮಿತಿ ಅಧ್ಯಕ್ಷ ಕಲ್ವಕುಂಟ್ಲ ಚಂದ್ರಶೇಖರ ರಾವ್‌ ಅಧಿಕಾರ ಸ್ವೀಕರಿಸಿದರು. 294 ಸದಸ್ಯರಿದ್ದ ಆಂಧ್ರ ವಿಧಾನಸಭೆಯಲ್ಲಿ ವಿಭಜಕನೆಯ ನಂತರ 175 ಶಾಸಕರಿದ್ದಾರೆ. ತೆಲಂಗಾಣದಲ್ಲಿ 119 ಶಾಸಕರಿದ್ದಾರೆ. ಆಂಧ್ರದ 42 ಲೋಕಸಭಾ ಕ್ಷೇತ್ರಗಳ ಪೈಕಿ 17 ಕ್ಷೇತ್ರಗಳು ತೆಲಂಗಾಣ ವ್ಯಾಪ್ತಿಯಲ್ಲಿವೆ ಉಳಿದ ೨೫ ಸ್ಥಾನಗಳು ಹೊಸ ಆಂಧ್ರ ಪ್ರದೇಶದಲ್ಲಿವೆ.

೨೦೧೪ ರ ಜೂನ್ ನಂತರದ ಆಂಧ್ರ ಅಥವಾ ಸೀಮಾಂಧ್ರ

[ಬದಲಾಯಿಸಿ]

ಸೀಮಾಂಧ್ರಕ್ಕೆ ಹೊಸ ರಾಜಧಾನಿ

[ಬದಲಾಯಿಸಿ]
ಆಂಧ್ರ ಪ್ರದೇಶರಾಜ್ಯದಲ್ಲಿ ಪ್ರತ್ಯೇಕಗೊಂಡ ತೆಲಂಗಾಣ ಪ್ರದೇಶವನ್ನು ಬಿಳಿ ಬಣ್ಣದಲ್ಲಿ ಗುರುತಿಸಲಾಗಿದೆ; ಹಳದಿ ಬಣ್ಣದಲ್ಲಿರುವುದು ಹೊಸದಾಗಿ ಉದಯವಾದ ಆಂಧ್ರ ಪ್ರದೇಶ

2 Dec, 2016

ಆಂಧ್ರ ಪ್ರದೇಶದ ರಾಜಧಾನಿ ಪ್ರದೇಶ ಅಮರಾವತಿ ತೋರಿಸುವ ನಕ್ಷೆ, ಗುಂಟೂರು ಮತ್ತು ಕೃಷ್ಣ ಜಿಲ್ಲೆಗಳಲ್ಲಿ ಮಧ್ಯದಲ್ಲಿದೆ-ಬಣ್ಣದಗೆರೆ ಕೃಷ್ಣಾನದಿ
  • ದಿ. ಜೂನ್ 2, 2014, ಆಂಧ್ರ ಪ್ರದೇಶ ರಾಜ್ಯವು ಎರಡು ಭಾಗವಾಗಿ ಒಡೆದು, ಎರಡು ರಾಜ್ಯವಾಯಿತು. ಅವು ತೆಲಂಗಾಣ ಮತ್ತು ಸೀಮಾಂಧ್ರ (ಆಂಧ್ರ).[೧೬]
  • ಮೂಲ ಆಂಧ್ರ ಪ್ರದೇಶ ಇಬ್ಭಾಗವಾಗಿ ತೆಲಂಗಾಣ ಆಂಧ್ರ ಎಂದುಎರಡು ರಾಜ್ಯಗಳಾದಾಗ ಹೈದರಾಭಾದು ತೆಲಂಗಾಣಕ್ಕೆ ರಾಜಧಾನಿಯಾಯಿತು. ಹೊಸ ಆಂಧ್ರವು ಅಮರಾವತಿ ಅಂಬ ಹೊಸನಗರವನ್ನು ಕಟ್ಟಿ ಆಂಧ್ರಪ್ರದೇಶದ ಸಂಪೂರ್ಣ ಆಡಳಿತ ನೂತನ ರಾಜಧಾನಿ ಅಮರಾವತಿಗೆ 1-12-2016 ಗುರುವಾರ ಸ್ಥಳಾಂತರವಾಗುವ ಮೂಲಕ ಹೊಸ ಅಧ್ಯಾಯ ಆರಂಭಿಸಿತು.
  • ಅಮರಾವತಿಗೆ ಸಮೀಪದ ವೆಲಗಪುಡಿಯಲ್ಲಿನ ತಾತ್ಕಾಲಿಕ ಸಚಿವಾಲಯದಲ್ಲಿನ ಕಚೇರಿಯಿಂದಲೇ ಮುಖ್ಯಮಂತ್ರಿ ಎನ್‌. ಚಂದ್ರಬಾಬು ನಾಯ್ಡು ಕಾರ್ಯನಿರ್ವಹಿಸಲು ಆರಂಭಿಸಿದರು. ಸಚಿವ ಸಂಪುಟದ ಸಭೆಯೂ ಸಹ ಪ್ರಥಮಬಾರಿ ಇಲ್ಲಿ ನಡೆಯಿತು.[೧೭]

ಆಂಧ್ರ ಪ್ರದೇಶ ಚುನಾವಣೆ -2014

[ಬದಲಾಯಿಸಿ]
ಪಕ್ಷ ಸದಸ್ಯರು
ಟಿಡಿಪಿ (ತೆಲಗು ದೇಶಂ ಪಾರ್ಟಿ) 101
ವೈಎಸ್ಆರ್ ಪಾರ್ಟಿ(ವೈಎಸ್ಆರ್ ಕಾಂಗ್ರೆಸ್ ಪಾರ್ಟಿ) 66
ಬಿಜೆಪಿ (ಭಾರತೀಯ ಜನತಾ ಪಾರ್ಟಿ) 4
ಎನ್ ಪಿ.(ನವೋದಯ ಪಾರ್ಟಿ) 1
ಪಕ್ಷೇತರ 1
ಖಾಲಿ 2
ಓಟ್ಟು 175

೨೦೧೯ ರ ಚುನಾವಣೆ ಮತ್ತು ಹೊಸ ಸರ್ಕಾರ

[ಬದಲಾಯಿಸಿ]
2019 ರ ವಿಧಾನಸಭಾ ಚುನಾವಣೆಗಳು
  • 2019 ರ ಆಂಧ್ರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ತೆಲುಗು ದೇಶಂ ಪಕ್ಷ ಯಾವುದೇ ಮೈತ್ರಿ ಮಾಡದೆ ಏಕಾಂಗಿಯಾಗಿ ಸ್ಪರ್ಧಿಸಿತು. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‍, ಈ ಮೊದಲು ಐಎನ್‌ಸಿ ಮತ್ತು ವೈ.ಎಸ್.ಆರ್ ನೇತೃತ್ವದ ಕಾಂಗ್ರೆಸ್‍ ಪಾರ್ಟಿ ಎಂದು ವೀಭಜತವಾಗಿತ್ತು ವೈ.ಎಸ್.ಆರ್. ಕಾಂಗ್ರೆಸ್ ಜಗನ್ಮೋಹನ್ ರೆಡ್ಡಿ ನೇತ್ರತ್ವದಲ್ಲಿ ಸ್ಪರ್ಧಿಸಿತು. ಪವನ್ ಕಲ್ಯಾಣ್ ನೇತೃತ್ವದ ಜೆಎಸ್ಪಿ ಸಹ ಸಿಪಿಐ, ಸಿಪಿಐ (ಎಂ) ಮತ್ತು ಬಹುಜನ ಸಮಾಜ ಪಕ್ಷದೊಂದಿಗೆ ಮೈತ್ರಿ ಮಾಡಿಕೊಂಡಿತು. 2019 ರ ಚುನಾವಣೆಯಲ್ಲಿ ಟಿಡಿಪಿ ಕೇವಲ 23 ಸ್ಥಾನಗಳನ್ನು ಗೆದ್ದರೆ, ವೈಎಸ್ಆರ್ ಕಾಂಗ್ರೆಸ್ ಪಕ್ಷವು ಬಹುಮತ ಪಡೆದು 151 ಸ್ಥಾನಗಳನ್ನು ಗಳಿಸಿತು. ಇದರ ನಾಯಕ ವೈ.ಎಸ್. ಜಗನ್ಮೋಹನ್ ರೆಡ್ಡಿ ಅವರು 2019 ರ ಮೇ 30 ರಂದು ಆಂಧ್ರಪ್ರದೇಶದ ಮುಂದಿನ ಮುಖ್ಯಮಂತ್ರಿಯಾದರು. [೩೯]

ಇದನ್ನೂ ನೋಡಿರಿ

[ಬದಲಾಯಿಸಿ]

ಟಿಪ್ಪಣಿಗಳು

[ಬದಲಾಯಿಸಿ]
  1. ":: Citizen Help". APOnline. 1956-11-01. Archived from the original on 2014-03-21. Retrieved 2009-03-03.
  2. "ಆರ್ಕೈವ್ ನಕಲು" (PDF). Archived from the original (PDF) on 2009-03-26. Retrieved 2009-12-16.
  3. S. S.ರಾಮಚಂದ್ರ ಮೂರ್ತಿಯವರು ಬರೆದಿರುವ ಎ ಸ್ಟಡಿ ಆಫ್‌ ತೆಲುಗು ಪ್ಲೇಸ್‌‌-ನೇಮ್ಸ್‌, P. ೧೦
  4. "History and Culture-History". APonline. Retrieved 2009-03-03.
  5. Antiquity of Andhra race: http://teluguuniversity.ac.in/Language/prachina_telugu_note.html Archived 2010-02-23 ವೇಬ್ಯಾಕ್ ಮೆಷಿನ್ ನಲ್ಲಿ.
  6. Antiquity of Telugu: http://www.hindu.com/2007/12/20/stories/2007122054820600.htm Archived 2012-05-30 at Archive.is
  7. http://www.aponline.gov.in/quick links/hist-cult/history.html
  8. "ಆರ್ಕೈವ್ ನಕಲು". Archived from the original on 2008-01-13. Retrieved 2009-12-16.
  9. "ಆರ್ಕೈವ್ ನಕಲು". Archived from the original on 2019-03-02. Retrieved 2009-12-16.
  10. ಜರ್ಮನ್‌ ಸ್ಕಾಲರ್ಸ್‌ ಆನ್‌ ಇಂಡಿಯಾ, Vol. I. PP. ೧೩೬-೧೪೦ದಲ್ಲಿ ಹೆಲ್ಮಟ್‌ ಹಾಫ್‌ಮನ್‌ ಬರೆದಿರುವ, "ಬುದ್ಧಾಸ್‌‌ ಪ್ರೀಚಿಂಗ್‌ ಆಫ್‌ ದಿ ಕಾಲಚಕ್ರ ತಂತ್ರ ಅಟ್‌ ದಿ ಸ್ತೂಪ ಆಫ್‌ ಧಾನ್ಯಕಟಕ" (ವಾರಣಾಸಿ, ೧೯೭೩)
  11. Taranatha; http://www.kalacakra.org/history/khistor2.htm
  12. ಇಂಡಿಯನ್‌ ಎಪಿಗ್ರಫಿ, ಆರ್‌.ಸಾಲೋಮನ್‌, ಆಕ್ಸ್‌ಫರ್ರ್ಡ್ ಯೂನಿವರ್ಸಿಟಿ ಪ್ರೆಸ್‌‌, ೧೯೯೮ ISBN ೦-೧೯-೫೦೯೯೮೪-೨, p. ೧೦೬
  13. ಎಪಿಗ್ರಾಫಿಕ ಇಂಡಿಕ, ೨೭: ೨೨೦-೨೨೮
  14. ರಾಬರ್ಟ್‌ ಸೆವೆಲ್‌ರವರ, ಎ ಫರ್ಗಾಟನ್‌ ಎಂಪೈರ್‌ (ವಿಜಯನಗರ‌): ಎ ಕಾಂಟ್ರಿಬ್ಯೂಷನ್‌ ಟು ದಿ ಹಿಸ್ಟ್ರಿ ಆಫ್ ಇಂಡಿಯಾ, ಚಾಪ್ಟರ್‌ ೨ http://www.gutenberg.org/dirs/etext೦೨/fevch೧೦.txt
  15. ನಾಲ್ಕು ಪ್ರಾದೇಶಿಕ ಯೋಜನಾ ಮಂಡಳಿಗಳಿಗೆ AP ಸಂಪುಟವು ಅನುಮೋದಿಸುತ್ತದೆ
  16. ೧೬.೦ ೧೬.೧ (ವಿಜಯ ಕರ್ನಾಟಕ ದಿ. ಜೂನ್ 2, 2014)
  17. ೧೭.೦ ೧೭.೧ ಅಮರಾವತಿಗೆ ಆಡಳಿತ ಸ್ಥಳಾಂತರ
  18. "POPULATION CHARACTERISTICS — ANDHRA PRADESH". Census of India. budget.ap.gov.in. Archived from the original on 2008-12-08. Retrieved 2008-06-04.
  19. "Comparative Ranking of Scheduled Languages in Descending Order of Speakers' Strength - 1971, 1981, 1991 and 2001". Office of the Registrar General & Census Commissioner, India. 2001. Retrieved 10 November 2008. {{cite web}}: Cite has empty unknown parameter: |coauthors= (help)
  20. "Distribution of 10,000 Persons by Language — India, States and Union Territories - 2001". Office of the Registrar General & Census Commissioner, India. 2001. Retrieved 10 November 2008. {{cite web}}: Cite has empty unknown parameter: |coauthors= (help)
  21. "Telugu, Kannada get classical tag". ಟೈಮ್ಸ್ ಆಫ್ ಇಂಡಿಯ. 2008-11-01. Retrieved 10 November 2008. {{cite web}}: Check date values in: |date= (help); Cite has empty unknown parameter: |coauthors= (help)
  22. "Agriculture dept. of Andhra Pradesh". Archived from the original on 2011-07-09. Retrieved 2021-08-09.
  23. ೨೩.೦ ೨೩.೧ ೨೩.೨ "Key Sectors of Andhra Pradesh". Archived from the original on 2009-02-21. Retrieved 2009-12-16.
  24. http://finance.indiainfo.com/news/೨೦೦೫/೦೫/೧೧/೧೧೦೫it-exports.html
  25. "ಆರ್ಕೈವ್ ನಕಲು". Archived from the original on 2009-08-30. Retrieved 2009-12-16.
  26. "ಆರ್ಕೈವ್ ನಕಲು". Archived from the original on 2016-03-03. Retrieved 2009-12-16.
  27. http://en.wikipedia.org/wiki/Comparison_between_Indian_states_and_countries_by_GDP_(PPP)
  28. "Andhra Pradesh Legislative Assembly". Archived from the original on 2005-04-01. Retrieved 2009-12-16.
  29. "Parliament of India". Archived from the original on 2008-12-10. Retrieved 2009-12-16.
  30. "VizagCityOnline.com — Visakha Museum". Vizagcityonline.com. Retrieved 2008-11-29.
  31. ವಿಕ್ಟೋರಿಯಾ ಜ್ಯುಬಿಲಿ ವಸ್ತು ಸಂಗ್ರಹಾಲಯ: http://www.indiatourism.com/andhra-pradesh-museums/victoria-jubilee-museum.html
  32. ನೃತ್ಯ ರತ್ನಾವಳಿ (http://www.telugupeople.com/discussion/article.asp?id=೧೧೧
  33. "DTS | Home". Dtsonline.com. Retrieved 2008-11-29.
  34. "Sri Potuluri Veera Brahmendra Swami". Mihira.com. Archived from the original on 2008-11-20. Retrieved 2008-11-29.
  35. "Stories of Bhaktas — Fisherman Raghu". Telugubhakti.com. Retrieved 2008-11-29.
  36. "The Templenet Encyclopedia — Temples of Andhra Pradesh". Retrieved 2009-02-26.
  37. "AP Fact File-Natural Advantages". APonline. Archived from the original on 2009-04-03. Retrieved 2009-03-03.
  38. ದಿ. ಜೂನ್ 2, 2014, 11.10AM IST (ವಿಜಯ ಕರ್ನಾಟಕ)
  39. "Andhra Pradesh Legislative Assembly Election 2019 Website". Archived from the original on 2019-05-27. Retrieved 2019-06-19.


ಹೊರಗಿನ ಕೊಂಡಿಗಳು

[ಬದಲಾಯಿಸಿ]

pnb:آندھراپردیش